ಸ್ಪೇನ್‌ನಲ್ಲಿ 4,000 ಗಡಿ ದಾಟಿದ ಕೊರೋನಾ ಸಾವಿನ ಸಂಖ್ಯೆ; ಒಂದೇ ದಿನದಲ್ಲಿ 655 ಜನ ಮೃತ!

ಕೊರೋನಾ ಸೋಂಕಿತರ ಸಂಖ್ಯೆಯೂ ಸ್ಪೇನ್‌ನಲ್ಲಿ ಏರುಗತಿಯಲ್ಲಿದ್ದು, ಸುಮಾರು 56,188 ಜನರಲ್ಲಿ ಮಾರಣಾಂತಿಕ Covid-19 ಸೋಂಕು ಇದೆ ಎಂಬುದು ಪರೀಕ್ಷೆಯಲ್ಲಿ ದೃಢಪಟ್ಟಿದೆ. 

MAshok Kumar | news18-kannada
Updated:March 26, 2020, 5:53 PM IST
ಸ್ಪೇನ್‌ನಲ್ಲಿ 4,000 ಗಡಿ ದಾಟಿದ ಕೊರೋನಾ ಸಾವಿನ ಸಂಖ್ಯೆ; ಒಂದೇ ದಿನದಲ್ಲಿ 655 ಜನ ಮೃತ!
ಪ್ರಾತಿನಿಧಿಕ ಚಿತ್ರ.
  • Share this:
ಮಾರಣಾಂತಿಕ ಕೊರೋನಾ ವೈರಸ್‌ನಿಂದಾಗಿ ಸ್ಪೇನ್‌ನಲ್ಲಿ ಕಳೆದ 24 ಗಂಟೆಗಳಲ್ಲಿ 655 ಜನ ಮೃತಪಟ್ಟಿದ್ದು ಸಾವಿನ ಸಂಖ್ಯೆ 4,089ಕ್ಕೆ ಏರಿಕೆಯಾಗಿದೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ತಿಳಿಸಿದೆ. ಬುಧವಾರ ಬಿಡುಗಡೆಯಾದ ಅಂಕಿಅಂಶಗಳಿಗಿಂತ ಇಂದು ಮೃತಪಟ್ಟವರ ಸಂಖ್ಯೆ ಅಧಿಕ ಎನ್ನಲಾಗುತ್ತಿದೆ.

ಕೊರೋನಾ ಸೋಂಕಿತರ ಸಂಖ್ಯೆಯೂ ಸ್ಪೇನ್‌ನಲ್ಲಿ ಏರುಗತಿಯಲ್ಲಿದ್ದು, ಸುಮಾರು 56,188 ಜನರಲ್ಲಿ ಮಾರಣಾಂತಿಕ Covid-19 ಸೋಂಕು ಇದೆ ಎಂಬುದು ಪರೀಕ್ಷೆಯಲ್ಲಿ ದೃಢಪಟ್ಟಿದೆ.

ಕಳೆದ ಎರಡು ತಿಂಗಳಿನಿಂದ ಇಡೀ ವಿಶ್ವವನ್ನೇ ಕಂಗೆಡಿಸಿರುವ ಕೊರೋನಾ ಚೀನಾದಲ್ಲಿ 3,600 ಜನರನ್ನು ಬಲಿ ಪಡೆದಿತ್ತು. ಆದರೆ, ಇಟಲಿ ಮತ್ತು ಸ್ಪೇನ್ ಕೊರೋನಾ ಮೃತರ ಸಂಖ್ಯೆಯಲ್ಲಿ ಚೀನಾವನ್ನೇ ಹಿಂದಿಕ್ಕಿ ಮೊದಲೆರಡು ಸ್ಥಾನದಲ್ಲಿದೆ. ಇಟಲಿಯಲ್ಲೂ ಸಹ ಕೊರೋನಾ ನಿಯಂತ್ರಣಕ್ಕೆ ಬರುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ.

ಕೊರೋನಾ ಸೋಂಕಿಗೆ ವಿಶ್ವದಾದ್ಯಂತ ಈಗಾಗಲೇ 21,000 ಜನ ಮೃತಪಟ್ಟಿದ್ದಾರೆ. ಸೋಂಕಿತರ ಸಂಖ್ಯೆ 4 ಲಕ್ಷವನ್ನೂ ಮೀರಿದ್ದು ಎಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ ಭಾರತದಲ್ಲಿ 21 ದಿನಗಳ ಕಾಲ ಲಾಕ್‌ಡೌನ್ ಘೋಷಿಸಲಾಗಿದ್ದು ಇದರ ನಡುವೆಯೂ  ಸೋಂಕಿತರ ಸಂಖ್ಯೆ 650 ಕ್ಕೆ ಏರಿಕೆಯಾಗಿದೆ. ಈವರೆಗೆ 15 ಜನ ಮೃತಪಟ್ಟಿದ್ದಾರೆ. ಸೋಂಕಿತರ ಮತ್ತು ಸಾವಿನ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿರುವುದು ಕಳವಳಕ್ಕೆ ಕಾರಣವಾಗಿದೆ.

ಇದನ್ನೂ ಓದಿ : Covid-19 ನಿವಾರಣೆಗೆ ಲಾಕ್‌ಡೌನ್ ಮೂಲಕ ಎರಡನೇ ಅವಕಾಶವನ್ನು ರಚಿಸಿದ್ದೀರಿ; ವಿಶ್ವ ಆರೋಗ್ಯ ಸಂಸ್ಥೆ ಅಭಿಪ್ರಾಯ
First published:March 26, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading