ವಿಯೆಟ್ನಾಂ: ಕೊರೋನಾ ಮೊದಲ ಅಲೆ ಇಡೀ ವಿಶ್ವವನ್ನೇ ಕಾಡಿತ್ತು. ಒಂದು ಹಂತದಲ್ಲಿ ಎಲ್ಲಾ ದೇಶಗಳು ಲಾಕ್ಡೌನ್ ಘೋಷಿಸುವ ಮೂಲಕ ಈ ಸೋಂಕನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾಗಿತ್ತು. ಆದರೆ, ಕಳೆದ ವರ್ಷ ಅಕ್ಟೋಬರ್ನಲ್ಲಿ ಮತ್ತೆ ಲಂಡನ್ನಲ್ಲಿ ಕಾಣಿಸಿಕೊಂಡ ಕೊರೋನಾ ರೂಪಾಂತರಿ ವೈರಸ್ ಮತ್ತೊಮ್ಮೆ ಇಡೀ ವಿಶ್ವದ ಎದುರು ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. ಇಂಗ್ಲೆಂಡ್ನಲ್ಲಿ ಕಾಣಿಸಿಕೊಂಡ ಅದೇ ರೂಪಾಂತರಿ ವೈರಸ್ ಇದೀಗ ಭಾರತದಲ್ಲೂ ದೊಡ್ಡ ಮಟ್ಟದ ಅನಾಹುತಗಳನ್ನು ಸೃಷ್ಟಿಸುತ್ತಿದೆ. ಈ ನಡುವೆ ಭಾರತ ಮತ್ತು ಬ್ರಿಟನ್ನಲ್ಲಿ ಪತ್ತೆಯಾಗಿರುವ ಹೊಸ ರೂಪಾಂತರಿ ಕೊರೋನಾ ವೈರೈಸ್ ಈಗ ವಿಯೆಟ್ನಾಂ ದೇಶದಲ್ಲೂ ಕಾಣಿಸಿಕೊಂಡಿದ್ದು, ಈ ಮಾದರಿಯ ವೈರಸ್ಗಳು ಗಾಳಿಯಲ್ಲಿ ಅತಿ ಶೀಘ್ರವಾಗಿ ಹರಡಬಲ್ಲದು ಎಂದು ವಿಯೆಟ್ನಾಂ ತನ್ನ ಸಂಶೋಧನೆಯ ಮೂಲಕ ತಿಳಿಸಿದ್ದು, ಮತ್ತಷ್ಟು ಆಘಾತಕ್ಕೆ ಕಾರಣವಾಗಿದೆ.
ವಿಯೆಟ್ನಾಂ ದೇಶದಲ್ಲಿ ಇದುವರೆಗೆ 6,800 ಜನರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು 47 ಜನರು ಈ ವೈರಸ್ ಗೆ ಬಲಿಯಾಗಿದ್ದಾರೆ ಎಂದು ವಿಯೆಟ್ನಾಂ ಸರ್ಕಾರ ತಿಳಿಸಿದೆ. ವಿಯೆಟ್ನಾಂ ನಲ್ಲಿ ಇದು ವರೆಗೆ 10 ಲಕ್ಷ ಜನರಿಗೆ ಕೋವಿಡ್ ವ್ಯಾಕ್ಸಿನ್ ನೀಡಲಾಗಿದೆ ಎಂದು ಅಲ್ಲಿನ ಸರ್ಕಾರ ತಿಳಿಸಿದೆ. ಅಲ್ಲದೆ, ಈ ಹೊಸ ಸಂಶೋಧನೆ, "ಗಂಟಲ ದ್ರವದಲ್ಲಿ ಸೇರಿರುವ ಹೊಸ ರೂಪಾಂತರಿ ವೈರಸ್ ಶೀಘ್ರವಾಗಿ ಸುತ್ತಲಿನ ವಾತಾವರಣಕ್ಕೆ ಹರಡುವ ಶಕ್ತಿ ಹೊಂದಿದೆ" ಎಂದು ತಿಳಿಸಿರುವುದು ಆತಂಕಕ್ಕೆ ಕಾರಣವಾಗಿದೆ.
ಬ್ರಿಟನ್ ಮತ್ತು ಭಾರತದಲ್ಲಿ ರೂಪಾಂತರಗೊಂಡ ಹೊಸ ಕೋರೋನಾ ವೈರಸ್ ತಳಿ ವಿಯೆಟ್ನಾಂ ನಲ್ಲಿ ತೀವ್ರವಾಗಿ ಹರಡುತ್ತಿದೆ ಇದೆ ಎಂದು ವಿಯೆಟ್ನಾಂ ಆರೋಗ್ಯ ಸಚಿವಾಲಯ ತಿಳಿಸಿದೆ. ಕೊರೋನಾ ಎರಡನೇಯ ಅಲೆಯ ಸಂದರ್ಭದಲ್ಲಿ ವಿಯೆಟ್ನಾಂ ನ ಅರ್ಧದಷ್ಟು ಭಾಗಕ್ಕೆ ಕೊರೋನಾ ವೈರಸ್ ಹರಡಿದೆ. ಹನೋಯಿ ಮತ್ತು ಹೋ ಚಿನ್ ಮಿನ್ಹ್ ನಂತಹ ಕೈಗಾರಿಕಾ ನಗರಗಳಲ್ಲಿ ಕೊರೋನಾ ಹೊಸ ರೂಪಾಂತರಿ ತಳಿ ವೈರಸ್ ತೀವ್ರವಾಗಿ ಹರಡುತ್ತಿದೆ. ಕೊರೋನಾ ಸೋಂಕಿನ ಹರಡುವಿಕೆ ಕಳೆದ ವರ್ಷಕ್ಕಿಂತ ಈ ವರ್ಷ ತೀವ್ರವಾಗಿದೆ ಎಂದು ವಿಯೆಟ್ನಾಂ ಸರ್ಕಾರ ತಿಳಿಸಿದೆ.
ನಾವು ಭಾರತ ಮತ್ತು ಬ್ರಿಟನ್ ನಲ್ಲಿ ಮೊತ್ತ ಮೊದಲಿಗೆ ಕಾಣಿಸಿಕೊಂಡ ಕೊರೋನಾ ಹೊಸ ರೂಪಾಂತರಿಯನ್ನು ವಿಯಾಟ್ನಾಂ ನಲ್ಲಿಯೂ ಪತ್ತೆ ಹಚ್ಚಿದ್ದೇವೆ. ಗಂಟಲುದ್ರವದಲ್ಲಿ ಸೇರಿರುವ ಈ ಹೊಸ ತಳಿ ವೈರಸ್ಗಳು ಅತ್ಯಂತ ಶೀಘ್ರವಾಗಿ ಮತ್ತು ತೀವ್ರ ಸ್ವರೂಪದಲ್ಲಿ ಗಾಳಿಯ ಮೂಲಕ ಸುತ್ತಲಿನ ಪರಿಸರಕ್ಕೆ ಹರಡುತ್ತಿರುವುದನ್ನು ಕಂಡುಕೊಂಡಿದ್ದೇವೆ ಎಂದು ವಿಯೆಟ್ನಾಂ ಆರೋಗ್ಯ ಸಚಿವ ನುಗುಯೆನ್ ಥಾನ್ ಲಾಂಗ್ ಶನಿವಾರ ಅಲ್ಲಿನ ಮಾಧ್ಯಮಗಳಿಗೆ ತಿಳಿಸಿದ್ದಾಗಿ ಎನ್ಡಿಟಿವಿ ವರದಿ ಮಾಡಿದೆ.
ಇದನ್ನೂ ಓದಿ: Covid Vaccine: ಖಾಸಗಿ ಆಸ್ಪತ್ರೆಗಳು ಹಾಗೂ ಹೋಟೆಲ್ಗಳು ಒಂದಾಗಿ ಲಸಿಕೆ ಪ್ಯಾಕೇಜ್ ನೀಡುವಂತಿಲ್ಲ; ಕೇಂದ್ರ ಸರ್ಕಾರ
ವಿಯೆಟ್ನಾಂನ ವಿಜ್ಞಾನಿಗಳು ಇತ್ತೀಚೆಗೆ ಪರೀಕ್ಷಿಸಲಾದ 32 ಜನರಲ್ಲಿ 4 ಜನರಲ್ಲಿ ಹೊಸ ರೂಪಾಂತರಿ ಕೊರೋನಾ ವೈರಸ್ ಅಂಶಗಳು ಕಂಡುಬಂದಿವೆ ಎಂದು ತಿಳಿಸಿದೆ.
ವಿಯೇಟ್ನಾಂ ಆರೋಗ್ಯ ಮಂತ್ರಿ ಶನಿವಾರ ಮೇ 29 ರಂದು ಹೊಸ ತಳಿಯನ್ನು ಘೋಷಿಸುವ ಮೊದಲು ಇದುವರೆಗೆ ಏಳು ಮಾದರಿಯ ಕೊರೋನಾ ರೂಪಾಂತರಿ ತಳಿಗಳು ವಿಯೆಟ್ನಾಂ ನಲ್ಲಿ ಕಂಡುಬಂದಿದ್ದವು ಎಂದು ಹೇಳಲಾಗಿದೆ.
ಈ ಹಿಂದೆ ವಿಯೆಟ್ನಾಂ ಸರ್ಕಾರದ ಕೊರೋನಾ ನಿರ್ವಹಣೆಯ ಕುರಿತು ಜಗತ್ತಿನಾದ್ಯಂತ ಮೆಚ್ಚುಗೆಗಳು ಕೇಳಿ ಬಂದಿದ್ದವು. ಸೋಂಕಿತರ ಪತ್ತೆ ಮತ್ತು ಮಾಸ್ ಕ್ವಾರಂಟೈನ್ನಿಂದಾಗಿ ವಿಯೆಟ್ನಾಂ ನಲ್ಲಿ ಸೋಕಿಂಗೆ ತುತ್ತಾಗುವವರ ಶೇಕಡಾ ಪ್ರಮಾಣ ಅತ್ಯಂತ ಕಡಿಮೆಯಾಗಿತ್ತು.
ಇದನ್ನೂ ಓದಿ: Pratap Simha: ಮುಂದುವರೆದ ರೋಹಿಣಿ ಸಿಂಧೂರಿ-ಪ್ರತಾಪ್ ಸಿಂಹ ಜಟಾಪಟಿ; ನಿಮ್ಮಿಂದ ನಾವು ಪಾಠ ಕಲಿಯಬೇಕೆ? ಎಂದ ಸಂಸದ!
ಹೊಸ ಮಾದರಿಯ ಕೊರೋನಾ ರೂಪಾಂತರಿ ತಳಿ ಮತ್ತು ಕೊರೋನಾ ಎರಡನೆ ಅಲೆಯು ವಿಯೆಟ್ನಾಂ ಸರ್ಕಾರ ಮತ್ತು ಜನರಲ್ಲಿ ಭೀತಿಯನ್ನು ಹುಟ್ಟಿಸಿದೆ. ತಕ್ಷಣದಿಂದ ಜಾರಿಗೆ ಬರುವಂತೆ ಅಲ್ಲಿನ ಸರ್ಕಾರ ಜನರ ಓಡಾಟದ ಮೇಲೆ ನಿರ್ಭಂದವನ್ನು ಹೇರಿದ್ದು ಹೊಟೇಲ್, ರೆಸ್ಟೋರೆಂಟ್, ಶಾಲಾ ಕಾಲೇಜು ಮತ್ತು ಇತರ ವಾಣಿಜ್ಯ, ಶೈಕ್ಷಣಿಕ, ಸಾಂಸ್ಕೃತಿಕ ಚಟುವಟಿಕೆಗಳನ್ನು ಅಲ್ಲಿನ ಸರ್ಕಾರ ನಿಷೇಧಿಸಿದೆ.
ವಿಯೆಟ್ನಾಂ ಸರಿಸುಮಾರು 9.7 ಕೋಟಿ ಜನಸಂಖ್ಯೆಯನ್ನು ಹೊಂದಿದೆ. ಇವರಲ್ಲಿ 10 ಲಕ್ಷ ಜನರಿಗೆ ಕೊರೋನಾ ಲಸಿಕೆಯನ್ನು ನೀಡಲಾಗಿದೆ. ಈ ದೇಶದ ಅಂತ್ಯಕ್ಕೆ ಕೊರೋನಾ ವ್ಯಾಕ್ಸಿನೇಷನ್ ಪ್ರಕ್ರಿಯೆಯನ್ನು ಸಂಪೂರ್ಣಗೊಳಿಸುವ ಗುರಿಯನ್ನು ಅಲ್ಲಿನ ಸರ್ಕಾರ ಇಟ್ಟುಕೊಂಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ