Sputnik-V: ವಯಸ್ಸಾದವರಲ್ಲೂ ಶೇ.83 ರಷ್ಟು ಉತ್ತಮ ಫಲಿತಾಂಶ ನೀಡಿದ ಸ್ಪುಟ್ನಿಕ್-ವಿ ಲಸಿಕೆ!

ಸ್ಪುಟ್ನಿಕ್​ ಲಸಿಕೆಯ ಫಲಿತಾಂಶದ ಬಗ್ಗೆ ಟ್ವೀಟ್​ ಮಾಡಿ ಮಾಹಿತಿ ನೀಡಿರುವ ಕೇಂದ್ರ ಆರೋಗ್ಯ ಇಲಾಖೆ, "ರಷ್ಯಾದ ಸ್ಪುಟ್ನಿಕ್ ಲೈಟ್ ಕೋವಿಡ್ ಲಸಿಕೆ ವಯಸ್ಸಾದವರಲ್ಲೂ ಸಹ ಶೇ 78.6 ರಿಂದ 83.7 ರಷ್ಟು ಪರಿಣಾಮಕಾರಿತ್ವವನ್ನು ತೋರಿಸುತ್ತಿದೆ ಎಂದು ತಿಳಿಸಿದೆ.

ಸ್ಪುಟ್ನಿಕ್​​ ಲೈಟ್​ ಲಸಿಕೆ.

ಸ್ಪುಟ್ನಿಕ್​​ ಲೈಟ್​ ಲಸಿಕೆ.

 • Share this:
  ನವ ದೆಹಲಿ (ಜೂನ್​ 02); ದೇಶಾದ್ಯಂತ ಮಾರಕ ಕೊರೋನಾ ಎರಡನೇ ಅಲೆಯ ಅಬ್ಬರ ತೀವ್ರವಾಗಿ ಹಬ್ಬಿ, ಇದೀಗ ತುಸು ಇಳಿಮುಖವಾಗಿ ಸಾಗುತ್ತಿದೆ. ಕೊರೋನಾ ಸೋಂಕು ನಿವಾರಣೆಗಾಗಿ ಕೇಂದ್ರ ಸರ್ಕಾರ ಲಸಿಕೆ ಅಭಿಯಾನ ಆರಂಭಿಸಿದೆ. ದೇಶದಲ್ಲಿ ಈವರೆಗೂ ಸೋಂಕು ನಿವಾರಣೆಗೆ ಕೋವ್ಯಾಕ್ಸಿನ್ ಹಾಗೂ ಕೋವಿಶಿಲ್ಡ್ ಎಂಬ ಎರಡು ಲಸಿಕೆಗಳನ್ನು ನೀಡಲಾಗುತ್ತಿದೆ. ಈವರೆಗೂ 45 ವರ್ಷ ಮೇಲ್ಪಟ್ಟ ವರಿಗೆ ಲಸಿಕೆ ನೀಡಲಾಗುತ್ತಿದ್ದು, ಈಗ 18 ವರ್ಷ ಮೇಲ್ಪಟ್ಟವರಿಗೂ ಲಸಿಕೆ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಷ್ಯಾದ ಮಾಸ್ಕೋದಿಂದ ಮೊದಲ ಬ್ಯಾಚ್​ನ ಸ್ಪುಟ್ನಿಕ್ ಲಸಿಕೆಯನ್ನು ಭಾರತಕ್ಕೆ ತರಲಾಗಿತ್ತು.​  ಆದರೆ, ಈ ನಡುವೆ ಸ್ಪುಟ್ನಿಕ್​ ಲಸಿಕೆಯ ಫಲಿತಾಂಶದ ಬಗ್ಗೆ ಹಲವು ಪ್ರಶ್ನೆಗಳು ಉದ್ಭವವಾಗಿದ್ದವು. ಆ ಎಲ್ಲಾ ಪ್ರಶ್ನೆಗಳಿಗೂ ಇಂದು ಬ್ಯೂನಸ್ ದೇಶದ ಆರೋಗ್ಯ ಸಚಿವಾಲಯ ಉತ್ತರ ನೀಡಿದೆ.  ಸ್ಪುಟ್ನಿಕ್​ ಲಸಿಕೆಯ ಫಲಿತಾಂಶದ ಬಗ್ಗೆ ಟ್ವೀಟ್​ ಮಾಡಿ ಮಾಹಿತಿ ನೀಡಿರುವ ಬ್ಯೂನಸ್ ದೇಶದ ಆರೋಗ್ಯ ಇಲಾಖೆ, "ರಷ್ಯಾದ ಸ್ಪುಟ್ನಿಕ್ ಲೈಟ್ ಕೋವಿಡ್ ಲಸಿಕೆ ವಯಸ್ಸಾದವರಲ್ಲೂ ಸಹ ಶೇ 78.6 ರಿಂದ 83.7 ರಷ್ಟು ಪರಿಣಾಮಕಾರಿತ್ವವನ್ನು ತೋರಿಸುತ್ತಿದೆ" ಎಂದು ತಿಳಿಸಿದೆ.

  ಸ್ಪುಟ್ನಿಕ್ ವಿ ಮೂರನೇ ಲಸಿಕೆ ನೀಡಲು ನೀಡಲು ಭಾರತ ಅನುಮೋದನೇ ನೀಡಿದೆ. ಜೂನ್ 2ನೇ ವಾರದಿಂದ ಅಪೋಲೋ ಆಸ್ಪತ್ರೆ ಮುಖಾಂತರ ಸ್ಪುಟ್ನಿಕ್ ವಿ ಲಸಿಕೆ ನೀಡಲಾಗುವುದು ಎಂದು ಅಪೋಲೊ ಆಸ್ಪತ್ರೆ ಕಾರ್ಯನಿರ್ವಾಹಕ ಉಪಾಧ್ಯಕ್ಷರಾದ ಶೋಭಾನಾ ಕಾಮಿನೆನಿ ಅವರು ತಿಳಿಸಿದ್ದಾರೆ.

  ಭಾರತದಲ್ಲಿ ಕೊರೋನಾ ವೈರಸ್​ ಸೋಂಕು ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಈ ಸೋಂಕನ್ನು ತಡೆಯುವ ಸಲುವಾಗಿ ಈಗಾಗಲೇ ಭಾರತದಲ್ಲಿ ಲಸಿಕೆ ನೀಡುವ ಕೆಲಸ ಆರಂಭವಾಗಿದೆ ಆದರೂ, ಎಲ್ಲರಿಗೂ ನೀಡುವಷ್ಟು ಲಸಿಕೆ ದೇಶದಲ್ಲಿ ಪ್ರಸ್ತುತ ಲಭ್ಯವಿಲ್ಲ. ಹೀಗಾಗಿ ರಷ್ಯಾದಿಂದ ಸ್ಪುಟ್ನಿಕ್-ವಿ ಲಸಿಕೆಯನ್ನು ಆಮದು ಮಾಡಿಕೊಳ್ಳಲಾಗಿದೆ. ಆದರೆ, ಇತ್ತೀಚಿನ ಬೆಳವಣಿಗೆಯಲ್ಲಿ ಭಾರತದಲ್ಲಿ ಲಸಿಕೆ ಕಾರ್ಯಕ್ರಮಕ್ಕೆ ವೇಗ ನೀಡುವ ಸಲುವಾಗಿ ರಷ್ಯಾ ಭಾರತದಲ್ಲಿ ನೇರ ಹೂಡಿಕೆ ಮಾಡಿದ್ದು,

  ದೆಹಲಿಯ ಪ್ಯಾನೇಸಿಯಾ ಬಯೋಟೆಕ್ ಸಹಯೋಗದೊಂದಿಗೆ ಪ್ರತಿ ವರ್ಷ 100 ಮಿಲಿಯನ್ ಡೋಸ್ ಸ್ಪುಟ್ನಿಕ್-ವಿ ಲಸಿಕೆಯನ್ನು ಉತ್ಪಾದಿಸಲಿದೆ ಎಂದು ತಿಳಿದುಬಂದಿದೆ. ಸ್ಪುಟ್ನಿಕ್-ವಿ ಲಸಿಕೆ ಕೊರೋನಾ ವೈರಸ್ ವಿರುದ್ಧ ವಿಶ್ವದ ಮೊಟ್ಟಮೊದಲ ನೋಂದಾಯಿತ ಲಸಿಕೆ ಎಂದು ಆರ್​ಡಿಐಎಫ್ ಹೇಳಿಕೆಯಲ್ಲಿ ತಿಳಿಸಿದೆ.

  ದೆಹಲಿಯ ಪ್ಯಾನೇಸಿಯಾ ಬಯೋಟೆಕ್ ಸೌಲಭ್ಯಗಳಿಂದ ತಯಾರಿಸಿದ ಮೊದಲ ಬ್ಯಾಚ್​ನ ಲಸಿಕೆಯನ್ನು ಗುಣಮಟ್ಟದ ಪರಿಶೀಲನೆಗಾಗಿ ಮಾಸ್ಕೋ ಸಂಸ್ಥೆಯ ಗಮಲೇಯಾ ರವಾನಿಸಲಾಗುತ್ತದೆ. ಅಲ್ಲಿ ಪರೀಕ್ಷೆ ನಡೆಸಿದ ಬಳಿಕ ಭಾರತದಲ್ಲಿ ಈ ಲಸಿಕೆಯನ್ನು ನೀಡುವ ಕೆಲಸ ಆರಂಭವಾಗುತ್ತದೆ. ಭಾರತೀಯ ಉತ್ಪಾದಕರ ಸೌಲಭ್ಯಗಳು ಜಿಎಂಪಿ ಮಾನದಂಡಗಳಿಗೆ ಅನುಗುಣವಾಗಿರುತ್ತವೆ ಮತ್ತು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಯಿಂದ ಪೂರ್ವಭಾವಿಯಾಗಿರುತ್ತದೆ ಎಂದು ಆರ್‌ಡಿಐಎಫ್ ತನ್ನ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.

  ಇದನ್ನೂ ಓದಿ: CM BSY: ಬಿಎಸ್​ವೈ ನಾಯಕತ್ವ ಬದಲಾವಣೆ ಇಲ್ಲ; ಸಂಪುಟದ ಶೇ.50 ಪುನಾರಚನೆಗೆ ಬಿಜೆಪಿ ಹೈಕಮಾಂಡ್ ಮಹತ್ವದ ನಿರ್ಧಾರ!

  ಸ್ಪುಟ್ನಿಕ್-ವಿ ಲಸಿಕೆಯನ್ನು ಈ ವರ್ಷ ಏಪ್ರಿಲ್ 12 ರಂದು ಭಾರತದಲ್ಲಿ ತುರ್ತು ಬಳಕೆಗೆ ಅನುಮೋದನೆ ನೀಡಲಾಯಿತು. ಮೇ 14ರಿಂದ ರಷ್ಯಾದ ಸ್ಪುಟ್ನಿಕ್ ಲಸಿಕೆಯನ್ನು ಜನರಿಗೆ ನೀಡಲಾಗುತ್ತಿದೆ. ಪ್ಯಾನೇಸಿಯಾ ಬಯೋಟೆಕ್ ಸಹಭಾಗಿತ್ವದಲ್ಲಿ ಭಾರತದಲ್ಲಿ ಉತ್ಪಾದನೆಯನ್ನು ಪ್ರಾರಂಭಿಸುವುದು ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ದೇಶಕ್ಕೆ ಸಹಾಯ ಮಾಡುವ ಪ್ರಮುಖ ಹೆಜ್ಜೆಯಾಗಿದೆ.

  ಇದನ್ನೂ ಓದಿ: ಪೊಲೀಸರು ಕರ್ತವ್ಯದ ವೇಳೆ ಮೊಬೈಲ್-ಸಾಮಾಜಿಕ ಜಾಲತಾಣ ಬಳಸದಂತೆ ಆದೇಶಿಸಿದ ಬಿಹಾರದ ಸರ್ಕಾರ

  ಸ್ಪುಟ್ನಿಕ್-ವಿ ಉತ್ಪಾದನೆಯು ಕೊರೋನಾ ವೈರಸ್​ ಅನ್ನು ನಿರ್ಮೂಲನೆ ಮಾಡಲಿದೆ. ಅಲ್ಲದೆ, ಈ ಲಸಿಕೆಯನ್ನು ಹೆಚ್ಚು ಉತ್ಪಾದಿಸಿ ಭವಿಷ್ಯದಲ್ಲಿ ವಿದೇಶಗಳಿಗೆ ರಫ್ತು ಮಾಡಲಾಗುವುದು ಮತ್ತು ವಿಶ್ವದ ಇತರ ದೇಶಗಳಲ್ಲಿ ವೈರಸ್ ಹರಡುವುದನ್ನು ತಡೆಯಲು ಸಹಾಯ ಮಾಡಲಾಗುತ್ತದೆ "ಎಂದು ಆರ್​ಡಿಐಎಫ್ ಸಿಇಒ ಕಿರಿಲ್ ಡಿಮಿಟ್ರಿವ್ ಹೇಳಿದ್ದಾರೆ.

  ಇಲ್ಲಿಯವರೆಗೆ, ಸ್ಪುಟ್ನಿಕ್ ವಿ ಲಸಿಕೆ ವಿಶ್ವದ 66 ದೇಶಗಳಲ್ಲಿ ನೋಂದಾಯಿಸಲ್ಪಟ್ಟಿದ್ದು, ಒಟ್ಟು 3.2 ಶತಕೋಟಿ ಜನಸಂಖ್ಯೆ ಇದೆ. ಚುಚ್ಚುಮದ್ದಿನ ದಕ್ಷತೆಯು ಶೇ.97.6 ಎಂದು ಹೇಳಲಾಗಿದೆ. ರಷ್ಯಾದಲ್ಲಿ ಕೋವಿಡ್ -19 ಸೋಂಕಿನ ದರದ ಮಾಹಿತಿಯ ಪ್ರಕಾರ, ಸ್ಪುಟ್ನಿಕ್-ವಿ ಯ ಎರಡೂ ಘಟಕಗಳೊಂದಿಗೆ ಲಸಿಕೆ ಹಾಕಲಾಗಿದೆ.
  Published by:MAshok Kumar
  First published: