ಜೀವನದಲ್ಲಿ ಕೊರೋನಾ ತಂದೊಡ್ಡಿರುವ ಸವಾಲುಗಳನ್ನು ಎದುರಿಸಿ ಬದುಕಬೇಕಾಗಿದೆ. ಕಳೆದುಕೊಂಡವರ ನೋವಿನ ನಡುವೆ ಇರುವವರ ಉಳಿವಿಗಾಗಿ ಸೆಣಸಬೇಕಾಗಿದೆ. ಇಂತಹ ಭಯಾನಕ ಪರಿಸ್ಥಿತಿಯನ್ನು ಇಡೀ ಪ್ರಪಂಚವೇ ಎದುರಿಸುತ್ತಿದೆ. ಅದರಲ್ಲೂ ಭಾರತದ ಕರುಳು ಹಿಂಡುವ ರೋಧನೆಗೆ ಬೇರೆ ಬೇರೆ ದೇಶಗಳ ಜನರು, ಸೆಲೆಬ್ರಿಟಿಗಳು ಮರುಗುತ್ತಾ, ಜಾಗೃತಿ ಮೂಡಿಸುತ್ತಾ, ಸಹಾಯಹಸ್ತವನ್ನು ಚಾಚುತ್ತಿದ್ದಾರೆ. ಸಂಗೀತಗಾರರು, ನಟ-ನಟಿಯರು, ಕ್ರಿಕೆಟಿಗರು ಹೀಗೆ ಪ್ರತಿಯೊಬ್ಬರಿಗೂ ಸುರಕ್ಷಿತವಾಗಿರುವಂತೆ, ಮನೆಯಲ್ಲೇ ಇರುವಂತೆ ಕೇಳಿಕೊಳ್ಳುತ್ತಿದ್ದಾರೆ. ಇನ್ನು ಕೆಲವರು ಕೊರೋನಾವನ್ನು ಹೇಗೆ ಮೆಟ್ಟಿ ನಿಲ್ಲುವುದು ಎಂದು ಸ್ವ ಅನುಭವವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾ ಇತರೆ ಜೀವಗಳ ಕಾಳಜಿ ವಹಿಸುತ್ತಿರುವುದರ ಜೊತೆಗೆ ಆತ್ಮವಿಶ್ವಾಸದಿಂದ ಹೋರಾಡಬೇಕಾಗಿದೆ ಎಂಬ ಸಂದೇಶ ರವಾನಿಸುತ್ತಿದ್ದಾರೆ.
ಬಾಲಿವುಡ್ ನಟ ಸೋನು ಸೂದ್ ಸಾಕಷ್ಟು ಜನರ ಬದುಕಿಗೆ ದೈವ ಸ್ವರೂಪಿಯಾಗಿದ್ದಾರೆ. ಪ್ರಿಯಾಂಕಾ ಚೋಪ್ರಾ ಕೋವಿಡ್ ಸಂತ್ರಸ್ತರಿಗಾಗಿ ತಮ್ಮದೇ ಫೌಂಡೇಶನ್ ಮೂಲಕ ಹಣ ಸಂಗ್ರಹಿಸುತ್ತಿದ್ದಾರೆ, ಕೆಲವು ಕ್ರಿಕೆಟಿಗರು ಕೋಟಿಗಟ್ಟಲೆ ಹಣವನ್ನು ನೀಡಿದ್ದಾರೆ. ಹೀಗೆ ಪ್ರತಿಯೊಬ್ಬರು ತಮ್ಮದೇ ಹಾದಿಯಲ್ಲಿ ಸಹಾಯಕ್ಕೆ ನಿಂತಿದ್ದು, ಸಂಗೀತ ಮಾಂತ್ರಿಕ ಸೋನು ನಿಗಮ್ ಕೂಡ ತಮ್ಮ ಸಂಗೀತದ ಮೂಲಕ ಕೋವಿಡ್ ಕಠಿಣ ಪರಿಸ್ಥಿತಿಯನ್ನು ಸಕಾರಾತ್ಮಕವಾಗಿ ಎದುರಿಸುವ ಪರಿಯನ್ನು ಹಂಚುತ್ತಿದ್ದಾರೆ.
View this post on Instagram
View this post on Instagram
ಇದನ್ನೂ ಓದಿ: Kannada Bigg Boss 8: ಕೊರೋನಾ ವಾರಿಯರ್ಸ್ ಆಗಿ ಸೇವೆ ಮಾಡುತ್ತೇವೆ ಎಂದ ಬಿಗ್ ಬಾಸ್ 8ರ ಸ್ಪರ್ಧಿಗಳು..!
ಮುಂಬೈನ ಜುಹೂ ಎಂಬಲ್ಲಿ ರಕ್ತದಾನ ಶಿಬಿರ ಉದ್ಘಾಟಿಸಿದರು ಮತ್ತು ಸುಮಾರು 250 ಆಕ್ಸಿಜನ್ ಸಿಲಿಂಡರ್‌ಗಳನ್ನು ನೀಡಿದರು. ಅಲ್ಲದೇ ತಾವು ರಕ್ತದಾನ ಮಾಡುತ್ತಿರುವ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡರು. ಇದೇ ವೇಳೆ ಕೊರೋನಾ ವ್ಯಾಕ್ಸಿನೇಷನ್ ಮಾಡಿಕೊಳ್ಳುವ ಮೊದಲು ರಕ್ತದಾನ ಮಾಡಿ. ಕೋವಿಡ್ ವೇಳೆ ರಕ್ತದ ಕೊರತೆ ಎದುರಾಗದಂತೆ ನೋಡಿಕೊಳ್ಳೋಣ ಎಂಬ ಸಂದೇಶ ಸಾರಿದರು. ಆದರೆ ರಕ್ತದಾನ ಮಾಡುವಾಗ ಸೋನು ಅವರು ಮಾಸ್ಕ್ ಧರಿಸಿರಲಿಲ್ಲ ಎಂಬ ವಿಷಯ ಟೀಕೆಗೆ ಗುರಿಯಾಗಿತ್ತು.
ಹಿಂದಿನ ಜನ್ಮದಲ್ಲಿ ಕನ್ನಡಿಗನಾಗಿದ್ದೆ ಎಂದು ಕನ್ನಡಿಗರ ಮೆಚ್ಚುಗೆಗೆ ಪಾತ್ರರಾಗಿದ್ದ ಗಾಯಕ
ನಾನು ಹಿಂದಿನ ಜನ್ಮದಲ್ಲಿ ನಾನು ಕನ್ನಡಿಗನಾಗಿದ್ದೆ ಅನ್ನೋ ಬಲವಾದ ನಂಬಿಕೆ ನನ್ನದು ಎನ್ನುವ ಮೂಲಕ ಸೋನು ನಿಗಮ್ ಕನ್ನಡಿಗರ ಮನ ಗೆದ್ದಿದ್ದರು. 12ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭಕ್ಕೆ ಅತಿಥಿಯಾಗಿ ಬಂದಿದ್ದ ಸೋನು ನಿಗಮ್ ವೇದಿಕೆ ಮೇಲೆ ಕನ್ನಡ ಹಾಡನ್ನು ಹಾಡುವ ಮೂಲಕ ಕಾರ್ಯಕ್ರಮಕ್ಕೆ ಕಳೆ ಕಟ್ಟಿದರು. ಜೊತೆಗೆ ತಾನು ಹಿಂದಿನ ಜನ್ಮದಲ್ಲಿ ಕನ್ನಡಿಗನಾಗಿದ್ದೆ ಇದಕ್ಕೆ ಎಲ್ಲೇ ಹೋದರೂ ಕನ್ನಡದ ಹಾಡುಗಳನ್ನು ಹಾಡುತ್ತೇನೆ ಎಂದಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ