ಕೊರೋನಾ ಭೀತಿ: ಸರಳವಾಗಿ ಮಗಳ ಮದುವೆ ಮಾಡಿ ಮಾದರಿಯಾದ ಮಾಜಿ ಶಾಸಕ

ಮಾಜಿ ಶಾಸಕ ರಮೇಶ ಭೂಸನೂರ ಅವರು ಅದ್ಧೂರಿ ತಯಾರಿ ನಡೆಸಿದ್ದ ತಮ್ಮ ಮಗಳ ಮದುವೆಯನ್ನು ಸಿಂಪಲ್ಲಾಗಿ ಮಾಡುವ ಮೂಲಕ ಇತರರಿಗೂ ಮಾದರಿಯಾಗಿದ್ದಾರೆ

ಮಾಜಿ ಶಾಸಕ ರಮೇಶ ಭೂಸನೂರ ಮಗಳು ಹಾಗೂ ಅಳಿಯ

ಮಾಜಿ ಶಾಸಕ ರಮೇಶ ಭೂಸನೂರ ಮಗಳು ಹಾಗೂ ಅಳಿಯ

  • Share this:
ವಿಜಯಪುರ(ಮಾ. 20): ಪೋಷಕರಿಗೆ ತಮ್ಮ ಮಕ್ಕಳ ಮದುವೆ ಎಂದರೆ ಸಾಕು ಸಂಭ್ರಮ ಮತ್ತು ಸಡಗರ ಮನೆ ಮಾಡಿರುತ್ತೆ. ಅದರಲ್ಲಿಯೂ ಜನಪ್ರತಿನಿಧಿಗಳಾದರಂತೂ ತಮ್ಮ ಮಕ್ಕಳ ಮದುವೆಯನ್ನು ಅವರದೇ ಆದ ಕನಸಿನಂತೆ ಮಾಡಬೇಕು ಎಂದು ಸಾಕಷ್ಟು ಮುಂಚಿತವಾಗಿಯೇ ತಯಾರಿ ಆರಂಭಿಸಿರುತ್ತಾರೆ. ಇಂಥದ್ದೆ ಒಂದು ಮದುವೆಗೆ ಆ ಮಾಜಿ ಶಾಸಕರು ಮುಂದಾಗಿದ್ದರು.

ಮಗಳ ಮದುವೆಗಾಗಿ 10 ಸಾವಿರ ಆಮಂತ್ರಣ ಪತ್ರಿಕೆಗಳನ್ನು ಹಂಚಿದ್ದರು. ಇನ್ನೇನು ಮದುವೆ ದಿನ ಬಂದೇ ಬಿಟ್ಟಿತು ಎನ್ನುವಷ್ಟರಲ್ಲಿ ವಿಶ್ವದಾದ್ಯಂತ ಸದ್ದು ಮಾಡಿರುವ ಕೊರೋನಾ ಭಾರತ ಅಷ್ಟೇ ಅಲ್ಲ, ಕರ್ನಾಟಕಕ್ಕೂ ಕಾಲಿಟ್ಟಿತ್ತು. ಅದರಲ್ಲೂ ಕರ್ನಾಟಕದಲ್ಲಿಯೇ ಕೊರೋನಾ ಸೋಂಕಿತ ವ್ಯಕ್ತಿ ಸಾವಿನ ಮೊದಲ ಪ್ರಕರಣ ರಾಜ್ಯದಲ್ಲಿಯೇ ಆಗಿದ್ದು, ಇಡೀ ಕನ್ನಡಿಗರಲ್ಲಿ ಅಷ್ಟೇ ಅಲ್ಲ, ಎಲ್ಲ ಭಾರತೀಯರಲ್ಲೂ ಆತಂಕಕ್ಕೆ ಕಾರಣವಾಗಿದೆ.

ಈ ಹಿನ್ನೆಲೆಯಲ್ಲಿ ಸಿಎಂ ರಾಜ್ಯಾದ್ಯಂತ ಕೊರೋನಾ ಎಮರ್ಜೆನ್ಸಿ ಘೋಷಣೆ ಮಾಡಿ ಮೊದಲಿಗೆ ಒಂದು ವಾರ ರಾಜ್ಯಾದ್ಯಂತ ಜನಸಂದಣಿ ಸೇರದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಇದರ ಬಿಸಿ ಈಗ ಮದುವೆಗಳಿಗೂ ತಟ್ಟಿದೆ.  ಆದರೆ, ಮದುವೆ ತಯಾರಿ ಮಾಡಿಕೊಂಡಿರುವವರಿಗೆ ಇದು ಸಾಕಷ್ಟು ಕಿರಿಕಿಯನ್ನೂ ಉಂಟು ಮಾಡಿದೆ.

ಇದೇ ರೀತಿ ತಮ್ಮ ಮಗಳ ಮದುವೆಯನ್ನು ನಿನ್ನೆ ಮಾ.19ರಂದು ವಿಜಯಪುರ ಜಿಲ್ಲೆಯ ಸಿಂದಗಿ ಬಿಜೆಪಿ ಮಾಜಿ ಶಾಸಕ ರಮೇಶ ಭೂಸನೂರ ಅವರು ಅದ್ಧೂರಿ ತಯಾರಿ ನಡೆಸಿದ್ದ ಮದುವೆಯನ್ನು ಸಿಂಪಲ್ಲಾಗಿ ಮಾಡುವ ಮೂಲಕ ಇತರರಿಗೂ ಮಾದರಿಯಾಗಿದ್ದಾರೆ.

ಮಾಜಿ ಶಾಸಕ ಅದರಲ್ಲಿಯೂ ಎರಡು ಬಾರಿ ಬಿಜೆಪಿಯಿಂದ ಆಯ್ಕೆಯಾಗಿದ್ದ ರಮೇಶ ಭೂಸನೂರ ಅವರಿಗೆ ಅಪಾರ ಸಂಖ್ಯೆ ಅಭಿಮಾನಿಗಳಿದ್ದಾರೆ.  ಅವರೆಲ್ಲರೂ ಈ ಮದುವೆಗೆ ಬಂದು ದಂಪತಿಯನ್ನು ಹರಸಲು ಮುಂದಾಗಿದ್ದರು. ಆದರೆ, ಯಾವಾಗ ಸರಕಾರ ಜನ ಸೇರುವುದನ್ನು ನಿಷೇಧಿಸಿತೋ ಆಗಲೇ ಎಚ್ಚೆತ್ತುಕೊಂಡ ರಮೇಶ ಭೂಸನೂರ ತಮ್ಮ ಮಗಳ ಮದುವೆಯನ್ನುಸಿಂಪಲ್ಲಾಗಿ ಮಾಡುವೆ. ಯಾರೂ ಅಭಿಮಾನಿಗಳು ಮತ್ತು ಬೆಂಬಲಿಗರು ಮದುವೆಗೆ ಬರಬೇಡಿ. ಸಂಬಂಧಿಕರು ಸೇರಿದಂತೆ ಕೇವಲ 200 ಜನ ಮಾತ್ರ ಸೇರಿಸಿ ಕಾರ್ಯಕ್ರಮವನ್ನು ಸಂಕ್ಷಿಪ್ತವಾಗಿ ಮಾಡಿ ಮುಗಿಸುವೆ ಎಂದು ಮನವಿ ಮಾಡಿದ್ದರು.

ಅದರಂತೆ  ನಿನ್ನೆ ರಾತ್ರಿ ಮದುವೆ ಮುನ್ನಾದಿನದ ಶಾಸ್ತ್ರ ಮುಗಿಸಿ ಬೆಳಿಗ್ಗೆ ಬೇಗನೇ ದೈವದ ಅಕ್ಷತೆ ಕಾರ್ಯಕ್ರಮದಲ್ಲಿಯೇ ಮಗಳ ಮದುವೆ ಮಾಡಿ ಮದುವೆ ಮಂಟಪದಿಂದ ನಿರ್ಗಮಿಸಿದ್ದಾರೆ. ಈಗ ಕೊರೊನಾ ಎಮರ್ಜೆನ್ಸಿ ಇರುವ ಹಿನ್ನೆಲೆಯಲ್ಲಿ ಮುಂದೊಂದು ದಿನ ಅದ್ದೂರಿಯಾಗಿ ಮದುವೆ ಮಾಡಬೇಕೆಂದೆರೆ ಇವರಿಗೆ ಮತ್ತೋಂದು ಸಮಸ್ಯೆ ಎದುರಾಗಿತ್ತು.

ಇದನ್ನೂ ಓದಿ : ಫಿಲಿಫೈನ್ಸ್ ನಲ್ಲಿ ಸಂಕಷ್ಟಕ್ಕೆ ಸಿಲುಕಿದ ಕೊಳ್ಳೇಗಾಲದ ಯುವತಿ; ನೆರವಿಗೆ ಧಾವಿಸಲು ಪ್ರಧಾನಿಗೆ ಮನವಿ

ಇವರ ತಾಯಿ ತೀವ್ರ ಅನಾರೋಗ್ಯಪೀಡಿತರಾಗಿದ್ದು, ಆಸ್ಪತ್ರೆಯಲ್ಲಿ ವೆಂಟಿಲೇಟರ್ ನಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಆಸೆಯಂತೆ ನಿಗದಿತ ದಿನದಂತೆ ಕೇವಲ ಆಪ್ತೇಷ್ಟರ ಸಮ್ಮುಖದಲ್ಲಿ ಸರಳವಾಗಿ ಮಗಳ ಮದುವೆ ಮಾಡುವ ಮೂಲಕ ತಾವು ಜನಪ್ರತಿನಿಧಿಯಾದರೂ ಮೊದಲು ಸಾಮಾನ್ಯ ನಾಗರಿಕ ಮತ್ತು ಪ್ರಜ್ಞಾವಂತ ಪ್ರಜೆ ಎಂಬುದನ್ನು ಸಾಬೀತು ಪಡಿಸಿದ್ದಾರೆ.  ಮಾಜಿ ಶಾಸಕ ಸರಳತೆಗೆ ವಿಜಯಪುರ ಜಿಲ್ಲೆಯ ಜನತೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
First published: