ಇಂದು ಯುಪಿಎ ಮಿತ್ರ ಪಕ್ಷಗಳ ಜೊತೆ ಸೋನಿಯಾ ಗಾಂಧಿ ಸಭೆ; ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಭಾಗಿ

ಪ್ರಸ್ತುತ ದೇಶದ ಕೋವಿಡ್-19 ಪರಿಸ್ಥಿತಿ, ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಕ್ರಮಗಳು,  ಕೇಂದ್ರ ಸರ್ಕಾರದ ಲೋಪದೋಷಗಳು ಹಾಗೂ ಪ್ರಸಕ್ತ ರಾಷ್ಟ್ರೀಯ ರಾಜಕಾರಣ,  ಪ್ರತಿಪಕ್ಷಗಳು ನಡೆದುಕೊಳ್ಳಬೇಕಿರುವ ಸಿದ್ಧತೆಯ ಬಗ್ಗೆ ವಿಡಿಯೋ ಸಂವಾದದಲ್ಲಿ ಚರ್ಚೆ ನಡೆಸಲಾಗುವುದು. 

ಸೋನಿಯಾ ಗಾಂಧಿ ಮತ್ತು ಎಚ್.ಡಿ.ದೇವೇಗೌಡ.

ಸೋನಿಯಾ ಗಾಂಧಿ ಮತ್ತು ಎಚ್.ಡಿ.ದೇವೇಗೌಡ.

 • Share this:
  ಬೆಂಗಳೂರು: ಪ್ರಸ್ತುತ ದೇಶದ ಕೋವಿಡ್ ಪರಿಸ್ಥಿತಿ ಚರ್ಚೆ ನಡೆಸಲು ಶುಕ್ರವಾರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಎನ್​ಡಿಎ ಹೊರತುಪಡಿಸಿ ಉಳಿದೆಲ್ಲಾ ಪ್ರತಿ ಪಕ್ಷಗಳ ಮುಖಂಡರ ಜೊತೆ ವಿಡಿಯೋ ಸಂವಾದ ನಡೆಸಲಿದ್ದಾರೆ.

  ವಿಡಿಯೋ ಸಂವಾದದಲ್ಲಿ ಸಿಪಿಎಂ, ಸಿಪಿಐಎಂ, ಎಎಪಿ, ತೆಲುಗು ದೇಶಂ,  ಡಿಎಂಕೆ, ಟಿಎಂಸಿ, ಎನ್​ಸಿಪಿ ಹಾಗೂ ಜೆಡಿಎಸ್​ ಸೇರಿ ಇತರ ಪಕ್ಷಗಳ ಜೊತೆ ಚರ್ಚೆ ಸೋನಿಯಾ ಗಾಂಧಿ ಅವರು ಮಹತ್ವದ ಚರ್ಚೆ ನಡೆಸಲಿದ್ದಾರೆ. ಈ ವಿಡಿಯೋ ಸಂವಾದದಲ್ಲಿ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್​.ಡಿ.ದೇವೇಗೌಡ ಅವರು ಭಾಗವಹಿಸಲಿದ್ದಾರೆ.

  ಪ್ರಸ್ತುತ ದೇಶದ ಕೋವಿಡ್-19 ಪರಿಸ್ಥಿತಿ, ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಕ್ರಮಗಳು,  ಕೇಂದ್ರ ಸರ್ಕಾರದ ಲೋಪದೋಷಗಳು ಹಾಗೂ ಪ್ರಸಕ್ತ ರಾಷ್ಟ್ರೀಯ ರಾಜಕಾರಣ,  ಪ್ರತಿಪಕ್ಷಗಳು ನಡೆದುಕೊಳ್ಳಬೇಕಿರುವ ಸಿದ್ಧತೆಯ ಬಗ್ಗೆ ವಿಡಿಯೋ ಸಂವಾದದಲ್ಲಿ ಚರ್ಚೆ ನಡೆಸಲಾಗುವುದು.

  ಇದನ್ನು ಓದಿ: ಸೋನಿಯಾ ಗಾಂಧಿ ವಿರುದ್ಧದ ಕೇಸ್​ ಬಗೆಹರಿಸದಿದ್ದರೆ ರಾಜಕೀಯ ಹೋರಾಟ ಅನಿವಾರ್ಯ; ಸಿಎಂಗೆ ಸಿದ್ದರಾಮಯ್ಯ ಎಚ್ಚರಿಕೆ

  First published: