ದೆಹಲಿಯಲ್ಲಿ ಅಗತ್ಯವಸ್ತು ಅಂಗಡಿಗಳು 24 ಗಂಟೆ ತೆರೆಯಲಿವೆ: ಆದರೆ ಜನ ಗುಂಪು ಸೇರದಂತೆ ಕೇಜ್ರಿವಾಲ್​ ಮನವಿ

ಎಲ್-ಜಿ ಅನಿಲ್ ಬೈಜಾಲ್ ಅವರೊಂದಿಗಿನ ಸಭೆಯಲ್ಲಿ ಭಾಗವಹಿಸಿ ನಂತರ ಮಾತನಾಡಿದ ಕೇಜ್ರಿವಾಲ್, ರಾಜಧಾನಿಯಲ್ಲಿ ಒಟ್ಟು 36 ಕೊರೋನಾ ವೈರಸ್ ಪ್ರಕರಣಗಳು ದೃಢವಾಗಿದೆ ಎಂದಿದ್ದಾರೆ.

news18-kannada
Updated:March 26, 2020, 2:53 PM IST
ದೆಹಲಿಯಲ್ಲಿ ಅಗತ್ಯವಸ್ತು ಅಂಗಡಿಗಳು 24 ಗಂಟೆ ತೆರೆಯಲಿವೆ: ಆದರೆ ಜನ ಗುಂಪು ಸೇರದಂತೆ ಕೇಜ್ರಿವಾಲ್​ ಮನವಿ
ಅರವಿಂದ್ ಕೇಜ್ರಿವಾಲ್
  • Share this:
ನವದೆಹಲಿ: ವಿಪರೀತ ಜನ ಸಂದಣಿಯನ್ನು ತಪ್ಪಿಸಲು ಅಗತ್ಯ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳಿಗೆ 24x7 ಕಾರ್ಯನಿರ್ವಹಿಸಲು ಅವಕಾಶ ನೀಡಲಾಗುವುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗುರುವಾರ ಹೇಳಿದ್ದಾರೆ. ಇದು ಅಗತ್ಯ ವಸ್ತುಗಳ ಬಗ್ಗೆ ತಲೆಕೆಡಿಸಿಕೊಂಡಿದ್ದ ಜನರನ್ನು ನಿರಳವಾಗಿಸಿದೆ.

ಎಲ್-ಜಿ ಅನಿಲ್ ಬೈಜಾಲ್ ಅವರೊಂದಿಗಿನ ಸಭೆಯಲ್ಲಿ ಭಾಗವಹಿಸಿದ ಕೇಜ್ರಿವಾಲ್, ರಾಜಧಾನಿಯಲ್ಲಿ ಒಟ್ಟು 36 ಕೊರೋನಾ ವೈರಸ್ ಪ್ರಕರಣಗಳು ವರದಿಯಾಗಿವೆ ಎಂದು ಹೇಳಿದ್ದಾರೆ. ಅಲ್ಲದೆ ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು, ಅರೆವೈದ್ಯಕೀಯ ಸಿಬ್ಬಂದಿಗಳ ಆರೋಗ್ಯ ಪರೀಕ್ಷೆಗಳನ್ನು ಮುಂದುವರಿಸಲಿದೆ ಎಂದು ಹೇಳಿದರು.

ಜನರು ಹೆಚ್ಚಾಗಿ ಮನೆಯೊಳಗೆ ಇದ್ದಾರೆ ಮತ್ತು ಪರಿಸ್ಥಿತಿ ನಿಯಂತ್ರಣದಲ್ಲಿದೆ. ಆದರೆ ಮಾರಣಾಂತಿಕ ವೈರಸ್ ಹರಡುವುದನ್ನು ತಡೆಯಲು ಹೆಚ್ಚಿನ ಎಚ್ಚರಿಕೆಯ ಅಗತ್ಯವಿದೆ ಎಂದು ಕೇಜ್ರಿವಾಲ್ ಹೇಳಿದರು.

ದೆಹಲಿಯ ಮೊಹಲ್ಲಾ ಚಿಕಿತ್ಸಾಲಯದ ವೈದ್ಯರೊಬ್ಬರಲ್ಲಿ ಸೋಂಕು ದೃಢವಾಗಿದ್ದು ಆದರೆ ಚಿಕಿತ್ಸಾಲಯವನ್ನು ಮುಚ್ಚುವುದಿಲ್ಲ ಎಂದಿದ್ದಾರೆ. ಆ ವೈದ್ಯರೊಂದಿಗೆ ಸಂಪರ್ಕಕ್ಕೆ ಬಂದ ನಂತರ ಸುಮಾರು 800 ಜನರನ್ನು ಐಸೋಲೇಶನ್ ನಲ್ಲಿ ಇಡಲಾಗಿದೆ. ಅಲ್ಲದೆ ಅವರ ಪತ್ನಿ ಮತ್ತು ಮಗಳಲ್ಲಿ ಸಹ ವೈರಸ್ ಸೋಂಕು ಪತ್ತೆಯಾಗಿದೆ.

ಅಗತ್ಯ ಸೇವೆಗಳಲ್ಲಿ ತೊಡಗಿರುವ ವ್ಯಕ್ತಿಗಳು ಮತ್ತು ವಾಹನಗಳು ರಾಷ್ಟ್ರ ರಾಜಧಾನಿಯಲ್ಲಿ ಕಾರ್ಯನಿರ್ವಹಿಸಲು ಅವಕಾಶ ನೀಡುವಂತೆ ದೆಹಲಿ ಪೊಲೀಸರು ಗುರುವಾರ ತನ್ನ ಎಲ್ಲ ಸಿಬ್ಬಂದಿಗೆ ನಿರ್ದೇಶನ ನೀಡಿದ್ದು, ಚಿಲ್ಲರೆ ವ್ಯಾಪಾರಿಗಳು ಮತ್ತು ಆನ್ಲೈನ್ ವಿತರಣಾ ಸಂಸ್ಥೆಗಳಿಗೆ ಸಹ ಇಲ್ಲಿ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚಿಲ್ಲರೆ ವ್ಯಾಪಾರಿಗಳು, ನಿರ್ವಾಹಕರು ಮತ್ತು ಆನ್ಲೈನ್ ವಿತರಣಾ ಸೇವೆಗಳನ್ನು ದೆಹಲಿಯಲ್ಲಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡಲು ಎಲ್ಲಾ ಸಂಚಾರ, ಪಿಕೆಟ್ ಮತ್ತು ಬೀಟ್ ಸಿಬ್ಬಂದಿಗೆ ವಿವರಿಸಲಾಗಿದೆ.

ದೆಹಲಿ ಪೊಲೀಸರು ಇ-ಕಾಮರ್ಸ್ ವೆಬ್ಸೈಟ್ಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಅಗತ್ಯ ಸೇವೆಗಳ ಸುಗಮ ಸಂಚಾರ ನಡೆಸಲು ಸಹಾಯ ಮಾಡುವ ಭರವಸೆ ನೀಡಿದ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.ಫ್ಲಿಪ್ಕಾರ್ಟ್, ಅಮೆಜಾನ್, 24 ಸೆವೆನ್, ಬ್ಲೂ ಡಾರ್ಟ್, ಡಿಟಿಡಿಸಿ, ವಾವ್ ಎಕ್ಸ್ಪ್ರೆಸ್, ಸ್ವಿಗ್ಗಿ, ಗ್ರೋಫರ್ಸ್, ಬಿಗ್ಬಾಸ್ಕೆಟ್, ಮಿಲ್ಕ್ಬಾಸ್ಕೆಟ್, ಡಂಜೊ, ಬಿಗ್ ಬಜಾರ್, ಸ್ನ್ಯಾಪ್ಡೀಲ್, ಲೈಸಿಯಸ್, ಮೆಡ್ಲೈಫ್, ಹೊನ್ಸಾ ಕನ್ಮ್ಯೂಮರ್ ಪಿ.ವಿ. ಲಿಮಿಟೆಡ್, ಹೆಲ್ತಿಯನ್ಸ್ ಡಯಾಗ್ನೋಸ್ಟಿಕ್ಸ್, ದೆಹಲಿ ಪ್ರೈವೇಟ್ ಲಿಮಿಟೆಡ್, ನ್ಯೂಟ್ರಿಮೂ ಮಿಲ್ಕ್ ಡೈರಿ, ಮೋರ್ ರಿಟೇಲ್ ಲಿಮಿಟೆಡ್, ಈಸಿಡೇ, ಜಬೊಂಗ್, ಮಿಂಟ್ರಾ, ಸ್ಪೆನ್ಸರ್, ರಿಲಯನ್ಸ್ ಫ್ರೆಶ್, ಜುಬಿಲೆಂಟ್ ಫುಡ್ ವರ್ಕ್ಸ್, , ಪಿಜ್ಜಾ ಹಟ್, ಉಬರ್ ಈಟ್ಸ್, ನೀಡ್ಸ್ ಸೂಪರ್ಮಾರ್ಟ್ ಪ್ರೈವೇಟ್ ಲಿಮಿಟೆಡ್, ಡಾ ಲಾಲ್ ಪಾತ್ ಲ್ಯಾಬ್ಸ್, ಮ್ಯಾಕ್ಸ್-ಪಾತ್, ಮತ್ತು ಇತರ ಯಾವುದೇ ಇ-ಕಾಮರ್ಸ್ ವ್ಯಾಪಾರಿಗಳು ಮತ್ತು ನಿರ್ವಾಹಕರಿಗೆ ರಾಷ್ಟ್ರ ರಾಜಧಾನಿಯಲ್ಲಿ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಕೊರೋನಾ ಪರಿಹಾರಕ್ಕಾಗಿ ಕೊನೆಗೂ 1.7 ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಿದ ಕೇಂದ್ರ ಸರ್ಕಾರ

ಪೊಲೀಸರು ಇ-ಕಾಮರ್ಸ್ ವೆಬ್ಸೈಟ್ಗಳಿಗಾಗಿ ಒಂದು ಹೆಲ್ಪ್ ಡೆಸ್ಕ್ ಆರಂಭಿಸಿದ್ದು ಅಲ್ಲಿ ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ಹಂಚಿಕೊಳ್ಳಬಹುದು, ಇದರಿಂದಾಗಿ ಸಮಸ್ಯೆಗಳನ್ನು ಪರಿಹರಿಸಲು ಪೊಲೀಸರು ಸಹಾಯ ಮಾಡುತ್ತಾರೆ.

ಇ-ಕಾಮರ್ಸ್ ವೆಬ್ಸೈಟ್ಗಳ ಡೆಲಿವರಿ ಏಜೆಂಟರಿಗೂ ಪಾಸ್ಗಳನ್ನು ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಲಾಕ್‌ಡೌನ್ ಪರಿಹಾರಕ್ಕಾಗಿ 1.7 ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಿದ ಕೇಂದ್ರ ಸರ್ಕಾರ; ಯಾವ ವಲಯಕ್ಕೆ ಎಷ್ಟು ಹಣ? ಇಲ್ಲಿದೆ ಮಾಹಿತಿ

ದೇಶದಲ್ಲಿ ಕೊರೋನಾ ವೈರಸ್ ಏಕಾಏಕಿ ಹರಡುತ್ತಿರುವ ಹಿನ್ನೆಲೆಯಲ್ಲಿ ಜನರು ಸಾಮಾಜಿಕವಾಗಿ ದೂರವನ್ನು ಕಾಪಾಡಿಕೊಂಡು ಬರುವುದು ಏಕೈಕ ಮಾರ್ಗವಾಗಿದೆ. ಹಾಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಮಧ್ಯರಾತ್ರಿಯಿಂದ 21 ದಿನಗಳವರೆಗೆ ದೇಶಾದ್ಯಂತ ಸಂಪೂರ್ಣ ಲಾಕ್ ಡೌನ್ ಘೋಷಿಸಿದ್ದಾರೆ.

(ವರದಿ: ಸಂಧ್ಯಾ ಎಂ)
First published:March 26, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading