ಜನರ ಮೇಲೆ ಕಾಳಜಿ ಇದ್ರೆ, ಸೋಂಕಿನ ವಿರುದ್ಧದ ಸರ್ಕಾರದ ಹೋರಾಟದಲ್ಲಿ ಕೈ ಜೋಡಿಸಿ; ಕಾಂಗ್ರೆಸ್​​ ನಾಯಕರಿಗೆ ಶ್ರೀರಾಮುಲು ಆಹ್ವಾನ

ವಿರೋಧ ಪಕ್ಷದವರು ಕೇವಲ ಸರ್ಕಾರ ವಿರುದ್ಧ ಹೇಳಿಕೆ ನೀಡುವ ಮೂಲಕ  ತಪ್ಪಿಸಿಕೊಳ್ಳೋದಲ್ಲ. ಜನರ ಮೇಲೆ ಕಳಕಳಿ, ಪ್ರೀತಿ ಇದ್ದರೆ ನೀವು ಬಂದು ಕೆಲಸ ಮಾಡಿ, ನಿಮ್ಮ ಜೊತೆ ನಾವು ಇರುತ್ತೇವೆ

ಶ್ರೀರಾಮುಲು

ಶ್ರೀರಾಮುಲು

  • Share this:
ಚಿತ್ರದುರ್ಗ (ಮೇ. 5): ಕೊರೋನಾ ಸೋಂಕು ನಿಯಂತ್ರಣದಲ್ಲಿ ಇಡೀ ದೇಶವೇ ತತ್ತರಿಸುತ್ತಿದೆ. ರಾಜ್ಯದ ಸ್ಥಿತಿಯೂ ಇದರ ಹೊರತಾಗಿಲ್ಲ.  ಸರ್ಕಾರ ಸೋಂಕಿನ ನಿಯಂತ್ರಣಕ್ಕೆ ಹೋರಾಟ ಮಾಡುತ್ತಿದೆ.  ಇಂತಹ ಹೊತ್ತಿನಲ್ಲಿ ಸೋಂಕು ನಿಯಂತ್ರಣ ವಿಚಾರಕ್ಕೆ ವಿರೋಧ ಪಕ್ಷದವರು ಸ್ವಾರ್ಥಕ್ಕಾಗಿ ಸರ್ಕಾರದ ಮೇಲೆ ತಪ್ಪು ಹಾಕುವುದು ಶೋಭೆ ತರುವುದಿಲ್ಲ. ವಿಶ್ವವೇ ಒಂದಾಗಿ  ಜಾಗತಿಕ ಸೋಂಕಿನ ವಿರುದ್ಧ ಹೋರಾಡುತ್ತಿರುವಾಗ ರಾಜಕೀಯ ನಾಯಕರು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಎನ್ನದೆ ಕೆಲಸ ಮಾಡಿದರೆ ಜನರ ಪ್ರಾಣ ಉಳಿಸಬಹುದು. ಸಾವು ಎಲ್ಲರಿಗೂ ಸಾವೇ, ಅದಕ್ಕಾಗಿ ಎಲ್ಲರೂ ಪಶ್ಚಾತಾಪ ಪಡೋಣ. ಇನ್ನು ಮುಂದೆ ಆರೀತಿ ಆಗದಂತೆ ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದು  ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ವಿಪಕ್ಷ ನಾಯಕರನ್ನು ಕೊರೋನಾ ವಿರುದ್ಧದ ಹೋರಾಟದ ಕಾರ್ಯಕ್ಕೆ ಕೈ ಜೋಡಿಸುವಂತೆ ಆಹ್ವಾನಿಸಿದರು. 

ಇನ್ನೂ ಸರ್ಕಾರ ಯುಸಿಐ ನಲ್ಲಿದೆ ಎಂಬ ಡಿಕೆ ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿರುವ ಅವರು, ಡಿಕೆ ಶಿವಕುಮಾರ್ ಅಧಿಕಾರ ಕಳೆದುಕೊಂಡಿದ್ದಾರೆ.  ನಮ್ಮ ಸಿಎಂ ಬಿಎಸ್​ ಯಡಿಯೂರಪ್ಪ ಅವರು ವಿರೋಧ ಪಕ್ಷದವರನ್ನ ಕರೆದು ಸಮಸ್ಯೆ ಬಗ್ಗೆ ಚರ್ಚಿಸಿದ್ದಾರೆ. ಸಮಸ್ಯೆ ಪರಿಹಾರ, ಲಾಕ್ ಡೌನ್ ಕುರಿತು ಸಲಹೆ ಕೇಳುತ್ತಿದ್ದೇವೆ.  ಅವರು ನಮ್ಮ ಹತ್ತಿರ ಬಂದಾಗ ಸರ್ಕಾರ ಒಳ್ಳೆ ಕೆಲಸ ಮಾಡುತ್ತಿದೆ. ಬೆಂಬಲ ನೀಡುತ್ತೇವೆ ಎನ್ನುತ್ತಾರೆ. ಹೊರಗಡೆ, ರಾಜಕೀಯ ಲಾಭಕ್ಕಾಗಿ ಸರ್ಕಾರ ಐಸಿಯು ನಲ್ಲಿದೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಇವರ ಸರ್ಕಾರ ವಿಫಲವಾಗಿದೆ ಕೆಲಸ ನಿಭಾಯಿಸಿಲ್ಲ ಎಂಬ ಹೇಳಿಕೆಗಳು ಎಲ್ಲವೂ ರಾಜಕೀಯ ಲಾಭ ಪಡೆದುಕೊಳ್ಳುವುದಕ್ಕೆ ಈ ರೀತಿ ಹೇಳಿಕೆ ಕೊಡುತ್ತಿದ್ದಾರೆ.

ಇದನ್ನು ಓದಿ: ಜನರು ನಂಬಿಕೆ ಈಗೇನಿದ್ದರೂ ಸೋನು ಮೇಲೆ; ಕಷ್ಟ ಎಂದರೇ ಅಲ್ಲೇ ಇರುತ್ತಾರೆ ಈ ನಟ

ಕೊರೋನಾ ವಿಚಾರಕ್ಕೆ ಇಡೀ ದೇಶ ತಲ್ಲಣಿಸುತ್ತಿದೆ. ನಾವು ಎಲ್ಲಾ ಪ್ರಯತ್ನ ಮಾಡುತ್ತಿದ್ದೇವೆ. ಇಡೀ ವಿಶ್ವವೇ ಕೋವಿಡ್ ನಿಯಂತ್ರಿಸುವುದಕ್ಕೆ ಪಣತೊಟ್ಟಿದೆ. ವಿರೋಧ ಪಕ್ಷದವರು ಸ್ವಾರ್ಥಕ್ಕಾಗಿ ಸರ್ಕಾರದ ಮೇಲೆ ತಪ್ಪು ಹಾಕುವುದು ಶೋಭೆ ತರಲ್ಲ. ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ. ವಿಶ್ವವೇ ಒಂದಾಗಿರುವಾಗ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಎನ್ನದೇ ಕೆಲಸ ಮಾಡಿದರೆ ಜನರ ಪ್ರಾಣ ಉಳಿಸಬಹುದು. ಅನ್ನ ಬಿಟ್ಟುಅವರ ಬೆನ್ನು ಅವರೇ ತಟ್ಟಿಕೊಳ್ಳುವಂತೆ ಚಾಮರಾಜ ನಗರ ಪ್ರಕರಣವನ್ನ ಸರ್ಕಾರದ ಮೇಲೆ ಹಾಕುವುದು ಮುಖ್ಯಮಂತ್ರಿ, ಉಸ್ತುವಾರಿ ಸಚಿವರ ಮೇಲೆ ಹಾಕಿ ಸರ್ಕಾರಕ್ಕೆ ಕೆಟ್ಟ ಹೆಸರು ತರುವಂತದಲ್ಲ. ಇನ್ನುಮುಂದೆ ಆರೀತಿ ಆಗದಂತೆ ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದರು

ವಿರೋಧ ಪಕ್ಷದವರು ಕೇವಲ ಸರ್ಕಾರ ವಿರುದ್ಧ ಹೇಳಿಕೆ ನೀಡುವ ಮೂಲಕ  ತಪ್ಪಿಸಿಕೊಳ್ಳೋದಲ್ಲ. ಜನರ ಮೇಲೆ ಕಳಕಳಿ, ಪ್ರೀತಿ ಇದ್ದರೆ ನೀವು ಬಂದು ಕೆಲಸ ಮಾಡಿ, ನಿಮ್ಮ ಜೊತೆ ನಾವು ಇರುತ್ತೇವೆ ಎಂದರು

ಬೆಂಗಳೂರು ಬೆಡ್ ಬ್ಲಾಕಿಂಗ್ ಎಂಬ ಸಂಸದ ತೇಜಸ್ವಿ ಸೂರ್ಯ ಹೇಳಿಕೆ ವಿಚಾರಕ್ಕೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಮಾತನಾಡಿರುವ ಸಚಿವ  ಶ್ರೀರಾಮುಲು, ಬಹಳಷ್ಟು ಜನರು ಸ್ವಾರ್ಥಿಗಳು ಇರಬಹುದು ಇಲ್ಲವೆಂದು ಹೇಳಲ್ಲ, ಕೆಲವೊಂದು ಸಾರಿ ಕೆಟ್ಟ ಆಸೆಯಿಂದ ವ್ಯಾಪಾರೀಕರಣ ಮಾಡುತ್ತಾರೆ. ವ್ಯಾಪಾರದ ಜೊತೆಗೆ ವೈಯಕ್ತಿಕ ಹಿತಾಸಕ್ತಿಗೆ ಲಾಭ ನೋಡಿಕೊಳ್ಳುತ್ತಾರೆ. ಜನರು ಸಾವಿನಲ್ಲೂ ಕೂಡಾ ಲಾಭ ಪಡೆದುಕೊಳ್ಳುವವರಿದ್ದಾರೆ. ಇದು ಅಲ್ಲೆಲ್ಲೊ ದೊಡ್ಡಮಟ್ಟದಲ್ಲಿ ನಡೆಯುತ್ತಿರಬೇಕು. ಜಿಲ್ಲೆಗಳಲ್ಲಿ ನಡೆಯುತ್ತಿಲ್ಲ. ಬೆಂಗಳೂರಲ್ಲಿ ಈರೀತಿಯ ಘಟನೆ ನಡೆದದ್ದರಿಂದ ತೇಜಸ್ವಿ ಸೂರ್ಯ ಹೇಳಿಕೆ ಕೊಟ್ಟಿದ್ದಾರೆ . ಅಲ್ಲದೇ ನಾನು ಇಡೀ ರಾಜ್ಯವನ್ನ ಸುತ್ತುತ್ತಿದ್ದೇನೆ ಆ ರೀತಿ ಕಂಡು ಬಂದರೆ ಅವರ ಮೇಲೆ ಕ್ರಮ ಕೈಗೊಳುತ್ತೇನೆ ಎಂದು ಭರವಸೆ ನೀಡಿದರು.
Published by:Seema R
First published: