ಮಣಿವಣ್ಣನ್ ಅವರನ್ನು ಉಳಿಸಿಕೊಳ್ಳಲು ಸಚಿವ ಹೆಬ್ಬಾರ್ ವಿಫಲ ಯತ್ನ; ಉದ್ಯಮಿಗಳು ಲಾಬಿಗೆ ಮಣಿದರಾ ಸಿಎಂ?
ಕೈಗಾರಿಕೋದ್ಯಮಿಗಳ ಒತ್ತಡಕ್ಕೆ ಮಣಿದ ಸಿಎಂ ಬಿ.ಎಸ್. ಯಡಿಯೂರಪ್ಪ ಹಿರಿಯ ಅಧಿಕಾರಿ ಪಿ. ಮಣಿವಣ್ಣನ್ ಅವರನ್ನು ವರ್ಗಾವಣೆಗೊಳಿಸಿ ಆದೇಶಿಸಿದ್ದಾರೆ ಎನ್ನಲಾಗುತ್ತಿದೆ.
news18-kannada Updated:May 12, 2020, 11:24 AM IST

ಐಎಎಸ್ ಅಧಿಕಾರಿ ಮಣಿವಣ್ಣನ್ ಮತ್ತು ಸಿಎಂ ಬಿಎಸ್ವೈ.
- News18 Kannada
- Last Updated: May 12, 2020, 11:24 AM IST
ಬೆಂಗಳೂರು (ಮೇ 12); ದಿಢೀರೆಂದು ನಿನ್ನೆ ರಾತ್ರೋರಾತ್ರಿ ಕಾರ್ಮಿಕ ಇಲಾಖೆ ಕಾರ್ಯದರ್ಶಿ ಹಿರಿಯ ಐಎಎಸ್ ಅಧಿಕಾರಿ ಪಿ. ಮಣಿವಣ್ಣನ್ ಅವರನ್ನು ಕಾರ್ಮಿಕ ಇಲಾಖೆಯಿಂದ ಎತ್ತಂಗಡಿ ಮಾಡಿ ಆದೇಶಿಸಲಾಗಿತ್ತು. ಆದರೆ, ಈ ಎತ್ತಂಗಡಿಯ ಹಿಂದೆ ಕೈಗಾರಿಕೋದ್ಯಮಿಗಳ ಲಾಭಿ ಇದೆಯೇ? ಕೈಗಾರಿಕೋದ್ಯಮಿಗಳ ಒತ್ತಡದಿಂದಾಗಿ ಅಧಿಕಾರಿ ಮಣಿವಣ್ಣನ್ ಅವರನ್ನು ಸಿಎಂ ಯಡಿಯೂರಪ್ಪ ವರ್ಗಾವಣೆ ಮಾಡಿದ್ದಾರಾ? ಎಂಬ ಸಂಶಯ ಇದೀಗ ಬಲವಾಗುತ್ತಿದೆ.
ಏಕೆಂದರೆ ಮಣಿವಣ್ಣನ್ ಕಾರ್ಮಿಕ ಇಲಾಖೆಯಲ್ಲಿ ಒಳ್ಳೆಯ ಕೆಲಸ ಮಾಡಿದವರು. ಲಾಕ್ಡೌನ್ ನಡುವೆ ಪ್ರತಿದಿನ 1.30 ಲಕ್ಷ ಕಾರ್ಮಿಕರಿಗೆ ಊಟದ ವ್ಯವಸ್ಥೆ ಮಾಡಿದ್ದರು. 80 ಸಾವಿರ ಕಾರ್ಮಿಕರನ್ನು ಸುರಕ್ಷಿತವಾಗಿ ಅವರವರ ಊರಿಗೆ ತಲುಪಿಸಿದ್ದರು. ವೆಬ್ಸೈಟಿನಲ್ಲಿ ಪ್ರತಿದಿನ ಏನು ನಡೀತಿದೆ? ಎಂಬುದನ್ನು ಅಪ್ಡೇಟ್ ಮಾಡುತ್ತಿದ್ದರು. ಅಲ್ಲದೆ, ಕೊರೊನಾ ವಾರಿಯರ್ಸ್ ಟೀಮ್ ಮಾಡಿ ಕೊರೊನಾ ತಡೆಗಟ್ಟೋ ಕೆಲಸಕ್ಕೆ ಉಚಿತವಾಗಿ ಸೇವೆ ಪಡೆಯುತ್ತಿದ್ದರು. ಕಾರ್ಮಿಕ ಇಲಾಖೆಯಲ್ಲಿ ಕಾರ್ಮಿಕರ ಪರವಾಗಿ ಇಷ್ಟು ಉತ್ತಮ ಕೆಲಸ ಮಾಡಿದರೂ ಸಹ ಅವರನ್ನು ಏಕೆ ವರ್ಗಾವಣೆ ಮಾಡಲಾಯಿತು? ಎಂಬುದು ಈವರೆಗೆ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಸದ್ಯಕ್ಕೆ ಪಿ. ಮಣಿವಣ್ಣನ್ ಅವರ ವರ್ಗಾವಣೆ ಬೇಡ ಎಂದು ಸ್ವತಃ ಕಾರ್ಮಿಕ ಇಲಾಖೆ ಸಚಿವರೂ ಆದಂತಹ ಶಿವರಾಮ್ ಹೆಬ್ಬಾರ್ ಹೇಳಿಯೂ ಸಹ ಅದನ್ನು ಕೇಳದೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಿರಿಯ ಅಧಿಕಾರಿಯ ವರ್ಗಾವಣೆ ಮಾಡಿರುವುದು ಹತ್ತಾರು ಅನುಮಾನಕ್ಕೆ ಕಾರಣವಾಗಿದೆ.
ಕೈಗಾರಿಕೋದ್ಯಮಿಗಳ ಒತ್ತಕ್ಕೆ ಮಣಿದರಾ ಬಿಎಸ್ವೈ?:
ಅಸಲಿಗೆ ಲಾಕ್ಡೌನ್ನಿಂದಾಗಿ ಬಡ ಕಾರ್ಮಿಕರು ಸಾಕಷ್ಟು ಸಂಕಷ್ಟಕ್ಕೆ ಒಳಗಾಗಿದ್ದರು. ಈ ಸಂದರ್ಭದಲ್ಲಿ ಕಾರ್ಮಿಕರ ಪರ ನಿಂತಿದ್ದ ಐಎಎಸ್ ಅಧಿಕಾರಿ ಮಣಿವಣ್ಣನ್ ಎಲ್ಲಾ ಕೈಗಾರಿಕೆಗಳಿಗೆ ನೊಟೀಸ್ ಜಾರಿ ಮಾಡಿದ್ದರು. ಅಲ್ಲದೆ, ಈ ನೊಟೀಸ್ನಲ್ಲಿ “ಕಾರ್ಮಿಕರಿಗೆ ಲಾಕ್ಡೌನ್ ಸಂದರ್ಭದಲ್ಲೂ ಕನಿಷ್ಟ ವೇತನ ನೀಡಬೇಕು” ಎಂದು ಸೂಚಿಸಿದ್ದರು.
ಆದರೆ, ಯಾವ ಕೈಗಾರಿಕೆಗಳು ಕಾರ್ಮಿಕರಿಗೆ ಸಂಬಳ ನೀಡಲು ಮುಂದಾಗಲಿಲ್ಲ. ಹೀಗಾಗಿ ಸುಮಾರು 732 ಕಾರ್ಮಿಕರು “ಎರಡು ತಿಂಗಳಿನಿಂದ ತಮಗೆ ಸಂಬಳ ನೀಡಲಾಗಿಲ್ಲ. ಹೀಗಾಗಿ ಕುಟುಂಬ ನಿರ್ವಹಣೆ ತೊಂದರೆಯಾಗಿದೆ” ಎಂದು ಮಣಿವಣ್ಣನ್ ಅವರಿಗೆ ದೂರು ನೀಡಿದ್ದಾರೆ.
ಈ ದೂರಿನ ಹಿನ್ನೆಲೆ ಅಧಿಕಾರಿ ಮಣಿವಣ್ಣನ್, ಎಲ್ಲಾ ಕೈಗಾರಿಕೆಗಳ ಮುಖ್ಯಸ್ಥರಿಗೆ ನೋಟಿಸ್ ಸಿದ್ದಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದರು. ನೋಟಿಸ್ ಸೂಚನೆ ಮಾಹಿತಿ ಪಡೆದ ಕೈಗಾರಿಕೋದ್ಯಮಿಗಳ ಸಂಘಟನೆಗಳು ಮಣಿವಣ್ಣನ್ ಮೇಲೆ ಕೆಂಗಣ್ಣು ಬೀರಲಾರಂಭಿಸಿದ್ದಾರೆ.ಅಲ್ಲದೆ, ಈಗಲೇ ನಮಗೆ ಕೋಟ್ಯಾಂತರ ರೂಪಾಯಿ ನಷ್ಟವಾಗಿದೆ. ಸರ್ಕಾರ ನಮಗೆ ಈಗ ಕೈಗಾರಿಕೆಗಳ ತೆರೆಯಲು ಅನುಮತಿ ಕೊಟ್ಟಿದೆ. ನಾವು ಕಾರ್ಮಿಕರ ಜೊತೆ ಮಾತುಕತೆ ನಡೆಸಿ ನಮ್ಮದೇ ರೀತಿಯಲ್ಲಿ ಸೆಟಲ್ಮೆಂಟ್ ಮಾಡಿ ಕೊಳ್ಳುತ್ತೇವೆ. ನಮಗೆ ಮಣಿವಣ್ಣನ್ ರಿಂದ ಅನಗತ್ಯ ಕಿರುಕುಳವಾಗಲಿದೆ. ಈಗಾದರೆ ನಾವು ಕೈಗಾರಿಕೆ ನಡೆಸೋದು ಹೇಗೆ? ಎಂದು ಸಿಎಂ ಯಡಿಯೂರಪ್ಪ ಅವರಿಗೆ ದೂರು ನೀಡಿದ್ದಾರೆ.
ಹೀಗಾಗಿ ಕೈಗಾರಿಕೋದ್ಯಮಿಗಳ ಒತ್ತಡಕ್ಕೆ ಮಣಿದ ಸಿಎಂ ಬಿ.ಎಸ್. ಯಡಿಯೂರಪ್ಪ ಹಿರಿಯ ಅಧಿಕಾರಿ ಪಿ. ಮಣಿವಣ್ಣನ್ ಅವರನ್ನು ವರ್ಗಾವಣೆಗೊಳಿಸಿ ಆದೇಶಿಸಿದ್ದಾರೆ ಎನ್ನಲಾಗುತ್ತಿದೆ.
ವರ್ಗಾವಣೆಗೆ ಕಾರ್ಮಿಕ ಸಂಘಟನೆಗಳ ವಿರೋಧ:
ಐಎಎಸ್ ಅಧಿಕಾರಿ ಪಿ. ಮಣಿವಣ್ಣನ್ ವರ್ಗಾವಣೆ ಆದೇಶವನ್ನು ರಾಜ್ಯದ ವಿವಿಧ ಕಾರ್ಮಿಕ ಸಂಘಟನೆಗಳು ಖಂಡಿಸಿವೆ. ಅಲ್ಲದೆ, ಹೋರಾಟಕ್ಕೂ ಕರೆ ನೀಡಿದ್ದಾರೆ.
ಕಾರ್ಮಿಕರ ಪರವಾಗಿದ್ದ ಮಣಿವಣ್ಣನ್ ಕೈಗಾರಿಕೆ ಮುಖ್ಯಸ್ಥರ ನಿದ್ದೆಗೆಡಿಸಿದ್ದರು. ಇದೇ ಕಾರಣಕ್ಕೆ ಅವರನ್ನು ವರ್ಗಾವಣೆ ಮಾಡಲಾಗಿದೆ. ಆದರೆ, ರಾಜ್ಯ ಸರ್ಕಾರದ ಈ ನಿರ್ಧಾರವನ್ನು ವಿರೋಧಿಸಿ ಎಲ್ಲಾ ಕಾರ್ಮಿಕ ಸಂಘಟನೆಗಳು ರಾಜ್ಯವ್ಯಾಪಿ ಹೋರಾಟಕ್ಕೆ ನಡೆಸಲು ಮುಂದಾಗಿವೆ. ಅಲ್ಲದೆ, ಸರ್ಕಾರಕ್ಕೆ ಈ ಕುರಿತು ಒತ್ತಾಯಿಸುವಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೂ ಕಾರ್ಮಿಕ ಸಂಘಟನೆಯಿಂದ ಮನವಿ ನೀಡಲಾಗಿದೆ.
ಇದನ್ನೂ ಓದಿ : ಕಾರ್ಮಿಕ-ವಾರ್ತಾ ಇಲಾಖೆಯಿಂದ ಪಿ.ಮಣಿವಣ್ಣನ್ ಎತ್ತಂಗಡಿ; ಹಿರಿಯ ಐಎಎಸ್ ಅಧಿಕಾರಿ ಮಹೇಶ್ವರ್ ರಾವ್ ನೇಮಕ
ಏಕೆಂದರೆ ಮಣಿವಣ್ಣನ್ ಕಾರ್ಮಿಕ ಇಲಾಖೆಯಲ್ಲಿ ಒಳ್ಳೆಯ ಕೆಲಸ ಮಾಡಿದವರು. ಲಾಕ್ಡೌನ್ ನಡುವೆ ಪ್ರತಿದಿನ 1.30 ಲಕ್ಷ ಕಾರ್ಮಿಕರಿಗೆ ಊಟದ ವ್ಯವಸ್ಥೆ ಮಾಡಿದ್ದರು. 80 ಸಾವಿರ ಕಾರ್ಮಿಕರನ್ನು ಸುರಕ್ಷಿತವಾಗಿ ಅವರವರ ಊರಿಗೆ ತಲುಪಿಸಿದ್ದರು. ವೆಬ್ಸೈಟಿನಲ್ಲಿ ಪ್ರತಿದಿನ ಏನು ನಡೀತಿದೆ? ಎಂಬುದನ್ನು ಅಪ್ಡೇಟ್ ಮಾಡುತ್ತಿದ್ದರು. ಅಲ್ಲದೆ, ಕೊರೊನಾ ವಾರಿಯರ್ಸ್ ಟೀಮ್ ಮಾಡಿ ಕೊರೊನಾ ತಡೆಗಟ್ಟೋ ಕೆಲಸಕ್ಕೆ ಉಚಿತವಾಗಿ ಸೇವೆ ಪಡೆಯುತ್ತಿದ್ದರು.