ಭಾರೀ ವಿರೋಧ, ಹೆದರಿಕೆ ನಡುವೆಯೇ ಇಂದಿನ SSLC ಪರೀಕ್ಷೆ ಮುಕ್ತಾಯ

Karnataka SSLC exams 2020 - ಇವತ್ತು ಜೂನ್ 25ರಂದು ಆರಂಭವಾಗಿ ಜುಲೈ 3ರವರೆಗೆ ಒಟ್ಟು 7 ದಿನಗಳ ಕಾಲ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ನಡೆಯಲಿವೆ. ಎಲ್ಲಾ 5,757 ಪರೀಕ್ಷಾ ಕೇಂದ್ರಗಳಲ್ಲಿ ಸುರಕ್ಷತಾ ಕ್ರಮಗಳನ್ನ ಅಳವಡಿಸಲಾಗಿದೆ.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

 • Share this:
  ಬೆಂಗಳೂರು(ಜೂನ್ 25): ಕೊರೋನಾ ವೈರಸ್ ಮಹಾಮಾರಿ ವಕ್ಕರಿಸಿ ಭವಿಷ್ಯದ ಬಗ್ಗೆ ಚಿಂತೆಗೀಡಾಗಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಈಗ ನಿರಾಳವಾಗಿದೆ. ಇವತ್ತಿನಿಂದ SSLC ಪರೀಕ್ಷೆಗಳು ನಡೆಯುತ್ತಿವೆ. ಕೊರೋನಾ ಪಿಡುಗು ವ್ಯಾಪಿಸುವ ಅಪಾಯದ ಮಧ್ಯೆ ರಾಜ್ಯ ಸರ್ಕಾರ ಧೈರ್ಯವಹಿಸಿ ಪರೀಕ್ಷೆ ಆಯೋಜನೆ ಮಾಡಿದೆ. ಜುಲೈ 3ರವರೆಗೆ ಏಳು ದಿನಗಳ ಕಾಲ ನಡೆಯುವ ಈ ಪರೀಕ್ಷೆಗೆ ಸರ್ಕಾರ ಎಲ್ಲಾ ರೀತಿಯ ಸುರಕ್ಷಾ ಕ್ರಮಗಳನ್ನ ಕೈಗೊಂಡಿದೆ.

  ರಾಜ್ಯಾದ್ಯಂತ 5,757 ಪರೀಕ್ಷಾ ಕೇಂದ್ರಗಳಲ್ಲಿ 8,48,203 ಮಕ್ಕಳು ಪರೀಕ್ಷೆ ಬರೆಯಲಿದ್ದಾರೆ. ಬೆಂಗಳೂರು ನಗರವೊಂದರಲ್ಲೇ 1,13,800 ಮಕ್ಕಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಮೂಲಕ ತಮ್ಮ ಕಲಿಕೆಯನ್ನ ತೋರ್ಪಡಿಸಲಿದ್ದಾರೆ. ರಾಜ್ಯಾದ್ಯಂತ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳ ಪೈಕಿ 10 ಮಂದಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದ್ದು ಅವರನ್ನ ಕ್ವಾರಂಟೈನ್​ನಲ್ಲಿಡಲಾಗಿದೆ. ಈ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಇಲ್ಲ. ಆಗಸ್ಟ್ ತಿಂಗಳಲ್ಲಿ ಅವರಿಗೆಂದೇ ಪ್ರತ್ಯೇಕ ಪರೀಕ್ಷೆ ಆಯೋಜಿಸಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ನಿನ್ನೆಯ ಪತ್ರಿಕಾಗೋಷ್ಠಿ ವೇಳೆ ತಿಳಿಸಿದ್ದಾರೆ.

  ಇದನ್ನೂ ಓದಿ: SSLC ಪರೀಕ್ಷೆ ಸರ್ಕಾರಕ್ಕೆ ಪ್ರತಿಷ್ಠೆಯಲ್ಲ; ಮಕ್ಕಳ ಭವಿಷ್ಯ ಮುಖ್ಯ: ಶಿಕ್ಷಣ ಸಚಿವ ಸುರೇಶ್ ಕುಮಾರ್

  ರಾಜ್ಯಾದ್ಯಂತ ಕಂಟೈನ್ಮೆಂಟ್ ವಲಯದಲ್ಲಿದ್ದ 26 ಪರೀಕ್ಷಾ ಕೇಂದ್ರಗಳನ್ನ ಸಮೀಪದ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಗೊಳಿಸಲಾಗಿದೆ. ಎಲ್ಲಾ 5,757 ಪರೀಕ್ಷಾ ಕೇಂದ್ರಗಳನ್ನ ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಸರ್ವ ರೀತಿಯ ಅಗತ್ಯ ಸುರಕ್ಷತಾ ಕ್ರಮಗಳನ್ನ ವಹಿಸಲಾಗಿದೆ. ಒಂದು ಹಾಲ್​ನಲ್ಲಿ 20ಕ್ಕಿಂತ ಹೆಚ್ಚು ಮಕ್ಕಳನ್ನು ಕೂರಿಸದಂತೆ ಎಚ್ಚರ ವಹಿಸಲಾಗುತ್ತದೆ. ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳು ಒಂದು ಗಂಟೆ ಮುಂಚಿತವಾಗಿ ಬರುವಂತೆ ಸೂಚನೆ ನೀಡಲಾಗಿದೆ. ಸಾರಿಗೆ ವ್ಯವಸ್ಥೆ ಇಲ್ಲದವರಿಗೆ ಖಾಸಗಿ ವಾಹನದ ವ್ಯವಸ್ಥೆ ಮಾಡಲಾಗಿದೆ.

  ಪರೀಕ್ಷಾ ಹಾಲ್​ಗೆ ಹೋಗುವ ಮುನ್ನ ಪ್ರತಿಯೊಬ್ಬ ವಿದ್ಯಾರ್ಥಿಗೂ ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯವಾಗಿ ಮಾಡಲಾಗುತ್ತದೆ. ಎಲ್ಲರೂ ಮಾಸ್ಕ್ ಧರಿಸುವುದು ಕಡ್ಡಾಯ. ಜ್ವರ, ನೆಗಡಿ, ಶೀತ ಇದ್ದವರಿಗೆ ಎನ್95 ಮಾಸ್ಕ್ ಅನ್ನ ನೀಡಲಾಗುತ್ತದೆ. ಎಲ್ಲಾ ವಿದ್ಯಾರ್ಥಿಗಳು ತಮ್ಮ ಮನೆಯಿಂದಲೇ ನೀರಿನ ಬಾಟಲ್ ತರಬೇಕು. ನೀರು ತರದವರಿಗೆ ಸಣ್ಣ ನೀರಿನ ಬಾಟಲ್ ಅನ್ನು ಒದಗಿಸಲಾಗುತ್ತದೆ.

  ಇದನ್ನೂ ಓದಿ: ಮಾರ್ಗಸೂಚಿ ಪಾಲಿಸಿ; ಉಜ್ವಲ ಭವಿಷ್ಯ ನಿಮ್ಮದಾಗಲಿ: SSLC ಪರೀಕ್ಷಾರ್ಥಿಗಳಿಗೆ ಸಿಎಂ ಶುಭಹಾರೈಕೆ

  ಎಸ್ ಎಸ್ ಎಲ್ ಸಿ ಪರೀಕ್ಷೆ ವೇಳಾಪಟ್ಟಿ – 2020
  ಜೂನ್ 25, ಗುರುವಾರ: ದ್ವಿತೀಯ ಭಾಷೆ ವಿಷಯಗಳು
  ಜೂನ್ 26, ಶುಕ್ರವಾರ: ಎಂಜಿನಿಯರಿಂಗ್ ವಿಷಯಗಳು (ಜೆಟಿಎಸ್ ಅಭ್ಯರ್ಥಿಗಳಿಗೆ), ಅರ್ಥಶಾಸ್ತ್ರ
  ಜೂನ್ 27, ಶನಿವಾರ: ಗಣಿತ, ಸಮಾಜಶಾಸ್ತ್ರ
  ಜೂನ್ 29, ಸೋಮವಾರ: ರಾಜ್ಯಶಾಸ್ತ್ರ, ಕರ್ನಾಟಕ ಸಂಗೀತ/ಹಿಂದೂಸ್ತಾನಿ ಸಂಗೀತ
  ಜುಲೈ 1, ಬುಧವಾರ: ಸಮಾಜ ವಿಜ್ಞಾನ
  ಜುಲೈ 2, ಗುರುವಾರ: ಪ್ರಥಮ ಭಾಷೆ – ಕನ್ನಡ, ತೆಲುಗು ಇತ್ಯಾದಿ
  ಜುಲೈ 3, ಶುಕ್ರವಾರ: ತೃತೀಯ ಭಾಷೆ ಪರೀಕ್ಷೆಗಳು ಹಾಗೂ ಎನ್.ಎಸ್.ಕ್ಯೂ.ಎಫ್ ಪರೀಕ್ಷಾ ವಿಷಯಗಳು
  First published: