ಸಾಂಕೇತಿಕವಾಗಿ ಬೆಂಗಳೂರು ಕರಗ ಆಚರಣೆಗೆ ಸರ್ಕಾರದ ಹಸಿರು ನಿಶಾನೆ

ಬೆಂಗಳೂರು ಶಾಸಕರ, ಸಚಿವರ ಸಭೆಯಲ್ಲಿ ಬೆಂಗಳೂರಿನ ಕರಗ ಸಂಪ್ರದಾಯದ ಮುರಿಯಬಾರದು ಎನ್ನುವ ಕಾರಣಕ್ಕೆ ರಾಜ್ಯ ಸರ್ಕಾರ ಈ ತೀರ್ಮಾನ ಕೈಕೊಂಡಿದೆ.

 ಸಂಗ್ರಹ ಚಿತ್ರ

ಸಂಗ್ರಹ ಚಿತ್ರ

 • Share this:
  ಬೆಂಗಳೂರು (ಏ.04) : ಕೊರೋನಾ ನಿಯಂತ್ರಣಕ್ಕಾಗಿ ದೇಶಾದ್ಯಂತ್​ ಲಾಕ್​ ಡೌನ್​​ ಮಾಡಲಾಗಿದೆ. ಆದರೆ, ಬೆಂಗಳೂರು ಕರಗವನ್ನು ಸಂಪ್ರದಾಯಕವಾಗಿ ಮುರಿಬಾರದು ಎನ್ನುವ ಕಾರಣಕ್ಕೆ ರಾಜ್ಯ ಸರ್ಕಾರ ಸಾಂಕೇತಿಕವಾಗಿ ಕರಗ ಆಚರಣೆ ಮಾಡಲು ಅವಕಾಶ ನೀಡಿದೆ. 

  ಇಂದು ವಿಧಾನ ಸೌಧದಲ್ಲಿ ಸಚಿವರಾದ ಆರ್.ಅಶೋಕ್ ಹಾಗೂ ಸೋಮಣ್ಣ ಸೇರಿದಂತೆ ಬೆಂಗಳೂರು ಶಾಸಕರ, ಸಚಿವರ ಸಭೆಯಲ್ಲಿ ರಾಜ್ಯ ಸರ್ಕಾರ ಈ ತೀರ್ಮಾನ ಕೈಕೊಂಡಿದ್ದು, ಈ ಬಗ್ಗೆ ಸಿಎಂ ಬಿಎಸ್ ಯಡಿಯೂರಪ್ಪ ಮಾಹಿತಿ ನೀಡಿದ್ದು, ರಾಜ್ಯದಲ್ಲಿ ಕೊರೋನಾ ಸೋಂಕಿನ ಭೀತಿಯಿದೆ. ಹೆಚ್ಚು ಜನರು ಸೇರುವುದಕ್ಕೆ ಅವಕಾಶವಿಲ್ಲ. ಹೆಚ್ಚು ಜನರು ಸೇರದಂತೆ ಆಚರಿಸುವುದಾದರೇ ನಮ್ಮ ಅಭ್ಯಂತರವಿಲ್ಲ. ಸರ್ಕಾರದಿಂದ ಯಾವ ಅಡ್ಡಿಯೂ ಇಲ್ಲ ಎಂದರು

  ಕಾಂಗ್ರೆಸ್ ಮುಖಂಡ ಪಿ ಆರ್​ ರಮೇಶ್ ಅವರು, ಸಿಎಂ ಯಡಿಯೂರಪ್ಪನವರಿಗೆ ಯಾವ ಕಾಲದಿಂದಲೂ ಬೆಂಗಳೂರು ಕರಗವನ್ನು ನಿಲ್ಲಿಸಿಲ್ಲ. ಟಿಪ್ಪು ಸುಲ್ತಾನ್ ಕಾಲದಿಂದಲೂ ಆಚರಣೆ ಮಾಡಲಾಗುತ್ತದೆ. ಹಿಂದೆ ಪ್ಲೇಗ್​​ ರೋಗ ಬಂದಾಗಲೂ ಕೂಡ ಆಚರಣೆ ಮಾಡಲಾಗಿತ್ತು. ಹಾಗಾಗಿ ಕರಗಕ್ಕೆ ಅವಕಾಶ ನೀಡಿ ಎಂದು ಮನವಿ ಮಾಡಿದ್ದರು.

  ಇದನ್ನೂ ಓದಿ : ಚನ್ನರಾಯಪಟ್ಟಣದಲ್ಲಿ ಲಾಠಿ ಹಿಡಿದು ರಸ್ತೆಯಲ್ಲಿ ನಿಂತ ಶಾಸಕ; ಗರಿಗೆದರಿದ ಪೊಲೀಸರ ಉತ್ಸಾಹ

  ಈ ಮನವಿಯನ್ನು ಒಪ್ಪಿರುವ ಸಿಎಂ ಯಡಿಯೂರಪ್ಪ, ಕರಗ ಸಂಪ್ರದಾಯವನ್ನು ಮುರಿಯುವುದು ಬೇಡ, ಸರಳವಾಗಿ ಬೆಂಗಳೂರು ಕರಗ ಆಚರಿಸಿ ನಾಲ್ಕೈದು ಜನರಿಗೆ ಮಾತ್ರವೇ ಅವಕಾಶ ನೀಡಲಾಗುತ್ತದೆ. ಹೀಗಾಗಿ ಹಲವು ದಿನಗಳಿಂದ ಅನುಮಾನಕ್ಕೆ ಈಗ ಸರ್ಕಾರ ಬೆಂಗಳೂರು ಕರಗ ಆಚರಣೆಗೆ ಹಸಿರು ನಿಶಾನೆ ತೋರಿದೆ.

  ಸಚಿವರ ಹೊಂದಾಣಿಕೆಯ ಬಗ್ಗೆ ವಿಪಕ್ಷಗಳ ಬೇಸರ

  ಸಿಎಂ ನೇತೃತ್ವದ ಬೆಂಗಳೂರು ಶಾಸಕರ, ಸಚಿವರ ಸಭೆಯಲ್ಲಿ ಸಚಿವರಾದ ರಾಮುಲು ಹಾಗೂ ಸುಧಾಕರ್ ನಡುವೆ ಹೊಂದಾಣಿಕೆ ಇರದ ವಿಚಾರ ಪ್ರಸ್ತಾಪವಾಯ್ತು. ಇಬ್ಬರು ಸಚಿವರ ನಡುವೆ ಹೊಂದಾಣಿಕೆ ಇರದಿರುವುದರ ಬಗ್ಗೆ ವಿಪಕ್ಷಗಳು ಬೇಸರ ವ್ಯಕ್ತಪಡಿಸಿದವು.
  First published: