• Home
 • »
 • News
 • »
 • coronavirus-latest-news
 • »
 • ಲಾಕ್​​ಡೌನ್ ಹಿನ್ನೆಲೆ: ರಾತ್ರಿ ಸರಳವಾಗಿ ನೆರವೇರಿದ​​​ ಬೆಂಗಳೂರು ಹಸಿಕರಗ ಮಹೋತ್ಸವ

ಲಾಕ್​​ಡೌನ್ ಹಿನ್ನೆಲೆ: ರಾತ್ರಿ ಸರಳವಾಗಿ ನೆರವೇರಿದ​​​ ಬೆಂಗಳೂರು ಹಸಿಕರಗ ಮಹೋತ್ಸವ

ಕಳೆದ ವರ್ಷ ನಡೆದ ಬೆಂಗಳೂರು ಕರಗ

ಕಳೆದ ವರ್ಷ ನಡೆದ ಬೆಂಗಳೂರು ಕರಗ

ಇಂದು ಮಧ್ಯರಾತ್ರಿ 12 ಗಂಟೆ ಬಳಿಕ ಪೊಂಗಲು ಸೇವೆ ನಡೆಯುತ್ತದೆ. ನಾಳೆ ನಡೆಯುವ ಹೂವಿನ ಕರಗಕ್ಕೆ 5 ಮಂದಿಗೆ ಮಾತ್ರ ಅವಕಾಶ ನೀಡಲಾಗಿದೆ. ಕರಗ ಹೊರುವ ಜ್ಞಾನೇಂದ್ರ ಸೇರಿ ಐದು ಜನರು ಮಾತ್ರ ಈ ಉತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.

 • Share this:

  ಬೆಂಗಳೂರು(ಏ.04): ಪ್ರತಿವರ್ಷ ವಿಜೃಂಭಣೆಯಿಂದ ನಡೆಯುತ್ತಿದ್ದ ಬೆಂಗಳೂರು ಕರಗ ಮಹೋತ್ಸವವನ್ನು ಈ ಬಾರಿ ಲಾಕ್​ಡೌನ್​ ಇರುವ ಹಿನ್ನೆಲೆ, ಸರಳವಾಗಿ ಆಚರಿಸಲಾಗುತ್ತಿದೆ. ಕಳೆದ ರಾತ್ರಿ ಬೆಂಗಳೂರಿನ ಧರ್ಮರಾಯ ದೇವಸ್ಥಾನದಲ್ಲಿ ಹಸಿ ಕರಗ ಆಚರಣೆ ಸಾಂಪ್ರಾದಾಯಿಕವಾಗಿ ಮತ್ತು ಸರಳವಾಗಿ ನಡೆಯಿತು. ನಾಳೆ ಮಧ್ಯರಾತ್ರಿ ಐತಿಹಾಸಿಕ ಹೂವಿನ ಕರಗ ಶಕ್ತ್ಯೋತ್ಸವ ನಡೆಯಲಿದೆ.

  ಹಸಿಕರಗ ಆಚರಣೆಯಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಮುಖ್ಯಸ್ಥರು, ಕರಗದ ಪೂಜಾರಿ, ನಾಲ್ಕು ಜನ ವೀರಕುಮಾರರು ಮಾತ್ರ ಭಾಗಿಯಾಗಿದ್ದರು. ದೇವಸ್ಥಾನದ ಪ್ರಾಂಗಣದಲ್ಲೆ ಪ್ರದಕ್ಷಿಣೆ ಹಾಕಿ ಪೂಜೆ ನೇರವೇರಿಸಿದರು.  ಹಸಿಕರಗ ಆಚರಣೆಯಲ್ಲೂ ಕರಗ ಪೂಜಾರಿ ಮತ್ತು ವೀರಕುಮಾರರು ಸಾಮಾಜಿಕ ಅಂತರ ಕಾಯ್ದುಕೊಂಡರು.ಕರಗ ಮಹೋತ್ಸವಕ್ಕೂ ಎರಡು ದಿನ ಹಿಂದೆ ಹಸಿ ಕರಗ ನಡೆಯುತ್ತದೆ.

  ಕೊರೋನಾ ಸೋಂಕಿತ ಬ್ರಿಟನ್​​ ಪ್ರಧಾನಿ ಬೋರಿಸ್​ ಆರೋಗ್ಯ ಸ್ಥಿತಿ ಗಂಭೀರ; ಐಸಿಯುಗೆ ಶಿಫ್ಟ್​

  ಕೊರೋನಾ ಭೀತಿ ಹೆಚ್ಚಾಗಿರುವ ಕಾರಣಕ್ಕೆ ಲಾಕ್​ಡೌನ್​ ಆದೇಶ ಜಾರಿಯಾಗಿದೆ. ಹೀಗಾಗಿ ಬೆಂಗಳೂರು ಕರಗ ಮಹೋತ್ಸವ ನಡೆಸಲು ರಾಜ್ಯ ಸರ್ಕಾರವು ಷರತ್ತುಬದ್ಧ ಅನುಮತಿ ನೀಡಿದೆ. ಕರಗ ಆಚರಣೆ ವೇಳೆ ಭಕ್ತ ಸಮೂಹ ಸೇರದಂತೆ ಸಂಘಟಕರು ಮುನ್ನೆಚ್ಚರಿಕೆ ವಹಿಸಿದ್ದಾರೆ.

  ಇಂದು ಮಧ್ಯರಾತ್ರಿ 12 ಗಂಟೆ ಬಳಿಕ ಪೊಂಗಲು ಸೇವೆ ನಡೆಯುತ್ತದೆ. ನಾಳೆ ನಡೆಯುವ ಹೂವಿನ ಕರಗಕ್ಕೆ 5 ಮಂದಿಗೆ ಮಾತ್ರ ಅವಕಾಶ ನೀಡಲಾಗಿದೆ. ಕರಗ ಹೊರುವ ಜ್ಞಾನೇಂದ್ರ ಸೇರಿ ಐದು ಜನರು ಮಾತ್ರ ಈ ಉತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.

  ಧರ್ಮರಾಯನ ದೇಗುಲದಲ್ಲೇ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ನಾಳೆ ಕರಗ ಪ್ರದಕ್ಷಿಣೆ ದೇವಸ್ಥಾನದ ಆವರಣದಲ್ಲೇ ನಡೆಯಲಿದೆ‌. ಯಾವ ಭಕ್ತಾಧಿಗಳಿಗೂ ದೇವಾಲಯದ ಆವರಣಕ್ಕೆ ಪ್ರವೇಶವಿಲ್ಲ. ದೇವಾಲಯದ ಆಡಳಿತ ಮಂಡಳಿ ರಾತ್ರಿ ಹಸಿಕರಗ ಮುಗಿಸಿ ದೇವಸ್ಥಾನಕ್ಕೆ ಬೀಗ ಹಾಕಿದೆ. ಹೆಚ್ಚು ಜನ ಸೇರಿದಂತೆ ಪೊಲೀಸರು ಕಣ್ಗಾವಲು ಇಟ್ಟಿದ್ದಾರೆ.

  First published: