ಇಂದು ಕಾಂಗ್ರೆಸ್ ಮತ್ತು ಕಾಂಗ್ರೆಸೇತರ ಸಿಎಂಗಳೊಂದಿಗೆ ಸೋನಿಯಾ ಗಾಂಧಿ ಸಭೆ: ಜಿಎಸ್​ಟಿ ಬಗ್ಗೆ ಚರ್ಚೆ

ಕೊರೋನಾ ಲಾಕ್ಡೌನ್ ಕಾರಣಗಳಿಂದ ರಾಜ್ಯಗಳ ಆದಾಯಗಳ ಕಡಿಮೆ‌ ಆಗಿದೆ. ಆದುದರಿಂದ ರಾಜ್ಯಗಳಿಗೆ ನೀಡಬೇಕಿರುವ ಜಿಎಸ್​ಟಿ ಪರಿಹಾರದ ಪಾಲನ್ನು ಹೆಚ್ಚಿಸಬೇಕೆಂದು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಸಭೆ ನಡೆಸಲಾಗುತ್ತಿದೆ.

ಸೋನಿಯಾ ಗಾಂಧಿ

ಸೋನಿಯಾ ಗಾಂಧಿ

  • Share this:
ನವದೆಹಲಿ(ಆ.26): ರಾಜ್ಯಗಳಿಗೆ ಕೇಂದ್ರ ಸರ್ಕಾರ ನೀಡಬೇಕಿರುವ ಜಿಎಸ್​ಟಿ ಪರಿಹಾರದ ಪಾಲನ್ನು ಹೆಚ್ಚಿಸುವ ವಿಷಯದಲ್ಲಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಇಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಇಂದು ಕಾಂಗ್ರೆಸ್ ಹಾಗೂ ಕಾಂಗ್ರೆಸೇತರ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಲಿದ್ದಾರೆ. ಈ ಮೂಲಕ ಸೋನಿಯಾ ಗಾಂಧಿ ಅವರು ಕಳೆದ ಸೋಮವಾರ ಕಾರ್ಯಕಾರಣಿ ಸಭೆಯಲ್ಲಿ ‌ಆಗಿದ್ದ ಡ್ಯಾಮೇಜ್ ಅನ್ನು ಕಂಟ್ರೋಲ್ ಮಾಡಲು ಮುಂದಾಗಿದ್ದಾರೆ. ರಾಜ್ಯಗಳಿಗೆ ಕೇಂದ್ರ ಸರ್ಕಾರ ನೀಡಬೇಕಿರುವ ಜಿಎಸ್​​ಟಿ ಪರಿಹಾರದ ಪಾಲನ್ನು ಹೆಚ್ಚಿಸುವ ವಿಷಯದಲ್ಲಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ವಿಷಯದಲ್ಲಿ ವಿಪಕ್ಷಗಳ ಒಗ್ಗಟ್ಟು ಪ್ರದರ್ಶನಕ್ಕೆ ಮುಂದಾಗಿದ್ದಾರೆ.

ನಾಳೆ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ಜಿಎಸ್​ಟಿ ಕೌನ್ಸಿಲ್ ಸಭೆ ನಡೆಯಲಿದೆ. ನಾಳಿನ‌ ಸಭೆಯಲ್ಲಿ ರಾಜ್ಯಗಳಿಗೆ ಕೇಂದ್ರ ಸರ್ಕಾರ ನೀಡಬೇಕಿರುವ ಜಿಎಸ್​​ಟಿ ಪರಿಹಾರದ ಪಾಲನ್ನು ಹೆಚ್ಚಿಸುವ ವಿಷಯ ಚರ್ಚೆಯಾಗಲಿದೆ. ಇದೇ ಹಿನ್ನಲೆಯಲ್ಲಿ ಎಐಸಿಸಿ ಅಧ್ಯಕ್ಷೆ  ಸೋನಿಯಾ ಗಾಂಧಿ ಅವರು ಇಂದು ಕಾಂಗ್ರೆಸ್ ಹಾಗೂ ಕಾಂಗ್ರೆಸೇತರ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಲಿದ್ದಾರೆ.

ವಿಡಿಯೋ ಕಾನ್ಫರೆನ್ಸ್ ಮೂಲಕ ಕಾಂಗ್ರೆಸ್ ಮುಖ್ಯಮಂತ್ರಿಗಳಾದ ಅಶೋಕ್ ಗೆಹ್ಲೋಟ್ (ರಾಜಸ್ಥಾನ), ಅಮರೀಂದರ್ ಸಿಂಗ್(ಪಂಜಾಬ್), ಭೂಪೇಶ್ ಬಘೇಲ್(ಛತ್ತೀಸ್​ಗಡ) ಮತ್ತು ನಾರಾಯಣಸ್ವಾಮಿ (ಪುದುಚೇರಿ) ಹಾಗೂ ಕಾಂಗ್ರೆಸೇತರ ಮುಖ್ಯಮಂತ್ರಿಗಳಾದ ಮಮತಾ ಬ್ಯಾನರ್ಜಿ (ಪಶ್ಚಿಮ ಬಂಗಾಳ), ಉದ್ಧವ್ ಠಾಕ್ರೆ(ಮಹಾರಾಷ್ಟ್ರ), ಹೇಮಂತ್ ಸೋರನ್ (ಜಾರ್ಖಂಡ್) ಅವರ ಜತೆ ರಾಜ್ಯಗಳಿಗೆ ಕೇಂದ್ರ ಸರ್ಕಾರ ನೀಡಬೇಕಿರುವ ಜಿಎಸ್​ಟಿ ಪರಿಹಾರದ ಪಾಲನ್ನು ಹೆಚ್ಚಿಸುವ ಬಗ್ಗೆ ಸೋನಿಯಾ ಗಾಂಧಿ ಅವರು ಸಭೆ ನಡೆಸಲಿದ್ದಾರೆ.

ಇದನ್ನೂ ಓದಿ: ಇಟ್ಸ್​ ಫಿಂಗರ್​​ ಲಿಕ್ಕಿಂಗ್​​ ಗುಡ್​​: 64 ವರ್ಷದ ಹಳೇ ಸ್ಲೋಗನ್​​ ಕೈಬಿಟ್ಟ ಕೆಎಫ್​​ಸಿ; ಇಲ್ಲಿದೆ ಕಾರಣ

ಕೊರೋನಾ ಲಾಕ್ಡೌನ್ ಕಾರಣಗಳಿಂದ ರಾಜ್ಯಗಳ ಆದಾಯಗಳ ಕಡಿಮೆ‌ ಆಗಿದೆ. ಆದುದರಿಂದ ರಾಜ್ಯಗಳಿಗೆ ನೀಡಬೇಕಿರುವ ಜಿಎಸ್​ಟಿ ಪರಿಹಾರದ ಪಾಲನ್ನು ಹೆಚ್ಚಿಸಬೇಕೆಂದು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಸಭೆ ನಡೆಸಲಾಗುತ್ತಿದೆ. ಇದಲ್ಲದೆ ವೈದ್ಯಕೀಯ ಮತ್ತು ಇಂಜನಿಯರಿಂಗ್ ಪ್ರವೇಶ ಪರೀಕ್ಷೆಗಳಾದ ಎನ್​​ಇಇಟಿ ಮತ್ತು  ಪರೀಕ್ಷೆಗಳನ್ನು ರದ್ದುಗೊಳಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ಬಗ್ಗೆಯೂ ಇಂದಿನ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತದೆ.
Published by:Ganesh Nachikethu
First published: