ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ದಿನದಿಂದ ದಿನಕ್ಕೆ ಭೀಕರವಾಗುತ್ತಿರುವ ಹಾಗೂ ಲಸಿಕೆ ಸಮಸ್ಯೆ ಹಿನ್ನಲೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ವಿಧಾನಸೌಧದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರ ಸಭೆ ನಡೆಸಿದರು. ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ ಸ್ಪೀಕರ್ ರಮೇಶ್ ಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ಸಿ.ಡಬ್ಲ್ಯು.ಸಿ. ಸದಸ್ಯ ದಿನೇಶ್ ಗುಂಡೂರಾವ್, ಮಾಜಿ ಸಚಿವ ಕೃಷ್ಣ ಭೈರೇಗೌಡ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಎಂಎಲ್ಸಿ ಬಿ.ಕೆ. ಹರಿಪ್ರಸಾದ್, ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ, ಶಾಸಕಿ ಸೌಮ್ಯರೆಡ್ಡಿ, ಭೈರತಿ ಸುರೇಶ್ ಸೇರಿದಂತೆ ಪ್ರಮುಖ ನಾಯಕರು ಭಾಗಿಯಾಗಿದ್ದರು.
ಕಾಂಗ್ರೆಸ್ ನಾಯಕರ ಸಭೆಯ ಬಳಿಕ ವಿಧಾನಸೌಧ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ಮಾಡಲು ನಿರ್ಧಾರ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಯಿತು. ರಾಜ್ಯದಲ್ಲಿ ಇನ್ನೂ ವ್ಯಾಕ್ಸಿನ್ ಬಂದಿಲ್ಲ ಇದರಿಂದ ಜನರಿಗೆ ಸಮಸ್ಯೆಯಾಗ್ತಿದೆ. ಸರ್ಕಾರದವರು ಮಾತ್ರ ಯಾವ ಸಮಸ್ಯೆ ಇಲ್ಲ ಅಂತಾರೆ. ಸಿಎಸ್ ಇನ್ನೂ ಕೋವಿಶೀಲ್ಡ್ ಬರಬೇಕು ಅಂತಾರೆ. ಸರ್ಕಾರ ಎಲ್ಲವನ್ನೂ ಮುಚ್ಚಿಡುತ್ತಿದೆ. ನಾವು ಸುಮ್ಮನೆ ಕುಳಿತರೆ ಸಾಧ್ಯವಿಲ್ಲ. ಸರ್ಕಾರವನ್ನು ಬಡಿದೆಚ್ಚರಿಸಬೇಕಿದೆ. ಬೆಡ್ ಸಮಸ್ಯೆ ಇನ್ನೂ ಸುಧಾರಿಸಿಲ್ಲ. ಆಕ್ಸಿಜನ್ ಸಿಗ್ತಿಲ್ಲ, ಕೇಂದ್ರದಿಂದ ಬಂದಿಲ್ಲ. ನಿನ್ನೆ 1200 ಮೆಟ್ರಿಕ್ ಟನ್ ಆಕ್ಸಿಜನ್ ಬಂದಿದೆ. ಅದು ಬೆಂಗಳೂರಿನ ಬೇಡಿಕೆ ಸಾಕಾಗಲ್ಲ. ಸಿಎಂ, ಸಚಿವರು ಬರೀ ಸಭೆ ನಡೆಸುವುದರಲ್ಲೇ ಕಾಲಹರಣ ಮಾಡ್ತಿದ್ದಾರೆ. ಜಿಲ್ಲಾ ಕೇಂದ್ರಗಳ ಪರಿಸ್ಥಿತಿ ಬಗ್ಗೆ ಇವರು ಗಮನ ನೀಡುತ್ತಿಲ್ಲ. ಬೆಂಗಳೂರಿನ ಕಡೆ ಹೆಚ್ಚು ಗಮನ ನೀಡುತ್ತಿದ್ದಾರೆ ಎಂದು ಸಭೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹೇಳಿದರು.
ಇದನ್ನು ಓದಿ: Coronavirus India Updates: ದೇಶದಲ್ಲಿ ಮತ್ತೆ ಮೂರೂವರೆ ಲಕ್ಷದಷ್ಟು ಕೊರೋನಾ ಪ್ರಕರಣಗಳು ಪತ್ತೆ!
ಸರ್ಕಾರ ಬರಿ ಸುಳ್ಳು ಹೇಳಿಕೊಂಡೇ ಕಾಲಹರಣ ಮಾಡ್ತಿದೆ. ವ್ಯಾಕ್ಸಿನ್ ಬಂದಿಲ್ಲ, ಬೆಡ್ ಸಿಗುತ್ತಿಲ್ಲ. ಲಾಕ್ ಡೌನ್ ಮಾಡಿದರೂ ಸೋಂಕು ಕಡಿಮೆಯಾಗ್ತಿಲ್ಲ. ಸಾವು ನೋವಿನ ಪ್ರಮಾಣ ಹೆಚ್ಚಾಗುತ್ತಿದೆ. ಸರ್ಕಾರ ಸಾವಿನ ಲೆಕ್ಕವನ್ನು ಸರಿಯಾಗಿ ಕೊಡ್ತಿಲ್ಲ. ಈ ವಿಚಾರವಾಗಿ ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ಕಾಂಗ್ರೆಸ್ ದೀಢೀರ್ ಧರಣಿಗೆ ನಿರ್ಧಾರ ಮಾಡಿದೆ. ಸಭೆಯ ಬಳಿಕ ಪ್ರತಿಭಟನೆ ನಡೆಸಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ