ತನ್ನ ಜೀವನಾಧಾರಿತ ಚಿತ್ರಕ್ಕೆ ತಾನೇ ನಾಯಕಿ! ತಂದೆ ಕೂರಿಸಿಕೊಂಡು1200 ಕಿ.ಮೀ. ಸೈಕಲ್ ತುಳಿದ 15ರ ಬಾಲಕಿ!

ಜ್ಯೋತಿ ಕುಮಾರಿ ಜೀವನಾಧಾರಿತ ಆತ್ಮನಿರ್ಭರ್ ಹೊಸ ಸಿನಿಮಾಗಳ ಶೂಟಿಂಗ್​ಗೆ ಅನುಮತಿ ಸಿಕ್ಕ ಕೆಲ ದಿನಗಳಲ್ಲೇ ಸೆಟ್ಟೇರಲಿದೆ. ಮುಂದಿನ ವರ್ಷ ರಿಲೀಸ್ ಮಾಡಲು ಪ್ಲ್ಯಾನ್ ಮಾಡಿಕೊಂಡಿದೆ ಚಿತ್ರತಂಡ. 

news18-kannada
Updated:July 2, 2020, 7:25 AM IST
ತನ್ನ ಜೀವನಾಧಾರಿತ ಚಿತ್ರಕ್ಕೆ ತಾನೇ ನಾಯಕಿ! ತಂದೆ ಕೂರಿಸಿಕೊಂಡು1200 ಕಿ.ಮೀ. ಸೈಕಲ್ ತುಳಿದ 15ರ ಬಾಲಕಿ!
ತಂದೆಯನ್ನು ಕೂರಿಸಿಕೊಂಡು 1200 ಕಿ.ಮೀ. ಸೈಕಲ್ ತುಳಿದ ಜ್ಯೋತಿ
  • Share this:
ಬೆಂಗಳೂರು; ರೈಲು, ಬಸ್ ಸಂಚಾರ ಸ್ಥಗಿತಗೊಳಿಸಿದ ಕಾರಣ ರಾತ್ರೋರಾತ್ರಿ ಗಂಟು, ಮೂಟೆ ಕಟ್ಟಿಕೊಂಡು ಕೆಲವರು ತಮ್ಮ ವಾಹನಗಳಲ್ಲಿ ನೂರಾರು ಕಿಲೋಮೀಟರ್ ದೂರದ ತಮ್ಮೂರಿಗೆ ಹೊರಟರೆ, ಕೆಲವರು ಸೈಕಲ್​ನಲ್ಲಿ, ಇನ್ನೂ ಹಲವರು ಕಾಲ್ನಡಿಗೆಯಲ್ಲೇ ಹೊರಟುಬಿಟ್ಟರು. ಹೀಗೆ ಸೈಕಲ್ ಹತ್ತಿದ ಯುವತಿಯೊಬ್ಬಳ ಕಥೆ ಈಗ ಸಿನಿಮಾ ರೂಪ ಪಡೆಯಲಿದೆ.

ಹೌದು, ಬರೋಬ್ಬರಿ 1200 ಕಿಲೋಮೀಟರ್ ದೂರ ಸೈಕಲ್​ನಲ್ಲಿ ಮಹಾಯಾತ್ರೆ ಹೊರಟ ಆ ವೀರಬಾಲಕಿಯ ಹೆಸರು ಜ್ಯೋತಿ ಕುಮಾರಿ. 15 ವರ್ಷದ ಜ್ಯೋತಿ ಕುಮಾರಿ ಹಾಗೂ ಆಕೆಯ ತಂದೆ ಕೆಲ ವರ್ಷಗಳಿಂದ ಗುರುಗ್ರಾಮದಲ್ಲಿ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಾ ಬದುಕು ಕಟ್ಟಿಕೊಂಡಿದ್ದರು. ಆದರೆ ಲಾಕ್​ಡೌನ್​ನಿಂದಾಗಿ ಕೆಲಸ ಇಲ್ಲದಂತಾಗಿತ್ತು. ಇನ್ನು ಕೆಲ ದಿನಗಳ ಹಿಂದಷ್ಟೇ ಜ್ಯೋತಿ ತಂದೆಗೂ ಪೆಟ್ಟು ಬಿದ್ದಿದ್ದ ಕಾರಣ, ಆರೋಗ್ಯವೂ ಹದಗೆಟ್ಟಿತ್ತು. ಮತ್ತೊಂದೆಡೆ ಮನೆ ಬಾಡಿಗೆ ಕಟ್ಟಲಾಗದೇ, ಹೊತ್ತು ತುತ್ತಿಗೂ ಪರದಾಡುವಂತಹ ಪರಿಸ್ಥಿತಿ ಉಂಟಾಗಿತ್ತು. ಆಗ ದೃಢ ನಿರ್ಧಾರ ಮಾಡಿದ ಜ್ಯೋತಿ ತನ್ನ ತಂದೆಗೆ ಧೈರ್ಯ ತುಂಬಿದರು. ತಮ್ಮ ಬಳಿಯಿದ್ದ 500 ರೂಪಾಯಿಯಲ್ಲಿ ಸೆಕೆಂಡ್ ಹ್ಯಾಂಡ್ ಸೈಕಲ್ ಖರೀದಿಸಿ, ಅಕೌಂಟಿನಲ್ಲಿದ್ದ ಒಂದು ಸಾವಿರ ರೂಪಾಯಿ ಡ್ರಾ ಮಾಡಿಕೊಂಡರು. ನಂತರ ಮನೆಗೆ ಬಂದು ತಮ್ಮ ಗಂಟು, ಮೂಟೆ ಕಟ್ಟಿಕೊಂಡು ತಮ್ಮ ತಂದೆಯನ್ನು ಹಿಂದೆ ಕೂರಿಸಿಕೊಂಡು ಗುರುಗ್ರಾಮದಿಂದ ಬಿಹಾರದ ತನ್ನೂರು ದರಭಂಗಾಗೆ ಹೊರಟೇಬಿಟ್ಟರು.

ಹೀಗೆ ಪ್ರತಿದಿನ 50ರಿಂದ 60 ಕಿಲೋಮೀಟರ್ ದೂರ ಸೈಕಲ್ ಓಡಿಸುತ್ತಿದ್ದ ಜ್ಯೋತಿ, ದಾರಿಯಲ್ಲಿ ಸಿಗುತ್ತಿದ್ದ ಪೆಟ್ರೋಲ್ ಬಂಕ್​ಗಳಲ್ಲಿ ರಾತ್ರಿ ತಂಗುತ್ತಿದ್ದರಂತೆ. ಕೆಲವೊಮ್ಮೆ ಅವರ ಕಷ್ಟವನ್ನು ನೋಡಿ, ದಾರಿಯಲ್ಲಿದ್ದ ಗ್ರಾಮದವರು ಊಟದ ವ್ಯವಸ್ಥೆ ಮಾಡುತ್ತಿದ್ದರಂತೆ. ಹೀಗೆ ಸುಮಾರು 20ಕ್ಕೂ ಹೆಚ್ಚು ದಿನಗಳ ಕಾಲ ಸೈಕಲ್ ಓಡಿಸಿ ತಮ್ಮೂರು ತಲುಪಿದ್ದರು ಜ್ಯೋತಿ. ಈಗ ಜ್ಯೋತಿ ಜೀವನಾಧಾರಿತ ಸಿನಿಮಾ ಮಾಡಲು ನಿರ್ದೇಶಕ ಶೈನ್ ಶರ್ಮಾ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ಜ್ಯೋತಿ ಬಳಿ ಈ ಕುರಿತು ಮಾತನಾಡಿದ್ದು, ಆಕೆಯೇ ಆಕೆಯ ಬಯೋಪಿಕ್​ನಲ್ಲಿ ನಾಯಕಿಯಾಗಲಿದ್ದಾರೆ. ವಿಶೇಷ ಅಂದರೆ ಈ ಚಿತ್ರಕ್ಕೆ ಆತ್ಮನಿರ್ಭರ್ ಎಂದು ಶೀರ್ಷಿಕೆ ಇಡಲಾಗಿದೆ. ಹಿಂದಿ, ಇಂಗ್ಲೀಷ್ ಹಾಗೂ ಮೈಥಿಲಿ ಭಾಷೆಗಳಲ್ಲಿ ಈ ಚಿತ್ರ ತೆರೆಗೆ ಬರಲಿದೆ. ನೈಜ ಸ್ಥಳಗಳಲ್ಲಿ, ನೈಜ ಘಟನೆಗಳನ್ನು ಆಧರಿಸಿ ಸಿನಿಮಾ ಮಾಡುವ ಐಡಿಯಾ ಇದ್ದರೂ, ಇದು ಡಾಕ್ಯುಮೆಂಟರಿ ಸಿನಿಮಾ ಅಲ್ಲವಂತೆ. ಬದಲಾಗಿ ಕಮರ್ಷಿಯಲ್ ಸಿನಿಮಾಗೆ ಬೇಕಾಗುವಂತೆ ಕೆಲ ಬದಲಾವಣೆ ಮಾಡುವ ಐಡಿಯಾ ಚಿತ್ರತಂಡದ್ದು.

ಇದನ್ನು ಓದಿ: ಕನ್ನಡ ಸಿನಿ ಪರದೆ ಮೇಲೆ ಬಾಲ ನಟಿಯಾಗಿ ಮಿಂಚಿದ್ದ ಬೇಬಿ ಇಂದಿರಾ ಈಗೇನು ಮಾಡುತ್ತಿದ್ದಾರೆ?

ಒಟ್ಟಾರೆ ಜ್ಯೋತಿ ಕುಮಾರಿ ಜೀವನಾಧಾರಿತ ಆತ್ಮನಿರ್ಭರ್ ಹೊಸ ಸಿನಿಮಾಗಳ ಶೂಟಿಂಗ್​ಗೆ ಅನುಮತಿ ಸಿಕ್ಕ ಕೆಲ ದಿನಗಳಲ್ಲೇ ಸೆಟ್ಟೇರಲಿದೆ. ಮುಂದಿನ ವರ್ಷ ರಿಲೀಸ್ ಮಾಡಲು ಪ್ಲ್ಯಾನ್ ಮಾಡಿಕೊಂಡಿದೆ ಚಿತ್ರತಂಡ.
First published: July 2, 2020, 7:25 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading