HOME » NEWS » Coronavirus-latest-news » STATE CONGRESS LEADERS ARE HELD A MEETING WITH OUT SOCIAL DISTANCE LG

ಕೊರೋನಾ ಆತಂಕವಿಲ್ಲದೇ, ಗುಂಪಾಗಿ ಕುಳಿತು ಸಭೆ ನಡೆಸಿದ ರಾಜ್ಯ ಕಾಂಗ್ರೆಸ್​ ನಾಯಕರು

ಕೆಪಿಸಿಸಿ ಅಧ್ಯಕ್ಷರು ಖುದ್ದು ಮಾಸ್ಕ್​​​ ಧರಿಸದೆ ಸಭೆಗೆ ಆಗಮಿಸುವ ಮೂಲಕ ಸರ್ಕಾರದ ನಿಯಮಾವಳಿಗಳನ್ನು ಸ್ಪಷ್ಟವಾಗಿ ಗಾಳಿಗೆ ತೂರಿದ್ದರು.

news18-kannada
Updated:June 23, 2020, 3:13 PM IST
ಕೊರೋನಾ ಆತಂಕವಿಲ್ಲದೇ, ಗುಂಪಾಗಿ ಕುಳಿತು ಸಭೆ ನಡೆಸಿದ ರಾಜ್ಯ ಕಾಂಗ್ರೆಸ್​ ನಾಯಕರು
ಸಭೆಯಲ್ಲಿ ಪಾಲ್ಗೊಂಡಿರುವ ಕಾಂಗ್ರೆಸ್ ನಾಯಕರು
  • Share this:
ಬೆಂಗಳೂರು(ಜೂ.23): ಕೆಪಿಸಿಸಿ ಅಧ್ಯಕ್ಷರು  ಹಾಗೂ ಕಾರ್ಯಾಧ್ಯಕ್ಷರ ಪದಗ್ರಹಣ ಸಮಾರಂಭ ಜುಲೈ 2ರಂದು ನಡೆಯಲಿದೆ. ಈ ಸಂಬಂಧ ಇಂದು ಪೂರ್ವ ಸಿದ್ದತಾ ಸಭೆಯನ್ನು ಕರೆಯಲಾಗಿತ್ತು. ಈ ಸಭೆಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್​ ನಾಯಕರು ಸಾಮಾಜಿಕ ಅಂತರ ಮರೆತು ಗುಂಪಾಗಿ ಕುಳಿತುಕೊಂಡಿದ್ದು ಸ್ಪಷ್ಟವಾಗಿ ಗೋಚರಿಸಿತು. 

150ಕ್ಕಿಂತ ಹೆಚ್ಚು ಮಂದಿ ಪಾಲ್ಗೊಳ್ಳಲು ಸಾಧ್ಯವಿಲ್ಲ ಎಂಬ ಸ್ಪಷ್ಟ ಸೂಚನೆ ಇದ್ದರೂ, 750 ಮಂದಿ ಕೂರಬಲ್ಲ ಸ್ಥಳಾವಕಾಶವಿರುವ ಸಭಾಂಗಣದಲ್ಲಿ ಸುಮಾರು  300ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಈ ಸಭಾಂಗಣದಲ್ಲಿ ಗುಂಪಾಗಿ ಕುಳಿತು ಸಭೆ ನಡೆಸುವ ಮೂಲಕ ಕೊರೋನಾ ಮಹಾಮಾರಿಗೆ ತಾವು ಹೆದರುವುದಿಲ್ಲ ಎಂಬ ಸಂದೇಶವನ್ನು ರವಾನೆ ಮಾಡಿದ್ದಾರೆ.

ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಕಾರ್ಯಾಧ್ಯಕ್ಷರು ಪಾಲ್ಗೊಂಡಿದ್ದ ಈ ಸಭೆಯಲ್ಲಿ ಸಾಮಾಜಿಕ ಅಂತರ ಅರ್ಥ ಕಳೆದುಕೊಂಡಿತ್ತು. ನೆಪ ಮಾತ್ರಕ್ಕೆ ಕೆಲ ನಾಯಕರು ಸ್ಯಾನಿಟೈಸರ್ ಉಪಯೋಗಿಸುತ್ತಿದ್ದರು. ಪ್ರವೇಶ ದ್ವಾರದಲ್ಲಿ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆಯನ್ನು ಮಾಡಲಾಗಿತ್ತು. ಆದರೆ ಕೆಪಿಸಿಸಿ ಅಧ್ಯಕ್ಷರು ಖುದ್ದು ಮಾಸ್ಕ್​​​ ಧರಿಸದೆ ಸಭೆಗೆ ಆಗಮಿಸುವ ಮೂಲಕ ಸರ್ಕಾರದ ನಿಯಮಾವಳಿಗಳನ್ನು ಸ್ಪಷ್ಟವಾಗಿ ಗಾಳಿಗೆ ತೂರಿದ್ದರು.

ಬೆಂಗಳೂರಲ್ಲಿ ಹೆಂಡತಿ ಕೊಲೆ, ಕೊಲ್ಕತ್ತಾದಲ್ಲಿ ಅತ್ತೆ ಶೂಟ್ ಮಾಡಿ ತಾನೂ ಆತ್ಮಹತ್ಯೆಗೆ ಶರಣಾದ ಟೆಕ್ಕಿ

ಅಧ್ಯಕ್ಷರ ಪದಗ್ರಹಣ ಸಮಾರಂಭದ ಸಿದ್ಧತೆ ಸಭೆ ನೆಪದಲ್ಲಿ ನೂರಾರು ಜನರನ್ನು ಒಂದೆಡೆ ಸೇರಿಸಿ ಸಾಕಷ್ಟು ಆತಂಕ ಮೂಡಿಸುವ ಕಾರ್ಯವನ್ನು ಕಾಂಗ್ರೆಸ್ ಮಾಡಿತು. ಈಗಾಗಲೇ ಬೆಂಗಳೂರು ನಗರದಲ್ಲಿ ಕೊರಓನಾ ಮಹಾಮಾರಿ ಸಮುದಾಯಕ್ಕೆ ತಲುಪಿದೆ ಎನ್ನಲಾಗಿದೆ.  ಇಷ್ಟೊಂದು ಸಂಖ್ಯೆಯಲ್ಲಿ ಕಾಂಗ್ರೆಸ್ ಕಚೇರಿಯಲ್ಲಿ ಸಭೆ ಸೇರಿರುವ ನಾಯಕರು ಈ ಆತಂಕವನ್ನು ಇನ್ನಷ್ಟು ಹೆಚ್ಚು ಮಾಡಿದ್ದಾರೆ.

ಒಂದೆಡೆ ರಾಜ್ಯ ಸರ್ಕಾರ ಬೆಂಗಳೂರು ಮಹಾನಗರದಲ್ಲಿ ಮತ್ತೊಮ್ಮೆ ಲಾಕ್​​ಡೌನ್​​ ಘೋಷಿಸುವ  ಚಿಂತನೆಯಲ್ಲಿರುವ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಪ್ರತಿಪಕ್ಷ ಜವಾಬ್ದಾರಿ ಮರೆತು ಈ ರೀತಿ ಸಭೆ ನಡೆಸುತ್ತಿರುವುದು ಅಚ್ಚರಿ ಮೂಡಿಸಿದೆ.
First published: June 23, 2020, 3:13 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories