HOME » NEWS » Coronavirus-latest-news » SHOCKING NEWS AFTER ENDING LOCKDOWN EMPLOYEES MAY HAVE TO WORK 12 HOURS IN COMPANY SCT

Lockdown Effects: ಲಾಕ್​ಡೌನ್ ಬಳಿಕ ಆಫೀಸ್​ನಲ್ಲಿ 12 ಗಂಟೆ ಕೆಲಸ ಕಡ್ಡಾಯ?; ಸುಗ್ರೀವಾಜ್ಞೆಗೆ ಸರ್ಕಾರ ಚಿಂತನೆ

Lockdown Effect On Employment: ಲಾಕ್​ಡೌನ್​ನಿಂದಾಗಿ ಊರಿಗೆ ಹೋಗಿರುವ ಅನೇಕ ಉದ್ಯೋಗಿಗಳು ವಾಪಾಸ್ ಕೆಲಸಕ್ಕೆ ಬರುವುದಿಲ್ಲ. ಒಂದುವೇಳೆ ಬಂದರೂ ಕೊರೋನಾ ವೈರಸ್​ ಭೀತಿಯಿಂದಾಗಿ ಲಾಕ್​ಡೌನ್​ ನಂತರವೂ ಕೆಲವು ತಿಂಗಳು ಸುರಕ್ಷತಾ ದೃಷ್ಟಿಯಿಂದ ಕಂಪನಿಗೆ ಕೆಲಸಕ್ಕೆ ಹಾಜರಾಗುವ ಸಾಧ್ಯತೆ ಕಡಿಮೆ.

news18-kannada
Updated:April 15, 2020, 9:57 AM IST
Lockdown Effects: ಲಾಕ್​ಡೌನ್ ಬಳಿಕ ಆಫೀಸ್​ನಲ್ಲಿ 12 ಗಂಟೆ ಕೆಲಸ ಕಡ್ಡಾಯ?; ಸುಗ್ರೀವಾಜ್ಞೆಗೆ ಸರ್ಕಾರ ಚಿಂತನೆ
ಪ್ರಾತಿನಿಧಿಕ ಚಿತ್ರ
  • Share this:
ನವದೆಹಲಿ (ಏ. 15): ಲಾಕ್​ಡೌನ್​ನಿಂದಾಗಿ ಮನೆಯಲ್ಲಿ ಕುಳಿತು ಆಫೀಸಿನ ಕೆಲಸ ಮಾಡುತ್ತಿರುವವರು ಇನ್ನುಮುಂದೆ ದಿನಕ್ಕೆ 12 ಗಂಟೆ ಕೆಲಸ ಮಾಡಬೇಕಾಗುತ್ತದಾ? ಹೀಗೊಂದು ಚರ್ಚೆ ಸರ್ಕಾರದ ಮಟ್ಟದಲ್ಲೂ ನಡೆಯುತ್ತಿದೆ. ಹಾಗೇನಾದರೂ ಆದರೆ, ಉದ್ಯೋಗಿಗಳಿಗೆ ಈ ಲಾಕ್​ಡೌನ್​ ದೊಡ್ಡ ಹೊಡೆತ ಕೊಡುವುದು ಗ್ಯಾರಂಟಿ.

ಲಾಕ್​ಡೌನ್​ನಿಂದಾಗಿ ಸರ್ಕಾರಿ, ಖಾಸಗಿ ವಲಯದ ಅನೇಕ ಕಂಪನಿಗಳ ಕೆಲಸ ಬಾಕಿ ಉಳಿದಿವೆ. ಕೆಲವು ಕಂಪನಿಗಳು ಮಾತ್ರ ವರ್ಕ್ ಫ್ರಂ ಹೋಂ (ಮನೆಯಿಂದಲೇ ಕೆಲಸ)ದ ಆಯ್ಕೆ ನೀಡಿವೆ. ಇದರಿಂದಾಗಿ ಕಂಪನಿಗಳ ಆರ್ಥಿಕ ಸ್ಥಿತಿಯ ಮೇಲೆ ಭಾರೀ ಹೊಡೆತ ಬಿದ್ದಿದೆ. ಹೀಗಾಗಿ, ಉದ್ಯಮಿಗಳ ಮತ್ತು ಮಾಲೀಕರ ಸಂಘಗಳು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು, ಲಾಕ್​ಡೌನ್​ ನಂತರ ಕೆಲಸದ ಅವಧಿಯನ್ನು 12 ಗಂಟೆಗೆ ವಿಸ್ತರಿಸಬೇಕೆಂದು ಬೇಡಿಕೆಯಿಟ್ಟಿವೆ.

ಇದನ್ನೂ ಓದಿ: Coronavirus India: ಭಾರತದಲ್ಲಿ ತೀಕ್ಷ್ಣವಾಗುತ್ತಿದೆ ಕೊರೋನಾ; ಕಳೆದ 24 ಗಂಟೆಯಲ್ಲಿ ಈ ವೈರಸ್‌ಗೆ 29 ಬಲಿ, 1463 ಹೊಸ ಪ್ರಕರಣ

ಸರ್ಕಾರಿ ಸಂಸ್ಥೆ ಮತ್ತು ಖಾಸಗಿ ಕಂಪನಿಗಳ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಕೆಲಸದ ಅವಧಿಯ ವಿಸ್ತರಣೆ ಬಗ್ಗೆ ಸುಗ್ರೀವಾಜ್ಞೆ ಹೊರಡಿಸಲು ಚಿಂತನೆ ನಡೆಸಿದೆ ಎನ್ನಲಾಗಿದೆ. ಲಾಕ್​ಡೌನ್​ ಸಂದರ್ಭದಲ್ಲಿ ಉಂಟಾದ ಹೊಡೆತವನ್ನು ಸರಿದೂಗಿಸಲು ತನ್ನ ಉದ್ಯೋಗಿಗಳಿಂದ ಹೆಚ್ಚು ಕೆಲಸ ಪಡೆಯಲು ಕಂಪನಿಗಳು ನಿರ್ಧರಿಸಿವೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೂ ಮನವಿ ಸಲ್ಲಿಸಿವೆ ಎಂದು ಎಕನಾಮಿಕ್ ಟೈಮ್ಸ್​ ವರದಿ ಮಾಡಿದೆ.

ಮೂಲಗಳ ಪ್ರಕಾರ, ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ಕೆಲಸದ ಅವಧಿ ಹೆಚ್ಚಿಸುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ನೀಡಲು ಕೇಂದ್ರ ಸರ್ಕಾರ ಚಿಂತಿಸಿದೆ. ಈಗಾಗಾಲೇ ಲಾಕ್​ಡೌನ್​ ಘೋಷಿಸಿದ 20 ದಿನಗಳಿಗೂ ಹೆಚ್ಚು ಸಮಯವಾಗಿರುವುದರಿಂದ ಊರಿಗೆ ಹೋಗಿರುವ ಅನೇಕ ಉದ್ಯೋಗಿಗಳು ವಾಪಾಸ್ ಬರುವ ಸಾಧ್ಯತೆ ಕಡಿಮೆ. ಒಂದುವೇಳೆ ಬಂದರೂ ಕೊರೋನಾ ವೈರಸ್​ ಭೀತಿಯಿಂದಾಗಿ ಲಾಕ್​ಡೌನ್​ ನಂತರವೂ ಕೆಲವು ತಿಂಗಳು ಸುರಕ್ಷತಾ ದೃಷ್ಟಿಯಿಂದ ಕಂಪನಿಗೆ ಕೆಲಸಕ್ಕೆ ಹಾಜರಾಗುವ ಸಾಧ್ಯತೆ ಕಡಿಮೆ.
ಹೀಗಾಗಿ, ನಷ್ಟವನ್ನು ಸರಿದೂಗಿಸಲು ಉದ್ಯೋಗಿಗಳ ಕೆಲಸದ ಅವಧಿಯನ್ನು ಇನ್ನೂ 4 ಗಂಟೆಗಳ ಕಾಲ ವಿಸ್ತರಣೆ ಮಾಡಬೇಕೆಂದು ಉದ್ಯಮಿಗಳು ಮತ್ತು ಮಾಲೀಕರು ಬೇಡಿಕೆಯಿಟ್ಟಿದ್ದಾರೆ. ಆದರೆ, ಈ ಬಗ್ಗೆ ಸರ್ಕಾರವಾಗಲಿ, ಕಾರ್ಮಿಕ ಇಲಾಖೆಯಾಗಲಿ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ.

ಇದನ್ನೂ ಓದಿ: ವಿಶ್ವಾದ್ಯಂತ 20 ಲಕ್ಷದ ಗಡಿಯತ್ತ ಕೊರೋನಾ ಸೋಂಕಿತರ ಸಂಖ್ಯೆ; 1.26 ಲಕ್ಷ ಸಾವುನಿನ್ನೆಯಷ್ಟೇ ಲಾಕ್​ಡೌನ್ ವಿಸ್ತರಣೆ ಬಗ್ಗೆ ಘೋಷಣೆ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಮೇ 3ರವರೆಗೆ ಮನೆಯಲ್ಲೇ ಸುರಕ್ಷಿತವಾಗಿರುವಂತೆ ಮನವಿ ಮಾಡಿದ್ದರು. ಹಾಗೇ, ಕೊರೋನಾದಿಂದ ಇಡೀ ದೇಶವೇ ಪರಿತಪಿಸುತ್ತಿದ್ದು, ಯಾವ ಕಂಪನಿಗಳು ಕೂಡ ಈ ಸಂದರ್ಭದಲ್ಲಿ ತನ್ನ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಬಾರದು ಎಂದು ಹೇಳಿದ್ದರು. ಹೀಗಾಗಿ, ಆರ್ಥಿಕ ಹೊಡೆತಕ್ಕೊಳಗಾಗಿರುವ ಕಂಪನಿಗಳು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುವ ಬದಲಾಗಿ ಅವರಿಂದ ಹೆಚ್ಚುವರಿ ಕೆಲಸ ಪಡೆಯುವ ಸಾಧ್ಯತೆಯಿದೆ.
First published: April 15, 2020, 9:48 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories