ತುಮಕೂರಿನಲ್ಲಿ ಗ್ರಾಮವೊಂದು ಸೀಲ್​​ಡೌನ್​​: ಆಹಾರ ಸಾಮಗ್ರಿಯಿಲ್ಲದೇ ಹಸಿವಿನಿಂದ ಪರದಾಡುತ್ತಿರುವ ಜನ

ಸೋಂಕಿತರು, ಮತ್ತವರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದವರಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ವಾಸಿಸುವರಿಗೆ ಕಿರಿಕಿರಿ ಮಾತ್ರ ತಪ್ಪಿಲ್ಲ‌. ಇದಕ್ಕೆ ಪ್ರತ್ಯಕ್ಷವಾದ ಉದಾಹರಣೆ ಗುಬ್ಬಿ ತಾಲ್ಲೂಕಿನ ನಿಟ್ಟೂರು ಹೋಬಳಿಯ ಸೋಮಲಾಪುರದ ಜನರ ಪಾಡು ಹೇಳತೀರದಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ತುಮಕೂರು(ಆ.01): ಕೊರೊನಾ ಆರ್ಭಟದಿಂದಾಗಿ ಲಾಕ್​​ಡೌನ್ ಸೀಲ್​​ಡೌನ್ ಎಂಬ ಪದಗಳು ಕೇಳದೆ ಇರೋರು ಯಾರು ಇಲ್ಲ. ಯಾಕಂದ್ರೆ ಕೇಳಲಿಕ್ಕೆ ಮಾತ್ರ ಆ ಪದಗಳು ಚೆನ್ನಾಗಿರುತ್ತದೆ, ನಿಜವಾಗಲು ಅಲ್ಲಿನ ಪರಿಸ್ಥಿತಿ ಎಷ್ಷು ಭೀಕರವಾಗಿರುತ್ತೆ. ಅಂದರೆ ಅಲ್ಲಿ ಅದನ್ನ ಅನುಭವಿಸಿದವರಿಗೆ ಮಾತ್ರ ಗೊತ್ತು. ಇಲ್ಲೊಂದು ಊರಲ್ಲಿ ಆ ರೀತಿಯಲ್ಲೇ ಸಮಸ್ಯೆ ಅನುಭವಿಸುತ್ತಿದ್ದಾರೆ.

ಕೊರೋನಾ ಮಹಮಾರಿ ಅದೆಷ್ಟು ಜನರ ಜೀವನದಲ್ಲಿ ಆಟ ಆಡಿದೆ, ಅದೆಷ್ಟೋ ಜಿವಗಳನ್ನ ಬಲಿ ಪಡೆದಿದೆ ಎನ್ನುವುದು ಗೊತ್ತಿರುವ ವಿಚಾರ. ಸೋಂಕಿತರು, ಮತ್ತವರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದವರಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ವಾಸಿಸುವರಿಗೆ ಕಿರಿಕಿರಿ ಮಾತ್ರ ತಪ್ಪಿಲ್ಲ‌. ಇದಕ್ಕೆ ಪ್ರತ್ಯಕ್ಷವಾದ ಉದಾಹರಣೆ ಗುಬ್ಬಿ ತಾಲ್ಲೂಕಿನ ನಿಟ್ಟೂರು ಹೋಬಳಿಯ ಸೋಮಲಾಪುರದ ಜನರ ಪಾಡು ಹೇಳತೀರದಾಗಿದೆ.

ಹೌದು, ಈ ಗ್ರಾಮದಲ್ಲಿ ಇಬ್ಬರು ಸೋಂಕಿತರು ಪತ್ತೆಯಾದ ಹಿನ್ನೆಲೆ ಗ್ರಾಮದಲ್ಲಿ ಕೆಲವು ಬೀದಿಗಳನ್ನು ಸ್ಥಳೀಯ ಆಡಳಿತ ಸೀಲ್​​ಡೌನ್ ಮಾಡಿದೆ. ಮೊದಲು ಗ್ರಾಮಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಸೀಲ್​​ಡೌನ್ ಏರಿಯಾದಲ್ಲಿ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡುವ ಭರವಸೆ ನೀಡಿದ್ದರು. ಆದಾದ ಕೆಲವು ದಿನಗಳ ಬಳಿಕ ಇತ್ತ ಯಾರು ತಿರುಗಿ ನೊಡಿಲ್ಲ, ತಲೆಯೂ ಕೆಡಿಸಿಕೊಂಡಿಲ್ಲ ಎನ್ನುತ್ತಾರೆ ಗ್ರಾಮಸ್ಥರು.

ಅಗತ್ಯ ವಸ್ತುಗಳು ನೀಡಿಲ್ಲ ಗ್ರಾಮದಲ್ಲಿ ಮಾಡಲಾಗಿರುವ ಸೀಲ್ ಡೌನ್ ತರೆಯಿರಿ ಎಂಬುದು ಗ್ರಾಮಸ್ಥರು ಒತ್ತಾಯವಾಗಿದೆ.

ಇದನ್ನೂ ಓದಿ: ‘ಪಿಎಸ್​​ಐ ಆತ್ಮಹತ್ಯೆ ಕೇಸ್​​​ ಸರ್ಕಾರ ಗಂಭೀರವಾಗಿ ಪರಿಗಣಿಸಿ ತನಿಖೆ ಮಾಡಬೇಕು‘ - ಜೆಡಿಎಸ್​​ ರಾಜ್ಯಾಧ್ಯಕ್ಷ ಎಚ್​​.ಕೆ ಕುಮಾರಸ್ವಾಮಿ

ಒಟ್ಟರೆಯಾಗಿ ಗ್ರಾಮದಲ್ಲಿ ಸೋಂಕಿತರು ಪತ್ತೆಯಾದ ನಂತರ ಸೊಮಲಾಪುರ ಗ್ರಾಮದಲ್ಲಿ ಸೀಲ್ ಡೌನ್ ಮಾಡಲಾಗಿದೆ. ಜನ ಸಾಮಾನ್ಯರು ಹಲವಾರು ತೊಂದರೆಗಳನ್ನು ಅನುಭವಿಸುವಂತಾಗಿದೆ. ಸರ್ಕಾರ ಸೀಲ್​​ಡೌನ್ ಮಾಡಿದ ಪ್ರದೇಶದ ನೀವಾಸಿಗಳಿಗೆ ಕನಿಷ್ಠ ದಿನನಿತ್ಯದ ವಸ್ತುಗಳ ಪೂರೈಕೆಯನ್ನಾದರು ಸರಿಯಾಗಿ ಮಾಡುವಂತಾಗಲಿ ಎಂಬುದು ಗ್ರಾಮಸ್ಥರ ಬೇಡಿಕೆ..
Published by:Ganesh Nachikethu
First published: