ಬೆಂಗಳೂರು(ಮೇ.28): "ಯಲಹಂಕದ 'ಮೇಜರ್ ಸಂದೀಪ್ ಉನ್ನಿಕೃಷ್ಣನ್' ರಸ್ತೆಯ ಮೇಲ್ಸೇತುವೆಗೆ ವಿನಾಯಕ ದಾಮೋದರ ಸಾವರ್ಕರ್ ಹೆಸರು ನಾಮಕರಣ ಮಾಡಿಯೇ ತೀರುತ್ತೇವೆ" ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಮತ್ತು ಬಿಜೆಪಿ ಶಾಸಕ ಎಸ್.ಆರ್ ವಿಶ್ವನಾಥ್ ಹೇಳಿದ್ದಾರೆ. ಈ ಸಂಬಂಧ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಯಾರು ಏನೇ ಹೇಳಲಿ. ದೇಶಕ್ಕಾಗಿ ಪ್ರಾಣತೆತ್ತ ಸ್ವಾತಂತ್ರ್ಯ ಸೇನಾನಿ ಸಾವರ್ಕರ್ ಹೆಸರು ಮೇಲ್ಸೇತುವೆಗೆ ಇಡುತ್ತೇವೆ ಎಂದರು.
ಇನ್ನು, ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿಯವರು ವೀರ ಸ್ವಾತಂತ್ರ್ಯ ಸೇನಾನಿಗೆ ಅವಮಾನ ಮಾಡುತ್ತಿದ್ದಾರೆ. ನಿಮ್ಮ ಮನೆಯವರ ಹೆಸರು ಇಡಬೇಕೆಂದರೆ ಹೇಳಿ ಮುಂದೆ ಅವರ ಹೆಸರು ನಾಮಕರಣ ಮಾಡುತ್ತೇವೆ. ಮಣ್ಣಿನ ಮಕ್ಕಳ ಮೇಲೆ ಗೌರವ ನಮಗೂ ಇದೆ ಎನ್ನುವ ಮೂಲಕ ಎಚ್ಡಿಕೆ ತಿರುಗೇಟು ನೀಡಿದರು ಎಸ್.ಆರ್ ವಿಶ್ವನಾಥ್.
ನೀವು ಎಷ್ಟೇ ಹೋರಾಟ ಮಾಡಿದರೂ ಮೇಲ್ಸೇತುವೆಗೆ ಸಾವರ್ಕರ್ ಹೆಸರು ನಾಮಕರಣ ಮಾಡುವುದನ್ನು ತಡೆಯಲಾಗುವುದಿಲ್ಲ. ಅದೇನ್ ಹೋರಾಟ ಮಾಡುತ್ತಿರೋ ಮಾಡಿಕೊಳ್ಳಿ. ನೀವು ಮೊದಲಿನಿಂದಲೂ ಹಿಟ್ ಅಂಡ್ ರನ್ ಕೇಸ್ ಎಂಬುದು ಗೊತ್ತಿದೆ ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ: ಕ್ಯಾಂಟೀನ್ಗೆ ಇಂದಿರಾ ಗಾಂಧಿ ಹೆಸರಿಡುವಾಗ ಕನ್ನಡಿಗರ ಹೆಸರು ಕಾಣಲಿಲ್ಲವೇ? - ಸಿದ್ದರಾಮಯ್ಯಗೆ ಪ್ರತಾಪ್ ಸಿಂಹ ಪ್ರಶ್ನೆ
ಇನ್ನು, ಕೊರೋನಾ ವಿಚಾರದಲ್ಲಿ ಸರ್ಕಾರಕ್ಕೆ ಸಹಕಾರ ನೀಡಿದ್ದೀನಿ ಎಂದಿದ್ದೀರಿ. ನೀವೆಲ್ಲಿ ಕೊರೋನಾ ವಿರುದ್ಧದ ಹೋರಾಟದಲ್ಲಿ ಭಾಗಿಯಾಗಿದ್ದೀರಿ? ಎಂದು ಪ್ರಶ್ನಿಸಿದ ವಿಶ್ವನಾಥ್, ಎಚ್ಡಿಕೆ ಮನೆಯಿಂದ ಹೊರಗೆ ಬಂದೇ ಇಲ್ಲ ಎಂದು ಕುಟುಕಿದರು.
ಹೀಗೆ ಮುಂದುವರಿದ ಅವರು, ಕಾಂಗ್ರೆಸ್ ಸ್ಥಾಪಿಸಿದ ಎ.ಒ ಹ್ಯೂಮ್ ಹೊರದೇಶದವ. ಹೀಗಾಗಿ ಕಾಂಗ್ರೆಸ್ ಇನ್ನೂ ಹೊರ ದೇಶದವರ ದಾಸ್ಯದಲ್ಲೇ ಇದೆ. ನಾವು ಹಿಂದೆ ಇಂದಿರಾ ಗಾಂಧಿ ಎಂದು ಕ್ಯಾಂಟೀನ್ಗೆ ಹೆಸರಿಟ್ಟಾಗ ವಿರೋಧ ಮಾಡಿದ್ದೇವಾ? ಈಗ ನಾವು ದೇಶಕ್ಕಾಗಿ ಹೋರಾಡಿದ ಸ್ವಾತಂತ್ರ್ಯ ಸೇನಾನಿ ಸಾವರ್ಕರ್ ಹೆಸರು ಇಡಬಾರದೇ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ