‘ಬರೀ ಬಾಯಿ ಮಾತಲ್ಲ, ಯಾವುದಕ್ಕೆ ಎಷ್ಟೆಂದು ದಾಖಲೆ ತೋರಿಸಿ?‘ - ಶ್ರೀರಾಮುಲು ಲೆಕ್ಕಕ್ಕೆ ಸಿದ್ದರಾಮಯ್ಯ ಪ್ರತಿಕ್ರಿಯೆ

ಹಾಗೆಯೇ ಮುಂದಿನ ಗುರುವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿಉವಕುಮಾರ್​​, ಕಾಂಗ್ರೆಸ್​ ಹಿರಿಯ ನಾಯಕ ಎಸ್​​.ಆರ್​​ ಪಾಟೀಲ್​​​​​ ಜತೆಗೆ ಸಿದ್ದರಾಮಯ್ಯ ಸುದ್ದಿಗೋಷ್ಠಿ ನಡೆಸುವುದಾಗಿ ಹೇಳಿದರು. ಅಂದೇ ಶ್ರೀರಾಮುಲು ನೀಡಿದ ಲೆಕ್ಕಕ್ಕೆ ಉತ್ತರ ಕೊಡುತ್ತೇವೆ ಎಂದರು.

ಸಚಿವ ಶ್ರೀರಾಮುಲು ಹಾಗೂ ಮಾಜಿ ಸಿಎಂ 
 ಸಿದ್ದರಾಮಯ್ಯ

ಸಚಿವ ಶ್ರೀರಾಮುಲು ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ

 • Share this:
  ಬೆಂಗಳೂರು(ಜು.20): ಕೋವಿಡ್‌ -19 ಉಪಕರಣಗಳ ಖರೀದಿಯಲ್ಲಿ 2,200 ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ತಾನು ಮಾಡಿದ ಆರೋಪಕ್ಕೆ ಆರೋಗ್ಯ ಸಚಿವ ಬಿ. ಶ್ರೀರಾಮುಲು ಸ್ಪಷ್ಟೀಕರಣ ನೀಡಿದ ವಿಚಾರಕ್ಕೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು. ಈ ಸಂಬಂಧ ಕರ್ನಾಟಕ ಪ್ರಾದೇಶಿಕ ಕಾಂಗ್ರೆಸ್​​ ಸಮಿತಿ ಕಚೇರಿಯಲ್ಲಿ ಮಾತಾಡಿದ ಸಿದ್ದರಾಮಯ್ಯ, ಲೆಕ್ಕಾ ಕೊಡಿ ಅಂದರೆ ಹೀಗಾ ಕೊಡೋದು ಎಂದು ವ್ಯಂಗ್ಯವಾಡಿದರು.

  ಯಾರೇ ಆಗಲೀ ಬಾಯಿ ಮಾತಿನಲ್ಲಿ ಲೆಕ್ಕ ನೀಡಿದರೇ ಆಗುತ್ತಾ. ಏನೇನು ಖರೀದಿ ಮಾಡಿದ್ದಾರೆ? ಯಾವುದಕ್ಕೆ ಎಷ್ಟು ಖರ್ಚು ಮಾಡಿದ್ದಾರೆ? ಎನ್ನುವುದು ನೀಡುವುದು ಬೇಡವೇ. ಬಾಯಿ ಮಾತಿನಲ್ಲಿ ಹೇಳದೇ ಆರೋಗ್ಯ ಸಚಿವ ಬಿ. ಶ್ರೀರಾಮುಲು ದಾಖಲೆ ತೋರಿಸಲಿ ಎಂದು ಸಿದ್ದರಾಮಯ್ಯ ಕುಟುಕಿದರು.

  ಹೀಗೆ ಮುಂದುವರಿದ ಅವರು, ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜಾವೇದ್ ಅಕ್ತರ್ ನನಗೆ ಪತ್ರ ಬರೆದಿದ್ದಾರೆ. ಈ ಸಂಬಂಧ ಬೇಗ ದಾಖಲೆ ತೋರಿಸಲಿ. ಅವ್ಯವಹಾರ ಆರೋಪ ಸಾಬೀತುಪಡಿಸಿದರೆ ರಾಜೀನಾಮೆ ನೀಡುತ್ತೇನೆಂದು ಬಿ. ಶ್ರೀರಾಮುಲು ಹೇಳಿಕೆ ನೀಡಿದ್ಧಾರೆ. ರಾಜೀನಾಮೆ ಕೊಡಬೇಕಿದಿದ್ದರೆ ಇವರು ಇಲ್ಯಾಕೇ ಇರಬೇಕಿತ್ತು? ಎಂದು ಶ್ರೀರಾಮುಲು ವಿರುದ್ಧ ಕಿಡಿಕಾರಿದರು.

  ಹಾಗೆಯೇ ಮುಂದಿನ ಗುರುವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿಉವಕುಮಾರ್​​, ಕಾಂಗ್ರೆಸ್​ ಹಿರಿಯ ನಾಯಕ ಎಸ್​​.ಆರ್​​ ಪಾಟೀಲ್​​​​​ ಜತೆಗೆ ಸಿದ್ದರಾಮಯ್ಯ ಸುದ್ದಿಗೋಷ್ಠಿ ನಡೆಸುವುದಾಗಿ ಹೇಳಿದರು. ಅಂದೇ ಶ್ರೀರಾಮುಲು ನೀಡಿದ ಲೆಕ್ಕಕ್ಕೆ ಉತ್ತರ ಕೊಡುತ್ತೇವೆ ಎಂದರು.

  ಈ ಮುನ್ನ ಕೋವಿಡ್‌ -19 ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ಸಿದ್ದರಾಮಯ್ಯ ಆರೋಪಕ್ಕೆ ಆರೋಗ್ಯ ಸಚಿವ ಬಿ ಶ್ರೀರಾಮುಲು ಉತ್ತರ ನೀಡಿದರು. ವೆಂಟಿಲೇಟರ್​​ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. ನನ್ನ ಅವಧಿಯಲ್ಲಿ ಒಂದು ವೇಳೆ ಅವ್ಯವಹಾರ ನಡೆದಿದ್ದರೇ ಕೂಡಲೇ ರಾಜೀನಾಮೆ ನೀಡುತ್ತೇನೆ ಎಂದು ಸವಾಲ್​​ ಹಾಕಿದ್ದರು.

  ಇದನ್ನೂ ಓದಿ: ಕೋವಿಡ್​​-19 ಭ್ರಷ್ಟಚಾರ: ಸಿದ್ದರಾಮಯ್ಯಗೆ ಪೂರ್ಣ ಲೆಕ್ಕ ಕೊಟ್ಟ ಸಚಿವ ಬಿ. ಶ್ರೀರಾಮುಲು

  ಸರ್ಕಾರದ ಮೇಲಿನ ಆರೋಪಕ್ಕೆ ಲೆಕ್ಕ ನೀಡಿದ ಶ್ರೀರಾಮುಲು, ಆಕಾಶ ಭೂಮಿಗೆ ಅಂತರ ಎಷ್ಟಿದೆ? ಸಿದ್ದರಾಮಯ್ಯ ಅಂತಹುದ್ದೇ ದೊಡ್ಡ ಅಂತರದ ಸುಳ್ಳು ಹೇಳುತ್ತಿದ್ದಾರೆ. ನನ್ನ ಅವಧಿಯಲ್ಲಿ ಯಾವುದೇ ಅವ್ಯವಹಾರ ಆಗಿಲ್ಲ. ಆಗಿದ್ದು ಸಾಬೀತಾದ್ರೆ, ಒಂದು ಕ್ಷಣವು ಈ ಹುದ್ದೆಯಲ್ಲಿ ಕೂರುವುದಿಲ್ಲ. ತಕ್ಷಣವೇ ರಾಜೀನಾಮೆ ಕೊಟ್ಟು ಹೋಗುತ್ತೇನೆ ಎಂದರು.
  Published by:Ganesh Nachikethu
  First published: