HOME » NEWS » Coronavirus-latest-news » SO MANY BANANA TRESS ARE FALLEN DUE TO HEAVY RAIN AND STORM IN VIJAYAPURA LG

ಭಾರೀ ಗಾಳಿ ಮಳೆಗೆ 30 ಎಕರೆ ಬಾಳೆ ತೋಟ ನಾಶ; ವಿಜಯಪುರ ರೈತರ ಬದುಕಿನ ಮೇಲೆ ಬರೆ ಎಳೆದ ಮಳೆರಾಯ

ಭಾರೀ ಗಾಳಿ ಸಹಿತ ಮಳೆಗೆ 30 ಎಕರೆಯಲ್ಲಿ ಬೆಳೆಯಲಾಗಿದ್ದ ಬಾಳೆ ಗಿಡಗಳು ನೆಲಕ್ಕುರುಳಿ ಅಪಾರ ಹಾನಿ ಸಂಭವಿಸಿದ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದಲ್ಲಿ ನಡೆದಿದೆ.

news18-kannada
Updated:May 26, 2020, 10:28 PM IST
ಭಾರೀ ಗಾಳಿ ಮಳೆಗೆ 30 ಎಕರೆ ಬಾಳೆ ತೋಟ ನಾಶ; ವಿಜಯಪುರ ರೈತರ ಬದುಕಿನ ಮೇಲೆ ಬರೆ ಎಳೆದ ಮಳೆರಾಯ
ಗಾಳಿ ಮಳೆಗೆ ಧರೆಗುರುಳಿರುವ ಬಾಳೆ ಗಿಡಗಳು
  • Share this:
ವಿಜಯಪುರ (ಮೇ 26): ಇದು ನಿಜವಾಗಿಯೂ ರೈತರ ಗಾಯದ ಮೇಲೆ ಬರೆ ಎಳೆದ ಸ್ಟೋರಿ.  ಒಂದೆಡೆ ಕೊರೋನಾ ಕಾಟ ವಿಪರೀತವಾಗಿದ್ದರೆ, ಮತ್ತೊಂದೆಡೆ ಪ್ರಕೃತಿಯೂ ಈ ರೈತರ ಪಾಲಿಗೆ ಶಾಪವಾಗಿದೆ. ಆ ರೈತರೆಲ್ಲ ಇನ್ನೇನು ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದರು.  ಕೊರೋನಾ ಜೊತೆಗೆ ಬಿರು ಬೇಸಿಗೆಯಲ್ಲಿ ತಮ್ಮ ಮನೆಯ ಸದಸ್ಯರಂತೆ ತೋಟದಲ್ಲಿರುವ ಗಿಡಗಳನ್ನು ಜೋಪಾನವಾಗಿ ನೋಡಿಕೊಂಡು ಬಂದಿದ್ದರು.  ಆದರೆ, ಆಗಿದ್ದೆ ಬೇರೆ.  ತಡರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆ ಈ ರೈತರ ಜಂಘಾಬಲವನ್ನು ಅಡಗುವಂತೆ ಮಾಡಿದೆ. 

ಕೊರೋನಾ ಸಮಯದಲ್ಲಿ ಬೇರೆ ಉತ್ಪನ್ನಗಳಿಗೆ ಬೆಲೆ ಸಿಗದೆ ಮೊದಲೇ ರೈತರು ಕಂಗಾಲಾಗಿದ್ದಾರೆ.  ಅದರ ಜೊತೆಗೆ ಈ ಬಿರುಗಾಳಿ ಸಹಿತ ಮಳೆ ಈ ರೈತರ ಬಾಳಿಗೆ ಭಾರಿ ಹೊಡೆತ ನೀಡಿದೆ. ಈ ಘಟನೆ ನಡೆದಿದ್ದು ಬಸವನಾಡು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದ ಸುತ್ತಮುತ್ತ.  ಇಲ್ಲಿನ 14 ಜನ ರೈತರು ತಮ್ಮ 30 ಎಕರೆ ತೋಟದಲ್ಲಿ ಬಡವನಿಗೆ ಬಾಳೆ ಎಂಬಂತೆ ಬಾಳೆಹಣ್ಣು ಬೆಳೆದಿದ್ದರು.  ಭಾರೀ ಗಾಳಿ ಸಹಿತ ಮಳೆಗೆ 30 ಎಕರೆಯಲ್ಲಿ ಬೆಳೆಯಲಾಗಿದ್ದ ಬಾಳೆ ಗಿಡಗಳು ನೆಲಕ್ಕುರುಳಿ ಅಪಾರ ಹಾನಿ ಸಂಭವಿಸಿದ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದಲ್ಲಿ ನಡೆದಿದೆ.

ಹತ್ತಿ ಖರೀದಿಗೂ ಕೊರೋನಾ ಕಾಟ; ಖರೀದಿ ಕೇಂದ್ರ ಹೆಚ್ಚಳಕ್ಕೆ ಆಗ್ರಹ..!

ನಿನ್ನೆ ತಡರಾತ್ರಿ ನಾಲತವಾಟ ಪಟ್ಟಣದದ ನಾಗಬೇನಾಳ, ವಿರೇಶ ನಗರ ಭಾಗದಲ್ಲಿ ಭಾರಿ ಗಾಳಿ ಸಹಿತ ಮಳೆ ಸುರಿದ್ದು, 14 ರೈತರಿಗೆ ಸೇರಿದ 30 ಎಕರೆ ಬಾಳೆಗಿಡಗಳು ಧರೆಗುರುಳಿವೆ.  ಸುಮಾರು 30 ಎಕರೆಯಲ್ಲಿ  ಬೆಳೆದಿದ್ದ ಬಾಳೇಕಾಯಿ ಗಿಡಗಳಿಗೆ ಹಾನಿಯಾಗಿದ್ದು, ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದ ಪರಿಸ್ಥಿತಿ ಎದುರಾಗಿದೆ.  ಈ ರೈತರು ಪ್ರತಿ ಎಕರೆಯಲ್ಲಿ ತಲಾ 1400 ಬಾಳೆಗಿಡ ನೆಟ್ಟಿದ್ದರು.  ಸಾಲ ಸೋಲ ಮಾಡಿ ಪ್ರತಿ ಎಕರೆ ನಿರ್ವಹಣೆಗೆ ರೂ. 1.20 ಲಕ್ಷ ಖರ್ಚು ಮಾಡಿದ್ದರು.  ಪ್ರತಿ ಎಕರೆಗೆ 30 ಟನ್ ಬಾಳೆ ಇಳುವರಿ ನಿರೀಕ್ಷೆ ಇಟ್ಟುಕೊಂಡಿದ್ದರು.  ಆದರೆ, ಇವರ ದುರ್ದೈವಕ್ಕೆ ಕೊರೋನಾ ಜೊತೆಗೆ ಈ ಬಿರುಗಾಳಿ ಸಹಿತ ಮಳೆ ಇವರ ಕನಸನ್ನು ನುಚ್ಚು ನೂರು ಮಾಡಿದೆ.

ಈ ಎಲ್ಲಾ ರೈತರು ನಿರೀಕ್ಷೆ ಮಾಡುತ್ತಿದ್ದ ಸುಮಾರು ರೂ. 54 ಲಕ್ಷ ಆದಾಯವನ್ನು ನುಚ್ಚು ನೂರು ಮಾಡಿದೆ.  ಈಗ ಅಕ್ಷರಶಃ ಕಂಗಾಲಾಗಿರುವ ರೈತರಾದ ಸಂಗನಗೌಡ ಗದ್ದೆಪ್ಪಗೌಡ ಪಾಟೀಲ, ದ್ಯಾಮನಗೌಡ ಗದ್ದೆಪ್ಪಗೌಡ ಪಾಟೀಲ, ಬಸಲಿಂಗಯ್ಯ ನಾಗಯ್ಯ ಮಠ, ಶಂಕ್ರೆಪ್ಪ ಸಂಗಪ್ಪ ಕೊಂಡಗೂಳಿ, ನಿಂಗಪ್ಪ ಹಣಮಪ್ಪ ಗುರಿಕಾರ ಮತ್ತು ಇತರರು ಸರಕಾರ ತಮಗೆ ಸೂಕ್ತ ಪರಿಹಾರ ನೀಡಬೇಕು.  ತಮಗೆ ಪ್ರಕೃತಿ ವಿಕೋಪದಡಿಯಲ್ಲಿ ನೆರವು ನೀಡಬೇಕು ಎಂದು ಆಗ್ರಹಿಸಿದ್ದಾರೆ.
First published: May 26, 2020, 10:25 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading