Seva Sindhu: ಆಟೋ ಕ್ಯಾಬ್‌ ಡ್ರೈವರ್‌ಗಳ ಗಮನಕ್ಕೆ; ಸೇವಾಸಿಂಧು ಆಪ್‌ನಲ್ಲಿ ಅರ್ಜಿ ಸಲ್ಲಿಸಿದರೆ ಮಾತ್ರ 5000 ರೂ. ಪರಿಹಾರ

Seva Sindhu App: 1,610 ಕೋಟಿಯ ಮೊದಲ ಪರಿಹಾರ ಪ್ಯಾಕೇಜ್‌ ಘೋಷಿಸಿದ್ದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಆಟೋ ಮತ್ತು ಕ್ಯಾಬ್ ಚಾಲಕರಿಗೆ ತಲಾ 5,000 ರೂ. ಪರಿಹಾರ ಘೋಷಣೆ ಮಾಡಿದ್ದರು.

ಲಾಕ್​ಡೌನ್​ ದೃಶ್ಯ

ಲಾಕ್​ಡೌನ್​ ದೃಶ್ಯ

  • Share this:
ಬೆಂಗಳೂರು (ಮೇ 22); ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೀಡಾಗಿದ್ದ ಆಟೋ ಮತ್ತು ಕ್ಯಾಬ್‌ ಡ್ರೈವರ್‌ಗಳಿಗೆ ರಾಜ್ಯ ಸರ್ಕಾರ ಇತ್ತೀಚೆಗೆ ಪರಿಹಾರವಾಗಿ 5,000 ರೂ ಘೋಷಿಸಿದೆ. ಆದರೆ, ಈ ಹಣವನ್ನು ಪಡೆಯಲು ಸೇವಾಸಿಂಧು ಆಪ್‌ ನಲ್ಲಿ ಅರ್ಜಿ ಸಲ್ಲಿಸುವುದು ಖಡ್ಡಾಯ ಎಂದು ಸಾರಿಗೆ ಇಲಾಖೆ ಇಂದು ಆದೇಶ ಹೊರಡಿಸಿದೆ. ಲಾಕ್‌ಡೌನ್‌ನಿಂದಾಗಿ ಸಮಾಜ ಎಲ್ಲಾ ವರ್ಗಗಳೂ ಸಾಕಷ್ಟು ಸಂಕಷ್ಟ ಎದುರಿಸಿವೆ. ಈ ಪೈಕಿ ಮಹಾನಗರದ ಸಂಚಾರಿ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರವಹಿಸಿರುವ ಆಟೋ-ಕ್ಯಾಬ್‌ ಚಾಲಕರು ಸಹ ದುಡಿಮೆ ಇಲ್ಲದೆ ಸಂಕಷ್ಟಕ್ಕೆ ಒಳಗಾಗಿದ್ದರು. ಹೀಗಾಗಿ 1,610 ಕೋಟಿಯ ಮೊದಲ ಪರಿಹಾರ ಪ್ಯಾಕೇಜ್‌ ಘೋಷಿಸಿದ್ದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಆಟೋ ಮತ್ತು ಕ್ಯಾಬ್ ಚಾಲಕರಿಗೆ ತಲಾ 5,000 ರೂ. ಪರಿಹಾರ ಘೋಷಣೆ ಮಾಡಿದ್ದರು.

ಈ ಹಣ ನೇರವಾಗಿ ಆಟೋ ಹಾಗೂ ಟ್ಯಾಕ್ಸಿ ಚಾಲಕರ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ. ಆದರೆ, ಅದಕ್ಕೆ ಮೊದಲು ಪರಿಹಾರದ ಹಣ ಪಡೆಯಲು ಸೇವಾಸಿಂಧು ಆಪ್‌ ಮೂಲಕ ಅರ್ಜಿ ಸಲ್ಲಿಸಬೇಕು. ಈ ಅರ್ಜಿಯಲ್ಲಿ ಚಾಲಕರು ಆಧಾರ್, ಮನೆ ವಿಳಾಸ, ವಾಹನದ ವಿವರ ಮತ್ತು ವಾಹನ ಚಾಲಕ ಪರವಾನಗಿ ಲಗತ್ತಿಸಬೇಕು. ಹೀಗೆ ಲಗತ್ತಿಸಿದರೆ ಮಾತ್ರ ಪರಿಹಾರದ ಹಣ ನೀಡಲಾಗುವುದು" ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಸೇವಾ ಸಿಂಧು ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಲು ಸಮಸ್ಯೆಯಾದರೆ 9449863214 ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದು. ಅಲ್ಲದೆ, ಇದರ ಜೊತೆಗೆ 080-22236698 ಈ ದೂರವಾಣಿ ಸಂಖ್ಯೆಗೆ ಕರೆ ಮಾಡುವ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬಹುದು ಎಂದು ತಿಳಿಸಲಾಗಿದೆ.

ಇದನ್ನೂ ಓದಿ : ಪಾಕಿಸ್ತಾನದ ವಿಮಾನ ದುರಂತ; ಅಚ್ಚರಿಯ ರೀತಿಯಲ್ಲಿ ಬದುಕುಳಿದ ಬ್ಯಾಂಕ್ ಆಫ್ ಪಂಜಾಬ್ ಸಿಇಒ ಜಾಫರ್ ಮಸೂದ್
First published: