ಶಿವಮೊಗ್ಗ,(ಜು.14): ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡಿ ರಾಜ್ಯಕ್ಕೆ ಮೂರನೇ ಸ್ಥಾನ ಪಡೆದಿದ್ದಾರೆ ಅಖಿಲಾ ಹೆಗಡೆ ಅವರು. ಮೂಲತಃ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದವರು. ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದ ವಿನೋಬನಗರದಲ್ಲಿ ವಾಸವಿದ್ದಾರೆ. ತಂದೆ ಸಿದ್ದಾಪುರದಲ್ಲಿ ಖಾಸಗಿ ಕಾಲೇಜಿನ ಪ್ರಾಂಶುಪಾಲರು, ಜೊತೆಗೆ ರಾಸಾಯನಶಾಸ್ತ್ರ ಪ್ರಾಧ್ಯಾಪಕರು.
ಉದಯ ಶಂಕರ್ ಹೆಗಡೆ ಮತ್ತು ಜ್ಯೋತಿ ಹೆಗಡೆ ಅವರು ಪುತ್ರಿ ಅಖಿಲಾ ಹೆಗಡೆ. ಸಾಗರದ ಬಿಹೆಚ್ ರಸ್ತೆಯಲ್ಲಿರುವ ಸರ್ಕಾರಿ ಪದವಿ ಪೂರ್ಣ ಕಾಲೇಜಿನಲ್ಲಿ ದ್ವೀತಿಯ ಪಿಯುಸಿ ವ್ಯಾಸಂಗ ಮಾಡಿದ್ದಾರೆ. ಇಂದು ದ್ವೀತಿಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ರಾಜ್ಯಕ್ಕೆ ವಿಜ್ಞಾನ ವಿಭಾದಲ್ಲಿ ಮೂರನೇ ಸ್ಥಾನ ಗಳಿಸಿದ್ದಾರೆ.
600 ಅಂಕಕ್ಕೆ 594 ಅಂಕ ಗಳಿಸಿದ್ದಾರೆ. ಸಂಸ್ಕೃತ - 100, ಇಂಗ್ಲಿಷ್ - 94, ಭೌತಶಾಸ್ತ್ರ- 100, ರಾಸಾಯನ ಶಾಸ್ತ್ರ- 100, ಗಣಿತ - 100, ಕಂಪ್ಯೂಟರ್ ಸೈನ್ಸ್ ನಲ್ಲಿ ಸಹ - 100 ಅಂಕ ಗಳಿಸಿದ್ದಾರೆ. ಇಂಗ್ಲೀಷ್ ಭಾಷೆ ಬಿಟ್ಟರೆ ಉಳಿದ ಎಲ್ಲಾ ವಿಷಯಗಳಲ್ಲಿ ಪತ್ರಿಕೆಗಳಲ್ಲಿ 100 ಕ್ಕೆ 100 ಅಂಕ ಗಳಿಸಿದ್ದಾರೆ ಅಖಿಲಾ ಹೆಗಡೆ.
ಬೆಂಗಳೂರಿನಲ್ಲಿ ಕೊರೋನಾ ಹೆಚ್ಚಾಗಲು ಕಾರಣವೇನು?; ಸದ್ಯ ಎಷ್ಟು ಕಂಟೈನ್ಮೆಂಟ್ ಜೋನ್ಗಳಿವೆ ಗೊತ್ತಾ?
ಇನ್ನು ಮೊದಲಿನಿಂದಲೂ ಕಂಪ್ಯೂಟರ್ ಬಗ್ಗೆ ಆಸಕ್ತಿ ಜಾಸ್ತಿ ಇತ್ತು. ಹೀಗಾಗಿ ಅವರು ಪಿಯುಸಿಯಲ್ಲಿ ಕಂಪ್ಯೂಟರ್ ಸೈನ್ಸ್ ಒಂದು ವಿಷಯವನ್ನು ಆಯ್ಕೆ ಮಾಡಿಕೊಂಡಿದ್ದರು. ಈಗ ಇಂಜಿನಿಯರಿಂಗ್ ಮಾಡುವ ಅಭಿಲಾಷೆ ಹೊಂದಿದ್ದಾರೆ. ಅದು ಕೂಡ ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ.
ಪರೀಕ್ಷೆ ಇನ್ನು ಎರಡು ತಿಂಗಳು ಇದೆ ಎಂಬ ಸಮಯದಲ್ಲಿ ಪ್ರತಿ ನಿತ್ಯ 10 ಗಂಟೆಗಳ ಕಾಲ ವ್ಯಾಸಂಗ ಮಾಡಿದ್ದಾರೆ ಅಖಿಲಾ. ಕಾಲೇಜಿನಲ್ಲಿ ಸಹ ಪಾಠ ಪ್ರವಸನ ಹೆಚ್ಚಾಗಿ ಮಾಡುತ್ತಿದ್ದರು. ಸರ್ಕಾರಿ ಕಾಲೇಜು ಅದರು ಎಲ್ಲಾ ರೀತಿಯ ಸೌಲಭ್ಯಗಳು ನಮ್ಮ ಕಾಲೇಜಿನಲ್ಲಿ ಇವೆ ಎಂದು ತಿಳಿಸಿದ್ದಾರೆ.
ಶೇಕಡಾ 90ರ ಮೇಲೆ ಅಂಕ ಬರಲಿವೆ ಎಂದುಕೊಂಡಿದ್ದೆ, ಅದೇ ರೀತಿ ಫಲಿತಾಂಶ ಬಂದಿದೆ ಎಂದು ಖುಷಿ ಹಂಚಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ