• Home
  • »
  • News
  • »
  • coronavirus-latest-news
  • »
  • ಕೊರೋನಾ ಸಾವಿನ ಸಂಖ್ಯೆಯಲ್ಲಿ ಚೀನಾವನ್ನೂ ಹಿಂದಿಕ್ಕಿದ ಸ್ಪೇನ್; ಒಂದೇ ದಿನದಲ್ಲಿ 738 ಸಾವು, 3,434ಕ್ಕೆ ಏರಿದ ಸಾವಿನ ಸಂಖ್ಯೆ

ಕೊರೋನಾ ಸಾವಿನ ಸಂಖ್ಯೆಯಲ್ಲಿ ಚೀನಾವನ್ನೂ ಹಿಂದಿಕ್ಕಿದ ಸ್ಪೇನ್; ಒಂದೇ ದಿನದಲ್ಲಿ 738 ಸಾವು, 3,434ಕ್ಕೆ ಏರಿದ ಸಾವಿನ ಸಂಖ್ಯೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೊರೋನಾ ಸೋಂಕಿನಿಂದಾಗಿ ಚೀನಾದಲ್ಲಿ 3,400 ಜನ ಮೃತಪಟ್ಟಿದ್ದರೆ, ಇಟಲಿಯಲ್ಲಿ ಸಾವಿನ ಸಂಖ್ಯೆ 4,000 ಮೀರುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿವೆ. ಈ ನಡುವೆ ಸ್ಪೇನ್‌ನಲ್ಲೂ ಸಹ ಸಾವಿನ ಸಂಖ್ಯೆ ದಿನೇ ದಿನೇ ಏರುತ್ತಿದ್ದು ಎಲ್ಲರಲ್ಲೂ ಆತಂಕ ಮೂಡಿಸಿದೆ.

  • Share this:

ಸ್ಪೇನ್ (ಮಾರ್ಚ್‌ 25); ಕೊರೋನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆಯಲ್ಲಿ ಸ್ಪೇನ್ ಇಟಲಿ ಮತ್ತು ಚೀನಾವನ್ನೇ ಮಿರಿಸಿದೆ. ಕಳೆದ 24ಗಂಟೆಗಳ ಅವಧಿಯಲ್ಲಿ ಸ್ಪೇನ್‌ನಲ್ಲಿ 738 ಜನ ಸಾವನ್ನಪ್ಪಿದ್ದು ಒಟ್ಟಾರೆ ಸಾವಿನ ಸಂಖ್ಯೆ 3,434ಕ್ಕೆ ಏರಿಕೆಯಾಗಿದೆ ಎಂದು ಅಲ್ಲಿನ ಸರ್ಕಾರ ತಿಳಿಸಿದೆ.


COVID-19 ಸಾಂಕ್ರಾಮಿಕ ರೋಗವನ್ನು ನಿವಾರಿಸುವ ಸಲುವಾಗಿ ಸ್ಪೇನ್ ನಲ್ಲೂ ಲಾಕ್‌ಡೌನ್ ಘೋಷಿಸಲಾಗಿದೆ. ಆದರೆ, ಲಾಕ್‌ಡೌನ್ ನಡುವೆಯೂ ಕೊರೋನಾ ಮರಣ ಮೃದಂಗ ಮುಂದುವರೆಯುತ್ತಲೇ ಇದೆ. ಅಲ್ಲದೆ, ಸ್ಪೇನ್‌ನಲ್ಲಿ ಪ್ರಸ್ತುತ 47,610 ಜನರಿಗೆ ಈ ಮಾರಣಾಂತಿಕ ಸೋಂಕು ತಗುಲಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.


ಕೊರೋನಾ ಸೋಂಕಿನಿಂದಾಗಿ ಚೀನಾದಲ್ಲಿ 3,400 ಜನ ಮೃತಪಟ್ಟಿದ್ದರೆ, ಇಟಲಿಯಲ್ಲಿ ಸಾವಿನ ಸಂಖ್ಯೆ 4,000 ಮೀರುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿವೆ. ಈ ನಡುವೆ ಸ್ಪೇನ್‌ನಲ್ಲೂ ಸಹ ಸಾವಿನ ಸಂಖ್ಯೆ ದಿನೇ ದಿನೇ ಏರುತ್ತಿದ್ದು ಎಲ್ಲರಲ್ಲೂ ಆತಂಕ ಮೂಡಿಸಿದೆ.


ಇನ್ನೂ ಭಾರತದಲ್ಲೂ ಸಹ ಸೋಂಕಿತರ ಸಂಖ್ಯೆ 500 ಮೀರಿದ್ದು 11 ಜನ ಸಾವನ್ನಪ್ಪಿದ್ದಾರೆ. ಪರಿಣಾಮ ಪ್ರಧಾನಿ ನರೇಂದ್ರ ಮೋದಿ ಮಾರ್ಚ್‌ 25 ರಿಂದ ದೇಶವ್ಯಾಪಿ 21 ದಿನಗಳ ಲಾಕ್‌ಡೌನ್ ಘೋಷಿಸಿದ್ದಾರೆ.


ಇದನ್ನೂ ಓದಿ : ಇಂಗ್ಲೆಂಡ್ ರಾಜಕುಮಾರ ಚಾರ್ಲ್ಸ್‌‌ರನ್ನೂ ಬಿಡದ ಕೊರೋನಾ ಸೋಂಕು; ಪ್ರತ್ಯೇಕವಾಗಿರಿಸಿ ಚಿಕಿತ್ಸೆ

Published by:MAshok Kumar
First published: