Sputnik-V: ದೆಹಲಿಯಲ್ಲೇ ಆರಂಭವಾಯ್ತು ಸ್ಪುಟ್ನಿಕ್ ಲಸಿಕೆ ಉತ್ಪಾದನೆ; ವರ್ಷಕ್ಕೆ 100 ಮಿಲಿಯನ್ ಡೋಸ್ ಉತ್ಪಾದನೆ ಗುರಿ

ಸ್ಪುಟ್ನಿಕ್-ವಿ ಲಸಿಕೆಯನ್ನು ಈ ವರ್ಷ ಏಪ್ರಿಲ್ 12 ರಂದು ಭಾರತದಲ್ಲಿ ತುರ್ತು ಬಳಕೆಗೆ ಅನುಮೋದನೆ ನೀಡಲಾಯಿತು. ಮೇ 14ರಿಂದ ರಷ್ಯಾದ ಸ್ಪುಟ್ನಿಕ್ ಲಸಿಕೆಯನ್ನು ಜನರಿಗೆ ನೀಡಲಾಗುತ್ತಿದೆ.

ಕೋವಿಡ್ ಲಸಿಕೆ.

ಕೋವಿಡ್ ಲಸಿಕೆ.

 • Share this:
  ನವ ದೆಹಲಿ (ಮೇ 24); ಭಾರತದಲ್ಲಿ ಕೊರೋನಾ ವೈರಸ್​ ಸೋಂಕು ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಈ ಸೋಂಕನ್ನು ತಡೆಯುವ ಸಲುವಾಗಿ ಈಗಾಗಲೇ ಭಾರತದಲ್ಲಿ ಲಸಿಕೆ ನೀಡುವ ಕೆಲಸ ಆರಂಭವಾಗಿದೆ ಆದರೂ, ಎಲ್ಲರಿಗೂ ನೀಡುವಷ್ಟು ಲಸಿಕೆ ದೇಶದಲ್ಲಿ ಪ್ರಸ್ತುತ ಲಭ್ಯವಿಲ್ಲ. ಹೀಗಾಗಿ ರಷ್ಯಾದಿಂದ ಸ್ಪುಟ್ನಿಕ್-ವಿ ಲಸಿಕೆಯನ್ನು ಆಮದು ಮಾಡಿಕೊಳ್ಳಲಾಗಿದೆ. ಆದರೆ, ಇತ್ತೀಚಿನ ಬೆಳವಣಿಗೆಯಲ್ಲಿ ಭಾರತದಲ್ಲಿ ಲಸಿಕೆ ಕಾರ್ಯಕ್ರಮಕ್ಕೆ ವೇಗ ನೀಡುವ ಸಲುವಾಗಿ ರಷ್ಯಾ ಭಾರತದಲ್ಲಿ ನೇರ ಹೂಡಿಕೆ ಮಾಡಿದ್ದು, ದೆಹಲಿಯ ಪ್ಯಾನೇಸಿಯಾ ಬಯೋಟೆಕ್ ಸಹಯೋಗದೊಂದಿಗೆ ಪ್ರತಿ ವರ್ಷ 100 ಮಿಲಿಯನ್ ಡೋಸ್ ಸ್ಪುಟ್ನಿಕ್-ವಿ ಲಸಿಕೆಯನ್ನು ಉತ್ಪಾದಿಸಲಿದೆ ಎಂದು ತಿಳಿದುಬಂದಿದೆ. ಸ್ಪುಟ್ನಿಕ್-ವಿ ಲಸಿಕೆ ಕೊರೋನಾ ವೈರಸ್ ವಿರುದ್ಧ ವಿಶ್ವದ ಮೊಟ್ಟಮೊದಲ ನೋಂದಾಯಿತ ಲಸಿಕೆ ಎಂದು ಆರ್​ಡಿಐಎಫ್ ಹೇಳಿಕೆಯಲ್ಲಿ ತಿಳಿಸಿದೆ.

  ದೆಹಲಿಯ ಪ್ಯಾನೇಸಿಯಾ ಬಯೋಟೆಕ್ ಸೌಲಭ್ಯಗಳಿಂದ ತಯಾರಿಸಿದ ಮೊದಲ ಬ್ಯಾಚ್​ನ ಲಸಿಕೆಯನ್ನು ಗುಣಮಟ್ಟದ ಪರಿಶೀಲನೆಗಾಗಿ ಮಾಸ್ಕೋ ಸಂಸ್ಥೆಯ ಗಮಲೇಯಾ ರವಾನಿಸಲಾಗುತ್ತದೆ. ಅಲ್ಲಿ ಪರೀಕ್ಷೆ ನಡೆಸಿದ ಬಳಿಕ ಭಾರತದಲ್ಲಿ ಈ ಲಸಿಕೆಯನ್ನು ನೀಡುವ ಕೆಲಸ ಆರಂಭವಾಗುತ್ತದೆ. ಭಾರತೀಯ ಉತ್ಪಾದಕರ ಸೌಲಭ್ಯಗಳು ಜಿಎಂಪಿ ಮಾನದಂಡಗಳಿಗೆ ಅನುಗುಣವಾಗಿರುತ್ತವೆ ಮತ್ತು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಯಿಂದ ಪೂರ್ವಭಾವಿಯಾಗಿರುತ್ತದೆ ಎಂದು ಆರ್‌ಡಿಐಎಫ್ ತನ್ನ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.

  ಸ್ಪುಟ್ನಿಕ್-ವಿ ಲಸಿಕೆಯನ್ನು ಈ ವರ್ಷ ಏಪ್ರಿಲ್ 12 ರಂದು ಭಾರತದಲ್ಲಿ ತುರ್ತು ಬಳಕೆಗೆ ಅನುಮೋದನೆ ನೀಡಲಾಯಿತು. ಮೇ 14ರಿಂದ ರಷ್ಯಾದ ಸ್ಪುಟ್ನಿಕ್ ಲಸಿಕೆಯನ್ನು ಜನರಿಗೆ ನೀಡಲಾಗುತ್ತಿದೆ. ಪ್ಯಾನೇಸಿಯಾ ಬಯೋಟೆಕ್ ಸಹಭಾಗಿತ್ವದಲ್ಲಿ ಭಾರತದಲ್ಲಿ ಉತ್ಪಾದನೆಯನ್ನು ಪ್ರಾರಂಭಿಸುವುದು ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ದೇಶಕ್ಕೆ ಸಹಾಯ ಮಾಡುವ ಪ್ರಮುಖ ಹೆಜ್ಜೆಯಾಗಿದೆ. ಸ್ಪುಟ್ನಿಕ್-ವಿ ಉತ್ಪಾದನೆಯು ಕೊರೋನಾ ವೈರಸ್​ ಅನ್ನು ನಿರ್ಮೂಲನೆ ಮಾಡಲಿದೆ. ಅಲ್ಲದೆ, ಈ ಲಸಿಕೆಯನ್ನು ಹೆಚ್ಚು ಉತ್ಪಾದಿಸಿ ಭವಿಷ್ಯದಲ್ಲಿ ವಿದೇಶಗಳಿಗೆ ರಫ್ತು ಮಾಡಲಾಗುವುದು ಮತ್ತು ವಿಶ್ವದ ಇತರ ದೇಶಗಳಲ್ಲಿ ವೈರಸ್ ಹರಡುವುದನ್ನು ತಡೆಯಲು ಸಹಾಯ ಮಅಡಲಾಗುತ್ತದೆ "ಎಂದು ಆರ್​ಡಿಐಎಫ್ ಸಿಇಒ ಕಿರಿಲ್ ಡಿಮಿಟ್ರಿವ್ ಹೇಳಿದ್ದಾರೆ.

  "ನಾವು ಸ್ಪುಟ್ನಿಕ್-ವಿ ಉತ್ಪಾದನೆಯನ್ನು ಪ್ರಾರಂಭಿಸುವಾಗ ಇದು ಮಹತ್ವದ ಹೆಜ್ಜೆಯಾಗಿದೆ. ಆರ್​ಡಿಐಎಫ್ ಜೊತೆಗೆ, ದೇಶಾದ್ಯಂತ ಮತ್ತು ಪ್ರಪಂಚದಾದ್ಯಂತದ ಜನರಿಗೆ ಸಾಮಾನ್ಯ ಸ್ಥಿತಿಯನ್ನು ಮರಳಿ ತರಲು ಸಹಾಯ ಮಾಡಬೇಕೆಂದು ನಾವು ಭಾವಿಸುತ್ತೇವೆ" ಎಂದು ಪ್ಯಾನೇಸಿಯಾ ಬಯೋಟೆಕ್ ಎಂಡಿ ಡಾ.ರಾಜೇಶ್ ಜೈನ್ ಹೇಳಿದ್ದಾರೆ.

  ಇದನ್ನೂ ಓದಿ: Yellow Fungus: ಕೊರೋನಾ ಆಯ್ತು..ಬ್ಲಾಕ್​ ಫಂಗಸ್​ ಆಯ್ತು ಈಗ ಹಳದಿ ಫಂಗಸ್​ ಕಾಟ; ದೆಹಲಿಯಲ್ಲಿ ಪತ್ತೆಯಾಯ್ತು ಮೊದಲ ಕೇಸ್​!

  ಇಲ್ಲಿಯವರೆಗೆ, ಸ್ಪುಟ್ನಿಕ್ ವಿ ವಿಶ್ವದ 66 ದೇಶಗಳಲ್ಲಿ ನೋಂದಾಯಿಸಲ್ಪಟ್ಟಿದ್ದು, ಒಟ್ಟು 3.2 ಶತಕೋಟಿ ಜನಸಂಖ್ಯೆ ಇದೆ. ಚುಚ್ಚುಮದ್ದಿನ ದಕ್ಷತೆಯು ಶೇ.97.6 ಎಂದು ಹೇಳಲಾಗಿದೆ. ರಷ್ಯಾದಲ್ಲಿ ಕೋವಿಡ್ -19 ಸೋಂಕಿನ ದರದ ಮಾಹಿತಿಯ ಪ್ರಕಾರ, ಸ್ಪುಟ್ನಿಕ್-ವಿ ಯ ಎರಡೂ ಘಟಕಗಳೊಂದಿಗೆ ಲಸಿಕೆ ಹಾಕಲಾಗಿದೆ.

  ಭಾರತದಲ್ಲಿ ಕೊರೋನಾ ಕೇಕೆ:

  ದೇಶದಲ್ಲಿ ಎರಡನೇ ಸುತ್ತಿನಲ್ಲಿ ಮಾರಕ‌ ಕಾಯಿಲೆ ಕೊರೋನಾ ಅಲೆ ವ್ಯಾಪಕವಾಗಿ ಹರಡುತ್ತಿದ್ದು ಇನ್ನೂ ಪ್ರತಿದಿನ ಸರಿ ಸುಮಾರು ಎರಡೂವರೆ ಲಕ್ಷ ಜನ ಸೋಂಕು ಪೀಡಿತರಾಗುತ್ತಿದ್ದಾರೆ. ಕೊರೋನಾ ಲಸಿಕೆ ಕೊರತೆ ಉಂಟಾಗಿದ್ದು ಸಕಾಲಕ್ಕೆ ಎಲ್ಲರಿಗೂ ಲಸಿಕೆ ಸಿಗುವ ಸಾಧ್ಯತೆ ಇಲ್ಲ. ಇದರಿಂದ ಮೂರನೇ ಅಲೆಯ ಅಬ್ಬರವೂ ದೇಶವನ್ನು ತೀವ್ರವಾಗಿ ಕಾಡಬಹುದು ಎನ್ನಲಾಗುತ್ತಿದೆ. ಈ ನಡುವೆ ಎರಡನೇ ಅಲೆಯ ವೇಳೆಯಲ್ಲಿ ಕೊರೋನಾದಿಂದ ಸಾಯುತ್ತಿರುವವರ ಸಂಖ್ಯೆಯಲ್ಲೂ ಇಳಿಮುಖ ಆಗದೆ ಪ್ರತಿ ದಿನ ನಾಲ್ಕು ಸಾವಿರಕ್ಕೂ ಹೆಚ್ಚು ಜನ‌ ಕೊರೋನಾಗೆ ಬಲಿ ಆಗುತ್ತಿದ್ದಾರೆ. ಕೇವಲ 12 ದಿನದಲ್ಲಿ ಕೊರೋನಾಗೆ 50 ಸಾವಿರ ಜನ ಬಲಿಯಾಗಿದ್ದು ದಾಖಲೆಯನ್ನು ಸೃಷ್ಟಿಸಿದೆ.

  ಇದನ್ನೂ ಓದಿ: Corona Vaccine: ಶೀಘ್ರದಲ್ಲೇ ಮಕ್ಕಳಿಗೂ ಲಭ್ಯವಾಗಲಿದೆ ಕೋವಾಕ್ಸಿನ್ ಲಸಿಕೆ; ಅನುಮತಿ ನೀಡಿಲಿರುವ WHO?

  ಕೊರೋನಾ ರೋಗದಿಂದ ಸಾಯುವವರ ಸಂಖ್ಯೆಯಲ್ಲಿ ಭಾರತವು ಕಳೆದ ವಾರವೇ ಸಾವಿನಲ್ಲಿ ಅಮೇರಿಕಾವನ್ನು ಹಿಂದಿಕ್ಕಿತ್ತು. ಅಮೇರಿಕಾದಲ್ಲಿ 31 ದಿನಗಳಲ್ಲಿ 1 ಲಕ್ಷ ಜನ ಸತ್ತಿದ್ದರೆ ಭಾರತದಲ್ಲಿ ಕೇವಲ 26 ದಿನದಲ್ಲಿ 1 ಲಕ್ಷ ಜನ ಕೊರೋನಾಗೆ ಬಲಿ ಆಗಿದ್ದರು. ಈಗ ತನ್ನದೇ ದಾಖಲೆ ಮುರಿದಿರುವ ಭಾರತ ಕೇವಲ 12 ದಿನದಲ್ಲಿ ಕೊರೋನಾಗೆ 50 ಸಾವಿರ ಜನ ಬಲಿಯಾದ ದಾಖಲೆಯನ್ನು ಮಾಡಿದೆ.

  ಕೊರೋನಾ ರೋಗದಿಂದ ಸಾಯುತ್ತಿರುವವರ ವಿಚಾರದಲ್ಲಿ ಭಾರತವು ಈಗ ಜಗತ್ತಿನ ಮೂರನೇ ಅತಿ ದೊಡ್ಡ ರಾಷ್ಟ್ರ ಎಂಬ ಕುಖ್ಯಾತಿ ಗಳಿಸಿದೆ.‌ ಮೊದಲ ಸ್ಥಾನದಲ್ಲಿರುವ ಅಮೇರಿಕಾದಲ್ಲಿ 6 ಲಕ್ಷ ಜನರು ಕೊರೋನಾಗೆ ಬಲಿ ಆಗಿದ್ದರೆ ಎರಡನೇ ಸ್ಥಾನದಲ್ಲಿರುವ ಬ್ರೆಜಿಲ್ ದೇಶದಲ್ಲಿ ಮಾರಕ ರೋಗ ಕೊರೋನಾ 4.5 ಲಕ್ಷ ಜನರನ್ನು ಬಲಿ ಪಡೆದುಕೊಂಡಿದೆ. ಭಾರತದ ಕೊರೋನಾ ರೋಗಿಗಳ ಸಾವಿನ ಸಂಖ್ಯೆ 3 ಲಕ್ಷ ದಾಟಿದ್ದು 3ನೇ ಸ್ಥಾನದಲ್ಲಿದೆ.
  Published by:MAshok Kumar
  First published: