ಕೊರೋನಾ ಎಫೆಕ್ಟ್​: ಮದುವೆಯಾಗಲೆಂದು ಜಮ್ಮು-ಕಾಶ್ಮೀರದಿಂದ ಬಂದ ಯೋಧ ಕ್ವಾರಂಟೈನ್​​ ಆದ

ವೃದ್ಧ ತಂದೆ ತಾಯಿ ಸೇರಿದಂತೆ‌ ಸಹೋದರರ ಕುಟುಂಬ ಹಾಗೂ ಚಿಕ್ಕಮಕ್ಕಳನ್ನ ಒಳಗೊಂಡು ಸುಮಾರು 20 ಸದಸ್ಯರು ಸೋಮೇಶ್ ಕುಟುಂಬದಲ್ಲಿದ್ದಾರೆ. ಹೀಗಾಗಿ ಈ ನಿರ್ಧಾರ ಕೈಗೊಂಡಿದ್ದೇನೆ ಅನ್ನೋದು ಯೋಧ‌ ಸೋಮೇಶ್ ಮಾತು.

news18-kannada
Updated:July 16, 2020, 2:52 PM IST
ಕೊರೋನಾ ಎಫೆಕ್ಟ್​: ಮದುವೆಯಾಗಲೆಂದು ಜಮ್ಮು-ಕಾಶ್ಮೀರದಿಂದ ಬಂದ ಯೋಧ ಕ್ವಾರಂಟೈನ್​​ ಆದ
ಸಾಂದರ್ಭಿಕ ಚಿತ್ರ
  • Share this:
ಗದಗ(ಜು.16): ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಜಂತ್ಲಿ ಶಿರೂರು ಗ್ರಾಮದ ಸೋಮೇಶ್ ಪೂಜಾರ ಎನ್ನುವ ಯೋಧ ತಾನು ಕರ್ತವ್ಯ ನಿರ್ವಹಿಸುತ್ತಿದ್ದ ಜಮ್ಮು ಕಾಶ್ಮೀರದಿಂದ ಮದುವೆ ರಜೆಗೆಂದು ಸ್ವಗ್ರಾಮಕ್ಕೆ ಬಂದಿದ್ದಾರೆ. ವಿಮಾನದ ಮೂಲಕ ಬಂದಿರುವ ಯೋಧನಿಗೆ ಕೊವಿಡ್-19 ಟೆಸ್ಟ್ ಮಾಡಲಾಗಿದ್ದು, ಹೋಂ ಕ್ವಾರಂಟೈನ್ ಆಗುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಆದರೆ, ಯೋಧ ಸೋಮೇಶ್ ತನ್ನಿಂದಾಗಿ ತನ್ನ ತನ್ನ ಅವಿಭಕ್ತ ಕುಟುಂಬ ಹಾಗೂ ಗ್ರಾಮಕ್ಕೆ ಯಾವುದೇ ತೊಂದರೆ ಆಗಬಾರದು‌ ಅಂತ ಗ್ರಾಮದಿಂದ 2 ಕಿಲೋಮೀಟರ್ ದೂರದ ತಮ್ಮ ಹೊಲದಲ್ಲಿರೋ ಇಂಜಿನ್ ಮನೆಯಲ್ಲಿ ವಾಸವಾಗಿದ್ದಾರೆ.

ವೃದ್ಧ ತಂದೆ ತಾಯಿ ಸೇರಿದಂತೆ‌ ಸಹೋದರರ ಕುಟುಂಬ ಹಾಗೂ ಚಿಕ್ಕಮಕ್ಕಳನ್ನ ಒಳಗೊಂಡು ಸುಮಾರು 20 ಸದಸ್ಯರು ಸೋಮೇಶ್ ಕುಟುಂಬದಲ್ಲಿದ್ದಾರೆ. ಹೀಗಾಗಿ ಈ ನಿರ್ಧಾರ ಕೈಗೊಂಡಿದ್ದೇನೆ ಅನ್ನೋದು ಯೋಧ‌ ಸೋಮೇಶ್ ಮಾತು.

ಬರೋ ತಿಂಗಳು ಆಗಸ್ಟ್ 13ರಂದು ಯೋಧ ಸೋಮೇಶ್ ಮದುವೆ ನಿಗದಿಯಾಗಿದೆ. ಮದುವೆಗೆಂದು 47 ದಿನಗಳು ರಜೆ ಇದ್ದು ಈಗಾಗಲೇ 07 ದಿ‌ನಗಳು ಕಳೆದಿವೆ. ಕೋವಿಡ್ ಟೆಸ್ಟ್ ವರದಿ ಪಾಸಿಟಿವ್ ಇರಲಿ ಅಥವಾ ನೆಗೆಟಿವ್ ಬರಲಿ ಇನ್ನೂ 07 ದಿನ ಇಲ್ಲಿಯೇ ಇದ್ದು ಕ್ವಾರಂಟೈನ್ ಪೂರ್ಣ ಮಾಡುತ್ತಾರಂತೆ. ಅಲ್ಲಿವರೆಗೂ ಯಾವುದೇ ಮದುವೆ ಕಾರ್ಯ ಕೈಗೊಳ್ಳಲ್ಲ ಅಂತಾರೆ.

ಇನ್ನು ಪ್ರತಿದಿನ ಮನೆಯಿಂದ ತನ್ನ ಸಹೋದರನಿಂದ ಊಟ ತರಿಸಿಕೊಳ್ತಿದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳೋ ಉದ್ದೇಶದಿಂದ ದೂರದಿಂದಲೇ ತನ್ನ ತಟ್ಟೆಯಲ್ಲಿ ಊಟ ಹಾಕಿಸಿಕೊಳ್ಳುತ್ತಾನೆ. ಜಮ್ಮು ಕಾಶ್ಮೀರದ 17-ಮದ್ರಾಸ್ ಬಟಾಲಿಯನ್ ಪಡೆಯಲ್ಲಿರೋ ಸೋಮೇಶ್ ಪಾಕಿಸ್ತಾನದ ಗಡಿ ಮಾಲಾದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಜಮ್ಮುನಿಂದ ಬೆಂಗಳೂರವರೆಗೂ ವಿಮಾನದ ಮೂಲಕ ಆಗಮಿಸಿ ಅಲ್ಲಿಂದ ಸಹೋದರನ ಮೂಲಕ ಬಾಡಿಗೆ ಕಾರಲ್ಲಿ ಗ್ರಾಮಕ್ಕೂ ಎಂಟ್ರಿ ಕೊಡದೇ ನೇರವಾಗಿ ಜಮೀನಿಗೆ ತೆರಳಿ ವಾಸ್ತವ್ಯ ಹೂಡಿದ್ದಾರೆ. ಕಳೆದ ಏಳು‌ ದಿನಗಳಿಂದ ತನ್ನಷ್ಟಕ್ಕೆ ತಾನೇ ದಿಗ್ಭಂದನ ಹಾಕಿಕೊಂಡಿರೋ ಸೋಮೇಶ್ 14 ದಿನಗಳ ಕ್ವಾರಂಟೈನ್ ಸಮಯ ಮುಗಿದ ಮೇಲೆ ಕುಟುಂಬ ಭೇಟಿ ಮಾಡಲಿದ್ದಾರೆ. ಆನಂತರ ಮದುವೆ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದಾನೆ. ಯೋಧನ ಈ ನಡೆ ಗ್ರಾಮಸ್ಥರ ಮೆಚ್ಚುಗೆಗೆ‌ ಕಾರಣವಾಗಿದೆ.

ಇದನ್ನೂ ಓದಿ: ಸ್ಪೀಕರ್ ನೋಟೀಸ್ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಸಚಿನ್ ಪೈಲಟ್; ಮಧ್ಯಾಹ್ನ ವಿಚಾರಣೆಸದ್ಯ ಕೋವಿಡ್-19 ಟೆಸ್ಟ್ ವರದಿಗಾಗಿ ಕುಟುಂಬಸ್ಥರು‌ ಹಾಗೂ ಗ್ರಾಮಸ್ಥರು ಕಾಯುತ್ತಿದ್ದು, ಯೋಧನ ಮದುವೆ ಸಂಭ್ರಮಕ್ಕೆ ಹಾತೊರೆಯಿತ್ತಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿ ಅಂತೂರ ಬೆಂತೂರ‌ ಗ್ರಾಮದ ಯೋಧನೂ ಸಹ ಇದೇ ರೀತಿ ಹೊಲದಲ್ಲಿ ಕ್ವಾರಂಟೈನ್ ಆಗಿ ಗ್ರಾಮದ ರಕ್ಷಣೆಗೆ ಮುಂದಾಗಿದ್ದ. ಇದೀಗ ಇದೇ ಜಿಲ್ಲೆಯ ಮತ್ತೊಬ್ಬ ಯೋಧ ಅಂತಹದೇ ನಿರ್ಣಯ ತೆಗೆದುಕೊಂಡಿರೋದು ಜಿಲ್ಲೆಯ ಜನತೆ ಹೆಮ್ಮೆ ಪಡುವ ವಿಷಯವಾಗಿದೆ. ಏನೇ ಆಗಲಿ ಯೋಧನ ಕೋವಿಡ್ ವರದಿ ನೆಗೆಟಿವ್ ಬಂದು ಕಲ್ಯಾಣ ಕಾರ್ಯ ಯಶಸ್ವಿಯಾಗಲಿ ಅನ್ನೋದು ನಮ್ಮ ಆಶಯ.
Published by: Ganesh Nachikethu
First published: July 16, 2020, 2:51 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading