• ಹೋಂ
  • »
  • ನ್ಯೂಸ್
  • »
  • Corona
  • »
  • Omicron: ಕೊರೋನಾದ ಹೊಸ ರೂಪಾಂತರ ಓಮಿಕ್ರಾನ್​ ಲಕ್ಷಣಗಳೇನು? ಏನೆಲ್ಲಾ ಎಚ್ಚರಿಕೆ ವಹಿಸಬೇಕು? ವೈದ್ಯರು ನೀಡಿದ್ದಾರೆ ಫುಲ್ ಡೀಟೆಲ್ಸ್

Omicron: ಕೊರೋನಾದ ಹೊಸ ರೂಪಾಂತರ ಓಮಿಕ್ರಾನ್​ ಲಕ್ಷಣಗಳೇನು? ಏನೆಲ್ಲಾ ಎಚ್ಚರಿಕೆ ವಹಿಸಬೇಕು? ವೈದ್ಯರು ನೀಡಿದ್ದಾರೆ ಫುಲ್ ಡೀಟೆಲ್ಸ್

ಓಮಿಕ್ರಾನ್ ಟೆಸ್ಟ್ ವರದಿ ಬರಲು 15 ದಿನ ಬೇಕಾ..? ಹೀಗಾದ್ರೆ ಎಷ್ಟು ಸಂಪರ್ಕ ಹಬ್ಬಬಹುದು ಅನ್ನೋದನ್ನ ಗಮನಿಸಲಿ ಎಂದು ಎಚ್ ಕೆ ಪಾಟೀಲ್ ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ.

ಓಮಿಕ್ರಾನ್ ಟೆಸ್ಟ್ ವರದಿ ಬರಲು 15 ದಿನ ಬೇಕಾ..? ಹೀಗಾದ್ರೆ ಎಷ್ಟು ಸಂಪರ್ಕ ಹಬ್ಬಬಹುದು ಅನ್ನೋದನ್ನ ಗಮನಿಸಲಿ ಎಂದು ಎಚ್ ಕೆ ಪಾಟೀಲ್ ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ.

ಕಳೆದ 10 ದಿನಗಳಲ್ಲಿ ಸುಮಾರು 30 ರೋಗಿಗಳನ್ನು ನೋಡಿದ್ದೇನೆ. ಅವರಿಗೆ ಕೋವಿಡ್ - 19 ಪರೀಕ್ಷೆಯಲ್ಲಿ ಪಾಸಿಟಿವ್‌ ಬಂದಿದೆ. ಆದರೆ, ಆ ಕೋವಿಡ್ ರೂಪಾಂತರಿ ಓಮಿಕ್ರಾನ್‌ನ ಸೋಂಕಿತರು ಪರಿಚಯವಿಲ್ಲದ ರೋಗಲಕ್ಷಣಗಳನ್ನು ಹೊಂದಿರುವುದಾಗಿ ಹೇಳಿದರು.

  • Trending Desk
  • 4-MIN READ
  • Last Updated :
  • Share this:

ಹಿಂದಿನ ರೂಪಾಂತರಗಳಿಗಿಂತ ಹೆಚ್ಚು ಹರಡುತ್ತದೆ ಎಂದು ನಂಬಲಾದ ಕೋವಿಡ್‌ನ ಹೊಸ ರೂಪಾಂತರವಾದ ಓಮಿಕ್ರಾನ್(Omicron)‌ ಕುರಿತು ವಿಶ್ವಾದ್ಯಂತ(World wide) ಎಚ್ಚರಿಕೆ ನೀಡುವಂತೆ ಮಾಡಿರುವುದು ದಕ್ಷಿಣ ಆಫ್ರಿಕಾದ ಒಬ್ಬರು ಮಹಿಳಾ ವೈದ್ಯೆ. ಅವರು ಈಗ ಓಮಿಕ್ರಾನ್‌ನ ಲಕ್ಷಣಗಳ(Omicron Symptoms) ಬಗ್ಗೆ ಹೇಳಿರುವುದು ಹೀಗೆ.. ತಾನು ಚಿಕಿತ್ಸೆ ನೀಡಿದ ರೋಗಿಗಳಲ್ಲಿ ಪರಿಚಯವಿಲ್ಲದ ರೋಗಲಕ್ಷಣಗಳಿವೆ ಎಂದು ಹೇಳಿಕೊಂಡಿದ್ದಾರೆ. ಆದರೂ, ರೋಗಲಕ್ಷಣಗಳು ಸೌಮ್ಯ(Soft)ವಾಗಿರುತ್ತವೆ ಮತ್ತು ಆಕೆಯ ರೋಗಿಗಳು ಆಸ್ಪತ್ರೆ(Hospital)ಗೆ ಸೇರಿದೆ ಸಂಪೂರ್ಣವಾಗಿ ಚೇತರಿಸಿಕೊಂಡರು ಎಂದು ಬಹಿರಂಗಪಡಿಸಿದ್ದಾರೆ. ದಕ್ಷಿಣ ಆಫ್ರಿಕಾ(South Africa)ದ ಮೆಡಿಕಲ್ ಅಸೋಸಿಯೇಷನ್‌ನ ಅಧ್ಯಕ್ಷರಾದ ಏಂಜೆಲಿಕ್ ಕೋಟ್ಜಿ ಸುದ್ದಿ ಸಂಸ್ಥೆ AFPಗೆ ಈ ಕುರಿತು ಹಂಚಿಕೊಂಡಿದ್ದಾರೆ.


ಕಳೆದ 10 ದಿನಗಳಲ್ಲಿ ಸುಮಾರು 30 ರೋಗಿಗಳನ್ನು ನೋಡಿದ್ದೇನೆ. ಅವರಿಗೆ ಕೋವಿಡ್ - 19 ಪರೀಕ್ಷೆಯಲ್ಲಿ ಪಾಸಿಟಿವ್‌ ಬಂದಿದೆ. ಆದರೆ, ಆ ಕೋವಿಡ್ ರೂಪಾಂತರಿ ಓಮಿಕ್ರಾನ್‌ನ ಸೋಂಕಿತರು ಪರಿಚಯವಿಲ್ಲದ ರೋಗಲಕ್ಷಣಗಳನ್ನು ಹೊಂದಿರುವುದಾಗಿ ಹೇಳಿದರು.


ಓಮಿಕ್ರಾನ್ ಗುಣಲಕ್ಷಣಗಳು


ಓಮಿಕ್ರಾನ್‌ ರೋಗಿಗಳು ತೀವ್ರ ಸುಸ್ತು, ಸೌಮ್ಯವಾದ ಸ್ನಾಯು ನೋವು, ಗಂಟಲು ಕೆರೆತ ಮತ್ತು ಒಣ ಕೆಮ್ಮನ್ನು ವರದಿ ಮಾಡಿದ್ದಾರೆ ಎಂದು ವೈದ್ಯೆ AFPಗೆ ತಿಳಿಸಿದ್ದಾರೆ. ಕೆಲವರು ಮಾತ್ರ ಸ್ವಲ್ಪ ಹೆಚ್ಚಿನ ತಾಪಮಾನ ಹೊಂದಿದ್ದರು ಎಂದೂ ಮಾಹಿತಿ ನೀಡಿದ್ದಾರೆ.


ಇದನ್ನೂ ಓದಿ: Coronavirus: ಕೋವಿಡ್-19 ಗೆ ಹಾರ್ಸ್ ಆ್ಯಂಟಿಸೆರಾ ಪರಿಣಾಮಕಾರಿ ಚಿಕಿತ್ಸೆಯಾಗಿರಬಹುದು; ಅಧ್ಯಯನ


ಕ್ಲಿನಿಕಲ್ ಚಿತ್ರವು ದಕ್ಷಿಣ ಆಫ್ರಿಕಾದ ಪ್ರಬಲ ರೂಪಾಂತರವಾದ ಡೆಲ್ಟಾಕ್ಕೆ ಹೊಂದಿಕೆಯಾಗುತ್ತಿಲ್ಲ ಎಂದು ಕೋಟ್ಜಿ ಆರೋಗ್ಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದರು. ಆ ಹೊತ್ತಿಗೆ, ವಿಜ್ಞಾನಿಗಳು ಓಮಿಕ್ರಾನ್‌ ರೂಪಾಂತರದ ಬಗ್ಗೆ ಅಧ್ಯಯನ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.


ಯುರೋಪ್​​ನಲ್ಲಿ ಓಮಿಕ್ರಾನ್​ 


"ತೀವ್ರವಾದ ಕಾಯಿಲೆಗಳು ಮುಂದೆ ಬರುವುದಿಲ್ಲ ಎಂದು ನಾವು ಹೇಳುತ್ತಿಲ್ಲ. ಆದರೆ ಸದ್ಯಕ್ಕೆ, ಲಸಿಕೆ ಹಾಕಿಸಿಕೊಳ್ಳದಿರುವ ನಾವು ನೋಡಿದ ರೋಗಿಗಳೂ ಸಹ ಸೌಮ್ಯ ರೋಗಲಕ್ಷಣಗಳನ್ನು ಹೊಂದಿದ್ದಾರೆ. ಈಗಾಗಲೇ ಯುರೋಪ್‌ನಲ್ಲಿ ಬಹಳಷ್ಟು ಜನರಿಗೆ ಈ ವೈರಸ್ ಇರಬಹುದೆಂದು ನನಗೆ ಖಚಿತವಾಗಿದೆ" ಎಂದೂ ಕೋಟ್ಜಿ ಹೇಳಿದರು.


ಕೋಟ್ಜಿ ಬಳಿ ಚಿಕಿತ್ಸೆ ಪಡೆದ ರೋಗಿಗಳು ಹೆಚ್ಚಾಗಿ 40 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪುರುಷರು ಮತ್ತು ಅವರಲ್ಲಿ ಅರ್ಧದಷ್ಟು ಜನರು ಲಸಿಕೆ ಪಡೆದವರು ಎಂದೂ ವೈದ್ಯೆ ಮಾಹಿತಿ ನೀಡಿದ್ದಾರೆ.


ದಕ್ಷಿಣ ಆಫ್ರಿಕಾದಲ್ಲಿ ಹೆಚ್ಚಾದ ಆತಂಕ


ಈ ರೂಪಾಂತರವು ದಕ್ಷಿಣ ಆಫ್ರಿಕಾಕ್ಕೆ ಹೆಚ್ಚು ಅಪಖ್ಯಾತಿ ತಂದಿದೆ ಮತ್ತು ದೇಶಗಳು ಅಲ್ಲಿನ ಪ್ರಯಾಣಿಕರ ಮೇಲೆ ನಿಷೇಧ ಹೇರುವ ಮೂಲಕ ದಕ್ಷಿಣ ಆಫ್ರಿಕಾವನ್ನು ಪ್ರತ್ಯೇಕಿಸಲು ಪ್ರಾರಂಭಿಸಿವೆ. ದಕ್ಷಿಣ ಆಫ್ರಿಕಾದ ಉನ್ನತ ಆರೋಗ್ಯ ಒಕ್ಕೂಟವು ಇದನ್ನು 'knee-jerk' ಪ್ರತಿಕ್ರಿಯೆ ಎಂದು ಬಣ್ಣಿಸಿದೆ.


ಇದನ್ನೂ ಓದಿ: Corona : ಮತ್ತೆ ವಿಶ್ವದ ಹಲವು ರಾಷ್ಟ್ರಗಳಲ್ಲಿ ಕಾಣಿಸಿಕೊಂಡ ಭಯಾನಕ ಓಮಿಕ್ರಾನ್


ದಕ್ಷಿಣ ಆಫ್ರಿಕಾವನ್ನು ಶ್ಲಾಘಿಸಿ


ಈ ಸಂಬಂಧ ಪ್ರತಿಕ್ರಿಯೆ ನೀಡಿದ ದಕ್ಷಿಣ ಆಫ್ರಿಕಾದ ವೈದ್ಯಕೀಯ ಸಂಘದ ಅಧ್ಯಕ್ಷರೂ ಆಗಿರುವ ಏಂಜೆಲಿಕ್ ಕೊಯೆಟ್ಜಿ,’’ಅವರು ದಕ್ಷಿಣ ಆಫ್ರಿಕಾವನ್ನು ಶ್ಲಾಘಿಸಬೇಕು ಮತ್ತು ವಿಜ್ಞಾನಿಗಳು ತೋರಿಸಿದ ಜಾಗರೂಕತೆಗಾಗಿ ನಿಂದಿಸಬಾರದು’’ ಎಂದು ಹೇಳಿದರು. "ನಮ್ಮ ವಿಜ್ಞಾನಿಗಳು ತುಂಬಾ ಜಾಗರೂಕರಾಗಿರುವುದರಿಂದ ಮತ್ತು ಹಿನ್ನೆಲೆಯಲ್ಲಿ ಹೆಚ್ಚಿನ ಅನುಕ್ರಮ ಮಾಡುತ್ತಿರುವುದರಿಂದ ಹೊಸ ರೂಪಾಂತರ ಪತ್ತೆಯಾಗಿದೆ. ರೋಗಲಕ್ಷಣಗಳ ಕಾರಣದಿಂದ ಯುರೋಪಿಯನ್ ದೇಶಗಳು ಅದನ್ನು ಮಿಸ್‌ ಮಾಡಿರಬಹುದು ಎಂಬುದು ನನ್ನ ಅನುಮಾನ" ಎಂದು ಕೋಟ್ಜಿ ಟಿವಿ ಸುದ್ದಿ ಚಾನೆಲ್ ನ್ಯೂಜ್ರೂಮ್ ಆಫ್ರಿಕಾಕ್ಕೆ ತಿಳಿಸಿದರು.

Published by:Latha CG
First published: