Shah Rukh Khan: ಕಿಂಗ್ ಖಾನ್​​ ಶಾರುಖ್​ ಸಹ ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ: ವಿಡಿಯೋ ವೈರಲ್​..!

ಬಿ-ಟೌನ್​ನ ಕಿಂಗ್​ ಖಾನ್​ ಸಹ ಈಗ ಮನೆಯಿಂದಲೇ ಕೆಲಸ ಮಾಡಲು ಆರಂಭಿಸಿದ್ದಾರೆ. ಲಾಕ್​ಡೌನ್​ ಸಡಿಲಗೊಂಡಿದ್ದು, ಈಗಾಗಲೇ ಸಾಕಷ್ಟು ಸೆಲೆಬ್ರಿಟಿಗಳು ಮನೆಯಿಂದ ಹೊರ ಬಂದಿದ್ದಾರೆ. ಅವರ ಫೋಟೋಗಳೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಆದರೆ ಶಾರುಖ್​ ಮಾತ್ರ ಮನೆಯಿಂದ ಹೊರಗೇ ಕಾಲಿಟ್ಟಿಲ್ಲ.

ಚಿತ್ರೀಕರಣದಲ್ಲಿ ನಿರತ ಶಾರುಖ್​ ಖಾನ್​

ಚಿತ್ರೀಕರಣದಲ್ಲಿ ನಿರತ ಶಾರುಖ್​ ಖಾನ್​

  • Share this:
ಕೊರೋನಾ ಆತಂಕದಿಂದಾಗಿ ಸಾಕಷ್ಟು ಖಾಸಗಿ ಕಂಪೆನಿಗಳು ತಮ್ಮ ಸಂಸ್ಥೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಲ್ಲಿ ಹೆಚ್ಚಿನವರನ್ನು ಮನೆಯಿಂದಲೇ ಕೆಲಸ ಮಾಡಲು ಅವಕಾಶ ಕಲ್ಪಿಸಿಕೊಟ್ಟಿದೆ. ಇದಕ್ಕೆ ಬಾಲಿವುಡ್​ನ ಶಾರುಖ್​ ಸಹ ಹೊರತಾಗಿಲ್ಲ.

ಬಿ-ಟೌನ್​ನ ಕಿಂಗ್​ ಖಾನ್​ ಸಹ ಈಗ ಮನೆಯಿಂದಲೇ ಕೆಲಸ ಮಾಡಲು ಆರಂಭಿಸಿದ್ದಾರೆ. ಲಾಕ್​ಡೌನ್​ ಸಡಿಲಗೊಂಡಿದ್ದು, ಈಗಾಗಲೇ ಸಾಕಷ್ಟು ಸೆಲೆಬ್ರಿಟಿಗಳು ಮನೆಯಿಂದ ಹೊರ ಬಂದಿದ್ದಾರೆ. ಅವರ ಫೋಟೋಗಳೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಆದರೆ ಶಾರುಖ್​ ಮಾತ್ರ ಮನೆಯಿಂದ ಹೊರಗೇ ಕಾಲಿಟ್ಟಿಲ್ಲ.

ಶಾರುಖ್​ ಖಾನ್​


ಶಾರುಖ್​ ಖಾನ್​ ಅವರು ತಮ್ಮ ಮನೆ ಮನ್ನತ್​ನಲ್ಲೇ ಈಗ ಚಿತ್ರೀಕರಣ ಆರಂಭಿಸಿದ್ದಾರೆ. ನಿನ್ನೆ ಅವರ ಮನೆಯ ಬಾಲ್ಕನಿಯಲ್ಲಿ ಲೈಟ್ಸ್​ ಹಾಗೂ ಕ್ಯಾಮೆರಾ ಸೆಟಪ್​ ಆಗಿತ್ತು. ಅಲ್ಲಿ ಶಾರುಖ್ ಅಭಿನಯಿಸುತ್ತಿದ್ದರು. ಈ ಫೋಟೋಗಳು ಈಗ ವೈರಲ್​ ಆಗುತ್ತಿವೆ.




ಶಾರುಖ್​ ಝೀರೋ ಸಿನಿಮಾದ ನಂತರ ಬೇರೆ ಯಾವ ಚಿತ್ರದಲ್ಲೂ ಕಾಣಿಸಿಕೊಂಡಿಲ್ಲ. ಅಭಿಮಾನಿಗಳು ಅವರ ಹೊಸ ಸಿನಿಮಾಗಳ ಬಗ್ಗೆ ಕೇಳಿ ಕೇಳಿ ಸುಸ್ತಾಗಿ ಹೋದರು. ಆದರೆ ಶಾರುಖ್​ ಈಗ ನಟಿಸುತ್ತಿರುವುದನ್ನು ನೋಡಿದರೆ, ಅಭಿಮಾನಿಗಳಿಗೆ ಏನೋ ಹೊಸದನ್ನು ನೀಡುವ ತಯಾರಿಯಲ್ಲಿದ್ದಂತೆ ಕಾಣುತ್ತಿದೆ.

ಇದನ್ನೂ ಓದಿ: ನಾಯಕ ನಟನಿಗೆ ಲಿಪ್​ ಕಿಸ್​ ಕೊಟ್ಟ ಟಾಲಿವುಡ್​ ನಿರ್ದೇಶಕ: ಫೋಟೋ ವೈರಲ್​..!

ಇನ್ನು, ನಟಿ ನುಸ್ರುತ್​ ಸಹ ನಿನ್ನೆ ಡಬ್ಬಿಂಗ್​ ಮಾಡಲು ಮನೆಯಿಂದ ಹೊರ ಬಂದಿದ್ದರು. ಡಬ್ಬಿಂಗ್​ ಸ್ಟುಡಿಯೋ ಬಳಿ ಕ್ಯಾಮೆರಾಗಳಿಗೆ ಪೋಸ್​ ಕೊಟ್ಟಿದ್ದು ಹೀಗೆ.



 




View this post on Instagram




 

#NushratBharucha snapped post dubbing in Mumbai today #friday #manavmanglani


A post shared by Manav Manglani (@manav.manglani) on






ಶಾರುಖ್​ ಖಾನ್​ ಸದ್ಯ ತಮ್ಮ ಬ್ಯಾನರ್ ಅಡಿ ಸಿನಿಮಾಗಳ ನಿರ್ಮಾಣದಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ತಮ್ಮ ಅಭಿನಯದ ಚಿತ್ರದ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಈಗ ಅವರು ಮತ್ತೆ ಕ್ಯಾಮೆರಾ ಮುಂದೆ ನಟಿಸುತ್ತಿರುವ ಈ ಫೋಟೋ ಹಾಗೂ ವಿಡಿಯೋ ಅವರ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ. ಶಾರುಖ್​ ಮನೆಯಲ್ಲೇ ಜಾಹೀರಾತು ಅಥವಾ ಕಿರುಚಿತ್ರದ ಚಿತ್ರೀಕರಣ ಮಾಡುತ್ತಿರಬಹುದು ಎನ್ನಲಾಗುತ್ತಿದೆ.

David Warner: ನಾನೇನಿದ್ದರೂ ನಿನ್ನಿಂದಲೇ ಎಂದು ಭಾವುಕರಾದ ಡೇವಿಡ್​ ವಾರ್ನರ್​..!


ಇದನ್ನೂ ಓದಿ: ಕೀರ್ತಿ ಸುರೇಶ್ ಅಭಿನಯದ ಬಗ್ಗೆ ಕಮೆಂಟ್ ಮಾಡಿದ ರಶ್ಮಿಕಾ ಮಂದಣ್ಣ
First published: