• Home
  • »
  • News
  • »
  • coronavirus-latest-news
  • »
  • ಸಂಡೇ ಲಾಕ್​ಡೌನ್​ಗೆ ಏಷ್ಯಾ ನಂ. 1 ಸಿಲ್ಕ್ ಮಾರ್ಕೆಟ್ ಸ್ತಬ್ದ; ಎಲ್ಲ ದಿನವೂ ರೇಷ್ಮೆ ಮಾರುಕಟ್ಟೆ ತೆರೆದಿರುವಂತೆ ಬೆಳೆಗಾರರ ಮನವಿ

ಸಂಡೇ ಲಾಕ್​ಡೌನ್​ಗೆ ಏಷ್ಯಾ ನಂ. 1 ಸಿಲ್ಕ್ ಮಾರ್ಕೆಟ್ ಸ್ತಬ್ದ; ಎಲ್ಲ ದಿನವೂ ರೇಷ್ಮೆ ಮಾರುಕಟ್ಟೆ ತೆರೆದಿರುವಂತೆ ಬೆಳೆಗಾರರ ಮನವಿ

ರಾಮನಗರದ ರೇಷ್ಮೆ ಮಾರುಕಟ್ಟೆ

ರಾಮನಗರದ ರೇಷ್ಮೆ ಮಾರುಕಟ್ಟೆ

ಬೇರೆ ಬೆಳೆಯ ರೀತಿ ರೇಷ್ಮೆಯನ್ನ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಸರಿಯಾದ ಸಮಯಕ್ಕೆ ಮಾರಾಟ ಮಾಡದಿದ್ದರೆ ಗೂಡಿನ ಗುಣಮಟ್ಟ ಹಾಳಾಗುತ್ತದೆ ಎಂಬುದು ರೇಷ್ಮೆ ಬೆಳೆಗಾರರ ಅಭಿಪ್ರಾಯ.

  • Share this:

ರಾಮನಗರ(ಮೇ 25): ಭಾನುವಾರದ ಲಾಕ್ ಡೌನ್ ಹಿನ್ನೆಲೆ ರಾಮನಗರ ಜಿಲ್ಲೆ ಸಂಪೂರ್ಣ ಬಂದ್ ಆಗಿತ್ತು. ಅಗತ್ಯ ವಸ್ತುಗಳನ್ನ ಕೊಳ್ಳಲು ಮಾತ್ರ ಜನರಿಗೆ ಅವಕಾಶ ಕಲ್ಪಿಸಲಾಗಿತ್ತು. ವೈದ್ಯಕೀಯ ಹಾಗೂ ತರಕಾರಿಗಳನ್ನ ಕೊಳ್ಳಲು ಜನರು ಆಗಮಿಸುತ್ತಿದ್ದರು.


ಇನ್ನು ಜಿಲ್ಲೆಯಲ್ಲಿ ಬಂದ್ ನಡುವೆಯೂ ಮಾಂಸ ಮಾರಾಟದ ವ್ಯಾಪಾರ ಜೋರಾಗಿತ್ತು. ನಗರದ ಹಲವೆಡೆ ಮಾಂಸದ ಅಂಗಡಿಗಳ  ಮುಂದೆ ಜನ ಜಂಗುಳಿ ಸೇರಿತ್ತು. ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯಾಪಾರ ಮಾಡಲು ಸ್ವತಃ ಮಾಲೀಕರೇ ಗ್ರಾಹಕರ ಬಳಿ ಮನವಿ ಮಾಡಿಕೊಂಡರು. ಬೆಳಗ್ಗೆಯಿಂದ ಚಿಕನ್‌, ಮಟನ್ ವ್ಯಾಪಾರ ಭರ್ಜರಿಯಾಗಿ ನಡೆಯಿತು. ಹಲವು ಅಂಗಡಿಗಳಲ್ಲಿ ಚಿಕನ್ ಖಾಲಿಯಾಗಿದೆ ಎಂದು ಬಾಗಿಲು ಬಂದ್ ಮಾಡಲಾದ ಕಾರಣ ಮಟನ್ ಅಂಗಡಿಗಳಲ್ಲಿ ಮಾತ್ರ ವ್ಯಾಪಾರ ಜೋರಾಗಿತ್ತು.


ಇದನ್ನೂ ಓದಿ: ಕರ್ನಾಟಕ ರಾಜ್ಯದಲ್ಲಿ ಸಂಡೇ ಲಾಕ್​​ಡೌನ್​​ ಮುಕ್ತಾಯ: ಮತ್ತೆ ಸಹಜ ಸ್ಥಿತಿಯತ್ತ ಜನ ಜೀವನ


ಲಾಕ್ ಡೌನ್​ಗೆ ಬಂದ್ ಆದ ಏಷ್ಯಾ ನಂ. 1 ಸಿಲ್ಕ್ ಮಾರ್ಕೆಟ್:
ಸಂಡೇ ಲಾಕ್ ಡೌನ್​ಗೆ ರಾಮನಗರದ ಏಷ್ಯಾ ನಂ. 1 ಸಿಲ್ಕ್ ಮಾರ್ಕೆಟ್ ಬಂದ್ ಆಗಿತ್ತು. ರಾಮನಗರದ ಜೊತೆಗೆ ಚನ್ನಪಟ್ಟಣ, ಕನಕಪುರದ ಮಾರ್ಕೆಟ್​ಗಳು ಬಂದ್ ಆಗಿದ್ದವು. ಈ ಬಂದ್​ನಿಂದಾಗಿ ರೇಷ್ಮೆ ಬೆಳೆಗಾರರಿಗೆ ಸಾಕಷ್ಟು ಸಮಸ್ಯೆ ಎದುರಾಗಿರೋದು ಕಂಡುಬಂತು. ರಾಜ್ಯದ ವಿವಿಧ ಭಾಗಗಳಿಂದ ಇಲ್ಲಿಗೆ ರೇಷ್ಮೆಗೂಡು ಮಾರಾಟ ಮಾಡಲು ರೈತರು ಬರುತ್ತಿದ್ದರು. ಆದರೆ ಸಂಡೇ ಲಾಕ್ ಡೌನ್​ನಿಂದಾಗಿ ಎಲ್ಲಾ ರೈತರು ಅವರವರ ಊರಲ್ಲೇ ಉಳಿದಿದ್ದಾರೆ. ದಿನನಿತ್ಯ 30 - 32 ಟನ್ ರೇಷ್ಮೆಗೂಡು ರಾಮನಗರ ಮಾರ್ಕೆಟ್ ಗೆ ಬರುತ್ತಿತ್ತು. ಆದರೆ ನಿನ್ನೆ ಮಾರ್ಕೆಟ್ ಬಂದ್ ಆದ ಕಾರಣ ಮಾರಾಟ ಮಾಡಬೇಕಿದ್ದ ರೇಷ್ಮೆಗೂಡು ರೈತರ ಮನೆಯಲ್ಲೇ ಉಳಿದಿದೆ.


ಇನ್ನು ಬೇರೆ ಬೆಳೆಯ ರೀತಿ ರೇಷ್ಮೆಯನ್ನ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಸರಿಯಾದ ಸಮಯಕ್ಕೆ ಮಾರಾಟ ಮಾಡದಿದ್ದರೆ ಗೂಡಿನ ಗುಣಮಟ್ಟ ಹಾಳಾಗುತ್ತದೆ ಎಂಬುದು ರೇಷ್ಮೆ ಬೆಳೆಗಾರರ ಅಭಿಪ್ರಾಯ. ಹಾಗಾಗಿ ಯಾವುದೇ ಸಂದರ್ಭ ಇದ್ದರೂ ಸಹ ರೇಷ್ಮೆ ಮಾರುಕಟ್ಟೆಗಳನ್ನ ತೆರೆಯಲು ಸರ್ಕಾರ ಅವಕಾಶ ಕೊಡಬೇಕೆಂಬ ಕೂಗು ಕೇಳಿಬಂದಿದೆ.


ವರದಿ: ಎ.ಟಿ. ವೆಂಕಟೇಶ್


Published by:Vijayasarthy SN
First published: