Sonam Kapoor: ಲಾಕ್​ಡೌನ್​ನಲ್ಲಿ ಗಂಡನ ಹೇರ್ ​ಸ್ಟೈಲಿಸ್ಟ್​ ಆದ ಸೋನಮ್​ ಕಪೂರ್​..!

Sonam Kapoor: ಸಿನಿಮಾ ಚಿತ್ರೀಕರಣ, ಸುತ್ತಾಟ ಹಾಗೂ ಪಾರ್ಟಿಗಳಿಲ್ಲದೆ ಖಾಲಿ ಕುಳಿತಿರುವ ಸೆಲೆಬ್ರಿಟಿಗಳು ಸದ್ಯ ಮನೆಯಲ್ಲಿ ಹೊಸ ಅಡುಗೆ ಮಾಡೋದು, ಮನೆ ಕೆಲಸ ಮಾಡುವುದರ ಜೊತೆಗೆ ಅವುಗಳ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಸೋನಮ್​ ಕಪೂರ್​ ಸಹ ಇತ್ತೀಚೆಗೆ ಇಂತಹದ್ದೇ ಕೆಲವು ಕೆಲಸಗಳನ್ನು ಮಾಡುತ್ತಾ ಟೈಮ್​ ಪಾಸ್​ ಮಾಡುತ್ತಿದ್ದಾರೆ.

Anitha E | news18-kannada
Updated:April 13, 2020, 7:10 PM IST
Sonam Kapoor: ಲಾಕ್​ಡೌನ್​ನಲ್ಲಿ ಗಂಡನ ಹೇರ್ ​ಸ್ಟೈಲಿಸ್ಟ್​ ಆದ ಸೋನಮ್​ ಕಪೂರ್​..!
ಸೋನಮ್​ ಕಪೂರ್​ ಹಾಗೂ ಆನಂದ್​ ಅಹುಜಾ
  • Share this:
ಸದ್ಯ ಲಾಕ್​ಡೌನ್​ನಲ್ಲಿ ಎಲ್ಲ ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ. ಇನ್ನು ನಟಿ ಸೋನಮ್​ ಕಪೂರ್​ ಸಹ ಗಂಡ ಆನಂದ್​ ಅಹುಜಾ ಜೊತೆ ಕಾಲ ಕಳೆಯುತ್ತಿದ್ದಾರೆ.

ಸಿನಿಮಾ ಚಿತ್ರೀಕರಣ, ಸುತ್ತಾಟ ಹಾಗೂ ಪಾರ್ಟಿಗಳಿಲ್ಲದೆ ಖಾಲಿ ಕುಳಿತಿರುವ ಸೆಲೆಬ್ರಿಟಿಗಳು ಸದ್ಯ ಮನೆಯಲ್ಲಿ ಹೊಸ ಅಡುಗೆ ಮಾಡೋದು, ಮನೆ ಕೆಲಸ ಮಾಡುವುದರ ಜೊತೆಗೆ ಅವುಗಳ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಸೋನಮ್​ ಕಪೂರ್​ ಸಹ ಇತ್ತೀಚೆಗೆ ಇಂತಹದ್ದೇ ಕೆಲವು ಕೆಲಸಗಳನ್ನು ಮಾಡುತ್ತಾ ಟೈಮ್​ ಪಾಸ್​ ಮಾಡುತ್ತಿದ್ದಾರೆ.








View this post on Instagram





Reading non stop... 📖


A post shared by Sonam K Ahuja (@sonamkapoor) on






ಸೋನಮ್​ ಕಪೂರ್ ಅವರಿಗೆ ಮೇಕಪ್​ ಹಾಗೂ ಹೇರ್​ ಸೆಟ್​ ಮಾಡಲು ಸಹಾಯಕರಿರುತ್ತಾರೆ. ಆದರೆ ಲಾಕ್​ಡೌನ್​ನಿಂದಾಗಿ ಸೋನಮ್​ ಈಗ ತಮ್ಮ ಹೇರ್ ಸ್ಟೈಲ್​ ಜೊತೆಗೆ ಪತಿರಾಯನಿಗೂ ಹೇರ್​ ಸೆಟ್​ ಮಾಡುತ್ತಿದ್ದಾರೆ.




ಸೋನಮ್​ ಸದ್ಯ ಗಂಡನಿಗೆ ಹೇರ್​ ಸ್ಟೈಲಿಸ್ಟ್​ ಆಗಿದ್ದು, ಅವರ ಈ ವಿಡಿಯೋ ವೈರಲ್​ ಆಗಿದೆ. ಅಷ್ಟೇ ಅಲ್ಲ ಮನೆಯಲ್ಲಿ ಕೇಕ್​ ಸಹ ಮಾಡಿದ್ದಾರೆ.




ಸೋನಮ್​ ಕಪೂರ್​ ಮನೆ ಕೆಲಸದ ಜೊತೆಗೆ ಸಿಕ್ಕಾಪಟ್ಟೆ ಓದುತ್ತಿದ್ದಾರಂತೆ. ಅವರಿಗೆ ಲಾಕ್​ಡೌನ್​ನಿಂದಾಗಿ ಓದಲು ಸಹ ಅವಕಾಶ ಸಿಕ್ಕಿದೆ. ಇನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೀಪ ಬೆಳಗಲು ಕರೆ ಕೊಟ್ಟಾಗ ಪಟಾಕಿ ಹೊಡೆದವರ ವಿರುದ್ಧ ಟ್ವೀಟ್​ ಮಾಡುವ ಮೂಲಕ ಟ್ರೋಲ್​ಗೆ ಬಲಿಯಾಗಿದ್ದರು ಸೋನಮ್​.

Sunny Leone: ಕಣ್ಣು ಮುಚ್ಚಿ ಕನಸು ಕಾಣ್ರಿ, ಆದಷ್ಟು ಬೇಗ ಥಾಯ್ಲೆಂಡ್​ನಲ್ಲಿ ಸಿಗೋಣ ಎಂದ ಸನ್ನಿ ಲಿಯೋನ್​..!
Published by: Anitha E
First published: April 13, 2020, 7:10 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading