• ಹೋಂ
  • »
  • ನ್ಯೂಸ್
  • »
  • Corona
  • »
  • ಆಕ್ಸಿಜನ್ ಬೇಕೆಂದರೆ ಸೆಕ್ಸ್​​ಗೆ ಒಪ್ಪಿಕೊ: ತಂದೆಯನ್ನು ಉಳಿಸಲು ಪರದಾಡುತ್ತಿದ್ದ ಮಗಳಿಗೆ ಕಾಮುಕನ ಕಾಟ!

ಆಕ್ಸಿಜನ್ ಬೇಕೆಂದರೆ ಸೆಕ್ಸ್​​ಗೆ ಒಪ್ಪಿಕೊ: ತಂದೆಯನ್ನು ಉಳಿಸಲು ಪರದಾಡುತ್ತಿದ್ದ ಮಗಳಿಗೆ ಕಾಮುಕನ ಕಾಟ!

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

ತಂದೆಯ ಜೀವ ಉಳಿಸಲು ಪರದಾಡುತ್ತಿದ್ದ ಯುವತಿಯನ್ನು ಸೆಕ್ಸ್​ಗೆ ಒಪ್ಪಿಕೊ, ಆಕ್ಸಿಜನ್​ ಸಿಲಿಂಡರ್​ ಕೊಡುತ್ತೇನೆ ಎಂದು ಕಾಮುಕ ಹಿಂಸಿಸಿದ್ದಾನಂತೆ. ಈ ಬಗ್ಗೆ ಯುವತಿಯ ಸೋದರಿಯ ಸ್ನೇಹಿತೆ ಟ್ವೀಟ್​ ಮಾಡಿದ್ದಾರೆ.

  • Share this:

ನವದೆಹಲಿ: ಕೊರೋನಾ 2ನೇ ಅಲೆ ಅಬ್ಬರಿಸುಲು ಶುರುವಾದ ನಂತರ ದೇಶದೆಲ್ಲೆಡೆ ಆಕ್ಸಿಜನ್​ಗಾಗಿ ಹಾಹಾಕಾರ ಶುರುವಾಗಿದೆ. ಸೋಂಕಿತರ ಉಸಿರು ಉಳಿಸಲು ಆಮ್ಲಜನಕ ಸಿಲಿಂಡರ್​ಗಳ ಅಗತ್ಯ ಹೆಚ್ಚಾಗಿದ್ದು ಆಕ್ಸಿಜನ್​​ ಕೊರತೆ ಬೃಹದಾಕಾರವಾಗಿ ಬೆಳೆದು ನಿಂತಿದೆ. ಭಾರತದ ಸ್ಥಿತಿ ಕಂಡು ವಿಶ್ವದ ಬಲಿಷ್ಠ ರಾಷ್ಟ್ರಗಳು ನೆರವಿನ ಹಸ್ತ ಚಾಚಿವೆ. ನಿತ್ಯ ಸಾವಿರಾರು ಜನ ಆಕ್ಸಿಜನ್​ ಹೊಂದಿಸಲು ನೆರವಾಗುತ್ತಿದ್ದಾರೆ. ಇಂಥ ವಿಷಮ ಪರಿಸ್ಥಿತಿಯಲ್ಲೂ ಕೆಲವರು ಅಮಾನುಷವಾಗಿ ನಡೆದುಕೊಳ್ಳುತ್ತಿರುವುದು ವರದಿಯಾಗಿದೆ. ತಂದೆಯ ಜೀವ ಉಳಿಸಲು ಆಕ್ಸಿಜನ್​ ಸಿಲಿಂಡರ್​ಗಾಗಿ ಪರದಾಡುತ್ತಿದ್ದ ಮಗಳಿಗೆ ಕಾಮುಕನೊಬ್ಬ ಕಾಟ ಕೊಟ್ಟಿರುವ ಪ್ರಕರಣ ಬಯಲಾಗಿದೆ.


ರಾಷ್ಟ್ರ ರಾಜಧಾನಿಯಲ್ಲಿ ಆಕ್ಸಿಜನ್ ಅಗತ್ಯ ಹೆಚ್ಚಾಗಿದೆ. ತಮ್ಮವರನ್ನು ಉಳಿಸಿಕೊಳ್ಳಲು ಕುಟುಂಬಸ್ಥರು ಪಡುತ್ತಿರುವ ಪಾಡು ಹೇಳ ತೀರದು. ಇಂಥ ಪರಿಸ್ಥಿತಿಯ ಲಾಭ ಪಡೆಯಲು ನಿಂತಿರುವ ಕಾಮುಕರು ಜನರ ಅಸಹಾಯಕತೆಯನ್ನೇ ಬಂಡವಾಳ ಮಾಡಿಕೊಳ್ಳುತ್ತಿದ್ದಾರೆ. ಯುವತಿಯೊಬ್ಬಳು ತನ್ನ ತಂದೆಗೆ ಆಕ್ಸಿಜನ್​ ಸಿಲಿಂಡರ್​ ಹೊಂದಿಸಲು ಅಲೆದಾಡಿದ್ದಾಳೆ. ತನ್ನ ಪಕ್ಕದ ಮನೆಯ ವ್ಯಕ್ತಿಯನ್ನು ಸಹಾಯ ಮಾಡುವಂತೆ ಬೇಡಿಕೊಂಡಿದ್ದಾಳೆ. ಯುವತಿಯ ಪರಿಸ್ಥಿತಿಯ ಲಾಭ ಪಡೆಯಲು ಯತ್ನಿಸಿದ ವ್ಯಕ್ತಿ ತನ್ನೊಂದಿಗೆ ಒಂದು ರಾತ್ರಿ ಕಳೆದರೆ ಆಕ್ಸಿಜನ್​ ಸಿಲಿಂಡರ್ ವ್ಯವಸ್ಥೆ ಮಾಡುವುದಾಗಿ ಯುವತಿಗೆ ಹೇಳಿದ್ದಾನೆ.


ತಂದೆಯ ಜೀವ ಉಳಿಸಲು ಪರದಾಡುತ್ತಿದ್ದ ಯುವತಿಯನ್ನು ಸೆಕ್ಸ್​ಗೆ ಒಪ್ಪಿಕೊ, ಆಕ್ಸಿಜನ್​ ಸಿಲಿಂಡರ್​ ಕೊಡುತ್ತೇನೆ ಎಂದು ಕಾಮುಕ ಹಿಂಸಿಸಿದ್ದಾನಂತೆ. ಈ ಬಗ್ಗೆ ಯುವತಿಯ ಸೋದರಿಯ ಸ್ನೇಹಿತೆ ಟ್ವೀಟ್​ ಮಾಡಿದ್ದಾರೆ. ನಾನು ಚಿಕ್ಕಂದಿನಿಂದಲೂ ನೋಡಿದ ಯುವತಿಗೆ ಅವರ ಪಕ್ಕದ ಮನೆಯಾತನೇ ಇಂತಹ ಆಫರ್​ ಕೊಟ್ಟಿದ್ದಾನೆ. ಆಕ್ಸಿಜನ್​​ಗಾಗಿ ಸೆಕ್ಸ್​ ನೀಡಬೇಕೇ? ನಮ್ಮ ವ್ಯವಸ್ಥೆ ಎಲ್ಲಿಗೆ ಬಂದಿದೆ? ಕಾಮುಕರು ಪರಿಸ್ಥಿತಿಯ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ. ಇಂಥವರಿಗೆ ಏನೆನ್ನ ಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಕಾಮುಕನ ವಿರುದ್ಧ ಪೊಲೀಸ್​ ಠಾಣೆಗೆ ದೂರು ನೀಡಲು ನಮ್ಮ ಬಳಿ ಯಾವುದೇ ಸಾಕ್ಷಿ ಇಲ್ಲ. ಕೇವಲ ಈ ರೀತಿ ಕೇಳಿದ್ದಾನೆ ಎಂದು ದೂರು ದಾಖಲಿಸಿದರೆ ಪ್ರಯೋಜನವಿಲ್ಲ. ಆರೋಪಿ ನಾನು ಹೇಳಿಯೇ ಇಲ್ಲ ಎಂದು ಸುಲಭವಾಗಿ ನುಣುಚಿಕೊಳ್ಳುತ್ತಾನೆ ಎಂದು ಟ್ವೀಟ್​​ ಮಾಡಿದ್ದಾರೆ. ಸ್ನೇಹಿತೆಯ ಈ ಟ್ವೀಟ್​ ಎಲ್ಲರ ಗಮನ ಸೆಳೆದಿದೆ. ದೆಹಲಿಯಲ್ಲಿ ಆಕ್ಸಿಜನ್​ ಕೊರತೆಯ ಕರಾಳ ಮುಖವಿದು ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.



ಇಂಥ ಕಾಮುಕರ ಫೋಟೋ ಅಪ್​ಲೋಡ್​ ಮಾಡಿ ಛೀಮಾರಿ ಹಾಕಬೇಕು. ಮಹಿಳಾ ಠಾಣೆಗೆ ದೂರು ನೀಡಬೇಕು ಎಂದು ನೆಟ್ಟಿಗರು ಕಿಡಿಕಾರಿದ್ದಾರೆ. ಕೊರೋನಾದಿಂದ ಕಷ್ಟಕ್ಕೆ ಗುರಿಯಾಗಿರುವ ಹೆಣ್ಣು ಮಕ್ಕಳಿಗೆ ಹಲವು ಆಮಿಷಗಳನ್ನು ವೊಡ್ಡಿ ಲೈಂಗಿಕವಾಗಿ ಬಳಸಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದೆ. ಆಕ್ಸಿಜನ್​ಗಾಗಿ ಮನವಿ ಮಾಡಿಕೊಂಡು ಸಂಪರ್ಕಿಸಿ ಎಂದು ಬರುವ ಮೆಸೇಜ್​​ಗಳಲ್ಲಿನ ಮೊಬೈಲ್​ ನಂಬರ್​ಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಪ್ಯಾಂಡಮಿಕ್​ ವೇಳೆ ನಡೆಯುತ್ತಿರುವ ಈ ಲೈಂಗಿಕ ದೌರ್ಜನ್ಯಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನೆಟ್ಟಿಗರು ಟ್ವೀಟ್​ ಮೂಲಕ ಆಗ್ರಹಿಸಿದ್ದಾರೆ.

Published by:Kavya V
First published: