• Home
 • »
 • News
 • »
 • coronavirus-latest-news
 • »
 • 'ಕೊರೋನಾ ಹರಡಲು ಮುಸ್ಲಿಮರೇ ಕಾರಣ ಎಂದ ಇಬ್ಬರು ಬಿಜೆಪಿ ಶಾಸಕರನ್ನು ಬಂಧಿಸಿ‘ - ಸಿದ್ದರಾಮಯ್ಯ ಆಗ್ರಹ

'ಕೊರೋನಾ ಹರಡಲು ಮುಸ್ಲಿಮರೇ ಕಾರಣ ಎಂದ ಇಬ್ಬರು ಬಿಜೆಪಿ ಶಾಸಕರನ್ನು ಬಂಧಿಸಿ‘ - ಸಿದ್ದರಾಮಯ್ಯ ಆಗ್ರಹ

ಸಿದ್ದರಾಮಯ್ಯ.

ಸಿದ್ದರಾಮಯ್ಯ.

ಎಂ.ಪಿ ರೇಣುಕಾಚಾರ್ಯ ಮುಖಮಂತ್ರಿಯವರ ಸಂಸದೀಯ ಕಾರ್ಯದರ್ಶಿ. ಇವರ ಹೇಳಿಕೆಯೂ ಮುಖ್ಯಮಂತ್ರಿ ಹೇಳಿಕೆ ಎಂದು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಇಬ್ಬರು ಶಾಸಕರಾಗಿರಲು ಅರ್ಹರಲ್ಲ. ಹೀಗಾಗಿ ಈ ಹುದ್ದೆಯಿಂದಲೂ ವಜಾಗೊಳಿಸಬೇಕು ಎಂದರು ಸಿದ್ದರಾಮಯ್ಯ.

 • Share this:

  ಬೆಂಗಳೂರು(ಏ.08): ರಾಜಕೀಯ ಷಡ್ಯಂತ್ರದಿಂದ ಕೋವಿಡ್​​-19 ವೈರಸ್​​ ಹರಡಲು ಮುಸ್ಲಿಮರೇ ಕಾರಣ ಎಂದು ನಾಲಿಗೆ ಹರಿಬಿಟ್ಟ ಬಿಜೆಪಿ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಮತ್ತು ಎಂ.ಪಿ ರೇಣುಕಾಚಾರ್ಯರನ್ನು ಬಂಧಿಸಿ ಎಂದು ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. ಒಂದೇ ಸಮುದಾಯವನ್ನು ಗುರಿಸಿಯಾಸಿಕೊಂಡು ಹೇಳಿಕೆ ನೀಡುತ್ತಿರುವ ಇಬ್ಬರ ಮೇಲೆ ಕೂಡಲೇ ಕ್ರಿಮಿನಲ್​​ ಕೇಸ್​ ದಾಖಲಿಸಿ ಜೈಲಿಗೆ ಹಾಕಿ ಎಂದು ಮುಖ್ಯಮಂತ್ರಿ ಬಿ.ಎಸ್​​ ಯಡಿಯೂರಪ್ಪಗೆ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

  ಹೀಗೆ ರಾಜ್ಯ ಸರ್ಕಾರವನ್ನು ವಿಡಿಯೋ ಸಂದೇಶದ ಮೂಲಕ ಒತ್ತಾಯಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಹೊನ್ನಾಳ್ಳಿ ಕ್ಷೇತ್ರದ ಶಾಸಕ ಎಂ.ಪಿ.ರೇಣುಕಾಚಾರ್ಯ ಮತ್ತು ಬಸನಗೌಡ ಪಾಟೀಲ್ ಯತ್ನಾಳ್​​​ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ. ಇಬ್ಬರು ಸಂವಿಧಾನದ ಮೇಲೆ ಪ್ರಮಾಣ ಮಾಡಿ ಶಾಸನ ಸಭೆಗೆ ಆಯ್ಕೆಯಾಗಿದ್ದಾರೆ. ಒಂದೇ ಸಮುದಾಯದ ವಿರುದ್ಧ ದ್ವೇಷ ಕಾರುವುದು ರಾಜಕೀಯ ಷಡ್ಯಂತ್ರ. ಗುಂಡಿಕ್ಕಿ ಕೊಲ್ಲಿ ಎಂದು ಹೇಳುವುದು ಪ್ರಚೋದನಾಕಾರಿ. ಕಾನೂನಿನಡಿ ಕ್ರಿಮಿನಲ್​​ ಕೇಸ್​ ದಾಖಲಿಸಿ ಬಂಧಿಸಿ ಎಂದು ಒತ್ತಾಯಿಸಿದ್ದಾರೆ.

  ಎಂ.ಪಿ ರೇಣುಕಾಚಾರ್ಯ ಮುಖಮಂತ್ರಿಯವರ ಸಂಸದೀಯ ಕಾರ್ಯದರ್ಶಿ. ಇವರ ಹೇಳಿಕೆಯೂ ಮುಖ್ಯಮಂತ್ರಿ ಹೇಳಿಕೆ ಎಂದು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಇಬ್ಬರು ಶಾಸಕರಾಗಿರಲು ಅರ್ಹರಲ್ಲ. ಹೀಗಾಗಿ ಈ ಹುದ್ದೆಯಿಂದಲೂ ವಜಾಗೊಳಿಸಬೇಕು ಎಂದರು.

  ಇದನ್ನೂ ಓದಿ: ಕೊರೋನಾ ವೈರಸ್​ಗೆ ಕಲಬುರ್ಗಿಯಲ್ಲಿ ಮತ್ತೊಂದು ಸಾವು; ಕರ್ನಾಟಕದಲ್ಲಿ 5ಕ್ಕೇರಿದ ಸಾವಿನ ಸಂಖ್ಯೆ

  ಇನ್ನು, ರಾಜ್ಯದಲ್ಲಿ ಪೂರ್ವ ಮುಂಗಾರು ಪ್ರಾರಂಭವಾಗಿದೆ. ಮುಂದಿನ ಮುರ್ನಾಲ್ಕು ದಿನ ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆ ಹೇಳಿದೆ. ಕೆಲವು ಭಾಗಗಲ್ಲಿ ಗಾಳಿ ಮಳೆ ಜೋರಾಗಿ ಬೀಸಿದ ಪರಿಣಾಮ ಭತ್ತ, ಬಾಳೆ, ಕಬ್ಬು ನೆಲಕ್ಕಚ್ಚಿವೆ ಎಂದು ರೈತರು ಹೇಳಿದ್ದಾರೆ. ಹೀಗಾಗಿ ಇದನ್ನು ಸರ್ವೆ ಮಾಡಿಸಿ ಸೂಕ್ತ ಪರಿಹಾರ ಕೊಡಬೇಕು ಎಂದು ಹೇಳಿದರು.

  ಇದೇ ಏಪ್ರಿಲ್​​ 14ನೇ ತಾರೀಕು ಲಾಕ್​​ಡೌನ್ ಮುಗಿಯುವ ನಿರೀಕ್ಷೆ ಇದೆ. ಒಂದು ವೇಳೆ ವಾರ ಹತ್ತು ದಿನ ಮತ್ತೆ ಮುಂದುವರೆದರೆ ಜನ ಸಹಕಾರ ನೀಡಬೇಕು. ನಾವು ವಿಪಕ್ಷವಾಗಿ ಎಲ್ಲಾ ರೀತಿಯ ಸಹಕಾರ ನೀಡುತ್ತೇವೆ ಎಂದರು ಸಿದ್ದರಾಮಯ್ಯ.

  First published: