ಬೆಂಗಳೂರು(ಜೂ.11): ನಗರದ ಶಂಕರಪುರ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪಿಎಸ್ಐಗೆ ಕೊರೋನಾ ಪಾಸಿಟಿವ್ ಆಗಿದೆ. ಇನ್ನೆರಡು ದಿನಗಳಲ್ಲಿ ಮದುವೆ ಇದ್ದ ಕಾರಣಕ್ಕೆ ಒಂದು ತಿಂಗಳು ರಜೆ ಹಾಕಿದ್ದ ಪಿಎಸ್ಐ ಊರಿಗೆ ಹೋಗುವುದಕ್ಕೂ ಮುನ್ನ ಕೋವಿಡ್ ಪರೀಕ್ಷೆಯನ್ನು ಮಾಡಿಸಿದ್ದರು. ಅದರಂತೆ ಪರೀಕ್ಷೆ ಮಾಡಿಸಿದ ಬಳಿಕ ಊರಿಗೆ ಹೋಗಿದ್ದು, ನಿನ್ನೆ ಬಂದ ರಿಪೋರ್ಟ್ ನಲ್ಲಿ ಪಾಸಿಟಿವ್ ಅಂತ ಗೊತ್ತಾಗಿದೆ. ಕೂಡಲೇ ಬೆಳಗಾವಿಯ ಅಥಣಿಯಲ್ಲಿದ್ದ ಪಿಎಸ್ಐ ಅವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಇನ್ನು ಅವರ ಪ್ರಾಥಮಿಕ ಸಂಪರ್ಕ ದಲ್ಲಿದ್ದ ಶಂಕರಪುರ ಪೊಲೀಸ್ ಠಾಣೆಯ ಐವರನ್ನು ಕ್ವಾರೆಂಟೈನ್ ಮಾಡಿದ್ದಾರೆ. ಅವರ ಟ್ರಾವೆಲ್ ಹಿಸ್ಟರಿಯನ್ನು ಸಹ ಈಗ ಅಧಿಕಾರಿಗಳು ಹುಡುಕುತ್ತಿದ್ದಾರೆ. ಜೊತೆಗೆ ದಿನೇ ದಿನೇ ನಗರದಲ್ಲಿ ಕೆಲಸ ಮಾಡುತ್ತಿರುವ ಪೊಲೀಸರಿಗೆ ಕೊರೋನಾ ಬರುತ್ತಿದೆ. ಇನ್ನು ಶಂಕರಪುರ ಪೊಲೀಸ್ ಠಾಣೆಯ ಪಿಎಸ್ಐ ಕಳೆದ 15 ದಿನಗಳಲ್ಲಿ ಎಲ್ಲೆಲ್ಲಿ ಕೆಲಸ ಮಾಡುತ್ತಿದ್ದರೂ ಪತ್ತೆ ಮಾಡುವತ್ತ ಅಧಿಕಾರಿಗಳು ನಿರತರಾಗಿದ್ದಾರೆ.
ನಿನ್ನೆ ಒಂದೇ ದಿನವೇ ದಕ್ಷಿಣ ವಿಭಾಗದ ಎರಡು ಠಾಣೆಗಳಲ್ಲಿ ಪಾಸಿಟಿವ್ ಕೇಸ್ ಆಗಿವೆ. ಜಯನಗರ ಠಾಣೆಯಲ್ಲಿನ ಆರೋಪಿಗೆ ಪಾಸಿಟಿವ್ ಆಗಿದ್ದು, ನಂತರ ಶಂಕರಪುರ ಠಾಣೆಯ ಪಿಎಸ್ಐ ಅವರಿಗೂ ಪಾಸಿಟಿವ್ ಆಗಿದೆ. ದಿನೇ ದಿನೇ ಪೊಲೀಸರಲ್ಲಿ ಪಾಸಿಟಿವ್ ಕೇಸ್ ಗಳು ಹೆಚ್ಚಾಗುತ್ತಿವೆ. ಇದರಿಂದ ಸಿಬ್ಬಂದಿಗಳು ಕೆಲಸ ಮಾಡಲು ಹಿಂದೇಟು ಹಾಕುತ್ತಿದ್ದಾರೆ.
ಇದನ್ನೂ ಓದಿ :
ಅಧಿಕಾರಿ ಮಾಡಿದ ಎಡವಟ್ಟಿನಿಂದ ಪ್ರವಾಹ ಬಂದು ಹೋಗಿ 10 ತಿಂಗಳು ಕಳೆದರೂ ಸಿಗದ ನೆರೆ ಪರಿಹಾರ
ಇನ್ನು ಶಂಕರಪುರ ಠಾಣೆಯ ಪಿಎಸ್ಐ ಅವರಿಗೆ ಕೊರೋನಾ ಪಾಸಿಟವ್ ಬಂದಿರುವ ಕಾರಣಕ್ಕೆ ಯಾರೊಬ್ಬರನ್ನು ಸಹ ಠಾಣೆಯ ಒಳಗೆ ಬಿಡುತ್ತಿಲ್ಲ. ಯಾರೇ ಸಾರ್ವಜನಿಕರು ಬಂದರೂ ಅವರನ್ನು ಠಾಣೆಯ ಹೊರಗಡೆಯೇ ಮಾತನಾಡಿ ಕಳಿಸುತ್ತಿದ್ದಾರೆ. ಜೊತೆಗೆ ಇಡೀ ಠಾಣೆಯನ್ನು ಈಗಾಗಲೇ ಸ್ಯಾನಿಟೈಸ್ ಮಾಡಲಾಗಿದೆ. ಇರುವ ಸಿಬ್ಬಂದಿಯೆಲ್ಲ ಮಾಸ್ಕ್, ಗ್ಲೌಸ್ ಹಾಗೂ ಹೆಡ್ ಮಾಸ್ಕ್ ಬಳಸಿ ಕೆಲಸ ಮಾಡುವಂತೆ ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಒಟ್ಟಿನಲ್ಲಿ ಕೊರೋನಾ ವಾರಿಯರ್ಸ್ ಆಗಿರುವ ಪೊಲೀಸರಿಗೆ ದಿನೇ ದಿನೇ ಆತಂಕ ಶುರುವಾಗಿರೋದು ಸತ್ಯ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ