HOME » NEWS » Coronavirus-latest-news » STAND UP COMEDIAN AMIT TANDON INVITES COVID 19 PATIENTS QUARANTINED ALONE TO JOIN HIM FOR INTERACTION STG SCT

Amit Tandon: ಕೋವಿಡ್ ರೋಗಿಗಳ ಜೊತೆಗೆ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಚಿಟ್ ಚಾಟ್; ಅಮಿತ್ ಟಂಡನ್ ಕಾರ್ಯಕ್ಕೆ ಶ್ಲಾಘನೆ

Amit Tandon: ಕೋವಿಡ್ 19 ರೋಗಿಗಳಿಗೆ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಅಮಿತ್ ಟಂಡನ್ ಆನ್ಲೈನ್ ಮೂಲಕ ಮಾತಾಡುತ್ತ ಕೋವಿಡ್ ರೋಗಿಗಳಿಗೆ ಮೋಟಿವೇಷನ್ ನೀಡಲು ಮುಂದಾಗಿದ್ದಾರೆ. 14 ದಿನಗಳ ಕ್ವಾರಂಟೈನ್ ಅವಧಿಯಲ್ಲಿ ರೋಗಿಗಳಲ್ಲಿ ಸಕಾರಾತ್ಮಕ ಮನೋಭಾವವನ್ನು ಇಮ್ಮಡಿಗೊಳಿಸಲು ಈ ಮೂಲಕ ಪಣ ತೊಟ್ಟಿದ್ದಾರೆ ಅಮಿತ್.

news18-kannada
Updated:April 16, 2021, 9:40 AM IST
Amit Tandon: ಕೋವಿಡ್ ರೋಗಿಗಳ ಜೊತೆಗೆ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಚಿಟ್ ಚಾಟ್; ಅಮಿತ್ ಟಂಡನ್ ಕಾರ್ಯಕ್ಕೆ ಶ್ಲಾಘನೆ
ಅಮಿತ್ ಟಂಡನ್
  • Share this:
ಕೋವಿಡ್ 19 ಪಾಸಿಟಿವ್ ರೋಗಿಗಳು ಐಸೋಲೇಷನ್‌ನಲ್ಲಿ ಸಾಕಷ್ಟು ಮಾನಸಿಕ ಯಾತನೆಗೆ ಒಳಗಾಗುವುದು ಕಂಡು ಬಂದಿದೆ. ಅಲ್ಲದೇ ಆತಂಕದ ಈ ದಿನಗಳಲ್ಲಿ ಅವರ ಜೊತೆಗೆ ಕುಟುಂಬದ ಸದಸ್ಯರು ಸಹ ಇರಲು ಸಾಧ್ಯವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಕೋವಿಡ್ 19 ರೋಗಿಗಳಿಗೆ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಅಮಿತ್ ಟಂಡನ್ ಆನ್ಲೈನ್ ಮೂಲಕ ಮಾತಾಡುತ್ತ ಕೋವಿಡ್ ರೋಗಿಗಳಿಗೆ ಮೋಟಿವೇಷನ್ ನೀಡಲು ಮುಂದಾಗಿದ್ದಾರೆ. 14 ದಿನಗಳ ಕ್ವಾರಂಟೈನ್ ಅವಧಿಯಲ್ಲಿ ರೋಗಿಗಳಲ್ಲಿ ಸಕಾರಾತ್ಮಕ ಮನೋಭಾವವನ್ನು ಇಮ್ಮಡಿಗೊಳಿಸಲು ಈ ಮೂಲಕ ಪಣ ತೊಟ್ಟಿದ್ದಾರೆ ಅಮಿತ್.

ಕಾಮಿಡಿಯನ್ ಅಮಿತ್ ಅವರ ಜೊತೆಗೆ ಈ ಚಿಟ್ ಚಾಟ್ ಮಾಡಲು ಯಾವುದೇ ಶುಲ್ಕ ನೀಡಬೇಕಿಲ್ಲ. ಇದು ಸಂಪೂರ್ಣ ಉಚಿತ. ಒಟ್ಟು 15 ಸ್ಲಾಟ್‌ಗಳಿದ್ದು, ವಾರಾಂತ್ಯದಲ್ಲೂ ಈ ಸ್ಲಾಟ್ ಇರುತ್ತದೆ. ಏಪ್ರಿಲ್ 16 ರಿಂದ ಸಂಜೆ 6 ಗಂಟೆಗೆ ಈ ಚಿಟ್ ಚಾಟ್ ಆರಂಭವಾಗಲಿದೆ ಎಂದು ಅಮಿತ್ ಈ ಎಲ್ಲಾ ಮಾಹಿತಿಗಳನ್ನು ಸೋಶಿಯಲ್ ಮೀಡಿಯಾದ ಮೂಲಕ ಹಂಚಿಕೊಂಡಿದ್ದಾರೆ.

ಆದ್ದರಿಂದ ಕೋವಿಡ್ ಪಾಸಿಟಿವ್ ರೋಗಿಗಳು ಈ ಮೇಲ್ ಕಳುಹಿಸಲು ತಿಳಿಸಿದ್ದು, 30 ನಿಮಿಷಗಳ ಚಿಟ್ ಚಾಟ್ ವೇದಿಕೆಗೆ ಅವರನ್ನು ಆಹ್ವಾನಿಸಿದ್ದಾರೆ. ಆದರೆ ಪ್ರಾರಂಭದಲ್ಲೇ 100 ಕ್ಕೂ ಅಧಿಕ ಇಮೇಲ್‌ಗಳು ಬಂದಿದ್ದು. ಅಮಿತ್ ಅವರು ಈ ಪ್ರತಿಕ್ರಿಯೆಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ಎಲ್ಲಾ ಇಮೇಲ್‌ಗಳನ್ನು ಅವರ ತಂಡ ಸರಿಯಾಗಿ ವಿಭಾಗಿಸಿ, ಆದ್ಯತೆಯ ಮೇರೆಗೆ ಅವಕಾಶಗಳನ್ನು ನೀಡುತ್ತಿದೆ.

ಪ್ರತಿಯೊಂದು ಇಮೇಲ್‌ಗಳು ವಿಶೇಷವಾಗಿದ್ದು, ಕೆಲವರು ತಮ್ಮ ಮನಸ್ಸಿನ ಭಾವನೆಗಳನ್ನು ಹಂಚಿಕೊಂಡಿದ್ದಾರೆ. ಕೆಲವರು ತಾವೇ ನೇರವಾಗಿ ಇ ಮೇಲ್ ಕಳುಹಿಸಿದ್ದರೆ, ಇನ್ನೂ ಕೆಲವರು ರೋಗಿಗಳ ಪರವಾಗಿ ಕುಟುಂಬ ಸದಸ್ಯರು ಮೇಲ್ ಮಾಡಿದ್ದಾರೆ. ಕೆಲವರು ಆಸ್ಪತ್ರೆಯಲ್ಲಿ ಐಸೊಲೇಟ್ ಆಗಿದ್ದರೆ, ಇನ್ನೂ ಕೆಲವರು ಮನೆಯಲ್ಲೇ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಲವರು ಕುಟುಂಬದ ಸನಿಹವಿದ್ದರೆ, ಇನ್ನೂ ಕೆಲವರು ಕುಟುಂಬದಿಂದ ದೂರ ಉಳಿದಿದ್ದಾರೆ. ಈ ಎಲ್ಲಾ ಅಂಶಗಳು ಭಾವಾನಾತ್ಮಕವಾಗಿ ರೋಗಿಗಳನ್ನು ಕಾಡಬಹುದು. ಈ ಸಂದರ್ಭದಲ್ಲಿ ಆತ್ಮೀಯರ ಆರೈಕೆ, ಮಾತು ಬೇಕು. ಇದೆಲ್ಲವನ್ನು ಪರಿಗಣಿಸಿರುವ ಅಮಿತ್ ಟಂಡನ್ ಈ ರೀತಿಯಾದ ಸೆಷನ್‌ಗಳನ್ನು ಆಯೋಜಿಸಿದ್ದಾರೆ.



ಇನ್ನೂ ಇಂತಹ ಕಷ್ಟದ ಸಮಯದಲ್ಲಿ ರೋಗಿಗಳ ನೆರವಿಗೆ ನಿಂತ ಅಮಿತ್ ಅವರ ಈ ಪೋಸ್ಟ್ ಸಾಕಷ್ಟು ಪ್ರಶಂಸೆಗೆ ಪಾತ್ರವಾಗಿದೆ ಅಲ್ಲದೇ, 19.5ಕೆ ಲೈಕ್ಸ್ ಗಳಿಸಿದ್ದು, 3.5 ಕೆ ರೀಟ್ವೀಟ್ ಆಗಿದೆ.



ದೆಹಲಿಯ ಐಐಟಿಯಲ್ಲಿ ಓದುವಾಗಲೇ ಮಹೀಂದ್ರಾ ಮತ್ತು ಮಹೀಂದ್ರಾ ಹಾಗೂ ಬ್ರಿಟಿಷ್ ಟೆಲಿಕಾಂನಿಂದ ಉದ್ಯೋಗವನ್ನು ನಿರಾಕರಿಸಿ ಮೂರು ಜನರ ಪಾರ್ಟರ್‌ಶಿಪ್‌ನಲ್ಲಿ ತಾವೇ ಸ್ವತಃ ಒಂದು ಉದ್ಯಮವನ್ನು ಆರಂಭಿಸಿದರು. ಮಿಲಿಯನ್ ಡಾಲರ್ ವ್ಯವಹಾರ ಆರಂಭಿಸಿ ಮಾರುಕಟ್ಟೆಯಲ್ಲಿ ನಷ್ಠವಾದಾಗ ಉದ್ಯಮ ಕ್ಷೇತ್ರದಿಂದ ಹೊರಬಂದರು. ಅಷ್ಟರಲ್ಲಾಗಲೇ ಒಂದು ಮಗುವಿನ ತಂದೆಯಾಗಿದ್ದ ಅಮಿತ್ ಹೊಸ ಕ್ಷೇತ್ರದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾದರು. ಆ ನಂತರ ಅವರು ಸ್ಟ್ಯಾಂಡ್ ಅಪ್ ಕಮಿಡಿಯನ್ ಆಗಲು ಮುಂದೆ ಬಂದರು. ಅಲ್ಲಿಂದ ಅವರು ಮನರಂಜನಾ ಕ್ಷೇತ್ರದಲ್ಲಿ ಮುಂದುವರೆಯುತ್ತಿದ್ದಾರೆ. ಆರಂಭದಲ್ಲಿ ಸಾಕಷ್ಟು ಕಷ್ಟ ಅನುಭವಿಸಿದ ಅಮಿತ್, ಜನರು ನಗುವುದು ಬಹಳ ಕಷ್ಟ ಎನ್ನುವುದನ್ನು ಅರಿತುಕೊಂಡರು. ಆ ನಂತರ ಬಹಳಷ್ಟು ಟೆಕ್ನಿಕ್ ಕಲಿತು ಹಾಸ್ಯ ಕ್ಷೇತ್ರದಲ್ಲಿ ತಮ್ಮದೇ ಚಾಪು ಮೂಡಿಸಿದ್ದಾರೆ.
Published by: Sushma Chakre
First published: April 16, 2021, 9:36 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories