news18-kannada Updated:July 1, 2020, 3:23 PM IST
ಸಿದ್ದರಾಮಯ್ಯ.
ಬೆಂಗಳೂರು (ಜುಲೈ 01); ಮಾರಣಾಂತಿಕ ಕೊರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿಗಳು ತಮ್ಮ ರಕ್ತದಲ್ಲಿನ ಪ್ಲಾಸ್ಮಾವನ್ನು ಇತರೆ ಸೋಂಕಿತರ ಚಿಕಿತ್ಸೆಗಾಗಿ ದಾನಮಾಡಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಇಂದು ಒತ್ತಾಯಿಸಿದ್ದಾರೆ.
ಕೊರೋನಾ ರೋಗಿಗಳನ್ನು ಗುಣಪಡಿಸಲು ಪ್ಲಾಸ್ಮಾ ಎಂಬ ಹೊಸ ಮಾದರಿಯ ಚಿಕಿತ್ಸೆಯನ್ನು ದೇಶದಾದ್ಯಂತ ಈಗಾಗಲೇ ಆರಂಭಿಸಲಾಗಿದೆ. ಕೊರೋನಾ ಸೋಂಕಿನಿಂದ ಒಮ್ಮೆ ಗುಣವಾದ ವ್ಯಕ್ತಿಯಲ್ಲಿ ರೋಗ ನಿರೋಧಕ ಶಕ್ತಿ ಅಧಿಕವಾಗಿರುತ್ತದೆ. ಈ ಶಕ್ತಿ ಕೊರೋನಾ ವಿರುದ್ಧ ಯಶಸ್ವಿಯಾಗಿ ಹೋರಾಡುತ್ತದೆ.
ಹೀಗಾಗಿ ಈ ರೋಗ ನಿರೋಧಕ ಶಕ್ತಿಯ ಕಣವನ್ನು ಗುಣಮುಖರಾದ ವ್ಯಕ್ತಿಯ ರಕ್ತದಿಂದ ಬೇರ್ಪಡಿಸಿ, ಸೋಂಕಿತ ವ್ಯಕ್ತಿಗೆ ನೀಡುವ ಮೂಲಕ ಆತನನ್ನೂ ರೋಗದಿಂದ ಗುಣಪಡಿಸಬಹುದಾಗಿದೆ. ಪ್ರಸ್ತುತ ಕೊರೋನಾ ಮಹಾಮಾರಿಯ ವಿರುದ್ಧ ಹೋರಾಡಲು ಇದನ್ನು ಪ್ರಮುಖ ಅಸ್ತ್ರ ಎನ್ನಲಾಗುತ್ತಿದೆ.
ಇದನ್ನೂ ಓದಿ : ಪದಗ್ರಹಣ ಕಾರ್ಯಕ್ರಮಕ್ಕೆ ಕಾರ್ಯಕರ್ತರು ದಯವಿಟ್ಟು ಬೆಂಗಳೂರಿಗೆ ಆಗಮಿಸದಿರಿ; ಡಿ.ಕೆ. ಶಿವಕುಮಾರ್ ಮನವಿ
ಈ ಹಿನ್ನೆಲೆಯಲ್ಲಿ ಇಂದು ಟ್ವೀಟ್ ಮೂಲಕ ಒತ್ತಾಯಿಸಿರುವ ಸಿದ್ದರಾಮಯ್ಯ, "ಕೊರೋನಾ ಸೋಂಕಿನಿಂದ ಗುಣಮುಖರಾದವರು ತಮ್ಮ ರಕ್ತದಲ್ಲಿನ ಪ್ಲಾಸ್ಮವನ್ನು ಬೇರೆ ಸೋಂಕಿತರ ಚಿಕಿತ್ಸೆಗಾಗಿ ದಾನ ಮಾಡಬೇಕೆಂದು ಕೋರುತ್ತಿದ್ದೇನೆ. ನಿಮ್ಮ ಆರೋಗ್ಯ ರಕ್ಷಣೆಗಾಗಿ ನೂರಾರು ಮಂದಿ ಶ್ರಮಿಸಿದ್ದಾರೆ. ಈಗ ನೀವು ಅವರೆಲ್ಲರ ಋಣ ತೀರಿಸುವ ಕರ್ತವ್ಯವನ್ನು ನಿಭಾಯಿಸ ಬೇಕಾಗುತ್ತದೆ" ಎಂದು ಮನವಿ ಮಾಡಿದ್ದಾರೆ.
First published:
July 1, 2020, 3:23 PM IST