ಪೊಲೀಸರು, ವೈದ್ಯರು, ನಿರ್ಗತಿಕರ ಹಸಿವಿಗೆ ಮಿಡಿದ ಹೃದಯಗಳು: ಶ್ರೀ ಕೇಟರ್ಸ್​ ಮತ್ತು ನಿಯತಿ ಈವೆಂಟ್ಸ್​ನಿಂದ ಸಾವಿರಾರು ಮಂದಿಗೆ ಉಚಿತ ಊಟ

ಮೈಸೂರು ಜಿಲ್ಲೆಯಲ್ಲಿ ಎಲ್ಲಾ ಅಂಗಡಿ ಮುಂಗಟ್ಟು, ಹೊಟೇಲ್‍ಗಳು ಸಂಪೂರ್ಣ ಬಂದ್ ಆಗಿದ್ದು, ನಿರ್ಗತಿಕರು ಮತ್ತು ಭಿಕ್ಷಕರಿಗೆ ಒಂದೊತ್ತಿನ ಅನ್ನ ನೀರು ಕೂಡ ಸಿಗದಂತಹ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಹೀಗೆ ಶ್ರೀಧರ್​​ ಮೂರ್ತಿ ಮಾಲೀಕತ್ವದ ಶ್ರೀ ಕೇಟರ್ಸ್​​ ಬಡವರ ಹೊಟ್ಟೆ ತುಂಬಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಕೆಲಸ.

news18-kannada
Updated:April 5, 2020, 4:16 PM IST
ಪೊಲೀಸರು, ವೈದ್ಯರು, ನಿರ್ಗತಿಕರ ಹಸಿವಿಗೆ ಮಿಡಿದ ಹೃದಯಗಳು: ಶ್ರೀ ಕೇಟರ್ಸ್​ ಮತ್ತು ನಿಯತಿ ಈವೆಂಟ್ಸ್​ನಿಂದ ಸಾವಿರಾರು ಮಂದಿಗೆ ಉಚಿತ ಊಟ
ನಿರ್ಗತಿಕರ ಹಸಿವಿಗೆ ಮಿಡಿದ ಶ್ರೀಧರ್​​ ಮೂರ್ತಿ ಹೃದಯ: ಶ್ರೀ ಕೇಟರ್ಸ್​​ನಿಂದ ಸಾವಿರಾರು ಮಂದಿಗೆ ಉಚಿತ ಊಟ
  • Share this:
ಮೈಸೂರು(ಏ.05): ಕೊರೋನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಮೈಸೂರು ಸೇರಿದಂತೆ ಇಡೀ ಭಾರತವನ್ನೇ 21 ದಿನಗಳ ಲಾಕ್ ಡೌನ್ ಮಾಡಲಾಗಿದೆ. ಸದಾ ಪ್ರವಾಸಿಗರಿಂದಲೇ ಗಿಜಿಗಿಜಿಗುಡುವ ಮೈಸೂರು ಜನ ಮತ್ತು ವಾಹನ ಸಂಚಾರವಿಲ್ಲದೇ ಬಹುತೇಕ ಸ್ತಬ್ದಗೊಂಡಿದೆ. ಸರ್ಕಾರದ ಆದೇಶದಂತೆ ಅಲ್ಲಲ್ಲಿ ಕೆಲ ಅಂಗಡಿ-ಮುಂಗಟ್ಟುಗಳಷ್ಟೇ ಬಾಗಿಲು ತೆರೆದಿವೆ. ರಸ್ತೆ ಬದಿ ಹೋಟೆಲ್​ಗಳೆಲ್ಲವೂ ಬಂದ್ ಆಗಿವೆ. ಬಡವರಿಗೆ ಊಟ ಮಾಡಲು ಅವಕಾಶ ಇದ್ದ ಎಲ್ಲಾ ಅವಕಾಶಗಳು ಮುಚ್ಚಿವೆ. ರಸ್ತೆಬದಿ ಹೋಟೆಲ್​ಗಳನ್ನು ನಂಬಿಕೊಂಡಿದ್ದ ನಿರ್ಗತಿಕರು ಊಟಕ್ಕಾಗಿ ಪರದಾಡುವಂತಾಗಿದೆ. ಇಂಥ ಪರಿಸ್ಥಿತಿಯಲ್ಲಿ ನಿರ್ಗತಿಕರ ಸಹಾಯಕ್ಕೆ ಶ್ರೀಧರ ಮೂರ್ತಿ ಮಾಲೀಕತ್ವದ ಶ್ರೀ ಕೇಟರ್ಸ್ ಮುಂದಾಗಿದೆ. ಕೊರೋನಾ ವಿರುದ್ಧ ತಮ್ಮ ಜೀವನ್ನು ಪಣಕಿಟ್ಟು ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂದಿ, ಆರೋಗ್ಯ ಇಲಾಖೆ ಸಿಬ್ಬಂದಿ, ಪೊಲೀಸರು ಮತ್ತು ಬಡವರಿಗೆ ಶ್ರೀ ಕೇಟರ್ಸ್​​ ಶ್ರೀಧರ್​​ ಮೂರ್ತಿ ಮತ್ತು ನಿಯತಿ ಈವೆಂಟ್ಸ್​ನ ರಾಕೇಶ್, ಡಿಎನ್‌ಆರ್ ಅಸೋಸಿಯೇಟ್ಸ್‌ನ ನಾಗೇಶ್​​​ ಮೂರೊತ್ತು ಉಚಿತ ಊಟ-ತಿಂಡಿ ವಿತರಣೆ ಮಾಡಲಾಗುತ್ತಿದೆ.​​ಹೌದು, ಶ್ರೀ ಕೇಟರ್ಸ್​​ ಮಾಲೀಕ ಶ್ರೀಧರ್​​ ಮೂರ್ತಿ ಮತ್ತು ಮಗ ರಾಜೀವ್​​ ಸೇರಿದ ಹಲವರ ತಂಡ ಭಿಕ್ಷುಕರು, ನಿರ್ಗತಿಕರಿಗೆ ಊಟ ನೀಡಿ ಮಾನವೀಯತೆ ಮರೆದಿದ್ದಾರೆ. ಹಾಗೆಯೇ ಲಾಕ್​​ಡೌನ್​​ ಸಂದರ್ಭದಲ್ಲಿ ಜನರು ರಸ್ತೆಗೆ ಇಳಿಯದಂತೆ ತಡೆಯಲು ಹರಸಾಹದ ಪಡುತ್ತಿರುವ ಪೊಲೀಸರಿಗೂ ಮತ್ತು ಜನರನ್ನು ರಕ್ಷಿಸುತ್ತಿರುವ ವೈದ್ಯಕೀಯ ಸಿಬ್ಬಂದಿಗೂ ಊಟ ನೀಡುತ್ತಿದ್ದಾರೆ. ಇದರ ನಡುವೆ ನಿರ್ಗತಿಕರಿಗೆ, ಭಿಕ್ಷುಕರನ್ನು ಹುಡುಕಿ ಅವರಿಗೆ ಊಟ ನೀಡಿ ಅವರ ಅಸಿವು ನೀಗಿಸುವ ಕೆಲವನ್ನೂ ಮಾಡುತ್ತಿದ್ದಾರೆ.ಈ ಸಂಬಂಧ ಸುದ್ದಿಗಾರರೊಂದಿಗೆ ಮಾತಾಡಿದ ಶ್ರೀ ಕೇಟರ್ಸ್​ ಮಾಲೀಕ ಶ್ರೀಧರ್​​ ಮೂರ್ತಿ, ಕೊರೋನಾ ಪರಿಸ್ಥಿತಿ ಹತೋಟಿಗೆ ಬರೆವವರೆಗೂ ನಾವು ಉಚಿತ ಊಟ ಮತ್ತು ತಿಂಡಿ ವ್ಯವಸ್ಥೆ ಮಾಡುತ್ತೇವೆ. ಕಳೆದ ಎರಡು ವಾರಗಳಿಂದ ಈ ಕಾರ್ಯ ಮಾಡುತ್ತಿದ್ದೇವೆ. ಇಡೀ ನಗರದಾದ್ಯಂತ ಹಸಿವಿನಿಂದ ಪರಾದಾಡುತ್ತಿರುವ ಎಲ್ಲರಿಗೂ ಊಟ-ತಿಂಡಿ ನೀಡಲು ಯತ್ನಿಸುತ್ತಿದ್ದೇವೆ. ಸುಮಾರು ದಿನಕ್ಕೆ 500 ಮಂದಿಯ ಹಸಿವು ತುಂಬಿಸುತ್ತೇವೆ. ಹೀಗೆ ಎರಡು ವಾರಗಳಲ್ಲಿ 10 ಸಾವಿರಕ್ಕೂ ಹೆಚ್ಚು ಮಂದಿ ಹಸಿವು ನೀಗಿಸಿದ್ದೇವೆ ಎಂದರು.ಇತ್ತೀಚೆಗೆ ಮೈಸೂರಿನಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆಯೇ, ಜಿಲ್ಲೆಯನ್ನು ಮಾರ್ಚ್ 20 ರಿಂದಲೇ ಲಾಕ್ ಡೌನ್ ಮಾಡಲಾಗಿತ್ತು. ಅಂದಿನಿಂದ ಇಂದಿನವರೆಗೂ ಶ್ರೀಧರ್​​​ ಮೂರ್ತಿ ಮತ್ತವರ ತಂಡ ಪೊಲೀಸರು, ವೈದ್ಯರು, ಆರೋಗ್ಯ ಇಲಾಖೆ ಸಿಬ್ಬಂದಿ, ನಿರ್ಗತಿಕರು, ಬೀದಿಯಲ್ಲಿ ಭಿಕ್ಷೆ ಬೇಡಿ ಬದುಕುತ್ತಿದ್ದವರನ್ನು ಹುಡುಕಿ ಮೂರುತ್ತಿನ ಊಟ ಪೂರೈಕೆ ಮಾಡುತ್ತಿದ್ದಾರೆ. ಆ ಮೂಲಕ ನಿರ್ಗತಿಕರ ಹೊಟ್ಟೆ ತುಂಬಿಸಿ ಹಸಿವು ನೀಗಿಸುವ ಕೆಲಸ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಮೈಸೂರು ಜಿಲ್ಲೆಯಲ್ಲಿ ಎಲ್ಲಾ ಅಂಗಡಿ ಮುಂಗಟ್ಟು, ಹೊಟೇಲ್‍ಗಳು ಸಂಪೂರ್ಣ ಬಂದ್ ಆಗಿದ್ದು, ನಿರ್ಗತಿಕರು ಮತ್ತು ಭಿಕ್ಷಕರಿಗೆ ಒಂದೊತ್ತಿನ ಅನ್ನ ನೀರು ಕೂಡ ಸಿಗದಂತಹ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಹೀಗೆ ಶ್ರೀಧರ್​​ ಮೂರ್ತಿ ಮಾಲೀಕತ್ವದ ಶ್ರೀ ಕೇಟರ್ಸ್ ಮತ್ತು ರಾಕೇಶ್​​ ನೇತೃತ್ವದ ನಿಯತಿ ಈವೆಂಟ್ಸ್​​​​ ಬಡವರ ಹೊಟ್ಟೆ ತುಂಬಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಕೆಲಸ.
First published: April 5, 2020, 3:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading