ಕೊರೋನಾ ಟಾಸ್ಕ್‌ಪೋರ್ಸ್‌ ನಿರ್ವಹಣಾ ಜವಾಬ್ದಾರಿಯನ್ನು ಹಂಚುವುದು ಸರಿಯಲ್ಲ; ಸಚಿವ ಡಾ| ಸುಧಾಕರ್ ಅಸಮಾಧಾನ

ಟಾಸ್ಕ್ ಫೋರ್ಸ್ ನ ಯಾರಾದರು ಒಬ್ಬರು ಮಾನಿಟರ್ ಮಾಡುವ ಹಾಗಿರಬೇಕು. ಯಾರಿಗಾದ್ರು ಒಬ್ಬರಿಗೆ ಜವಾಬ್ದಾರಿ ಇದ್ದರೆ ಅವರು ಉತ್ತರದಾಯಿತ್ವರಾಗಬೇಕು. ಜವಾಬ್ದಾರಿಗಳು ಹರಿದು ಹಂಚಿ ಹೋಗುವುದರಿಂದ ಗೊಂದಲಗಳೇ ಅಧಿಕ ಎಂದು ಸಚಿವ ಡಾ| ಸುಧಾಕರ್ ಅಭಿಪ್ರಾಯಪಟ್ಟಿದ್ದಾರೆ.

ಸಚಿವರಾದ ಡಾ. ಸುಧಾಕರ್ ಮತ್ತು ಶ್ರೀರಾಮುಲು.

ಸಚಿವರಾದ ಡಾ. ಸುಧಾಕರ್ ಮತ್ತು ಶ್ರೀರಾಮುಲು.

  • Share this:
ಬೆಂಗಳೂರು (ಮಾರ್ಚ್‌ 25); ಕೊರೋನಾ ಟಾಸ್ಕ್‌ಪೋರ್ಸ್‌ ನಿಯಂತ್ರಿಸುವ ಅಧಿಕಾರವನ್ನು ಹರಿದು ಹಂಚುವುದು ಸರಿಯಲ್ಲ.ಈ ಜವಾಬ್ದಾರಿಯನ್ನು ಯಾರಾದರೂ ಒಬ್ಬರಿಗೆ ನೀಡಲಿ, ಜವಾಬ್ದಾರಿ ಇದ್ದವರು ಇದಕ್ಕೆ ಉತ್ತರದಾಯಿಗಳಾಗಿರುತ್ತಾರೆ. ಶ್ರೀರಾಮುಲು ಕೈಕೆಳಗೆ ಕೆಲಸ ಮಾಡುವುದಕ್ಕೆ ನಾನು ಸಿದ್ದ ಎಂದು ವೈದ್ಯಕೀಯ ಕಾಲೇಜುಗಳ ಸಚಿವ ಡಾ| ಸುಧಾಕರ್ ತಿಳಿಸಿದ್ದಾರೆ.

ಇಡೀ ದೇಶ ಕೊರೋನಾ ವೈರಸ್ ಭೀತಿ ಎದುರಿಸುತ್ತಿದ್ದು, ಏಪ್ರಿಲ್ 14ರವರೆಗೆ ಇಡೀ ದೇಶವನ್ನು ಲಾಕ್​ಡೌನ್ ಮಾಡಲಾಗಿದೆ. ಇತ್ತ ಕೊರೋನಾ ಪರಿಸ್ಥಿತಿ ನಿಯಂತ್ರಣ ವಿಚಾರವಾಗಿ ವೈದ್ಯಕೀಯ ಶಿಕ್ಷಣ ಸಚಿವರಿಗೆ ಆರೋಗ್ಯ ಇಲಾಖೆಯ ಹೆಚ್ಚುವರಿ ಜವಾಬ್ದಾರಿ ನೀಡಿರುವುದರಿಂದ ಆರೋಗ್ಯ ಸಚಿವ ಶ್ರೀರಾಮುಲು ತೀವ್ರ ಅಸಮಾಧಾನಗೊಂಡಿದ್ದರು. ಇದೇ ವಿಚಾರವಾಗಿ ಶ್ರೀರಾಮುಲು ಸಿಎಂ ಮೇಲೆ ಗರಂ ಕೂಡ ಆಗಿದ್ದಾರೆ ಎಂದು ತಿಳಿದುಬಂದಿದೆ.

ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಅವರಿಗೆ ಕೊರೋನಾ ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆಯಲ್ಲಿ ಸರಿ ಸಮಾನವಾಗಿ ಅಧಿಕಾರ ಹಂಚಿದ್ದಕ್ಕೆ ರಾಮುಲು ಸಿಎಂ ಬಿಎಸ್​ವೈ ಬಳಿ ಗರಂ ಆಗಿದ್ದಾರೆ. ಸುಧಾಕರ್​ಗೆ ನನ್ನ ಇಲಾಖೆಯಲ್ಲಿ ಸರಿಸಮಾನ ಅಧಿಕಾರ ನೀಡಿರುವುದರಿಂದ ತಪ್ಪು ಸಂದೇಶ ರವಾನೆ ಆಗಿದೆ.  ಹೀಗಾಗಿ ಆದೇಶದಲ್ಲಿ ಮಾರ್ಪಾಡು ಮಾಡುವಂತೆ ಸಿಎಂಗೆ ಶ್ರೀರಾಮುಲು ಒತ್ತಡ ಹಾಕಿದ್ದಾರೆ.

ಈ ಕುರಿತು ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಡಾ| ಸುಧಾಕರ್‌, "ಕೊರೋನಾ ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ಟಾಸ್ಕ್‌ಫೋರ್ಸ್‌ ರಚಿಸಲಾಗಿದೆ. ಬೆಂಗಳೂರಿನ ಜವಾಬ್ದಾರಿಯನ್ನು ನನಗೆ ಹಾಗೂ ಇತರೆ ಜಿಲ್ಲೆಗಳ ಜವಾಬ್ದಾರಿಯನ್ನು ಶ್ರೀರಾಮುಲು ಅವರಿಗೆ ವಹಿಸಿ ಸಿಎಂ ಆದೇಶಿಸಿದ್ದಾರೆ.

ಆದರೆ, ಟಾಸ್ಕ್ ಫೋರ್ಸ್ ನ ಯಾರಾದರು ಒಬ್ಬರು ಮಾನಿಟರ್ ಮಾಡುವ ಹಾಗಿರಬೇಕು. ಯಾರಿಗಾದ್ರು ಒಬ್ಬರಿಗೆ ಜವಾಬ್ದಾರಿ ಇದ್ದರೆ ಅವರು ಉತ್ತರದಾಯಿತ್ವರಾಗಬೇಕು. ಜವಾಬ್ದಾರಿಗಳು ಹರಿದು ಹಂಚಿ ಹೋಗುವುದರಿಂದ ಗೊಂದಲಗಳೇ ಅಧಿಕ. ನಮ್ಮ ಹಿರಿಯರಾದಂತ ಶ್ರೀರಾಮುಲು ಅವರಿಗೆ ಜವಾಬ್ದಾರಿ ನೀಡಲಿ ಅಥವಾ ನನಗಾದರೂ ಅಧಿಕಾರ ನೀಡಲಿ. ನಾವು ಅವರ ಕೈ ಕೆಳಗೆ ಕೆಲಸ ಮಾಡಲು ಸಿದ್ದರಿದ್ದೇವೆ" ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಕೊರೋನಾ ಕಿತ್ತಾಟ; ಅಧಿಕಾರ ಹಂಚಿಕೆ ವಿಷಯವಾಗಿ ಸಿಎಂ ಮೇಲೆ ರಾಮುಲು ಗರಂ, ಆದೇಶ ಮಾರ್ಪಾಟು
First published: