ದೀಪ ಬೆಳಗುವುದರಿಂದ ಕಾಯಿಲೆ ವಾಸಿಯಾಗುವುದಾದರೆ ಬೆಳಗಲಿ, ಅದಕ್ಕೆ ನಮ್ಮ ಅಭ್ಯಂತರವಿಲ್ಲ; ಸಿದ್ದರಾಮಯ್ಯ ವ್ಯಂಗ್ಯ

ಮೈಸೂರಿನ ನಂಜನಗೂಡಿನಲ್ಲಿ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾಧಿಕಾರಿಯೊಂದಿಗೆ ಸಿದ್ದರಾಮಯ್ಯ ಸಭೆ ನಡೆಸಿ, ಮಾಹಿತಿ ಪಡೆದರು.

ಸಿದ್ದರಾಮಯ್ಯ

ಸಿದ್ದರಾಮಯ್ಯ

 • Share this:
  ಮೈಸೂರು: ಕೋರೋನಾ ಸೋಂಕು ತಗುಲುವುದಕ್ಕೆ ಚೈನಾದ ಕಂಟೈನರ್ ಕಾರಣವಿರಬಹುದು. ಇದೇ ಮಾಹಿತಿಯನ್ನು ಜಿಲ್ಲಾಧಿಕಾರಿಗಳು ನನಗೆ ಮಾಹಿತಿ ನೀಡಿದ್ದಾರೆ. ಚೈನಾದಿಂದ ಬಂದ ಒಂದು ಕಂಟೈನರ್‌ರಿಂದ ಸೋಂಕು ತಗುಲಿರಬಹುದು. ಈ ಬಗ್ಗೆ ಕಂಟೈನರ್ ಸ್ಯಾಂಪಲ್ ತೆಗೆದುಕೊಳ್ಳಲಾಗಿದೆ. ಅದನ್ನು ಲ್ಯಾಬ್‌ಗೆ ಕಳುಹಿಸಿದ್ದಾರೆ. ವರದಿ ಬಂದ ನಂತರ ನಿಖರ ಕಾರಣ ತಿಳಿಯಲಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

  ಮೈಸೂರಿನ ನಂಜನಗೂಡಿನಲ್ಲಿ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾಧಿಕಾರಿಯೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, P52 ಸೋಂಕಿತನಿಗೆ ಬಂದ ಸೋಂಕಿನ ಮೂಲ ಚೀನಾ ಇರಬಹುದು.  ಸೋಂಕು ಹೇಗೆ ಬಂತು ಅನ್ನೋದು ತನಿಖೆ ಆಗಲಿ ಎಂದು  ಹೇಳಿದರು.

  ಏಪ್ರಿಲ್ 5ರಂದು ರಾತ್ರಿ 9 ಗಂಟೆಗೆ ದೀಪ ಬೆಳಗಿಸಲು ಪ್ರಧಾನಿ ಮೋದಿ ಕರೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ದೀಪ ಬೆಳಗಿಸುವುದರಿಂದ ಕಾಯಿಲೆ ವಾಸಿಯಾಗುತ್ತಾ?
  ಒಂದು ವೇಳೆ ಅದರಿಂದ ಕಾಯಿಲೆ ವಾಸಿಯಾದರೆ ಮಾಡಲಿ. ಅದಕ್ಕೆ ನಮ್ಮದೇನು ಅಭ್ಯಂತರ ಇಲ್ಲ ಎಂದು ವ್ಯಂಗ್ಯವಾಡಿದರು.

  ಇದನ್ನು ಓದಿ: ಕೊರೋನಾ ವಿಷಯವಾಗಿ ಅಧಿಕಾರಿಗಳು, ಬೆಂಗಳೂರು ನಗರ ಸಚಿವರೊಂದಿಗೆ ಸಿಎಂ ನಡೆಸಿದ ಸಭೆಯ ಮುಖ್ಯಾಂಶಗಳು

   
  First published: