ಬೂಟುಗಳಿಂದ ಕೂಡ ಸೋಂಕು ಹರಡಬಹುದು: ಅದಕ್ಕೆ ನೀವೇನು ಮಾಡಬೇಕು? ಎಂಬುದನ್ನು ತಿಳಿಯಿರಿ

ಇದು ಅನೇಕ ರೀತಿಯ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳಿಗೆ ಸಂತಾನೋತ್ಪತ್ತಿ ಮಾಡುವ ಪ್ರದೇಶವಾಗಬಹುದು. ವೈರಸ್​ಗಳು ಮತ್ತು ಬ್ಯಾಕ್ಟೀರಿಯಾಗಳು ನಿಮ್ಮ ಮನೆಗೆ ಬೂಟುಗಳ ಮೂಲಕ ತಲುಪಬಹುದು.

news18-kannada
Updated:June 4, 2020, 10:02 PM IST
ಬೂಟುಗಳಿಂದ ಕೂಡ ಸೋಂಕು ಹರಡಬಹುದು: ಅದಕ್ಕೆ ನೀವೇನು ಮಾಡಬೇಕು? ಎಂಬುದನ್ನು ತಿಳಿಯಿರಿ
Shoe
  • Share this:
ಪ್ರಸ್ತುತ ಪರಿಸ್ಥಿತಿಯಲ್ಲಿ ನಾವು ಎಷ್ಟು ಎಚ್ಚರಿಕೆ ವಹಿಸುತ್ತೇವೊ ಅಷ್ಟು ಒಳ್ಳೆಯದು. ಏಕೆಂದರೆ ಕೊರೋನಾ ವೈರಸ್ ಮಹಾಮಾರಿ ದಿನದಿಂದ ದಿನಕ್ಕೆ ವೇಗವಾಗಿ ಹರಡುತ್ತಿದೆ. ಇದರಿಂದಾಗಿ ಪ್ರತಿಯೊಂದು ವಿಷಯದಲ್ಲೂ ನಾವು ಮುನ್ನಚ್ಚೆರಿಕೆವಹಿಸಿಕೊಳ್ಳಬೇಕು. ಆದರೂ ನಾವು ಕೆಲವೊಂದು ವಿಷಯದಲ್ಲಿ ನಿರ್ಲಕ್ಷ್ಯವಹಿಸುವುದು ಸಾಮಾನ್ಯ. ಅದರಲ್ಲೊಂದು ಶೂ ಧರಿಸುವುದು.

ಏಕೆಂದರೆ ಪಾದರಕ್ಷೆಯಿಂದ ಅನೇಕ ಅನಾರೋಗ್ಯದ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಸಾಮಾನ್ಯವಾಗಿ ಹೊರಗಿನಿಂದ ಬಂದ ಬಳಿಕ ಶೂ ಬಿಚ್ಚಿಡುತ್ತೇವೆ. ಆದರೆ ಆ ಬಳಿಕ ಕೈಗಳನ್ನು ಸ್ವಚ್ಛಗೊಳಿಸುವ ವಿಷಯದಲ್ಲಿ ನಿರ್ಲಕ್ಷ್ಯವಹಿಸುತ್ತೇವೆ. ಆದರೆ ನಿಮ್ಮ ಬೂಟುಗಳು ಸಹ ಅನೇಕ ಕಾಯಿಲೆಗಳಿಗೆ ಕಾರಣವಾಗಬಹುದು ಎಂಬುದು ನೆನಪಿರಲಿ.

ಪಾದರಕ್ಷೆಯ ಮೂಲಕ ಹೊರಗಿನಿಂದ ಕೊಳಕುಗಳು ನಿಮ್ಮ ಮನೆ ಪ್ರವೇಶಿಸುತ್ತವೆ. ಹೆಚ್ಚಿನ ಬೂಟುಗಳು ಚರ್ಮ, ರಬ್ಬರ್ ಮತ್ತು ಪ್ಲಾಸ್ಟಿಕ್‌ನಿಂದ ಮಾಡಲ್ಪಟ್ಟಿರುತ್ತವೆ. ಇದು ಅಪಾಯಕಾರಿ ವೈರಸ್​ ವಾಹಕಗಳಾಗಿ ಪರಿಣಮಿಸಬಹುದು. ಅನೇಕ ಹಾನಿಕಾರಕ ವೈರಸ್​ಗಳು ಹಲವಾರು ದಿನಗಳವರೆಗೆ ಬೂಟುಗಳು ಮತ್ತು ಚಪ್ಪಲಿಗಳಲ್ಲಿ ಉಳಿಯಬಹುದು.

ಇದು ಅನೇಕ ರೀತಿಯ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳಿಗೆ ಸಂತಾನೋತ್ಪತ್ತಿ ಮಾಡುವ ಪ್ರದೇಶವಾಗಬಹುದು. ವೈರಸ್​ಗಳು ಮತ್ತು ಬ್ಯಾಕ್ಟೀರಿಯಾಗಳು ನಿಮ್ಮ ಮನೆಗೆ ಬೂಟುಗಳ ಮೂಲಕ ತಲುಪಬಹುದು. ನೀವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳದಿದ್ದರೆ, ಅದು ನಿಮಗೆ ಮತ್ತು ಇತರರಿಗೆ ಸೋಂಕು ಹರಡಲು ಕಾರಣವಾಗಬಹುದು.

ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು:

- ಯಾವಾಗಲೂ ಮನೆಯ ಹೊರಗೆ ಬೂಟುಗಳನ್ನು ತೊರೆಯಲು ಪ್ರಯತ್ನಿಸಿ.

- ಪಾದಗಳಿಂದ ಬೂಟುಗಳನ್ನು ತೆಗೆದ ನಂತರ, ಕೈ ಮತ್ತು ಕಾಲುಗಳನ್ನು ಸೋಪಿನಿಂದ ಚೆನ್ನಾಗಿ ತೊಳೆಯಿರಿ.- ಮನೆಯ ಹೊರಗೆ ಮತ್ತು ಒಳಗೆ ಪ್ರತ್ಯೇಕ ಚಪ್ಪಲಿಗಳನ್ನು ಇರಿಸಿ.

- ನಿಯಮಿತವಾಗಿ ಬೂಟುಗಳನ್ನು ಸ್ವಚ್ಛಗೊಳಿಸಿ. ಹಾಗೆಯೇ ಪ್ರತಿನಿತ್ಯ ಸಾಕ್ಸ್​ಗಳನ್ನು ಬದಲಿಸಿ.

- ಸಾಧ್ಯವಾದರೆ ಎರಡು ದಿನಕ್ಕೊಮ್ಮೆ ಸ್ಯಾನಿಟೈಜರ್​ನಿಂದ ನಿಮ್ಮ ಪಾದರಕ್ಷೆಗಳನ್ನು ಸ್ವಚ್ಛಗೊಳಿಸಿ.

First published: June 4, 2020, 10:02 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading