ಇಂದು ಕಾಂಗ್ರೆಸ್​​ ಸಂಸದರ ಸಭೆ ಕರೆದ ಸೋನಿಯಾ ಗಾಂಧಿ: ಕೊರೋನಾ ವೈರಸ್​​, ಆರ್ಥಿಕ ಕುಸಿತದ ಬಗ್ಗೆ ಚರ್ಚೆ

ಕಳೆದೊಂದು ತಿಂಗಳಿನಿಂದ ಸತತವಾಗಿ ಏರುತ್ತಿರುವ ಇಂಧನ ಬೆಲೆ ವಿರುದ್ಧವೂ ಪ್ರತಿಭಟನೆ ಮಾಡಿದರೂ ಪ್ರಯೋಜನವಿಲ್ಲ. ಮುಂಬರುವ ಅಧಿವೇಶನದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಈ ವಿಚಾರಗಳನ್ನೇ ಮುಂದಿಟ್ಟುಕೊಂಡು ಯಾವುದಕ್ಕೂ ಆಸ್ಪದ ಕೊಡದೇ ದಾಳಿ ಮಾಡಬೇಕು ಎಂಬುದು ಇಂದಿನ ಕಾಂಗ್ರೆಸ್​ ಸಂಸದರ ಸಭೆಯ ಉದ್ದೇಶ ಎನ್ನಲಾಗುತ್ತಿದೆ.

news18-kannada
Updated:July 11, 2020, 8:10 AM IST
ಇಂದು ಕಾಂಗ್ರೆಸ್​​ ಸಂಸದರ ಸಭೆ ಕರೆದ ಸೋನಿಯಾ ಗಾಂಧಿ: ಕೊರೋನಾ ವೈರಸ್​​, ಆರ್ಥಿಕ ಕುಸಿತದ ಬಗ್ಗೆ ಚರ್ಚೆ
ಸೋನಿಯಾ ಗಾಂಧಿ
  • Share this:
ನವದೆಹಲಿ(ಜು.11): ಡೆಡ್ಲಿ ಕೊರೋನಾ ವೈರಸ್​​ ತೀವ್ರತೆ, ಭಾರತ-ಚೀನಾ ಗಡಿ ಸಂಘರ್ಷ, ಆರ್ಥಿಕ ಕುಸಿತ ಸೇರಿದಂತೆ ಹಲವು ಮಹತ್ವದ ವಿಚಾರಗಳ ಸಂಬಂಧ ಚರ್ಚಿಸಲು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಕಾಂಗ್ರೆಸ್​​ ಸಂಸದರ ಸಭೆ ಕರೆದಿದ್ದಾರೆ. ಇಂದು ಸೋನಿಯಾ ಗಾಂಧಿ ತಮ್ಮ ಪಕ್ಷದ ಲೋಕಸಭಾ ಸದಸ್ಯರ ಜತೆ ಸಭೆ ನಡೆಸಲಿದ್ದಾರೆ ಎಂದು ಕಾಂಗ್ರೆಸ್​ ಮೂಲಗಳು ತಿಳಿಸಿವೆ.

ಇಂದು ಶನಿವಾರ ಬೆಳಗ್ಗೆ 10.30ಕ್ಕೆ ಸೋನಿಯಾ ಗಾಂಧಿ ಕಾಂಗ್ರೆಸ್​ನ ಸಂಸದರೊಂದಿಗೆ ವಿಡಿಯೋ ಕಾನ್ಫ್​​ರೆನ್ಸ್​​ ಮೂಲಕ ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಪ್ರಮುಖವಾಗಿ ಮುಂದಿನ ಅಧಿವೇಶನದಲ್ಲಿ ಆರ್ಥಿಕ ಕುಸಿತ ಮತ್ತು ಮಾರಕ ಕೋವಿಡ್​-19 ಕುರಿತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮೇಲೆ ಹೇಗೆ ದಾಳಿ ನಡೆಸಬೇಕು ಎನ್ನುವ ಅಂಶಗಳು ಚರ್ಚೆಯಾಗಲಿದೆ.

ಭಾರತ-ಚೀನಾ ಗಡಿ ಸಂಘರ್ಷ, ಕೊರೋನಾ ವೈರಸ್​​ ನಿಯಂತ್ರಣ ವಿಚಾರದಲ್ಲಿ ಕಾಂಗ್ರೆಸ್​ ವಿರೋಧ ಪಕ್ಷವಾಗಿ ಹಲವು ಸಲಹೆಗಳನ್ನು ನೀಡುತ್ತಿದೆಯಾದರೂ ಕೇಂದ್ರ ಇದನ್ನು ಅಳವಡಿಸಿಕೊಳ್ಳುತ್ತಿಲ್ಲ. ಕಳೆದೊಂದು ತಿಂಗಳಿನಿಂದ ಸತತವಾಗಿ ಏರುತ್ತಿರುವ ಇಂಧನ ಬೆಲೆ ವಿರುದ್ಧವೂ ಪ್ರತಿಭಟನೆ ಮಾಡಿದರೂ ಪ್ರಯೋಜನವಿಲ್ಲ. ಮುಂಬರುವ ಅಧಿವೇಶನದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಈ ವಿಚಾರಗಳನ್ನೇ ಮುಂದಿಟ್ಟುಕೊಂಡು ಯಾವುದಕ್ಕೂ ಆಸ್ಪದ ಕೊಡದೇ ದಾಳಿ ಮಾಡಬೇಕು ಎಂಬುದು ಇಂದಿನ ಕಾಂಗ್ರೆಸ್​ ಸಂಸದರ ಸಭೆಯ ಉದ್ದೇಶ ಎನ್ನಲಾಗುತ್ತಿದೆ.

ಇನ್ನೊಂದೆಡೆ, ಕೊರೋನಾ ವಿಚಾರದಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಹೀಗಾಗಿ ಕೋವಿಡ್​​​-19 ವಿಪತ್ತನ್ನು ನಿಭಾಯಿಸಲು ದೆಹಲಿಯಲ್ಲಿರುವ ಅಖಿಲ ಭಾರತ ಕಾಂಗ್ರೆಸ್‌ ಸಮಿತಿ ಕಚೇರಿಯಲ್ಲಿ ಕೇಂದ್ರೀಯ ನಿಯಂತ್ರಣ ಕೊಠಡಿ ಸ್ಥಾಪಿಸಿ ಎಂದು ಕಾಂಗ್ರೆಸ್​ ನಾಯಕರಿಗೆ ಸೋನಿಯಾ ಗಾಂಧಿ ಆದೇಶಿಸಿದ್ದರು.

ಇದನ್ನೂ ಓದಿ: ಕೋಲಾರದ ಎಂಪಿಎಂಸಿ ಮಾರುಕಟ್ಟೆ ಮೊದಲ ಬಾರಿಗೆ ಈ ಭಾನುವಾರ ಬಂದ್

ಈಗ ಕಾಂಗ್ರೆಸ್​ ಅಧ್ಯಕ್ಷೆ ಸೋನಿಯಾ ಗಾಂಧಿ ಸೂಚನೆ ಮೇರೆಗೆ ರಾಜ್ಯ ಕಾಂಗ್ರೆಸ್​ ಸಮಿತಿಗಳು ಕೇಂದ್ರೀಯ ಕಂಟ್ರೋಲ್‌ ರೂಮ್​​ಗೆ ತಾವು ಕೊರೋನಾ ಸಂಬಂಧ ತಾವು ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಪ್ರತೀ ರಾಜ್ಯದ ವೈದ್ಯಕೀಯ ಇಲಾಖೆ ಸಿದ್ಧತೆ, ಸರ್ಕಾರ ಸಂಸ್ಥೆಗಳಿಂದ ನಡೆಯುತ್ತಿರುವ ಪರಿಹಾರ ಕಾರ್ಯಗಳ ಬಗ್ಗೆಯೂ ವರದಿ ನೀಡಲಾಗುತ್ತಿದೆ. ಈ ವರದಿ ಆಧಾರದ ಮೇರೆಗೆ ಕೇಂದ್ರದ ವಿರುದ್ಧ ದಾಳಿ ನಡೆಸಲಾಗುತ್ತಿದೆ.
Published by: Ganesh Nachikethu
First published: July 11, 2020, 8:02 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading