HOME » NEWS » Coronavirus-latest-news » SERUM INSTITUTE TO GIVE 10 MILLION FREE DOSES TO INDIA SNVS

Vaccine Drive - ಸೆರಮ್ ಇನ್ಸ್​ಟಿಟ್ಯೂಟ್​ನಿಂದ ಭಾರತಕ್ಕೆ 1 ಕೋಟಿ ಉಚಿತ ವ್ಯಾಕ್ಸಿನ್

ಕೇಂದ್ರ ಆರೋಗ್ಯ ಇಲಾಖೆ ನಡೆಸಿದ ಉನ್ನತ ಮಟ್ಟದ ಸಭೆಯಲ್ಲಿ ಸೆರಮ್ ಇನ್ಸ್​ಟಿಟ್ಯೂಟ್, ಭಾರತ್ ಬಯೋಟೆಕ್ ಸಂಸ್ಥೆಯ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಲಸಿಕೆ ವಿತರಣೆ, ರಫ್ತು, ನಷ್ಟಪರಿಹಾರ, ನಷ್ಟಭರಿಸುವಿಕೆ ಇತ್ಯಾದಿ ವಿಚಾರಗಳನ್ನ ಚರ್ಚಿಸಲಾಗಿದೆ.

news18
Updated:January 19, 2021, 8:41 AM IST
Vaccine Drive - ಸೆರಮ್ ಇನ್ಸ್​ಟಿಟ್ಯೂಟ್​ನಿಂದ ಭಾರತಕ್ಕೆ 1 ಕೋಟಿ ಉಚಿತ ವ್ಯಾಕ್ಸಿನ್
ಕೊರೋನಾ ಲಸಿಕೆ
  • News18
  • Last Updated: January 19, 2021, 8:41 AM IST
  • Share this:
ನವದೆಹಲಿ: ಕೋವಿಡ್-19 ಲಸಿಕೆ ವಿಚಾರದಲ್ಲಿ ಕೇಂದ್ರದ ಆರೋಗ್ಯ ಸಚಿವಾಲಯದಲ್ಲಿ ನಿನ್ನೆ ಮಹತ್ವದ ಉನ್ನತ ಮಟ್ಟದ ಸಭೆ ನಡೆಯಿತು. ವ್ಯಾಕ್ಸಿನ್ ವಿತರಣೆ, ರಫ್ತು ಇತ್ಯಾದಿ ವಿಚಾರಗಳನ್ನ ಚರ್ಚಿಸಲಾಯಿತು. ಭಾರತಕ್ಕೆ ಈಗಾಗಲೇ 1.1 ಕೋಟಿಯಷ್ಟು ಲಸಿಕೆಯನ್ನು ನೀಡಿರುವ ಸೆರಮ್ ಇನ್ಸ್​ಟಿಟ್ಯೂಟ್ ಸಂಸ್ಥೆ ಇನ್ನೂ 1 ಕೋಟಿಯಷ್ಟು ಡೋಸ್ ಲಸಿಕೆಯನ್ನು ಉಚಿತವಾಗಿ ನೀಡುವುದಾಗಿ ತಿಳಿಸಿದೆ. ಆರೋಗ್ಯ ಇಲಾಖೆಯೊಂದಿಗೆ ನಡೆದ ಸಭೆಯಲ್ಲಿ ಸೆರಮ್ ಇನ್ಸ್​ಟಿಟ್ಯೂಟ್ ಸಂಸ್ಥೆ ನಷ್ಟಪರಿಹಾರದ ಕುರಿತು ಚರ್ಚೆ ನಡೆಸಿರುವುದು ತಿಳಿದುಬಂದಿದೆ.

ಸದ್ಯ, ಸೆರಮ್ ಇನ್ಸ್​ಟಿಟ್ಯೂಟ್​ನ ಕೋವಿಶೀಲ್ಡ್ ಮತ್ತು ಭಾರತ್ ಬಯೋಟೆಕ್​ನ ಕೋವ್ಯಾಕ್ಸಿನ್ ಲಸಿಕೆಗಳಿಗೆ ಸದ್ಯ ಭಾರತ ಸರ್ಕಾರ ಅನುಮೋದನೆ ನೀಡಿದೆ. ಈ ಲಸಿಕೆಗಳಿಂದ ಏನಾದರೂ ಅನಾಹುತವಾದರೆ ಅದಕ್ಕೆ ಆ ಕಂಪನಿಗಳೇ ನಷ್ಟ ಭರಿಸಬೇಕು ಎಂಬುದ ಕೇಂದ್ರ ಸರ್ಕಾರದ ನಿಲುವಾಗಿದೆ. ಆದರೆ, ಲಸಿಕೆ ಕಂಪನಿಗಳನ್ನ ಈ ಹಂತದಲ್ಲಿ ಜವಾಬ್ದಾರರನ್ನಾಗಿ ಮಾಡಬಾರದು ಎಂಬುದು ಸೆರಮ್ ಇನ್ಸ್​ಟಿಟ್ಯೂಟ್ ಸಂಸ್ಥೆಯ ಸಿಇಒ ಆದಾರ್ ಪೂನಾವಾಲ ಅವರ ಅಭಿಪ್ರಾಯವಾಗಿದೆ. ನಿನ್ನೆ ನಡೆದ ಸಭೆಯಲ್ಲಿ ಈ ವಿಚಾರ ಚರ್ಚೆಯಾಗಿದೆ. ಹಾಗೆಯೇ, ವಿವಿಧ ದೇಶಗಳಿಗೆ ಲಸಿಕೆ ರಫ್ತು ಮಾಡುವ ವಿಚಾರವನ್ನೂ ಚರ್ಚಿಸಲಾಗಿದೆ.

ಇದನ್ನೂ ಓದಿ: ಗುಜರಾತ್​: ಫುಟ್​ಪಾತ್​​ನಲ್ಲಿ ಮಲಗಿದ್ದ ಕಾರ್ಮಿಕರ ಮೇಲೆ ಹರಿದ ಟ್ರಕ್​, 13 ಜನ ಸಾವು!

ಮಯನ್ಮಾರ್, ಮಂಗೋಲಿಯಾ, ಓಮನ್, ಬಹರೇನ್, ಫಿಲಿಪ್ಪೈನ್ಸ್, ಮಾಲ್ಡೀವ್ಸ್, ಮಾರಿಷಿಯಸ್ ದೇಶಗಳಿಗೆ 8.1 ಲಕ್ಷ ಡೋಸ್​ಗಳನ್ನ ಒದಗಿಸಲು ಭಾರತ್ ಬಯೋಟೆಕ್ ಸಂಸ್ಥೆಗೆ ತಿಳಿಸಲಾಗಿದೆ. ಇದರ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಸೆರಮ್ ಇನ್ಸ್​ಟಿಟ್ಯೂಟ್ ಸಂಸ್ಥೆಯ ಲಸಿಕೆಗಳನ್ನ ಆಫ್ಘಾನಿಸ್ತಾನ, ಬಾಂಗ್ಲಾದೇಶ, ಭೂತಾನ್, ನೇಪಾಳ ಮತ್ತು ಸೆಯ್ಶೆಲ್ಸ್ ರಾಷ್ಟ್ರಗಳಿಗೆ ಸರ್ಕಾರವೇ ಸರಬರಾಜು ಮಾಡಲಿದೆ. ಜನವರಿ ಅಂತ್ಯದ ವೇಳೆಗೆ ಭಾರತ್ ಬಯೋಟೆಕ್ ಮತ್ತು ಸೆರಮ್ ಇನ್ಸ್​ಟಿಟ್ಯೂಟ್ ಸಂಸ್ಥೆಗಳು ವಿವಿಧ ದೇಶಗಳಿಗೆ ಲಸಿಕೆ ಪೂರೈಕೆ ಕಾರ್ಯ ಪ್ರಾರಂಭಿಸುವ ನಿರೀಕ್ಷೆ ಇದೆ. ಮೂಲಗಳ ಪ್ರಕಾರ ಜನವರಿ 22ರಷ್ಟರಲ್ಲಿ ಭಾರತ್ ಬಯೋಟೆಕ್ ಸಂಸ್ಥೆ ತನ್ನ ಕೋವ್ಯಾಕ್ಸಿನ್ ಲಸಿಕೆಯ 8.1 ಲಕ್ಷ ಡೋಸ್​ಗಳನ್ನ ನೀಡುವ ಕಾರ್ಯಾರಂಭಿಸುವ ಸಾಧ್ಯತೆ ಇದೆ.
Published by: Vijayasarthy SN
First published: January 19, 2021, 8:41 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories