ಲಾಕ್​​​ಡೌನ್ ನಡುವೆಯೂ ವಾಕಿಂಗ್ ಮಾಡಲು ಬಂದವರಿಗೆ ಪಾಠ ಮಾಡಿದ ಡಿಸಿ ಮತ್ತು ಎಸ್​ಪಿ

ದೇಶದ ಅನೇಕ ಭಾಗಗಳಲ್ಲಿ ಜನರು ಮನೆಯಿಂದ ಹೊರಗೆ ಬರುವಂತಿಲ್ಲ. ಅಂತಹ ಪರಿಸ್ಥಿತಿ ಇದೆ. ನಮಗೆ ಸರ್ಕಾರ ಸ್ವಲ್ಪ ಮಟ್ಟಿಗೆ ರಿಯಾಯಿತಿಯ ಅನುಮತಿ ನೀಡಿದೆ. ಜನರು ಇದೇ ರೀತಿ ಅನವಶ್ಯಕವಾಗಿ ಓಡಾಡಿದರೆ, ನೀವು ಸಹ ಮನೆಯಲ್ಲಿ ಇರಬೇಕಾಗುತ್ತದೆ. ನೀವು ಮನೆಯಲ್ಲೇ ವ್ಯಾಯಾಮ ಮಾಡಿ, ಮನೆಯಲ್ಲಿ ವಾಕ್ ಮಾಡಿ ಎಂದು ಸಲಹೆ ನೀಡಿದರು. ಟೀ, ಕಾಫಿ, ಬಿಸ್ಕೆಟ್, ತಿಂಡಿ ಕೊಟ್ಟು ವಾಕಿಂಗ್ ಬಂದವರಿಗೆ  ಪಾಠ ಬೋಧಿಸಿದರು.

ವಾಕಿಂಗ್ ಮಾಡುತ್ತಿರುವವರಿಗೆ ಎಸ್​ ಮತ್ತು ಡಿಸಿ ಕ್ಲಾಸ್

ವಾಕಿಂಗ್ ಮಾಡುತ್ತಿರುವವರಿಗೆ ಎಸ್​ ಮತ್ತು ಡಿಸಿ ಕ್ಲಾಸ್

  • Share this:
ಶಿವಮೊಗ್ಗ(ಏ.23): ಶಿವಮೊಗ್ಗ ಜಿಲ್ಲೆಯಲ್ಲಿ ಇದುವರೆಗೂ ಕೊರೋನಾ ವೈರಸ್ ಒಂದೇ ಒಂದು ಪಾಸಿಟಿವ್ ಬಂದಿಲ್ಲ. ಜಿಲ್ಲಾಡಳಿತ ಆರೋಗ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಹಗಲು ರಾತ್ರಿ ಎನ್ನದೇ ಶ್ರಮ ವಹಿಸಿ ಕೆಲಸ ಮಾಡುತ್ತಿದೆ.  ಹಲವಾರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು, ಕೊರೋನಾ ಬರದಂತೆ  ತಡೆಗಟ್ಟಲು ಹೋರಾಟ ನಡೆಸುತ್ತಿದೆ. ಜಿಲ್ಲೆಯ ಜನರು ಸಹ ಅದಕ್ಕೆ  ಸ್ಪಂದನೆ ನೀಡುತ್ತಿದ್ದಾರೆ. ಆದರೆ ಕೆಲವರು ಮಾತ್ರ ಲಾಕ್ ಡೌನ್ ಜಿಲ್ಲೆಯಲ್ಲಿ ಇಲ್ಲವೇನೋ ಎಂಬಂತೆ ವರ್ತನೆ ಮಾಡುತ್ತಿದ್ದಾರೆ.

ಇಂದು ನಾರೂರು ಜನ ವಾಕಿಂಗ್ ಮಾಡುವ ಮೂಲಕ ಲಾಕ್ ಡೌನ್ ಉಲ್ಲಂಘನೆ ಮಾಡಿದ್ದಾರೆ. ವಾಕಿಂಗ್ ಬಂದವರಿಗೆ ಪೊಲೀಸರು ಸಹ ಖಡಕ್ ಆಗೆ ಇಂದು ಎಚ್ಚರಿಕೆ ನೀಡಿದ್ದಾರೆ. ವಾಕಿಂಗ್ ಬಂದವರಿಗೆ ಶಿವಮೊಗ್ಗ ಪೊಲೀಸರು ಬೆಳ್ಳಂ ಬೆಳಗ್ಗೆ ಶಾಕ್ ಕೊಟ್ಟರು. ವಾಕಿಂಗ್ ಬಂದವರಿಗೆ ಪೊಲೀಸ್ ವ್ಯಾನ್ ಹತ್ತಿ ಎಂದು ಕರೆದುಕೊಂಡು ಬಂದರು. ಬುದ್ಧಿವಾದ ಹೇಳಿದರೂ, ಮುಂದೆ ಇದೇ ರೀತಿ ಮಾಡಿದರೇ ಕಠಿಣ ಕ್ರಮ ಗ್ಯಾರಂಟಿ ಎಂದು ಎಚ್ಚರಿಕೆ ಕೊಟ್ಟರು.

ಶಿವಮೊಗ್ಗ ನಗರದಲ್ಲಿ ಪಾರ್ಕ್ ಸೇರಿದಂತೆ ನೆಹರೂ ಕ್ರೀಡಾಂಗಣ, ರಸ್ತೆಗಳಲ್ಲಿ ನಗರದ ವಿವಿಧ ಬಡಾವಣೆಗಳಲ್ಲಿ ವಾಯು ವಿಹಾರ ಮಾಡುತ್ತಿದ್ದ ಸಾರ್ವಜನಿಕರಿಗೆ ಇಂದು ಶಾಕ್ ಕಾದಿತ್ತು. ಬೆಳ್ಳಂ ಬೆಳಗ್ಗೇ ಪೊಲೀಸರು ಫೀಲ್ಡ್ ಗಿಳಿದು, ವಾಕ್ ಮಾಡುತ್ತಿದ್ದವರನ್ನು ಎತ್ತಾಕಿಕೊಂಡು ಬಂದು ಪಾಠ ಮಾಡಿದ್ದಾರೆ. ಶಿವಮೊಗ್ಗ ನಗರದ ಒಳಂಗಾಣ ಕ್ರೀಡಾಂಗಣದ ಆವರಣಕ್ಕೆ ಕರೆದುಕೊಂಡು ಬಂದು ಎಸ್ ಪಿ ಡಿಸಿ ಪಾಠ ಮಾಡಿ, ಎಚ್ಚರಿಕೆ ಕೊಟ್ಟಿದ್ದಾರೆ.

ಸಕ್ಕರೆ ಕಾಯಿಲೆ ಮತ್ತು ಅಸ್ತಮಾ ಸಮಸ್ಯೆ ಇದೆ. ವಾಕ್ ಮಾಡಬೇಕು ಎಂದವರಿಗೆ ನಿಮಗೆ ಕೊರೋನಾದಿಂದ ಮೊದಲು ಸಮಸ್ಯೆ ಆಗೋದು ಅಲ್ಲವೇ ಎಂದು ಅಧಿಕಾರಿ ಪ್ರಶ್ನೆ ಮಾಡಿದರು. ಇಂತಹ ಪ್ರಶ್ನೆಗೆ ವಾಕಿಂಗ್ ಬಂದಿದ್ದ ಸಾರ್ವಜನಿಕರಿಗೆ ಉತ್ತರ ಬರಲೇ ಇಲ್ಲ, ಅಧಿಕಾರಿಗಳು ನೀಡಿದ ಖಡಕ್ ವಾರ್ನಿಂಗ್ ಗೆ ಎಲ್ಲರೂ ಮೌನ ವಹಿಸಿದ್ದರು.  ಇನ್ನು ಜಿಲ್ಲಾಧಿಕಾರಿ ಶಿವಕುಮಾರ್ ವಾಕ್ ಬಂದವರಿಗೆ ಆರೋಗ್ಯ ಪಾಠ ಮಾಡಿದರು.

ರಾಜ್ಯದಲ್ಲಿ 16 ಹೊಸ ಪ್ರಕರಣ; ಬೆಂಗಳೂರಿನ ವಿದ್ಯಾಜ್ಯೋತಿನಗರ ಈಗ ಹೊಸ ಕರೋನಾ ಅಡ್ಡೆ

ದೇಶದ ಅನೇಕ ಭಾಗಗಳಲ್ಲಿ ಜನರು ಮನೆಯಿಂದ ಹೊರಗೆ ಬರುವಂತಿಲ್ಲ. ಅಂತಹ ಪರಿಸ್ಥಿತಿ ಇದೆ. ನಮಗೆ ಸರ್ಕಾರ ಸ್ವಲ್ಪ ಮಟ್ಟಿಗೆ ರಿಯಾಯಿತಿಯ ಅನುಮತಿ ನೀಡಿದೆ. ಜನರು ಇದೇ ರೀತಿ ಅನವಶ್ಯಕವಾಗಿ ಓಡಾಡಿದರೆ, ನೀವು ಸಹ ಮನೆಯಲ್ಲಿ ಇರಬೇಕಾಗುತ್ತದೆ. ನೀವು ಮನೆಯಲ್ಲೇ ವ್ಯಾಯಾಮ ಮಾಡಿ, ಮನೆಯಲ್ಲಿ ವಾಕ್ ಮಾಡಿ ಎಂದು ಸಲಹೆ ನೀಡಿದರು. ಟೀ, ಕಾಫಿ, ಬಿಸ್ಕೆಟ್, ತಿಂಡಿ ಕೊಟ್ಟು ವಾಕಿಂಗ್ ಬಂದವರಿಗೆ  ಪಾಠ ಬೋಧಿಸಿದರು.

ನೀವೆಲ್ಲಾ ಬಂದಿರುವುದು ವಾಂಕಿಗ್​​ಗೆ ಅದು ಇಷ್ಟೊಂದು ಜನ ಇದು ಶೋಚನೀಯ ಸಂಗತಿ ಅಲ್ಲವೇ ಎಂದು ಜಿಲ್ಲಾ ರಕ್ಷಣಾಧಿಕಾರಿ ಶಾಂತರಾಜು ಸಾರ್ವಜನಿಕರನ್ನು ಕೇಳಿದರು. ಇನ್ನು, ಮುಂದೆ ಸೋಂಕು ಹರಡಲು ಕಾರಣರಾಗದಂತೆ, ಮನೆಯಲ್ಲಿಯೇ ಇರಲು ಸೂಚನೆ ನೀಡಿದರು. ಸರ್ಕಾರ ನಮಗೆ ಕೆಲಸ ಮಾಡಿ ಎಂದಿದೆ. ನಾವು ಕೆಲಸ ಮಾಡುತ್ತಿದ್ದೇವೆ. ನಿಮಗೆ ಮನೆಯಲ್ಲಿ ಇರಿ ಎಂದು ಆದೇಶ ಮಾಡಿದೇ ಅದನ್ನು ಪಾಲಿಸಿ ಅಷ್ಟೇ. ಬುದ್ಧಿವಂತರಾದ ನಿಮಗೆ ಎಷ್ಟು ಬಾರಿ ಹೇಳಬೇಕು ಎಂದು ಪ್ರಶ್ನೆ ಮಾಡಿದರು.

ವಾಕಿಂಗ್ ಗೆ ಬಂದ ಸುಮಾರು 300 ಜನರಿಗೂ ಸ್ಕ್ರೀನಿಂಗ್ ಮಾಡಿಸಿ, ಹೆಸರು, ವಿಳಾಸ ಪಡೆದುಕೊಂಡರು. ನಾಳೆಯಿಂದ ವಾಕಿಂಗ್ ಬಂದರೆ  ಪರಿಣಾಮ ಬೇರೆ ಆಗುತ್ತೆ ಎಂದು ಎಚ್ಚರಿಕೆಯನ್ನು ಜಿಲ್ಲಾಡಳಿತ ಮತ್ತು ಪೊಲೀಸು ಇಲಾಖೆ ನೀಡಿತು. ಲಾಕ್ ಡೌನ್ ನಡುವೆಯೂ ಗುಂಪು ಗುಂಪಾಗಿ ವಾಕಿಂಗ್ ಗೆ ಬಂದು ಬೇಜವಾಬ್ದಾರಿತನವನ್ನು ಸಾರ್ವಜನಿಕರು ಪ್ರದರ್ಶನ ಮಾಡಿದರು. ಅಂತವರಿಗೆ ಪಾಠ ಮಾಡಿದರು ಡಿಸಿ ಮತ್ತು ಎಸ್ ಪಿ.
First published: