ಸಕ್ಕರೆನಾಡಿನಲ್ಲಿ ಆಶಾ ಕಾರ್ಯಕರ್ತೆಯರು, ಪೊಲೀಸರ ನೆರವಿಗೆ ನಿಂತ ಸಮಾಜ ಸೇವಕ

ಆಶಾ ಕಾರ್ಯಕರ್ತೆಯರಿಗೆ ಫುಡ್ ಕಿಟ್ ಸೇರಿದಂತೆ ಮಾಸ್ಕ್, ಸ್ಯಾನಿಟೇಸರ್​ ಹಾಗೂ ಛತ್ರಿಗಳು ವಿತರಿಸುವ ಮೂಲಕ ಆಶಾ ಕಾರ್ಯಕರ್ತರಿಗೆ ಆತ್ಮಸ್ಥೈರ್ಯ ತುಂಬಿ ನೆರವಿಗೆ ಬಂದಿದ್ದಾರೆ

ಆಶಾ ಕಾರ್ಯಕರ್ತೆಗೆ ಮಾಸ್ಕ್​​ ವಿತಸಿದ ಸಮಾಜ ಸೇವಕ ಎಂಬಿ ಕಿರಣ್​​

ಆಶಾ ಕಾರ್ಯಕರ್ತೆಗೆ ಮಾಸ್ಕ್​​ ವಿತಸಿದ ಸಮಾಜ ಸೇವಕ ಎಂಬಿ ಕಿರಣ್​​

 • Share this:
  ಮಂಡ್ಯ(ಮೇ 18): ಸಕ್ಕರೆನಾಡು ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲೂಕು ಕೊರೋನಾ ಹಾಟ್ ಸ್ಪಾಟ್ ಆಗುತ್ತಿದೆ. ಈ ಭಾಗದಲ್ಲಿ ಮುಂಬೈ ವಲಸಿಗರಿಂದ ಸೋಂಕು ಹೆಚ್ಚಾಗುತ್ತಿದ್ದರೂ ಕೊರೋನಾ ವಾರಿಯರ್ಸ್ ಗಳು ಧೈರ್ಯದಿಂದ ಕೆಲಸ ಮಾಡುತ್ತಿದ್ದಾರೆ. ಕೊರೋನಾ ವಾರಿಯರ್ಸ್ ಆಗಿ ಕೆಲಸ ಮಾಡುತ್ತಿರುವ ಕೆ.ಆರ್. ಪೇಟೆ ತಾಲೂಕಿನ ಕಿಕ್ಕೇರಿ ಭಾಗದ ಆಶಾ ಕಾರ್ಯಕರ್ತೆಯರು ಮತ್ತು ಪೊಲೀಸರಿಗೆ ಆನಗೊಳದ ಸಮಾಜ ಸೇವಕ ಎಂ.ಬಿ. ಕಿರಣ್ ಎಂಬುವವರು ನೆರವಿಗೆ ನಿಂತಿದ್ದಾರೆ.

  ತಮ್ಮದೇ ಕುಟುಂಬದ ಸದಸ್ಯರ ಹೆಸರಲ್ಲಿ ಸುಬ್ರಮಣ್ಯ ಸೇವಾ ಟ್ರಸ್ಟ್ ವತಿಯಿಂದ ತಮ್ಮ ಭಾಗದ ಆಶಾ ಕಾರ್ಯಕರ್ತೆಯರಿಗೆ ಫುಡ್ ಕಿಟ್ ಸೇರಿದಂತೆ ಮಾಸ್ಕ್, ಸ್ಯಾನಿಟೇಸರ್​ ಹಾಗೂ ಛತ್ರಿಗಳು ವಿತರಿಸುವ ಮೂಲಕ ಆಶಾ ಕಾರ್ಯಕರ್ತರಿಗೆ ಆತ್ಮಸ್ಥೈರ್ಯ ತುಂಬಿ ನೆರವಿಗೆ ಬಂದಿದ್ದಾರೆ

  ಕಿಕ್ಕೇರಿ ಭಾಗದಲ್ಲಿ ಹಗಲಿರುಳು‌ ಕೆಲಸ ಮಾಡುತ್ತಿರುವ ಸುಮಾರು 50 ಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರಿಗೆ ನೆರವು ನೀಡಿದ್ದಾರೆ. ಅಲ್ಲದೇ ಹೋರಾಡುತ್ತಿರುವ ಕಿಕ್ಕೇರಿ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೂ ಕೂಡ ಮಾಸ್ಕ್ ಮತ್ತು‌ ಸ್ಯಾನಿಟೇಸರ್​ ವಿತರಿಸಿ ಆತ್ಮಸ್ಥೈರ್ಯ ತುಂಬಿದ್ದಾರೆ.

  ಇದನ್ನೂ ಓದಿ : McGann Hospital: ಶಿವಮೊಗ್ಗದ ಮೆಗ್ಗಾನ್ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಹೃದಯ ಚಿಕಿತ್ಸೆ ಲಭ್ಯ

  ಈಗಾಗಲೇ ಕೊರೋನಾ ಸಂಕಷ್ಟದಲ್ಲಿ ತಮ್ಮ ಹೋಬಳಿ ವ್ಯಾಪ್ತಿಯಲ್ಲಿ ಕಡು ಬಡವರನ್ನು ಗುರುತಿಸಿ ಈ ಕುಟುಂಬದ ಟ್ರಸ್ಟ್ ನಿಂದ ಫುಡ್ ಕಿಟ್ ವಿತರಿಸಿದ್ದಾರೆ. ಕೊರೋನಾ ಸಂದರ್ಭದಲ್ಲಿ ವಾರಿಯರ್ಸ್ ಆಗಿ ಕೆಲಸ ಮಾಡುತ್ತಿರುವ ಆಶಾ ಕಾರ್ಯಕರ್ತೆಯರು ಮತ್ತು ಪೊಲೀಸರ ಸೇವೆಯನ್ನು ಸಮಾಜ ಸೇವಕ ಎಂ.ಬಿ. ಕಿರಣ್ ಈ ಸಂದರ್ಭದಲ್ಲಿ ಶ್ಲಾಘಿಸಿದ್ದಾರೆ.

   
  First published: