Sri lanka; ಕೋವಾಕ್ಸಿನ್ ಲಸಿಕೆ ಪಡೆದವರೂ ಈಗ ಶ್ರೀಲಂಕಾಗೆ ಹೋಗಬಹುದು; ಕ್ವಾರಂಟೈನ್ ಸಹ ಇಲ್ಲ!

ಕೋವಾಕ್ಸಿನ್ ಇನ್ನೂ ವಿಶ್ವ ಆರೋಗ್ಯ ಸಂಸ್ಥೆಯಿಂದ ಅನುಮೋದನೆ ಪಡೆಯಬೇಕಿದೆ. ಕೋವಾಕ್ಸಿನ್‌ ಸಂಪೂರ್ಣವಾಗಿ ಮಾನ್ಯ ಆಗದಿರುವುದರಿಂದ ಭಾರತೀಯರ ಆಗಮನಕ್ಕೆ ಹಲವು ದೇಶಗಳು ನಿರ್ಬಂಧ ವಿಧಿಸಿವೆ. ಮತ್ತೊಂದೆಡೆ, WHO ಮಾನ್ಯತೆ ಪಡೆದ ಕೋವಿಶೀಲ್ಡ್ ಪಡೆದವರು ಹಲವಾರು ದೇಶಗಳಿಗೆ ಪ್ರಯಾಣಿಸಬಹುದಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ನವದೆಹಲಿ: (New Delhi) ದೇಶದಲ್ಲಿ ಕೊರೋನಾ ವ್ಯಾಪಕವಾಗಿ ಹಬ್ಬುತ್ತಿದ್ದರಿಂದ ಹಲವು ದೇಶಗಳು ಭಾರತೀಯ ಪ್ರಯಾಣಿಕರ ಆಗಮನಕ್ಕೆ ನಿರ್ಬಂಧ ವಿಧಿಸಿದೆ. ಅದರಂತೆ ಶ್ರೀಲಂಕಾ (Sri lanka) ಸಹ ಈ ನಿರ್ಬಂಧವನ್ನು ಭಾರತೀಯರಿಗೆ ವಿಧಿಸಿತ್ತು. ಇದೀಗ ಕೋವಾಕ್ಸಿನ್ (Covaxin) ಪಡೆದವರು ಸೇರಿದಂತೆ ಸಂಪೂರ್ಣವಾಗಿ ಲಸಿಕೆ ಪಡೆದ ಭಾರತೀಯರು ಶ್ರೀಲಂಕಾ ಪ್ರವಾಸ ಕೈಗೊಳ್ಳಲು ಅನುಮತಿ ನೀಡಲಾಗಿದೆ ಎಂದು  ಶ್ರೀಲಂಕಾ ಏರ್‌ಲೈನ್ಸ್‌ ಮುಖ್ಯಸ್ಥ ದಿಮುತ್ತು ತೆನ್ನಕೋನ್ ಮಂಗಳವಾರ ಟೈಮ್ಸ್​ ಆಫ್ ಇಂಡಿಯಾಗೆ ತಿಳಿಸಿದ್ದಾರೆ. ಅಲ್ಲದೇ, ಎಮರಾಲ್ಡ್ ದ್ವೀಪಕ್ಕೆ ಬಂದ ಮೇಲೆ ಕೋವಿಡ್ ನೆಗೆಟಿವ್ ಪರೀಕ್ಷಿಸುವ ಪ್ರಯಾಣಿಕರಿಗೆ ಕ್ಯಾರೆಂಟೈನ್ ಅಗತ್ಯವಿಲ್ಲ ಎಂದು ಹೇಳಲಾಗಿದೆ.

  "ಶ್ರೀಲಂಕಾ ಈಗ ಭಾರತೀಯ ಪ್ರವಾಸಿಗರಿಗೆ ಮುಕ್ತವಾಗಿದೆ. ಆದರೆ ಜನರು ಸಂಪೂರ್ಣವಾಗಿ ಲಸಿಕೆ ಹಾಕಿಸಿಕೊಂಡಿರಬೇಕು. ಎರಡನೇ ಡೋಸ್ ಅನ್ನು ಪ್ರವಾಸಕ್ಕೆ ಕನಿಷ್ಠ 14 ದಿನಗಳ ಮೊದಲು ತೆಗೆದುಕೊಂಡಿರಬೇಕು. ಆಗಮನದ ನಂತರ, ಪ್ರಯಾಣಿಕರು ತಮ್ಮ ಹೋಟೆಲ್‌ಗೆ ಹೋಗುತ್ತಾರೆ, ಅಲ್ಲಿ RT-PCR ಪರೀಕ್ಷೆಯನ್ನು ನಡೆಸಲಾಗುತ್ತದೆ.  ಪರೀಕ್ಷೆಯಲ್ಲಿ Negative ವರದಿ ಬಂದವರು ತಾವು ಎಲ್ಲಿಗೆ ಹೋಗಬೇಕೋ ಅಲ್ಲಿಗೆ ಪ್ರಯಾಣಿಸಬಹುದು,"ಎಂದು ಶ್ರೀಲಂಕಾ ಏರ್‌ಲೈನ್ಸ್‌ನ ದಿಮುತು ಹೇಳಿದರು. ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದವರನ್ನು ಹೋಟೆಲ್‌ಗಳಿಂದ ಆರೋಗ್ಯ ಕೇಂದ್ರಗಳಿಗೆ ಕರೆದೊಯ್ಯಲಾಗುತ್ತದೆ. ಸಾಮಾಜಿಕ ಅಂತರ ಮತ್ತು ಮಾಸ್ಕ್ ಸೇರಿದಂತೆ ಇತರೆ ಎಲ್ಲಾ ಕೋವಿಡ್ ನಿಯಮಗಳನ್ನು ಪ್ರತಿಯೊಬ್ಬರು ಕಡ್ಡಾಯವಾಗಿ ಪಾಲಿಸಬೇಕು.

  "ಶ್ರೀಲಂಕಾ ಕೋವಾಕ್ಸಿನ್ ಸೇರಿದಂತೆ ಎಲ್ಲಾ ಲಸಿಕೆಗಳನ್ನು ಪಡೆದವರನ್ನು ತನ್ನ ದೇಶಕ್ಕೆ ಬರಲು ಅನುಮತಿ ನೀಡಿದೆ. ಪ್ರಸ್ತುತ, ಭಾರತದಲ್ಲಿ 12 ಕೋಟಿಗೂ ಹೆಚ್ಚು ಜನರು ಸಂಪೂರ್ಣ ಲಸಿಕೆ ಪಡೆದಿದ್ದಾರೆ. ಇವರು ಶ್ರೀಲಂಕಾ ಪ್ರವಾಸ ಕೈಗೊಳ್ಳಬಹುದು. ಇದರಿಂದ ಶ್ರೀಲಂಕಾ ಪ್ರವಾಸೋದ್ಯಮ ಮತ್ತೆ ಗರಿಗೆದರಲಿದೆ ಎಂದು,"ಎಂದು ದಿಮುತು ವಿಶ್ವಾಸ ವ್ಯಕ್ತಪಡಿಸಿದರು.

  ಅಂತೆಯೇ ಶ್ರೀಲಂಕನ್ ಏರ್‌ಲೈನ್ಸ್ ಭಾರತದ ಪ್ರಮುಖ ನಗರಗಳಿಂದ ಶ್ರೀಲಂಕಾಗೆ ಹೆಚ್ಚಿನ ಸಂಖ್ಯೆಯಲ್ಲಿ ಹಾರಾಡುತ್ತಿವೆ.  ಪ್ರಸ್ತುತ ಚೆನ್ನೈನಿಂದ ವಾರಕ್ಕೆ ನಾಲ್ಕು ವಿಮಾನಗಳು ಕಾರ್ಯ ನಿರ್ವಹಿಸುತ್ತಿದೆ. ಮುಂಬೈನಿಂದ ವಾರಕ್ಕೆ ಮೂರು ವಿಮಾನಗಳು, ಮತ್ತು ವಾರಕ್ಕೊಮ್ಮೆ ಬೆಂಗಳೂರಿನಿಂದ ಕೊಲಂಬೊಕ್ಕೆ ಸಂಚರಿಸುತ್ತಿವೆ. ಸೆಪ್ಟೆಂಬರ್ 1 ರಿಂದ ಭಾರತಕ್ಕೆ ಸಂಪರ್ಕವನ್ನು ಮತ್ತಷ್ಟು ಹೆಚ್ಚಿಸಲಾಗುತ್ತದೆ. ಕೊಲಂಬೊ ಮತ್ತು ಮಧುರೈ, ತಿರುಚಿರಾಪಳ್ಳಿ, ತಿರುವನಂತಪುರಂ ಮತ್ತು ಕೊಚ್ಚಿನ್ ನಡುವೆ ವಾರಕ್ಕೊಮ್ಮೆ ವಿಮಾನಯಾನಗಳನ್ನು ಪುನರಾರಂಭಿಸಲಿದ್ದು, ಹೈದರಾಬಾದ್ ಮತ್ತು ಹೊಸದಿಲ್ಲಿಗೆ ವಾರಕ್ಕೊಮ್ಮೆ ಎರಡು ವಿಮಾನಗಳ ಮೂಲಕ ಕೊಲಂಬೊಗೆ ಸಂಪರ್ಕ ಕಲ್ಪಿಸಲಾಗುತ್ತದೆ.
  ಚೆನ್ನೈ ಮತ್ತು ಮುಂಬೈನಿಂದ ಹೊರಗಿನ ವಿಮಾನಯಾನ ಸಂಸ್ಥೆಗಳು ವಾರಕ್ಕೆ ಐದು ಬಾರಿ ವಿಸ್ತರಿಸಲಾಗುತ್ತದೆ ಮತ್ತು ಬೆಂಗಳೂರು- ಕೊಲಂಬೊ ಸೇವೆಗಳನ್ನು ವಾರಕ್ಕೆ ಮೂರು ಬಾರಿ ಹೆಚ್ಚಿಸಲಾಗುತ್ತದೆ. ಸಾಂಕ್ರಾಮಿಕ ರೋಗದ ಮೊದಲು, ಶ್ರೀಲಂಕನ್ ಕೊಲಂಬೊ ಮತ್ತು 11 ಭಾರತೀಯ ನಗರಗಳ ನಡುವೆ 120 ಸಾಪ್ತಾಹಿಕ ವಿಮಾನಗಳು ಕಾರ್ಯ ನಿರ್ವಹಿಸುತ್ತಿದ್ದವು.

  ಇದನ್ನು ಓದಿ: Hubli Airport: ಹುಬ್ಬಳ್ಳಿ ವಿಮಾನ ನಿಲ್ದಾಣ ಖಾಸಗಿಗೆ; ಖಾಸಗಿ ತೆಕ್ಕೆಗೆ ಹಾರಲಿರುವ ರಾಜ್ಯದ ಮೊದಲ ಏರ್​ಪೋರ್ಟ್?

  ಕೋವಾಕ್ಸಿನ್ ಇನ್ನೂ ವಿಶ್ವ ಆರೋಗ್ಯ ಸಂಸ್ಥೆಯಿಂದ ಅನುಮೋದನೆ ಪಡೆಯಬೇಕಿದೆ. ಕೋವಾಕ್ಸಿನ್‌ ಸಂಪೂರ್ಣವಾಗಿ ಮಾನ್ಯ ಆಗದಿರುವುದರಿಂದ ಭಾರತೀಯರ ಆಗಮನಕ್ಕೆ ಹಲವು ದೇಶಗಳು ನಿರ್ಬಂಧ ವಿಧಿಸಿವೆ. ಮತ್ತೊಂದೆಡೆ, WHO ಮಾನ್ಯತೆ ಪಡೆದ ಕೋವಿಶೀಲ್ಡ್ ಪಡೆದವರು ಹಲವಾರು ದೇಶಗಳಿಗೆ ಪ್ರಯಾಣಿಸಬಹುದಾಗಿದೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಯಾರೂ ಮನೆಯಿಂದ ಹೊರ ಬಾರದೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಹಾಗೂ ಸಾಧ್ಯವಾದಷ್ಟು ಗುಂಪು ಗೂಡುವುದನ್ನು ನಿಯಂತ್ರಿಸಬೇಕಿದೆ.
  Published by:HR Ramesh
  First published: