ಶಿವಮೊಗ್ಗ (ಜು. 9): ಶ್ರಾವಣ ಮಾಸ ಆರಂಭವಾಗುತ್ತಿದ್ದ ಹಾಗೆ ಸಾಲು ಸಾಲು ಹಬ್ಬಗಳು ಬರಲಿವೆ. ಈ ಕೊರೊನಾ ಎಂಬ ಹೆಮ್ಮಾಯಿಂದರಿ ಹಬ್ಬಗಳ ಮೇಲೂ ಕರಿಛಾಯೆ ಆವರಿಸಿಕೊಳ್ಳುವ ಭೀತಿ ಎದುರಾಗಿದೆ. ಗಣೇಶೋತ್ಸವ ಹಬ್ಬದ ಮೇಲೂ ಈ ಕೊರೊನಾ ಮಹಾಮಾರಿ ಪರಿಣಾಮ ಬೀರಲಿದೆ. ಈಗಾಗಲೇ, ಗಣೇಶನ ಮೂರ್ತಿ ನಿರ್ಮಾಣ ಮಾಡುವವರು ಪರಿತಪಿಸುತ್ತಿದ್ದಾರೆ. ಇಷ್ಟೊತ್ತಿಗಾಗಲೆ ಗಣಪತಿ ಮೂರ್ತಿಗೆ ಆರ್ಡರ್ ಗಳು ಬರಬೇಕಿತ್ತು. ಆದರೆ, ಅಡ್ವಾನ್ಸ್ ಬುಕಿಂಗ್ ಇಲ್ಲದೆ ಗಣಪತಿ ಮೂರ್ತಿ ತಯಾರಿಸುವವರು ಖಾಲಿ ಕೈಯಲ್ಲಿ ಕುಳಿತಿದ್ದಾರೆ.
ಆಷಾಢ ಮಾಸ ಮುಗಿಯುತ್ತಾ ಬರುತ್ತಿದೆ. ಶ್ರಾವಣ ಮಾಸದಲ್ಲಿ ಸಾಲು ಸಾಲು ಹಬ್ಬಗಳು ಬರಲಿವೆ. ಆದರೆ ಈ ಕೊರೊನಾದ ಕಾಟದಿಂದ ಈ ಹಬ್ಬಗಳ ಸಂಭ್ರಮವನ್ನೇ ಕಸಿದುಕೊಳ್ಳುವಂತ ಪರಿಸ್ಥಿತಿ ತಂದಿದೆ. ಈ ಬಾರಿ ಎಲ್ಲಾ ಹಬ್ಬಗಳಿಗೂ ಬ್ರೇಕ್ ಬೀಳುವ ಸಾಧ್ಯತೆ ದಟ್ಟವಾಗಿದೆ. ಇನ್ನು ಒಂದು ತಿಂಗಳಲ್ಲಿ ಬರುವ ಗೌರಿ-ಗಣೇಶ ಹಬ್ಬದ ಮೇಲೂ ಈ ಕೊರೊನಾದ ಕರಿಛಾಯೆ ಆವರಿಸಿಕೊಂಡಿದೆ. ಗಣಪತಿ ಹಬ್ಬಕ್ಕೂ ಎರಡು ತಿಂಗಳ ಮುನ್ನವೇ ಗಣೇಶನ ಮೂರ್ತಿ ತಯಾರಿಕೆಯಲ್ಲಿ ತೊಡಗಬೇಕಿದ್ದ ಕುಂಬಾರರು, ಖಾಲಿ ಕೈಯಲ್ಲಿ ಕೂತಿದ್ದಾರೆ.
ಇದನ್ನೂ ಓದಿ: ಹರ್ಬಲ್ ಮೈಸೂರ್ ಪಾಕ್ನಿಂದ ಕೊರೋನಾ ಗುಣವಾಗುತ್ತೆ ಎಂದ ಸ್ವೀಟ್ ಅಂಗಡಿ ಬಾಗಿಲಿಗೆ ಬೀಗ!
ಈ ಬಾರಿ ಸಾರ್ವಜನಿಕವಾಗಿ ಗಣಪತಿ ಪ್ರತಿಷ್ಠಾಪನೆಗೆ ಅವಕಾಶ ಸಿಗುತ್ತೋ ಇಲ್ಲವೋ ಎಂಬ ಪ್ರಶ್ನೆಗಳು ಜನರನ್ನು ಕಾಡುತ್ತಿವೆ. ಕೊರೋನಾ ಭೀತಿಯಲ್ಲಿ ಸಾರ್ವಜನಿಕವಾಗಿ ಗಣಪತಿ ಪ್ರತಿಷ್ಠಾಪನೆ ಮತ್ತು ವಿಸರ್ಜನೆ ಕಾರ್ಯಗಳಿಗೆ ಕಡಿವಾಣ ಬೀಳುವ ಸಾಧ್ಯತೆಗಳೇ ಹೆಚ್ಚಿವೆ. ಈ ಹಿನ್ನೆಲೆಯಲ್ಲಿ, ಗಣಪತಿ ಪ್ರತಿಷ್ಠಾಪನೆ ಮಾಡುವ ಯುವಕರ ಸಂಘದವರು ಈ ಬಾರಿ ಗಣೇಶನ ಮೂರ್ತಿ ರಚನೆಗೆ ಆರ್ಡರ್ ಕೂಡ ನೀಡಿಲ್ಲ. ಸರ್ಕಾರ ಈ ಬಾರಿ ಸಾರ್ವಜನಿಕವಾಗಿ ಗಣಪತಿ ಪ್ರತಿಷ್ಟಾಪನೆ ಬ್ಯಾನ್ ಮಾಡುವ ಎಲ್ಲಾ ಸಾಧ್ಯತೆಗಳಿದ್ದು, ಯಾರು ಕೂಡ ಗಣಪತಿ ಕೂರಿಸುವ ಆಸಕ್ತಿಯೇ ತೊರಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ