ಜನರು ನಂಬಿಕೆ ಈಗೇನಿದ್ದರೂ ಸೋನು ಮೇಲೆ; ಕಷ್ಟ ಎಂದರೇ ಅಲ್ಲೇ ಇರುತ್ತಾರೆ ಈ ನಟ

ಯಾವುದೇ ಸಂಘಟನೆ, ಜನಪ್ರತಿನಿಧಿಗಳು ಬಗೆಹರಿಸುವ ಮುನ್ನ ತಮ್ಮ ಸಮಸ್ಯೆಗೆ ಪರಿಹಾರ ಒದಗಿಸಬಲ್ಲವರು ಸೋನು ಎಂಬುದು ದೇಶದ ಜನರಲ್ಲಿ ನಂಬಿಕೆಯಲ್ಲಿ ಬೆರೆತಿದೆ.

ಜನರ ಕಷ್ಟ ಆಲಿಸುತ್ತಿರುವ ಸೋನು ಸೂದ್​

ಜನರ ಕಷ್ಟ ಆಲಿಸುತ್ತಿರುವ ಸೋನು ಸೂದ್​

 • Share this:
  ದೇಶದೆಲ್ಲೆಡೆ ಜನರು ಕೊರೋನಾ ಸೋಂಕಿನಿಂದ ತತ್ತರಿಸಿದ್ದಾರೆ. ಈ ನಡುವೆ ಸೋಂಕಿತರಿಗೆ ಸಕಾಲಕ್ಕೆ ಚಿಕಿತ್ಸೆ, ಬೆಡ್​, ಔಷಧ ಸಿಗದೇ ಪರದಾಡುತ್ತಿದ್ದಾರೆ. ತಮ್ಮವರ ಉಳಿಸಿಕೊಳ್ಳಲು ಎಷ್ಟೇ ಹೆಣಗಾಡಿದರೂ ಕೆಲವೊಮ್ಮೆ ವಿಫಲರಾಗುತ್ತಿದ್ದಾರೆ. ಯಾರ ಬಳಿ ಎಷ್ಟೇ ಕೊಗೆರಿದರೂ ಆಗದ ಕೆಲಸವನ್ನು ನಟ ಸೋನು ಸೂದ್​ ಮಾಡುವ ಮೂಲಕ ಜನರ ಏಕೈಕ ಭರವಸೆಯಾಗಿ ಉಳಿದಿದ್ದಾರೆ. ದೇಶದಲ್ಲಿ ಕಷ್ಟದಲ್ಲಿರುವ ಜನರು ನಂಬುತ್ತಿರುವ ಏಕೈಕ ವ್ಯಕ್ತಿ ಸೋನು ಸೂದ್​ ಮಾತ್ರ ಆಗಿದ್ದಾರೆ. ಈ ಮೂಲಕ ನಿಜವಾದ ರಕ್ಷಕ ಆಪತ್ಬಾಂದವ ಆಗಿದ್ದಾರೆ ಸೋನು. ಈ ಮೂಲಕ ಅನೇಕರಿಗೆ ಜೀವದಾನವನ್ನು ನೀಡಿದ್ದಾರೆ ಎಂದರೂ ತಪ್ಪಾಗಲಾರದು. ನಿಜ ಜೀವನದ ರಿಯಲ್​ ಲೈಫ್​ ಹೀರೋ ಆಗಿರುವ ಸೋನು ಸೂದ್​ ದೇಶದ ಜನರಿಗೆ ಈಗ ಮತ್ತಷ್ಟು ನೆರವಿನ ಹಸ್ತ ಚಾಚಿದ್ದಾರೆ.

  ಸಾಮಾಜಿಕ ಜಾಲತಾಣದ ಮೂಲಕ ಯಾರು ಯಾವುದೇ ಸಹಾಯವನ್ನು ಕೋರಿದರೂ ಅದು ತಮ್ಮಿಂದ ಸಾಧ್ಯವಾದರೇ ಸೂನು ಈಡೇರಿಸಿಯೇ ತೀರುತ್ತಾರೆ. ದೇಶದ ಯಾವುದೇ ಮೂಲೆಯಿರಲೀ ಜನರು ಸಹಾಯಕ್ಕಾಗಿ ಒಂದು ಟ್ವೀಟ್​ ಮಾಡಿದರೂ ಅದಕ್ಕೆ ಪ್ರತಿಕ್ರಿಯಿಸದೇ ಇರಲಾರದು. ಇಷ್ಟೇ ಅಲ್ಲದೇ ತಮ್ಮ ಫೌಂಡೇಷನ್​ ಮೂಲಕ ಎಲ್ಲಿಯೇ ಕಷ್ಟದ ಪರಿಸ್ಥಿತಿ ಕಂಡು ಬಂದರೂ ಸದ್ದಿಲ್ಲದೇ ಆ ಸಮಸ್ಯೆ ಬಗೆಹರಿಸಲು ಅವರು ಮುಂದಾಗುತ್ತಾರೆ. ಇಷ್ಟೇ ಅಲ್ಲದೇ, ಇವರ ಸಹಾಯ ಕೋರಿ ಅನೇಕರು ಅವರ ಮನೆ ಬಾಗಿಲನ್ನು ತಟ್ಟುತ್ತಿದ್ದಾರೆ. ಈ ವಿಷಯ ಗಮನಕ್ಕೆ ಬರುತ್ತಿದ್ದಂತೆ ಇತ್ತೀಚೆಗಷ್ಟೇ ಕೋವಿಡ್​ನಿಂದ ಗುಣಮುಖರಾಗಿರುವ ನಟ ಅವರ ಸಹಾಯಕ್ಕೆ ಧಾವಿಸಿದ್ದಾರೆ.

  ತಮ್ಮ ಮನೆ ಮುಂದೆ ಸಹಾಯದ ನಿರೀಕ್ಷೆಯಲ್ಲಿದ್ದ ಜನರ ಕಷ್ಟಗಳನ್ನು ಆಲಿಸಿ, ಅದನ್ನು ಬಗೆಹರಿಸುವ ಭರವಸೆ ನೀಡಿದ್ದಾರೆ. ಯಾವುದೇ ಸಂಘಟನೆ, ಜನಪ್ರತಿನಿಧಿಗಳು, ಸರ್ಕಾರ ಬಗೆಹರಿಸುವ ಮುನ್ನ ಅವರು ತಮ್ಮ ಸಮಸ್ಯೆಗೆ ಪರಿಹಾರ ಒದಗಿಸಬಲ್ಲವರು ಸೋನು ಎಂಬುದು ದೇಶದ ಜನರಲ್ಲಿ ನಂಬಿಕೆಯಲ್ಲಿ ಬೆರೆತಿದೆ. ಇದೇ ಕಾರಣಕ್ಕಾಗಿ ಜನರು ಅವರ ಮನೆ ಮುಂದೆ ಸಾಲುಗಟ್ಟುತ್ತಿದ್ದಾರೆ.

  ಇದನ್ನು ಓದಿ: ಚಾಮರಾಜನಗರ ದುರಂತ ಮರುಕಳಿಸದಂತೆ ಎಚ್ಚರವಹಿಸಿ; ಸಿಎಂ ಬಿಎಸ್​ವೈಗೆ ದೇವೇಗೌಡರಿಂದ ಸಲಹೆ

  ಬೆಂಗಳೂರಿಗರಿಗೂ ಆಪತ್ಬಾಂದವ ಈ ನಟ

  ಬೆಂಗಳೂರಿನ ಪೊಲೀಸರಿಗಾಗಿ ಸದ್ದಿಲ್ಲದಂತೆ ಆಕ್ಸಿಜನ್​ ಕನ್ಸ್​ನ್​ಟ್ರೆಟರ್​ ತಮ್ಮ ಸಂಸ್ಥೆ ಪ್ರತಿನಿಧಿಗಳ ಕೈಯಲ್ಲಿ ಸೋನು ಕಳುಹಿಸಿದ್ದರು. ಬಳಿಕ ಈ ಕುರಿತು ಪೊಲೀಸ್​ ಆಯುಕ್ತ ಕಮಲ್​ಪಂತ್​ರೊಂದಿಗೆ ಮಾತನಾಡಿದ್ದರು.

  ಇದಾದ ಬಳಿಕ ರಾಜ್ಯದಲ್ಲಿ ಆಕ್ಸಿಜನ್​ ಬಿಕಟ್ಟು ಕಂಡ ಬಂದ ತಕ್ಷಣದ ಸೋನು ಸೂದ್​ ತಂಡ ಸ್ವಯಂ ಸೇವಕ ಮನೋಭಾವದಿಂದ 16 ಆಕ್ಸಿಜನ್​ ಅನ್ನು ವ್ಯವಸ್ಥೆ ಮಾಡುವ ಮೂಲಕ 20 ರಿಂದ 22 ಮಂದಿ ಜನರ ಪ್ರಾಣ ಉಳಿಸಿದ್ದಾರೆ. ಸೋನು ಸೂದ್​ ಚಾರಿಟಿ ಫೌಂಡೇಷನ್​ ಅವರ ಸದಸ್ಯರೊಬ್ಬರಿಗೆ ಪೊಲೀಸರಿಂದ ತಕ್ಷಣಕ್ಕೆ ಆರ್ಕಾ ಆಸ್ಪತ್ರೆಗೆ ಆಮ್ಲಜನಕ ಒದಗಿಸುವಂತೆ ಎಸ್​ಒಎಸ್​ ಸಿಕ್ಕಿದೆ. ತಕ್ಷಣಕ್ಕೆ ಆಲರ್ಟ್​ ಆದ ಸೋನು ಆಕ್ಸಿಜನ್​ ವ್ಯವಸ್ಥೆ ಮಾಡಿ ಮತ್ತೆ ಜನರ ಹೃದಯ ಗೆದ್ದಿದ್ದಾರೆ.
  Published by:Seema R
  First published: