ಇಂದಿರಾ ಕ್ಯಾಂಟೀನ್​​ನಲ್ಲಿ ಉಚಿತ ಊಟ-ತಿಂಡಿ ನೀಡುವುದು ಮುಂದುವರಿಯಬೇಕು - ಬಿಎಸ್​​ವೈಗೆ ಸಿದ್ದರಾಮಯ್ಯ ಪತ್ರ

ನಾಳೆ ಭಾನುವಾರದಿಂದ ಜನ ಇಂದಿರಾ ಕ್ಯಾಂಟೀನ್​​ನಲ್ಲಿ ಹಣ ನೀಡಿ ಆಹಾರ ಸೇವಿಸಬೇಕು. 5 ರೂ. ಗೆ ತಿಂಡಿ ಹಾಗೂ 10 ರೂ. ಗೆ ಮಧ್ಯಾಹ್ನ ಹಾಗೂ ರಾತ್ರಿ ಊಟ ದೊರೆಯಲಿದೆ. ಬೆಂಗಳೂರಿನಲ್ಲಿರುವ ನಿರ್ಗತಿಕರು ಮತ್ತು ಬಡವರಿಗೆ ಉಚಿತ ಆಹಾರದ ಪೊಟ್ಟಣಗಳನ್ನು ಅನುಮತಿ ನಾಲ್ಕು ಎನ್‍ಜಿಒಗಳಿಗೆ ಅನುಮತಿ ನೀಡಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್ ಅನಿಲ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ಸಿದ್ದರಾಮಯ್ಯ.

ಸಿದ್ದರಾಮಯ್ಯ.

 • Share this:
  ಬೆಂಗಳೂರು(ಏ.04): ನಾಳೆಯಿಂದ ಇಂದಿರಾ ಕ್ಯಾಂಟೀನ್​​​ನಲ್ಲಿ ನೀಡಲಾಗುತ್ತಿದ್ದ ಉಚಿತ ಊಟ ಮತ್ತ ತಿಂಡಿ ನಿಲ್ಲಿಸಲು ಮುಖ್ಯಮಂತ್ರಿ ಬಿ.ಎಸ್​​ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರಕ್ಕೆ ತೀರ್ಮಾನ ತೆಗೆದುಕೊಂಡಿದೆ. ರಾಜ್ಯ ಸರ್ಕಾರವೂ ಈ ತೀರ್ಮಾನವನ್ನು ಕೂಡಲೇ ಬದಲಿಸಬೇಕು ಎಂದು ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. ರಾಜ್ಯದ ಮುಖ್ಯಮಂತ್ರಿಗಳಾದ ಬಿ.ಎಸ್​​​ ಯಡಿಯೂರಪ್ಪನವರು ತಮ್ಮ ಹೊಸ ನಿರ್ಧಾರವನ್ನು ಬದಲಾಯಿಸಿ ಇಂದಿರಾ ಕ್ಯಾಂಟೀನ್​​ನಲ್ಲಿ, ಕನಿಷ್ಠ ಕೊರೋನಾ ಹಾವಳಿ ಅಂತ್ಯಗೊಳ್ಳುವವರೆಗೆ ಉಚಿತವಾಗಿ ಊಟ-ತಿಂಡಿ ನೀಡುವ ವ್ಯವಸ್ಥೆ ಮಾಡಬೇಕೆಂದು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.


  ಇನ್ನು, ಲಾಕ್‌ಡೌನ್‌ನಿಂದಾಗಿ ಅಸಂಘಟಿತ ವಲಯದ ಕಾರ್ಮಿಕರು, ವಲಸಿಗರು ಒಂದು ಹೊತ್ತು ಊಟಕ್ಕೂ ಗತಿ ಇಲ್ಲದೆ ಕಷ್ಟಪಡುತ್ತಿದ್ದು, ಎಲ್ಲರೂ ಇಂದಿರಾ ಕ್ಯಾಂಟೀನ್‌‌ ಊಟವನ್ನೇ ನಂಬಿಕೊಂಡಿದ್ದರು. ಸಿಎಂ ಬಿ.ಎಸ್​​ ಯಡಿಯೂರಪ್ಪ ಬಡವರ ಅನ್ನದ ಬಟ್ಟಲನ್ನು ಕಸಿದುಕೊಳ್ಳಲು ಹೊರಟಿರುವುದು ಸರಿ ಅಲ್ಲ ಎಂದು ಸಿದ್ದರಾಮಯ್ಯ ತಪರಾಕಿ ಬಾರಿಸಿದ್ದಾರೆ.

  ಜತೆಗೆ ಹೀಗೆ ಮುಂದುವರೆದ ಅವರು, ಇಂದಿರಾ ಕ್ಯಾಂಟೀನ್‌ಗಳಲ್ಲಿ ಉಚಿತ ಊಟ-ತಿಂಡಿ ನೀಡುವುದನ್ನು ನಿಲ್ಲಿಸಿದ ಮುಖ್ಯಮಂತ್ರಿಗಳ ನಿರ್ಧಾರ ಅಮಾನವೀಯವಾದುದು. ದುರುಪಯೋಗವಾಗುತ್ತಿದ್ದರೆ ಅದನ್ನು ತಡೆಯಬೇಕೇ ಹೊರತು ಉಚಿತವಾಗಿ ಕೊಡುವುದನ್ನು ನಿಲ್ಲಿಸುವುದು ಪರಿಹಾರ ಅಲ್ಲ ಎಂದು ಪತ್ರದಲ್ಲಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

  ಇದನ್ನೂ ಓದಿ: ‘ನಾಳೆಯಿಂದ ಇಂದಿರಾ ಕ್ಯಾಂಟೀನ್​​​​ನಲ್ಲಿ ಉಚಿತ ಊಟ ಇಲ್ಲ‘ - ಸಿಎಂ ಬಿ.ಎಸ್​​ ಯಡಿಯೂರಪ್ಪ

  ಕೊರೋನಾ ವಿರುದ್ಧದ ಹೋರಾಟಕ್ಕಾಗಿ ಇಡೀ ರಾಜ್ಯ ಲಾಕ್​​ಡೌನ್​​ ಮಾಡಿದ ಕಾರಣ ಬೀದಿ ಬದಿ ನಿರ್ಗತಿಕರು, ಭಿಕ್ಷುಕರು ಊಟವಿಲ್ಲದೇ ಪರದಾಡುತ್ತಿದ್ದರು. ಅಂತವರಿಗೆ ಇಂದಿರಾ ಕ್ಯಾಂಟೀನ್​​ನಲ್ಲಿ ಉಚಿತ ಊಟ ನೀಡುವುದಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಘೋಷಿಸಿದ್ದರು. ಅದರಂತೆಯೇ ಕಳೆದೊಂದು ವಾರದಿಂದೀಚೆಗೆ ಇಂದಿರಾ ಕ್ಯಾಂಟೀನ್​​ನಲ್ಲಿ ಬಡವರಿಗೆ ಉಚಿತ ಊಟ ನೀಡಲಾಗುತ್ತಿತ್ತು. ಆದರೀಗ, ಇದು ಮಿಸ್ಯೂಸ್​​ ಆಗುತ್ತಿದೆ ಎಂದು ಸರ್ಕಾರ ಈ ಸೇವೆ ರದ್ದುಗೊಳಿಸಿದೆ. ಹಾಗಾಗಿ ಜನ ಎಂದಿನಂತೆಯೇ ನಾಳೆಯಿಂದ ಇಂದಿರಾ ಕ್ಯಾಂಟೀನ್​​ನಲ್ಲಿ ಹಣ ಊಟ ತಿನ್ನಬೇಕಿದೆ.

  ನಾಳೆ ಭಾನುವಾರದಿಂದ ಜನ ಇಂದಿರಾ ಕ್ಯಾಂಟೀನ್​​ನಲ್ಲಿ ಹಣ ನೀಡಿ ಆಹಾರ ಸೇವಿಸಬೇಕು. 5 ರೂ. ಗೆ ತಿಂಡಿ ಹಾಗೂ 10 ರೂ. ಗೆ ಮಧ್ಯಾಹ್ನ ಹಾಗೂ ರಾತ್ರಿ ಊಟ ದೊರೆಯಲಿದೆ. ಬೆಂಗಳೂರಿನಲ್ಲಿರುವ ನಿರ್ಗತಿಕರು ಮತ್ತು ಬಡವರಿಗೆ ಉಚಿತ ಆಹಾರದ ಪೊಟ್ಟಣಗಳನ್ನು ಅನುಮತಿ ನಾಲ್ಕು ಎನ್‍ಜಿಒಗಳಿಗೆ ಅನುಮತಿ ನೀಡಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್ ಅನಿಲ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.
  First published: