HOME » NEWS » Coronavirus-latest-news » SII LIKELY TO SUPPLY COVID 19 VACCINE AT RS 250 PER DOSE TO CENTRE SNVS

Covid-19 Vaccine - ಸೆರಮ್ ಸಂಸ್ಥೆಯ ಕೋವಿಶೀಲ್ಡ್ ಲಸಿಕೆಯ ಒಂದು ಡೋಸ್ ಬೆಲೆ 250 ರೂ ಸಾಧ್ಯತೆ

ಆಕ್ಸ್​ಫರ್ಡ್ ವಿವಿ ಹಾಗೂ ಆಸ್ಟ್ರಾಜೆನೆಕಾ ಸಂಸ್ಥೆ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಕೋವಿಶೀಲ್ಡ್ ಲಸಿಕೆಯನ್ನು ಸೆರಮ್ ಇನ್ಸ್​ಟಿಟ್ಯೂಟ್ ಒಂದು ಡೋಸ್​ಗೆ 250 ರೂ ದರದಲ್ಲಿ ಮಾರಾಟ ಮಾಡುವ ಸಾಧ್ಯತೆ ಇದೆ.

news18
Updated:December 8, 2020, 2:21 PM IST
Covid-19 Vaccine - ಸೆರಮ್ ಸಂಸ್ಥೆಯ ಕೋವಿಶೀಲ್ಡ್ ಲಸಿಕೆಯ ಒಂದು ಡೋಸ್ ಬೆಲೆ 250 ರೂ ಸಾಧ್ಯತೆ
ಸೆರಮ್ ಇನ್ಸ್​ಟಿಟ್ಯೂಟ್ ಆಫ್ ಇಂಡಿಯಾ
  • News18
  • Last Updated: December 8, 2020, 2:21 PM IST
  • Share this:
ನವದೆಹಲಿ(ಡಿ. 08): ವಿಶ್ವದ ಅತಿಹೆಚ್ಚು ಪ್ರಮಾಣದ ವ್ಯಾಕ್ಸಿನ್ ತಯಾರಕ ಸಂಸ್ಥೆಯಾಗಿರುವ ಸೆರಮ್ ಇನ್ಸ್​ಟಿಟ್ಯೂಟ್ ಆಫ್ ಇಂಡಿಯಾ (ಎಸ್​ಐಐ) ಇದೀಗ ಕೋವಿಡ್-19 ಲಸಿಕೆ ತಯಾರಿಕೆಗೆ ಸಜ್ಜಾಗಿದೆ. ಕೇಂದ್ರ ಸರ್ಕಾರದ ಅನುಮೋದನೆಯೊಂದಿಗೆ ಸರಬರಾಜು ಗುತ್ತಿಗೆ ಪಡೆಯಲು ಎದುರು ನೋಡುತ್ತಿದೆ. ಕೇಂದ್ರದ ಅನುಮೋದನೆ ಸಿಕ್ಕಲ್ಲಿ ಸೆರಮ್ ಇನ್ಸ್​ಟಿಟ್ಯೂಟ್ ತನ್ನ ಕೋವಿಶೀಲ್ಡ್ ಲಸಿಕೆಯನ್ನು ಒಂದು ಡೋಸ್​ಗೆ 250 ರೂನಂತೆ ಸರ್ಕಾರಕ್ಕೆ ಮಾರಾಟ ಮಾಡುವ ಸಾಧ್ಯತೆ ಇದೆ. ಅಂದರೆ ಎರಡು ಡೋಸ್​ಗಳ ಲಸಿಕೆಗೆ 500 ರೂ ಆಗುತ್ತದೆ. ಕೆಲ ದಿನಗಳ ಹಿಂದಷ್ಟೇ ಸೆರಮ್ ಇನ್ಸ್​ಟಿಟ್ಯೂಟ್​ನ ಸಿಇಒ ಆಡಾರ್ ಪೂನವಾಲ ಅವರು ಖಾಸಗಿ ಮಾರುಕಟ್ಟೆಯಲ್ಲಿ ಕೋವಿಶೀಲ್ಡ್ ಲಸಿಕೆಯ ಒಂದು ಡೋಸ್​ಗೆ 1 ಸಾವಿರ ರೂ ಆಗಬಹುದು. ಸರ್ಕಾರ ಹೆಚ್ಚು ಪ್ರಮಾಣದಲ್ಲಿ ಖರೀದಿ ಮಾಡಿದರೆ ಬೆಲೆ ಇಳಿಕೆ ಮಾಡಬಹುದು ಎಂದು ಹೇಳಿದ್ದರು. ಅಂದರೆ ಶೇ. 25ರ ದರದಲ್ಲಿ ಸರ್ಕಾರವು ಕೋವಿಶೀಲ್ಡ್ ಅನ್ನು ಖರೀದಿ ಮಾಡಬಹುದು.

ಆಕ್ಸ್​​ಫರ್ಡ್ ವಿಶ್ವವಿದ್ಯಾಲಯ ಹಾಗೂ ಫಾರ್ಮಾ ದೈತ್ಯ ಸಂಸ್ಥೆ ಆಸ್ಟ್ರಾಜೆನೆಕಾದ ವಿಜ್ಞಾನಿಗಳು ಒಟ್ಟಿಗೆ ಸೇರಿ ಕೋವಿಶೀಲ್ಡ್ ವ್ಯಾಕ್ಸಿನ್ ಅನ್ನು ಅಭಿವೃದ್ಧಿಪಡಿಸಿವೆ. ಸೆರಮ್ ಇನ್ಸ್​ಟಿಟ್ಯೂಟ್ ಸಂಸ್ಥೆ ಕೂಡ ಇವೆರಡರೊಂದಿಗೆ ಲಸಿಕೆ ತಯಾರಿಕೆ ಯೋಜನೆಯಲ್ಲಿ ಭಾಗಿಯಾಗಿದೆ. ಲಸಿಕೆ ಉತ್ಪಾದನೆ ಮಾಡುವ ಹೊಣೆ ಸೆರಮ್ ಇನ್ಸ್​ಟಿಟ್ಯೂಟ್​ನದ್ದಾಗಿದೆ. ಆಕ್ಸ್​ಫರ್ಡ್ ಇನ್ಸ್​ಟಿಟ್ಯೂಟ್ ಅಭಿವೃದ್ಧಿಪಡಿಸಿರುವ ಈ ಲಸಿಕೆಯ ಅಧ್ಯಯನ ಹಂತ ಇನ್ನೂ ಪೂರ್ಣಗೊಂಡಿಲ್ಲವಾದರೂ ಕೋವಿಡ್ ಸಂಕಷ್ಟ ಇರುವ ಹಿನ್ನೆಲೆಯಲ್ಲಿ ತುರ್ತು ಬಳಕೆಗೆ ಲಸಿಕೆ ಉತ್ಪಾದನೆ ಮಾಡಲು ಅನುಮತಿ ಕೋರಿ ಭಾರತ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ತುರ್ತು ಸ್ಥಿತಿ ಗಮನದಲ್ಲಿಟ್ಟುಕೊಂಡು ಸರ್ಕಾರ ಕೂಡ ಇದರ ಉತ್ಪಾದನೆಗೆ ಅನುಮತಿ ಕೊಡುವ ಸಾಧ್ಯತೆ ಹೆಚ್ಚಿದೆ. ಒಂದು ವೇಳೆ ಅನುಮತಿ ಕೊಟ್ಟರೆ ಕೋವಿಶೀಲ್ಡ್ ವ್ಯಾಕ್ಸಿನ್ ಅನ್ನು ಭಾರತೀಯರಿಗೆ ಮೊದಲು ಸರಬರಾಜು ಮಾಡಿ ಆ ಬಳಿಕ ಬೇರೆ ದೇಶಗಳಿಗೆ ವಿತರಿಸಲಾಗುವುದು ಎಂದು ಆಡಾರ್ ಪೂನವಾಲ ಹೇಳಿದ್ದಾರೆ.

ಇದನ್ನೂ ಓದಿ: Mukesh Ambani - ಮುಂದಿನ ವರ್ಷದ ದ್ವಿತೀಯಾರ್ಧದಲ್ಲಿ ಜಿಯೋದಿಂದ 5ಜಿ: ಮುಕೇಶ್ ಅಂಬಾನಿ

ಅಮೆರಿಕದ ಫಾರ್ಮಾ ಕಂಪನಿ ಫೈಜರ್ (Pfizer) ಮತ್ತು ಜರ್ಮನಿಯ ಬಯೋನ್​ಟೆಕ್ (BioNTech) ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಲಸಿಕೆಯನ್ನೂ ಭಾರತದಲ್ಲಿ ವಿತರಣೆ ಮಾಡಲು ಅನುಮತಿ ಕೋರಲಾಗಿದೆ. ಈಗಾಗಲೇ ಬ್ರಿಟನ್ ದೇಶದಲ್ಲಿ Pfizerನ ಲಸಿಕೆಯನ್ನು ನೀಡುವ ಕೆಲಸವೂ ಆಗುತ್ತಿದೆ. ಇದೇ ವೇಳೆ, ಇವೆರಡು ಲಸಿಕೆ ಜೊತೆಗೆ ಹೈದರಾಬಾದ್​ನ ಭಾರತ್ ಬಯೋಟೆಕ್ ಸಂಸ್ಥೆ ಕೂಡ ತನ್ನ ಕೋವ್ಯಾಕ್ಸಿನ್ ಲಸಿಕೆಯ ತುರ್ತು ವಿತರಣೆಗೆ ಅನುಮತಿ ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ. ಸರ್ಕಾರ ಈ ಮೂರು ಲಸಿಕೆಗಳನ್ನ ಮನವಿಯನ್ನು ಗಂಭೀರವಾಗಿ ಪರಿಶೀಲಿಸುತ್ತಿದ್ದು, ಲಸಿಕೆ ಬಳಕೆಗೆ ಸಮರ್ಪಕ ಎನಿಸಿದರೆ ಅನುಮತಿ ಕೊಡುವ ಸಾಧ್ಯತೆ ಹೆಚ್ಚಿದೆ.
Published by: Vijayasarthy SN
First published: December 8, 2020, 2:21 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories