HOME » NEWS » Coronavirus-latest-news » SP BALASUBRAHMANYAM TESTED COVID 19 POSITIVE ADMITTED TO HOSPITAL VB

SP Balasubrahmanyam: ಬಹುಭಾಷಾ ಗಾಯಕ ಎಸ್​.ಪಿ. ಬಾಲಸುಬ್ರಹ್ಮಣ್ಯಂಗೆ ಕೊರೋನಾ; ಆಸ್ಪತ್ರೆಗೆ ದಾಖಲು

ಬುಧವಾರ ಎಸ್​ಪಿಬಿ ಮಾಡಿದ ಫೇಸ್‌ಬುಕ್ ಲೈವ್‌ನಲ್ಲಿ ತನ್ನಲ್ಲಿರುವ ಏಕೈಕ ಲಕ್ಷಣವೆಂದರೆ ಶೀತ ಎಂದು ಹೇಳಿಕೊಂಡಿದ್ದರು.  ಆದಾಗ್ಯೂ, ಕಳೆದ ಮೂರು ದಿನಗಳಲ್ಲಿ ಅವರಿಗೆ ಎದೆಯ ದಟ್ಟಣೆ ಮತ್ತು ಜ್ವರ ಇತ್ತು ಎಂದು ತಿಳಿದುಬಂದಿದೆ.

news18-kannada
Updated:August 5, 2020, 1:59 PM IST
SP Balasubrahmanyam: ಬಹುಭಾಷಾ ಗಾಯಕ ಎಸ್​.ಪಿ. ಬಾಲಸುಬ್ರಹ್ಮಣ್ಯಂಗೆ ಕೊರೋನಾ; ಆಸ್ಪತ್ರೆಗೆ ದಾಖಲು
ಎಸ್​.ಪಿ. ಬಾಲಸುಬ್ರಹ್ಮಣ್ಯಂ.
  • Share this:
ಕಳೆದ ಕೆಲವು ತಿಂಗಳುಗಳಿಂದ ಮಾರಕ ಕೊರೋನಾ ವೈರಸ್ ದೊಡ್ಡ ದೊಡ್ಡ ಸೆಲೆಬ್ರಿಟಿಗಳನ್ನೂ ಬಿಡುತ್ತಿಲ್ಲ. ಸದ್ಯ 74 ವರ್ಷದ ಖ್ಯಾತ ಹಿನ್ನೆಲೆ ಗಾಯಕ ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಕೊರೋನಾ ವೈರಸ್ ತಗುಲಿದೆ. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮದ್ರಾಸಿನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಬಗ್ಗೆ ಧೃಡ ಪಡಿಸಿದ ಆರೋಗ್ಯ ಸಚಿವ ಶ್ರೀರಾಮುಲು ಅವರು, "ಗಾನ ಗಂಧರ್ವ ಶ್ರೀ #SPBalasubrahmanyam ಅವರಿಗೆ ಕೊರೊನ ಸೋಂಕು ದೃಢಪಟ್ಟಿದೆ. ಮದ್ರಾಸಿನಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ತಮ್ಮ ಆರೋಗ್ಯದ ಕುರಿತು ಯಾರೂ ಆತಂಕಪಡುವ ಅಗತ್ಯವಿಲ್ಲವೆಂದು ಸ್ವತಃ ಅವರೇ ತಿಳಿಸಿದ್ದಾರೆ. ನಮ್ಮೆಲ್ಲರ ಪ್ರೀತಿಯ ಗಾಯಕ, ಶ್ರೀಯುತ ಎಸ್ ಪಿಬಿ ಅವರು ಶೀಘ್ರವಾಗಿ ಗುಣಮುಖರಾಗಲೆಂದು ಹಾರೈಸುತ್ತೇನೆ" ಎಂದು ಟ್ವೀಟ್ ಮಾಡಿದ್ದಾರೆ.


ಹ್ಯಾಕರ್ಸ್​ ಮುಷ್ಠಿಯಲ್ಲಿ ನಟಿ ಶಾನ್ವಿ ಶ್ರೀವಾಸ್ತವ ಫೇಸ್​​ಬುಕ್​ ಖಾತೆ!

ಬುಧವಾರ ಎಸ್​ಪಿಬಿ ಮಾಡಿದ ಫೇಸ್‌ಬುಕ್ ಲೈವ್‌ನಲ್ಲಿ ತನ್ನಲ್ಲಿರುವ ಏಕೈಕ ಲಕ್ಷಣವೆಂದರೆ ಶೀತ ಎಂದು ಹೇಳಿಕೊಂಡಿದ್ದರು.  ಆದಾಗ್ಯೂ, ಕಳೆದ ಮೂರು ದಿನಗಳಲ್ಲಿ ಅವರಿಗೆ ಎದೆಯ ದಟ್ಟಣೆ ಮತ್ತು ಜ್ವರ ಇತ್ತು ಎಂದು ತಿಳಿದುಬಂದಿದೆ. ಇದೇ ವೇಳೆ ಅವರು ಕಳೆದ ಎರಡು ಮೂರು ದಿನಗಳಿಂದ ನಾನು ಸ್ವಲ್ಪ ಅಸ್ವಸ್ಥತೆಯನ್ನು ಅನುಭವಿಸುತ್ತಿದ್ದೇನೆ ಯಾರು ಭಯಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದರು.

ಇತ್ತೀಚೆಗಷ್ಟೆ ಅಮಿತಾಭ್ ಬಚ್ಚನ್ ಕುಟುಂಬಕ್ಕೂ ಕೊರೋನಾ ವಕ್ಕರಿಸಿತ್ತು. ಆದರೆ, ಸೂಕ್ತ ಚಿಕಿತ್ಸೆ ಬಳಿಕ ಅಮಿತಾಭ್ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್, ಐಶ್ವರ್ಯಾ ರೈ ಬಚ್ಚನ್ ಹಾಗೂ ಆರಾಧ್ಯಾ ಬಚ್ಚನ್ ಗುಣಮುಖರಾಗಿದ್ದರು.

ದೇಶದಲ್ಲಿ ಕೊರೋನಾ ರುದ್ರನರ್ತನ; 19 ಲಕ್ಷ ದಾಟಿದ ಸೋಂಕಿತರ ಸಂಖ್ಯೆ

ಅಲ್ಲದೆ ಕೆಲವು ದಿನಗಳ ಹಿಂದೆಯಷ್ಟೆ ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ ಎಸ್.ಎಸ್.ರಾಜಮೌಳಿ ಮತ್ತು ಅವರ ಕುಟುಂಬ ಸದಸ್ಯರಿಗೆ ಕೊರೋನಾ ಸೋಂಕು ತಗುಲಿತ್ತು. ಈ ವಿಚಾರವನ್ನು ಖುದ್ದು ಬಾಹುಬಲಿ ನಿರ್ದೇಶಕ ಸೋಷಿಯಲ್ ಮೀಡಿಯಾ ಮೂಲಕ ಖಚಿತ ಪಡಿಸಿದ್ದರು.

ಸದ್ಯ ದೇಶದಲ್ಲಿ ನಿಯಂತ್ರಣಕ್ಕೆ ಬಾರದ ಕೊರೋನಾ ಸೋಂಕು ಹರಡುವಿಕೆ ಶರವೇಗ ಪಡೆದುಕೊಂಡಿದೆ. ಕೊರೋನಾ ಕಡಿಮೆ ಇದ್ದಾಗ ಲಾಕ್ಡೌನ್ ಮಾಡಿ ತೀವ್ರಗೊಂಡಾಗ‌ ಅನ್ ಲಾಕ್ ಮಾಡಿದ ಪರಿಣಾಮ ದೇಶದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ 19 ಲಕ್ಷದ ಗಡಿ ದಾಟಿದೆ. ಅದೂ ಅಲ್ಲದೆ ಮೂರನೇ ಹಂತದ ಅನ್ಲಾಕ್‌ ಕೂಡ ಜಾರಿ ಆಗುತ್ತಿದ್ದಂತೆ ಪ್ರತಿದಿನವೂ ಅರ್ಧ ಲಕ್ಷಕ್ಕೂ ಹೆಚ್ಚು ಸೋಂಕು ಪೀಡಿತರು ಕಾಣಿಸಿಕೊಳ್ಳುವ ಟ್ರೆಂಡ್ ಆರಂಭವಾಗಿದ್ದು ಅದೇ ಮುಂದುವರೆದಿದೆ.
Published by: Vinay Bhat
First published: August 5, 2020, 1:53 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories