Coronavirus: ಕೊರೊನಾ ಸೋಂಕಿತರಿಗೆ ಲಭ್ಯವಿರುವ ಔಷಧಗಳ ಪಟ್ಟಿ ಇಲ್ಲಿದೆ..

Medicines For Coronavirus: ಇನ್ಯಾವುದೇ ಆ್ಯಂಟಿ-ವೈರಲ್ ಔಷಧದ ರೀತಿಯೇ ಕೋವಿಡ್-19 ಮಾತ್ರೆ ಕೂಡಾ ವೈರಸ್‌ನ ದ್ವಿಗುಣಗುಳ್ಳುವ ಸಾಮರ್ಥ್ಯವನ್ನು ಶೂನ್ಯಗೊಳಿಸುತ್ತದೆ. ಲಸಿಕೆಗಳು ವೈರಸ್ ದೇಹ ಪ್ರವೇಶಿಸದಂತೆ ತಡೆದರೆ, ಈ ಮಾತ್ರೆಗಳು ಸೋಂಕಿನ ನಂತರ ಹೆಚ್ಚು ಹಾನಿಯಾಗುವುದನ್ನು ತಡೆಗಟ್ಟುತ್ತವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೋವಿಡ್-19 ಪ್ರಕರಣಗಳಲ್ಲಿ (Coronavirus Cases) ಆಗುತ್ತಿರುವ ಏರಿಕೆಯು ಜಗತ್ತಿನಾದ್ಯಂತ ಕಳವಳಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಲಸಿಕೆ ನೀಡಿಕೆ ಅಭಿಯಾನ ಚುರುಕುಗೊಳಿಸಿರುವುದು ಮಾತ್ರವಲ್ಲ, ಸೋಂಕನ್ನು ತಡೆಗಟ್ಟಲು ಎಲ್ಲ ಬಗೆಯ ಕ್ರಮಗಳನ್ನೂ ತೆಗೆದುಕೊಳ್ಳುತ್ತಿದ್ದಾರೆ. ಏರಿಕೆಯಾಗುತ್ತಿರುವ ಓಮೈಕ್ರಾನ್ (Omicron) ಆತಂಕದ ನಡುವೆಯೇ ತಜ್ಞರು ಮೂರನೇ ಅಲೆ ಸಾಧ್ಯತೆ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಕೊರೊನಾ ಲಸಿಕೆಯ (Coronas Vaccination)  ಲಭ್ಯತೆಯು ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಭಾರಿ ವ್ಯತ್ಯಾಸವನ್ನುಂಟು ಮಾಡಲಿದೆ. ದುರದೃಷ್ಟವಶಾತ್, ಈ ಸೋಂಕಿಗೆ ಕರಾರುವಕ್ಕಾದ ಚಿಕಿತ್ಸೆ (Medicine)  ಇಲ್ಲ. ಆದ್ದರಿಂದ, ತಜ್ಞರು ಈ ರೋಗದೊಂದಿಗೆ ಕಾಣಿಸಿಕೊಳ್ಳುವ ಕೆಲವು ಲಕ್ಷಣಗಳನ್ನು ಸುಧಾರಿಸಲು ಔಷಧ ಹಾಗೂ ಚಿಕಿತ್ಸೆಗಳನ್ನು ಮರು ಬಳಕೆಗೆ ತರುತ್ತಿದ್ದಾರೆ.

ಮೊದಲೆರಡು ಕೋವಿಡ್-19 ಅಲೆಯಲ್ಲಿ ಹಲವಾರು ಬಗೆಯ ಪ್ರಾಯೋಗಿಕ ಔಷಧಗಳು ಮುನ್ನೆಲೆಗೆ ಬಂದಿದ್ದವು. ಈ ಔಷಧಗಳ ಸಹಾಯದಿಂದ ಸೋಂಕಿತರು ರೋಗ ಲಕ್ಷಣಗಳನ್ನು ನಿಭಾಯಿಸಲು ಸಾಧ್ಯವಾಯಿತಾದರೂ, ಇದೇ ವೇಳೆ ರೋಗಿಗಳು ಹಲವಾರು ಅಡ್ಡ ಪರಿಣಾಮಗಳನ್ನೂ ಎದುರಿಸುವಂತಾಯಿತು. ಈ ಪೈಕಿ ಹಲವಾರು ಔಷಧಗಳ ಬಳಕೆ ಹಿಂಪಡೆಯಲಾಯಿತಾದರೂ, ಮತ್ತೆ ಹಲವಾರು ಔಷಧಗಳು ಬೆಳಕಿಗೆ ಬಂದವು. ಕೋವಿಡ್-19 ರೋಗಿಗಳನ್ನು ಉಪಚರಿಸಲು ಲಭ್ಯವಿರುವ ಇಂತಹ ಔಷಧ ಹಾಗೂ ಚಿಕಿತ್ಸೆಗಳತ್ತ ಒಮ್ಮೆ ನೋಡೋಣ:

ಆರಂಭದಲ್ಲಿ ಕೊರೊನಾ ವೈರಸ್ ಬಗ್ಗೆ ಹೆಚ್ಚೇನೂ ತಿಳಿದಿರಲಿಲ್ಲ. ಹೀಗಾಗಿ ವೈದ್ಯರು ಹಾಗೂ ವೈದ್ಯಕೀಯ ವೃತ್ತಿಪರರು ರೋಗಿಗಳ ಆರೋಗ್ಯದ ಮೇಲೆ ದೀರ್ಘಕಾಲೀನ ಅಡ್ಡ ಪರಿಣಾಮ ಬೀರುವ ರೋಗ ಲಕ್ಷಣಗಳಿಗೆ ಚಿಕಿತ್ಸೆ ನೀಡಲು ತಮ್ಮ ಆದ್ಯತೆಯನ್ನು ನಿಗದಿಪಡಿಸಿಕೊಂಡಿದ್ದರು.

ಇದನ್ನೂ ಓದಿ: ಸಡನ್​ ಆಗಿ ಬಿಪಿ ಕಡಿಮೆ ಆದ್ರೆ ಟೆನ್ಷನ್​ ಆಗ್ಬೇಡಿ ಇವುಗಳನ್ನು ತಿನ್ನಿ ಸಾಕು

ಕೊರೊನಾದ ಪ್ರಥಮ ಅಲೆಯ ಸಂದರ್ಭದಲ್ಲಿ ಐವರ್‌ಮೆಕ್ಟಿನ್, ಹೈಡ್ರಾಕ್ಸಿಕ್ಲೋರೋಕ್ವಿನ್ ಹಾಗೂ ಎಚ್‌ಐವಿ ನಿರೋಧಕ ಔಷಧ ಮಿಶ್ರಣಗಳು, ಲೋಪಿನಾವಿರ್/ರಿಟೊನಾವಿರ್ ಔಷಧಗಳ ಬಳಕೆ ವೇಗ ಪಡೆದುಕೊಂಡವಾದರೂ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಈ ಚಿಕಿತ್ಸೆಗಳನ್ನು ನಿಲ್ಲಿಸಿತು. ಹಾಗೂ ತನ್ನ ಚಿಕಿತ್ಸಾ ಶಿಷ್ಟಾಚಾರದ ಪಟ್ಟಿಯಿಂದ ಹಿಂಪಡೆಯಿತು.

ಇನ್ನೊಂದೆಡೆ ಸರ್ಕಾರಿ ಸಮಿತಿಯು ಸಾಧಾರಣದಿಂದ ತೀವ್ರ ಅಸೌಖ್ಯಕ್ಕೆ ಗುರಿಯಾಗಿರುವ ರೋಗಿಗಳಿಗೆ ಚಿಕಿತ್ಸೆ ನೀಡಲು ರೆಮ್‌ಡೆಸಿವಿರ್ ಹಾಗೂ ಟೋಸಿಲಿಜುಮಾಬ್ ಔಷಧಗಳನ್ನು ತನ್ನ ಚಿಕಿತ್ಸಾ ಶಿಷ್ಟಾಚಾರ ಪಟ್ಟಿಯಲ್ಲಿ ಉಳಿಸಿಕೊಂಡಿತು. ಮೊದಲ ಔಷಧವು ವೈರಸ್‌ ದ್ವಿಗುಣಗೊಳ್ಳುವ ಪ್ರಕ್ರಿಯೆ ತಡೆಯುವ ಕೆಲಸ ನಿರ್ವಹಿಸಿದರೆ, ನಂತರದ್ದು ಸೈಟೊಕೈನ್ ಬಿರುಗಾಳಿ ಸಾಧ್ಯತೆ ತಡೆಯುವ ಮೊನಿಕ್ಲೊನಾಲ್ ಪ್ರತಿಕಾಯವಾಗಿತ್ತು.

ಗಂಭೀರವಾದ ಕೊರೊನಾ ಸೋಂಕು ದೇಹದಲ್ಲಿ ದೀರ್ಘಕಾಲದ ಹಾಗೂ ವ್ಯವಸ್ಥಿತ ಉರಿಯೂತ ಸ್ಪಂದನೆ ಉಂಟು ಮಾಡುವ ಸಾಧ್ಯತೆ ಇದೆ. SARS COV-2 ವೈರಸ್‌ನಿಂದ ಉಂಟಾಗುವ ಉರಿಯೂತ ತಗ್ಗಿಸುವಲ್ಲಿ ಸ್ಡಿರಾಯ್ಡ್‌ಗಳು ನೆರವಾಗುತ್ತವೆ. ಸ್ಟಿರಾಯ್ಡ್‌ಗಳು ಯಾವುದೇ ಬಗೆಯಲ್ಲೂ ರೋಗವನ್ನು ಗುಣಪಡಿಸದಿದ್ದರೂ, ಉರಿಯೂತದಿಂದ ದೇಹದಲ್ಲಿ ಉಂಟಾಗುವ ತೀವ್ರ ಸ್ವರೂಪದ ರೋಗಲಕ್ಷಣಗಳಿಂದ ಕೊಂಚ ಮಟ್ಟಿನ ಚೇತರಿಕೆ ನೀಡುತ್ತವೆ.

ಇನ್ಯಾವುದೇ ಆ್ಯಂಟಿ-ವೈರಲ್ ಔಷಧದ ರೀತಿಯೇ ಕೋವಿಡ್-19 ಮಾತ್ರೆ ಕೂಡಾ ವೈರಸ್‌ನ ದ್ವಿಗುಣಗುಳ್ಳುವ ಸಾಮರ್ಥ್ಯವನ್ನು ಶೂನ್ಯಗೊಳಿಸುತ್ತದೆ. ಲಸಿಕೆಗಳು ವೈರಸ್ ದೇಹ ಪ್ರವೇಶಿಸದಂತೆ ತಡೆದರೆ, ಈ ಮಾತ್ರೆಗಳು ಸೋಂಕಿನ ನಂತರ ಹೆಚ್ಚು ಹಾನಿಯಾಗುವುದನ್ನು ತಡೆಗಟ್ಟುತ್ತವೆ.

ಇತ್ತೀಚೆಗೆ ಔಷಧ ತಯಾರಿಕಾ ದೈತ್ಯ ಕಂಪನಿ ಮರ್ಕ್ ಅಭಿವೃದ್ಧಿ ಪಡಿಸಿರುವ ಮಾಲ್‌ನ್ಯುಪಿರಾವಿರ್ ಎಂಬ ಬಾಯಿ ಮೂಲಕ ನುಂಗುವ ಆ್ಯಂಟಿ ವೈರಲ್ ಮಾತ್ರೆಗೆ ಕೇಂದ್ರ ಔಷಧ ಮತ್ತು ಮಾಪಕ ನಿಯಂತ್ರಣ ಸಂಘಟನೆಯು ರೋಗಿಗಳಲ್ಲಿ ಆಮ್ಲಜನಕ ಪ್ರಮಾಣವು ಶೇ. 93ರಷ್ಟಿದ್ದು, ರೋಗ ಉಲ್ಬಣಿಸುವ ಅಪಾಯವಿದ್ದಾಗ 'ತುರ್ತು ಸಂದರ್ಭಗಳ ನಿಯಂತ್ರಿತ ಬಳಕೆ'ಗೆ ಅನುಮೋದನೆ ನೀಡಿದೆ.

ಇತ್ತೀಚೆಗೆ ಈ ಐದು ದಿನ ಅವಧಿಯ, ₹ 1399 ದರದ ಸೌಮ್ಯದಿಂದ ಸಾಧಾರಣ ಸೋಂಕಿಗೆ ಬಳಸಲಾಗುವ ಈ ಮಾತ್ರೆಯು ಭಾರತದಲ್ಲಿ ಬಿಡುಗಡೆಯಾಯಿತು. ಇದೇ ಬಗೆಯ ಮಾತ್ರೆಗಳನ್ನು ಡಾ. ರೆಡ್ಡೀಸ್, ನ್ಯಾಟ್ಕೊ, ಮೈಲಾನ್ ಹಾಗೂ ಹೆಟೆರೊ ಔಷಧ ಕಂಪನಿಗಳು ತಯಾರಿಸುವ ಪ್ರಯತ್ನದಲ್ಲಿವೆ.

ಇದನ್ನೂ ಓದಿ: ದೇಶದಲ್ಲಿ ಕೊರೋನಾ ಉಲ್ಭಣ ಹಿನ್ನೆಲೆ, ಇಂದು ಎಲ್ಲಾ ರಾಜ್ಯಗಳ ಆರೋಗ್ಯ ಸಚಿವರ ಸಭೆ

ಔಷಧ ನಿಯಂತ್ರಕರು ಈ ಬಾಯಿ ಮೂಲಕ ಸೇವಿಸುವ ಆ್ಯಂಟಿವೈರಲ್ ಮಾತ್ರೆಯನ್ನು ಅನುಮೋದಿಸಿದ್ದರೂ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಪ್ರಧಾನ ನಿರ್ದೇಶಕರಾದ ಡಾ. ಬಲರಾಂ ಭಾರ್ಗವ್ ಈ ಮಾತ್ರೆಗಳ ದುರ್ಬಳಕೆಯಿಂದ ಉಂಟಾಗುವ ಅಪಾಯಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಇದರಿಂದ ಬಹು ರೂಪಾಂತರ, ಸ್ನಾಯು ಹಾಗೂ ಮೂಳೆಗಳು ಹಾನಿಗೊಳಗಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ.

ಅಮೆರಿಕ ಮತ್ತು ಬ್ರಿಟನ್‌ನಲ್ಲಿ ಫೈಜರ್ ಕಂಪನಿ ಅಭಿವೃದ್ಧಿ ಪಡಿಸಿರುವ ಮತ್ತೊಂದು ಆ್ಯಂಟಿವೈರಲ್ ಮಾತ್ರೆ ಪ್ಲಾಕ್ಸೋವಿಡ್ ಆಗಿದೆ.
Published by:Sandhya M
First published: